ಅಮೆರಿಕನ್ನರ ವರಸೆ ಬದಲಾಗಿದೆ. ನಿತ್ಯ ಆಲ್ಕೋಹಾಲ್ ಬಾಟಲಿ ಹಿಡಿತಿದ್ದವರ ಕೈನಲ್ಲಿ ಗಾಂಜಾ ಬಂದಿದೆ. ಬಿಯರ್ ಗಿಂತ ಗಾಂಜಾ ಕಿಕ್ ಹೆಚ್ಚು ಎನ್ನುತ್ತಿರುವ ಜನ ಆತಂಕಕಾಗಿ ಹೆಜ್ಜೆ ಇಡುತ್ತಿದ್ದಾರೆ.
ದುಷ್ಚಟಕ್ಕೆ ಬಲಿಯಾಗ್ತಿರುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಭಾರತ ಮಾತ್ರವಲ್ಲದೆ ವಿದೇಶದಲ್ಲಿ ಜನರು ಮದ್ಯಪಾನ, ಧೂಮಪಾನ, ಡ್ರಗ್ಸ್ ಸೇವನೆ ಮಾಡೋದ್ರಲ್ಲಿ ಮುಂದಿದ್ದಾರೆ. ಕೆಲಸದ ಒತ್ತಡ ಸೇರಿದಂತೆ ನಾನಾ ಕಾರಣಗಳನ್ನು ಹೇಳ್ತಾ ಈ ಚಟಕ್ಕೆ ಬಲಿಯಾಗ್ತಿರೋರ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಎಷ್ಟೇ ಕಠಿಣ ಕ್ರಮಕೈಗೊಂಡ್ರೂ ಅದು ಸಾಧ್ಯವಾಗ್ತಿಲ್ಲ. ಅಮೆರಿಕಾದಲ್ಲಿ ಗಾಂಜಾ ಸೇವನೆ ಈಗ ವಿಪರೀತ ಎನ್ನುವಂತಾಗಿದೆ. ಅಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ಬಿಯರ್ ಸೇವನೆ ಮಾಡೋದು ಕಾಮನ್. ಆದ್ರೀಗ ಬಾಟಲಿ ಬದಲು ಗಾಂಜಾ ಪೈಪ್ ಕೈಗೆ ಬಂದಿದೆ. ಈ ಬಗ್ಗೆ ನಡೆದ ಸಮೀಕ್ಷೆಯೊಂದು ಆತಂಕ ಹುಟ್ಟಿಸುವಂತಹ ಡೇಟಾವನ್ನು ನೀಡಿದೆ. ದಮ್ ಮಾರೋ ದಮ್ ಎಂಬ ಹಾಡು ಅಮೆರಿಕನ್ನರಿಗೆ ಈಗ ಸೂಟ್ ಆಗ್ತಿದೆ. ನಿತ್ಯ ಗಾಂಜಾ ಸೇವನೆ ಮಾಡುವವರ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ದುಪ್ಪಟ್ಟಾಗಿದೆ.
ಜರ್ನಲ್ ಅಡಿಕ್ಷನ್‌ನಲ್ಲಿ ಸಮೀಕ್ಷೆ (Survey) ವರದಿ ಪ್ರಕಟವಾಗಿದೆ. ನಾಲ್ಕು ದಶಕಗಳಲ್ಲಿ ಬಳಕೆಯಾದ ಮಾದಕ ವಸ್ತು ಹಾಗೂ ಆರೋಗ್ಯ (Health) ಸ್ಥಿತಿ ಕುರಿತು ರಾಷ್ಟ್ರೀಯ ಸಮೀಕ್ಷೆ ವರದಿ ಬಿಡುಗಡೆಯಾಗಿದೆ. ಸರ್ವೆ ಪ್ರಕಾರ, ಅಮೆರಿಕಾದಲ್ಲಿ ಪ್ರತಿ ನಿತ್ಯ 14.7 ಮಿಲಿಯನ್ ಮಂದಿ 1 ಕೋಟಿ 47 ಲಕ್ಷ ಜನರು ಮದ್ಯಪಾನ ಮಾಡ್ತಾರೆ. ಆದ್ರೆ ಗಾಂಜಾ (Marijuana) ಸೇವನೆ ಮಾಡೋರ ಸಂಖ್ಯೆ 17.7 ಮಿಲಿಯನ್ ಅಂದ್ರೆ 1 ಕೋಟಿ 77 ಲಕ್ಷದಷ್ಟಿದೆ. 1992 ಮತ್ತು 2022 ರ ನಡುವೆ ನಿತ್ಯ ಗಾಂಜಾ ಸೇವನೆಯ ತಲಾವಾರು ದರವು ಶೇಕಡಾ 15 ಪಟ್ಟು ಹೆಚ್ಚಾಗಿದೆ. 1992ರ ಸಮಯದಲ್ಲಿ ಒಂದು ಮಿಲಿಯನ್ ಮಂದಿ ಗಾಂಜಾ ಸೇವನೆ ಮಾಡ್ತಿದ್ದರು. ಅಮೆರಿಕಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೈನಂದಿನ ಗಾಂಜಾ ಸೇವನೆಯು ದೈನಂದಿನ ಆಲ್ಕೋಹಾಲ್ ಸೇವನೆಯನ್ನು ಮೀರಿರುವುದು. ಪ್ರತಿದಿನ ಶೇಕಡಾ 40ರಷ್ಟು ಜನರು ಗಾಂಜಾ ಸೇವನೆ ಮಾಡ್ತಿದ್ದಾರೆ.
undefined
ಬೆಂಗಳೂರು: ರೇವ್ ಪಾರ್ಟಿಯಲ್ಲಿ 86 ಮಂದಿ ಡ್ರಗ್ಸ್ ಸೇವಿಸಿದ್ದು ನಿಜ..!
ಔಷಧೀಯ ಗಾಂಜಾ ಉತ್ಪಾದನೆ ಮಾಡುವ ಕಂಪನಿಯಾದ ಇಒ ಕೇರ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಬ್ರೂಕ್ ವೋರ್‌ಸ್ಟರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರಕಾರ, ಜನರು ನಾನಾ ಕಾರಣಕ್ಕೆ ಗಾಂಜಾ ಬಳಕೆ ಮಾಡ್ತಿದ್ದಾರೆ. ಅಮೆರಿಕಾದ ಕೆಲ ರಾಜ್ಯಗಳಲ್ಲಿ ಗಾಂಜಾ ಸೇವನೆಗೆ ಕಾನೂನು ಅನುಮತಿ ಇದೆ. ಹಾಗಾಗಿ ಜನರಿಗೆ ಗಾಂಜಾ ಸೇವನೆ ಸುಲಭವಾಗಿದೆ. ಅವರು ಯಾವುದೇ ಭಯವಿಲ್ಲದೆ ಗಾಂಜಾ ಸೇವನೆ ಮಾಡ್ತಿದ್ದಾರೆ. ಜನರು ಗಾಂಜಾ ಸೇವನೆಯನ್ನು ಬಹಿರಂಗವಾಗಿ ಮಾಡ್ತಿದ್ದು, ಅದನ್ನು ಹೇಳಲು ಹೆದರುತ್ತಿಲ್ಲ. ಆದ್ರೆ ವರದಿ ಹೇಳಿದಷ್ಟು ಪ್ರಮಾಣದಲ್ಲಿ ಗಾಂಜಾ ಸೇವನೆ ಹೆಚ್ಚಾಗಿಲ್ಲ ಎಂದು ಡಾ. ಬ್ರೂಕ್ ವೋರ್ ಸ್ಟರ್ ಹೇಳಿದ್ದಾರೆ.
ವಾಷಿಂಗ್ಟನ್ ಮತ್ತು ಕೊಲೊರಾಡೋ ನಂತ್ರ 2012 ರಲ್ಲಿ ಎಲ್ಲಾ ರಾಜ್ಯಗಳಲ್ಲಿ ಅರ್ಧದಷ್ಟು ಜನರು ಮನರಂಜನಾ ಗಾಂಜಾ ಬಳಕೆಯನ್ನು ಅನುಮೋದಿಸಿದ್ದಾರೆ. ಹೆಚ್ಚಿನ ರಾಜ್ಯಗಳು ವೈದ್ಯಕೀಯ ಗಾಂಜಾವನ್ನು ಕಾನೂನುಬದ್ಧಗೊಳಿಸಿವೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಆಡಳಿತ ಇತ್ತೀಚೆಗೆ ಗಾಂಜಾವನ್ನು ಕಡಿಮೆ ಅಪಾಯಕಾರಿ ಔಷಧವಾಗಿ ಮರುವರ್ಗೀಕರಿಸಲು ಪ್ರಸ್ತಾಪಿಸಿದ ನಂತರ, ನ್ಯಾಯಾಂಗ ಇಲಾಖೆಯು ಅಧಿಕೃತವಾಗಿ ಪ್ರಕ್ರಿಯೆ ಸಂಗ್ರಹಿಸಲು ಮುಂದಾಗಿದೆ.
ಮದುವೆ ಆಗ್ತಿದೆ ಇಬ್ಬರು ಮಾಜಿ ಗೆಳೆಯರನ್ನು ಹೇಗೆ ಮರೆಯಲಿ ಎಂದು ಕೇಳಿದ ಯುವತಿಗೆ ನೆಟ್ಟಿಗರು ಕೊಟ್ರು ಟಿಪ್ಸ್
ಗಾಂಜಾ ಸೇವನೆಯಿಂದ ಆರೋಗ್ಯ ಸಮಸ್ಯೆ : ಗಾಂಜಾ ಬಳಕೆಗೆ ಕಾನೂನು ಒಪ್ಪಿಗೆ ಸಿಗ್ತಿರುವ ಬೆನ್ನಲ್ಲೆ ಯುಎಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಗಾಂಜಾ ಬಳಕೆಯಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಅತಿಯಾದ ತಂಬಾಕು ಸೇವನೆಯಿಂದ ಉಸಿರಾಟದ ತೊಂದರೆ, ಹೃದಯಾಘಾತದ ಅಪಾಯ ಮತ್ತು ಗರ್ಭಾವಸ್ಥೆಯಲ್ಲಿ ಮತ್ತು ನಂತರ ಮಗುವಿನ ಬೆಳವಣಿಗೆಯ ಸಮಸ್ಯೆ ಕಾಡುತ್ತದೆ. ದೀರ್ಘಾವಧಿಯಲ್ಲಿ ಇದು ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ. ಇದು ಸೈಕೋಸಿಸ್‌ನ ಅಪಾಯವನ್ನು ಹೆಚ್ಚಿಸುತ್ತದೆ.