ಹಿಮ ಆವರಿತ ಪ್ರದೇಶಕ್ಕೆ ಹೋದಾಗ ನಾವು ನಮ್ಮನ್ನು ಮರೆಯುತ್ತೇವೆ. ಅಲ್ಲಿನ ಸೌಂದರ್ಯ ನಮ್ಮ ಕಣ್ಮನ ಸೆಳೆಯುತ್ತದೆ. ಆದ್ರೆ ಅಲ್ಲಿ ಮೋಜಿಗಾಗಿ ಮಾಡುವ ಕೆಲ ಆಟಗಳು ನಮ್ಮ ಆರೋಗ್ಯ ಕಾಪಾಡುತ್ತವೆ. ಅದ್ರಲ್ಲಿ ಸ್ಕೀಯಿಂಗ್ ಕೂಡ ಒಂದು.
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸ. ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ಅನೇಕ ಏರುಪೇರುಗಳಾಗುತ್ತವೆ. ಹಾಗೆಯೇ ಮೈಕೊರೆಯುವ ಚಳಿಯಲ್ಲಿ ವ್ಯಾಯಾಮ ಮಾಡುವುದು ದೊಡ್ಡ ಕಷ್ಟ. ಜೊತೆಗೆ ಶೀತದ ಸಮಯದಲ್ಲಿ ಹೆಚ್ಚಿನ ಜನರು ಫಾಸ್ಟ್ ಫುಡ್ ಸೇವನೆ ಮಾಡಲು ಇಷ್ಟಪಡ್ತಾರೆ. ಈ ಎಲ್ಲ ಕಾರಣಕ್ಕೆ ಆರೋಗ್ಯ ಹಾಳಾಗುತ್ತದೆ. ಆದ್ರೆ ಚಳಿಗಾಲದಲ್ಲಿ ಆಡುವ ಆಟಗಳೇ ಕೆಲವೊಂದಿದೆ. ಎಷ್ಟೇ ಚಳಿಯಿರಲಿ, ಮೈ ಕೊರೆಯುವ ನಡುಕವಿರಲಿ, ಜನರು ಚಳಿಗಾಲದಲ್ಲಿ ಆ ಆಟಗಳನ್ನು ಆಡಲು ಹೆಚ್ಚು ಆಸಕ್ತರಾಗಿರ್ತಾರೆ. ಅದ್ರಲ್ಲಿ ಹಿಮದ ಆಟ ಸೇರಿದೆ.
ಚಳಿಗಾಲ (Winter) ದ ರಜೆ ಸಂದರ್ಭದಲ್ಲಿ ಅನೇಕರು ಹಿಮ (Snow) ದ ಜೊತೆ ಆಟವಾಡಲು ಬಯಸ್ತಾರೆ. ಇದು ವಿಶಿಷ್ಟ ಆನಂದವನ್ನು ನೀಡುತ್ತದೆ. ಚಳಿಗಾಲದಲ್ಲಿ ಹಿಮದ ಸ್ಕೀಯಿಂಗ್ (Skiing) ಹೆಚ್ಚು ಪ್ರಸಿದ್ಧಿ ಪಡೆಯುತ್ತದೆ. ಇದ್ರಲ್ಲಿ ಮೋಜು ಹೆಚ್ಚಿದೆ. ನಿಮಗೆ ತಿಳಿದಿರಲಿ, ಸ್ಕೀಯಿಂಗ್ ಕೇವಲ ಮೋಜಿನ ಚಟುವಟಿಕೆಯಲ್ಲ. ಇದು ದೇಹ (Body) ಮತ್ತು ಮನಸ್ಸು ಎರಡಕ್ಕೂ ಒಳ್ಳೆಯ ವ್ಯಾಯಾಮವಾಗಿದೆ. ನಾವಿಂದು ಸ್ಕೀಯಿಂಗ್ ನಿಂದ ಆಗುವ ಲಾಭವೇನು ಎಂಬುದನ್ನು ನಿಮಗೆ ಹೇಳ್ತೆವೆ.
ಸ್ಕೀಯಿಂಗ್ ನಿಂದ ಇದೆ ಇವೆಲ್ಲ ಆರೋಗ್ಯ (Health) ಪ್ರಯೋಜನ :
ಬಲವಾದ ಮೂಳೆ (Bones) ಪಡೆಯಲು ಸ್ಕೀಯಿಂಗ್ : ಸ್ಕೀಯಿಂಗ್ ಮಾಡುವಾಗ ತಿರುಗಬೇಕಾಗುತ್ತದೆ. ವೇಗವನ್ನು ಹೆಚ್ಚು ಕಡಿಮೆ ಮಾಡಬೇಕಾಗುತ್ತದೆ. ಇದು ಮೊಣಕಾಲುಗಳು ಮತ್ತು ಮೂಳೆಗಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಸ್ಕೀಯಿಂಗ್ ಮೊಣಕಾಲುಗಳನ್ನು ಬಲಪಡಿಸುತ್ತದೆ. ಇದಲ್ಲದೆ ಪಾದಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀಳುವುದ್ರಿಂದ ಮೂಳೆಗಳು ಬಲ ಪಡೆಯುತ್ತವೆ.
ಮಾನಸಿಕ ಆರೋಗ್ಯ ಸುಧಾರಿಸುತ್ತೆ ಸ್ಕೀಯಿಂಗ್ : ಯಸ್, ಬರೀ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಸ್ಕೀಯಿಂಗ್ ಒಳ್ಳೆಯದು. ಸ್ಕೀಯಿಂಗ್ ನಿಮ್ಮ ಮನಸ್ಸನ್ನು ಖುಷಿಗೊಳಿಸುತ್ತದೆ. ನಿಮ್ಮ ಮೂಡ್ ಸರಿಯಾಗುತ್ತದೆ. ಮನಸ್ಸು ಶಾಂತವಾದ್ರೆ, ಸಂತೋಷಗೊಂಡ್ರೆ ತಾನಾಗಿಯೇ ಮಾನಸಿಕ ಸ್ಥಿತಿ ಸುಧಾರಿಸುತ್ತದೆ.
Winter Health: ಚಳಿಗಾಲ ನಿಜ, ಆದ್ರೆ ನಂಗ್ಯಾಕೆ ಎಲ್ರಿಗಿಂತ ಜಾಸ್ತಿ ಚಳಿಯಾಗುತ್ತೆ ?
ಹೃದಯಕ್ಕೆ ಒಳ್ಳೆಯ ವ್ಯಾಯಾಮ : ಸ್ಕೀಯಿಂಗ್ ಉತ್ತಮ ಹೃದಯದ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ಸ್ಕೀಯಿಂಗ್ ಮಾಡುವ ವ್ಯಕ್ತಿಗೆ ಕ್ಯಾಲೊರಿ ಬರ್ನ್ ಮಾಡುವುದು ಸುಲಭ. ಇದ್ರಿಂದ ತೂಕ ಕಡಿಮೆಯಾಗುತ್ತದೆ. ಮೇಲ್ಮುಕವಾಗಿ ನಡೆಯುವ ಬದಲು ಕೆಳ ಮುಖವಾಗಿ ಸ್ಕೀಯಿಂಗ್ ಮಾಡಿದ್ರೆ ಹೃದಯ ಹಾಗೂ ಶ್ವಾಸಕೋಶ ಎರಡಕ್ಕೂ ಒಳ್ಳೆಯದು.
ಶಕ್ತಿ ಪಡೆಯುತ್ತೆ ದೇಹದ ಕೆಳ ಭಾಗ : ಸ್ಕೀಯಿಂಗ್ ಮಾಡುವಾಗ ನಿರಂತರ ಸ್ಕ್ವಾಟ್ ಸ್ಥಾನದಲ್ಲಿರಬೇಕು. ಇದರಿಂದಾಗಿ ಇದು ನಿಮ್ಮ ಒಳ ಮತ್ತು ಹೊರ ತೊಡೆಗಳು ಹಾಗೂ ಕ್ವಾಡ್‌ಗಳು ಮತ್ತು ಗ್ಲುಟ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ ನಿಮ್ಮ ಕೋರ್ ಕೂಡ ಇದು ಬಲಪಡಿಸುತ್ತದೆ.
ಉತ್ತಮ ನಿದ್ರೆಗೆ ಸ್ಕೀಯಿಂಗ್ ಬೆಸ್ಟ್ : ನಿದ್ರೆ ಬರ್ತಿಲ್ಲ ಅಂದ್ರೆ ಆರೋಗ್ಯ ಹದಗೆಡುತ್ತದೆ. ಆರೋಗ್ಯ ಹಾಳಾದ್ರೆ ನಿದ್ರೆ ಬರೋದಿಲ್ಲ. ಒಟ್ಟಾರೆ ಆರೋಗ್ಯದ ವಿಷಯಕ್ಕೆ ಬಂದಾಗ ನಿದ್ರೆ ಮಹತ್ವದ ಪಾತ್ರವಹಿಸುತ್ತದೆ. ನಿದ್ರೆ ಸರಿಯಾಗಿ ಬರ್ತಿಲ್ಲ ಎನ್ನುವವರಿಗೆ ಸ್ಕೀಯಿಂಗ್ ಬೆಸ್ಟ್ ವ್ಯಾಯಾಮವಾಗಿದೆ. ಇದ್ರಲ್ಲಿ ದೇಹ ಸಂಪೂರ್ಣ ದಣಿಯುವುದ್ರಿಂದ ಆಳವಾದ ನಿದ್ರೆ ಬರುತ್ತದೆ.
ಕೆಲವು ಜನರಿಗೆ ಮತ್ತೆ ಮತ್ತೆ ಯಾಕೆ ನೆಗಡಿ ಆಗುತ್ತೆ ಗೊತ್ತಾ?
ಸ್ಕೀಯಿಂಗ್ ನಿಂದ ಇದೆ ಈ ಪ್ರಯೋಜನ : ಸ್ಕೀಯಿಂಗ್‌ನ ಉತ್ತಮ ಪ್ರಯೋಜನವೆಂದರೆ ಅದು ನಿಮ್ಮ ದೇಹವನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡುತ್ತದೆ. ಸ್ನಾಯುವಿನ ಒತ್ತಡ ಅಥವಾ ಉಳುಕಿನಂತಹ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಸ್ಕೀಯಿಂಗ್ ಮಾಡುವಾಗ ನೀವು ದೇಹವನ್ನು ಹೆಚ್ಚು ಹಿಗ್ಗಿಸಬೇಕಾಗುತ್ತದೆ. ಸೂಕ್ತ ತರಬೇತಿ ಪಡೆದು ಈ ವ್ಯಾಯಾಮ ಮಾಡಿದ್ರೆ ಒಳ್ಳೆಯದು. ಪ್ರವಾಸಕ್ಕೆಂದು ಹಿಮಾವರಿತ ಪ್ರದೇಶಕ್ಕೆ ಹೋದಾಗ ಸ್ಕೀಯಿಂಗ್ ಮಾಡ್ದೆ ಬರಬೇಡಿ.