ಅಡುಗೆಮನೆಯಲ್ಲಿ ನಿತ್ಯದ ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಏಲಕ್ಕಿಯೂ (Cardamom) ಸೇರಿಕೊಂಡಿರುತ್ತದೆ. ಇದು ಹೆಚ್ಚು ಮಸಾಲೆಯುಕ್ತ (Spicy) ಅಡುಗೆಯನ್ನು ಮಾಡುವುದಕ್ಕಾಗಿ ಉಪಯೋಗವಾಗುತ್ತದೆ. ಜೊತೆಗೆ ಸಿಹಿ ತಿಂಡಿಗಳಿಗೆ ಕೂಡ ಏಲಕ್ಕಿಯನ್ನು ಸೇರಿಸುತ್ತಾರೆ. ಏಲಕ್ಕಿ ತನ್ನ ವಿಶೇಷ ಘಮದಿಂದಾಗಿ ಅಡುಗೆಯ ರುಚಿಯನ್ನು (Taste) ದುಪ್ಪಟ್ಟು ಮಾಡುವುದರಲ್ಲಿ ಸಂಶಯವಿಲ್ಲ. ರುಚಿ ಹೆಚ್ಚಿಸುವ ಜವಾಬ್ದಾರಿ ಹೊತ್ತಿರುವ ಏಲಕ್ಕಿಗೆ ಆರೋಗ್ಯ ವೃದ್ಧಿಸುವ ಶಕ್ತಿ ಕೂಡ ಇದೆ. ಹಲವಾರು ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಏಲಕ್ಕಿ ಕೆಲವೇ ಕ್ಷಣಗಳಲ್ಲಿ ಮಾಯ ಮಾಡಿಬಿಡುತ್ತದೆ. ಇದನ್ನು ಆಯುರ್ವೇದದಲ್ಲಿ ನಿರೂಪಿಸಲಾಗಿದೆ.
ಆಯುರ್ವೇದ ತಜ್ಞರೊಬ್ಬರು ತಮ್ಮ ಇನ್ಸ್ಟಾಗ್ರಾಂ (Instagram) ಖಾತೆಯಲ್ಲಿ ಏಲಕ್ಕಿಯ ವಿಶೇಷ ಗುಣದ ಬಗ್ಗೆ ಹಂಚಿಕೊಂಡಿದ್ದಾರೆ. ಏಲಕ್ಕಿ ಮಸಾಲ ಪದಾರ್ಥಗಳಲ್ಲಿ ಒಂದು. ಸಾಮಾನ್ಯವಾಗಿ, ಮಸಾಲೆ ಪದಾರ್ಥಗಳು ಅಂದರೆ ಅವು ದೇಹದಲ್ಲಿ ಹೆಚ್ಚು ಉಷ್ಣವನ್ನು (Heat) ವೃದ್ಧಿಸುವ ಗುಣವನ್ನು ಹೊಂದಿರುತ್ತವೆ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆ ಸುಲಲಿತವಾಗುತ್ತದೆ. ಆದರೆ, ಏಲಕ್ಕಿ ಅದಕ್ಕೆ ವಿರುದ್ಧವಾಗಿದೆ. ಏಲಕ್ಕಿಯು ನಮ್ಮ ದೇಹದಲ್ಲಿ ಹಸಿವು ಮತ್ತು ಬಾಯಾರಿಕೆಯನ್ನು ಸಮತೋಲನದಲ್ಲಿ ಇಳಿಸಲು ಸಹಾಯ ಮಾಡುತ್ತದೆ.
undefined
ಏಲಕ್ಕಿಯ ಸೇವನೆಯಿಂದಾಗುವ ಉಪಯೋಗಗಳು
- ಇದನ್ನು ರಕ್ತದೊತ್ತಡ (Blood pressure), ಅಸ್ತಮಾ, ಅಜೀರ್ಣ, ಡಿಸುರಿಯಾ ಮತ್ತು ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಬಳಕೆ ಮಾಡಬಹುದು.
- ಇದು ಹೃದಯಕ್ಕೆ (Heart) ಒಳ್ಳೆಯದು.
- ರುಚಿ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
- ವಾಂತಿಯಂತಹ (Vomiting) ಸಮಸ್ಯೆಗಳಿಗೆ ಪರಿಹಾರವಾಗುತ್ತದೆ.
- ಗಂಟಲಿನ ಕಿರಿಕಿರಿ, ಗ್ಯಾಸ್ಟ್ರಿಕ್ ಅಥವಾ ವಾಯು, ಬಿಕ್ಕಳಿಕೆ, ಬಾಯಾರಿಕೆ, ಅಜೀರ್ಣ ಈ ಎಲ್ಲಾ ಸಮಸ್ಯೆಗಳನ್ನು ಕೆಲವೇ ಕ್ಷಣಗಳಲ್ಲಿ ನಿವಾರಣೆ ಮಾಡುವ ಶಕ್ತಿ ಏಲಕ್ಕಿಗೆ ಇದೆ.
- ಬಾಯಿಯಲ್ಲಿನ (Mouth) ದುರ್ವಾಸನೆ ನಿವಾರಣೆಗೆ ಏಲಕ್ಕಿ ಬಳಸಬಹುದು.
- ಮೂತ್ರ ವಿಸರ್ಜನೆ ಮಾಡುವಾಗ ಹೊಟ್ಟೆಯಲ್ಲಿ ಸುಟ್ಟ ಹಾಗೆ ಅನುಭವವಾಗುವ (Burning sensation) ಅಂತಹ ಸಮಸ್ಯೆಯನ್ನು ಏಲಕ್ಕಿ ನಿವಾರಿಸುತ್ತದೆ.
Health tips : ಹಲ್ಲುಗಳಲ್ಲಿ ಬ್ರೇಸೆಸ್ ಧರಿಸುವರು ಈ ವಿಷಯಗಳನ್ನು ನೆನಪಿನಲ್ಲಿಡಿ
ಏಲಕ್ಕಿಯ ಈ ಎಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಲು ಇದನ್ನು ಯಾವ ರೀತಿ ಬಳಕೆ ಮಾಡಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ..
- ಏಲಕ್ಕಿಯ ಒಂದು ಸಣ್ಣ ಭಾಗವನ್ನು ನಿಮ್ಮ ನಿತ್ಯದ ಚಹಾದೊಂದಿಗೆ (Tea) ಮಿಶ್ರಣ ಮಾಡಿ ಸೇವಿಸಬಹುದು.
- ಇದರ ಪುಡಿಯನ್ನು ತುಪ್ಪ ಅಥವಾ ಜೇನುತುಪ್ಪದೊಂದಿಗೆ ಮಿಶ್ರಣಮಾಡಿ ಸೇವನೆ ಮಾಡಬಹುದು.
- ಬಾಯಿಯ ದುರ್ವಾಸನೆಯ ಸಮಸ್ಯೆಗೆ, ಅಥವಾ ಅತಿಸಾರದ ಸಂದರ್ಭಗಳಲ್ಲಿ, ಏಲಕ್ಕಿಯನ್ನು ಚೆನ್ನಾಗಿ ಅಗಿದು ನುಂಗಬಹುದು. ಅಥವಾ, ಸರಳವಾಗಿ ಬಾಯಿಯೊಳಗೆ ಇಟ್ಟುಕೊಂಡು ಇದರ ರಸವನ್ನು ನಿಧಾನವಾಗಿ ನುಂಗಲಾಗುಬಹುದು.
- ಪ್ರತಿದಿನ ಊಟಕ್ಕಿಂತ ಒಂದು ಗಂಟೆ ಮುಂಚೆ ಏಲಕ್ಕಿಯ ಸೇವನೆ ಮಾಡುವುದು ಅಂದರೆ ಏಲಕ್ಕಿಯ ಚಹಾ ತಯಾರಿಸಿಕೊಂಡು ಅದನ್ನು ಕುಡಿಯುವುದರಿಂದ, ನೀವೇ ನಿಮ್ಮ ಆರೋಗ್ಯದಲ್ಲಿ ಕಂಡುಬರುವ ಉತ್ತಮ ಬದಲಾವಣೆಗಳನ್ನು ಗಮನಿಸಬಹುದು.
New Recipe: ಬಾಯಲ್ಲಿಟ್ರೆ ಕರಗುವ ಜಾಮೂನ್ ಪರೋಟ
- ದೂರದ ಪ್ರದೇಶಗಳಿಗೆ ಪ್ರಯಾಣ ಬೆಳೆಸುವ ಸಮಯದಲ್ಲಿ ಕೆಲವರಿಗೆ ವಾಂತಿ ಮಾಡಿಕೊಳ್ಳುವ ಅಭ್ಯಾಸವಿರುತ್ತದೆ, ಅಂತಹವರು ಇದನ್ನು ತಡೆಹಿಡಿಯಲು ಏಲಕ್ಕಿಯ ಸಣ್ಣ ಕಾಳನ್ನು ಬಾಯಿಗೆ ಹಾಕಿಕೊಂಡು ಅದರ ರಸ ನುಂಗುವುದರಿಂದ ವಾಂತಿ ಮಾಡಿಕೊಳ್ಳುವುದನ್ನು ತಡೆಗಟ್ಟಬಹುದು.
- ಯಾವುದೇ ರೀತಿಯ ಊಟದ ಅಥವಾ ಅಡುಗೆಯ ರುಚಿಯನ್ನು ಹೆಚ್ಚಿಸುವ ಶಕ್ತಿ ಹೊಂದಿರುವ ಏಲಕ್ಕಿಗೆ ನಿಮ್ಮ ದೇಹದಲ್ಲಿ ಎದುರಿಸಬೇಕಾದ ಸಮಸ್ಯೆಗಳನ್ನು ತಡೆಹಿಡಿಯುವ ಶಕ್ತಿ ಕೂಡ ಇದೆ. ಇದರ ಉಪಯೋಗ (Uses) ಪಡೆದುಕೊಳ್ಳಲು, ಸರಿಯಾದ ಕ್ರಮದಲ್ಲಿ ಏಲಕ್ಕಿಯ ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ..