Yogasana Tips: ಈ ಆಸನ ಮಿಸ್ ಮಾಡಿದ್ರೆ ಸೂರ್ಯ ನಮಸ್ಕಾರ ಮಾಡಿದ್ರೂ ವೇಸ್ಟ್!

By Suvarna NewsFirst Published Mar 15, 2022, 8:04 PM IST
Highlights

ಪ್ರತಿ ನಿತ್ಯ ಸೂರ್ಯ ನಮಸ್ಕಾರ (Surya Namaskar)ಮಾಡೋದ್ರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಇದು ಇಡೀ ದೇಹ (Body)ಕ್ಕೆ ಉತ್ತಮ ವ್ಯಾಯಾಮ (Exercise)ವನ್ನು ನೀಡುತ್ತದೆ. ಆದ್ರೆ ಸೂರ್ಯನಮಸ್ಕಾರದ ಸಂಪೂರ್ಣ ಲಾಭ ಸಿಗ್ಬೇಕೆಂದ್ರೆ, ಸೂರ್ಯ ನಮಸ್ಕಾರದ ನಂತ್ರ ಈ ಆಸನಗಳನ್ನು ಮಾಡ್ಲೇಬೇಕು ಅನ್ನೋದು ನಿಮ್ಗೆ ಗೊತ್ತಾ ?

ಯೋಗಾಸನ (Yogasana)ದ ಹೆಸರು ಬಂದಾಗ ಮೊದಲು ಎಲ್ಲರಿಗೂ ನೆನಪಾಗುವುದು ಸೂರ್ಯ ನಮಸ್ಕಾರ (Surya Namaskar). ಪ್ರತಿ ನಿತ್ಯ ಸೂರ್ಯ ನಮಸ್ಕಾರ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಇದು ಇಡೀ ದೇಹ (Body)ಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಸೂರ್ಯ ನಮಸ್ಕಾರದಿಂದ ದೇಹವು ಸದೃಢವಾಗಿರುತ್ತದೆ. ಹೃದಯ, ಹೊಟ್ಟೆ, ಎದೆ, ಕರುಳು ಮತ್ತು ಕಾಲುಗಳನ್ನು ಹೊರತುಪಡಿಸಿ ದೇಹದ ಇತರ ಭಾಗಗಗಳಿಗೂ ಸೂರ್ಯ ನಮಸ್ಕಾರದಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. 

ಸೂರ್ಯ ನಮಸ್ಕಾರ ದೇಹವನ್ನು ಸದೃಢಗೊಳಿಸುವುದಲ್ಲದೆ  ಮನಸ್ಸಿನ ಎಲ್ಲಾ ಚಿಂತೆ ಮತ್ತು ಉದ್ವೇಗವನ್ನು ದೂರ ಮಾಡುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಬಯಸುವವರಿಗೆ ಸೂರ್ಯನಮಸ್ಕಾರ ವರದಾನವಾಗಿದೆ. ಈ ಕಾರಣಕ್ಕಾಗಿಯೇ ಎಲ್ಲಾ ಯೋಗ ತಜ್ಞರು ಸೂರ್ಯ ನಮಸ್ಕಾರ ಮಾಡುವಂತೆ ಸಲಹೆ ನೀಡ್ತಾರೆ. 

ಸೂರ್ಯ ನಮಸ್ಕಾರ ಮಾಡುವುದರಿಂದ ಬೆನ್ನುಮೂಳೆಗೆ ಶಕ್ತಿ ಸಿಗುತ್ತದೆ. ಸೂರ್ಯ ನಮಸ್ಕಾರವು ನಮ್ಮ ತೋಳುಗಳು, ಬೆನ್ನುಮೂಳೆ ಮತ್ತು ಮಂಡಿರಜ್ಜುಗಳನ್ನು ಬಲಪಡಿಸುತ್ತದೆ. ಆದರೆ ಸೂರ್ಯ ನಮಸ್ಕಾರ ಮಾಡಿದ್ರೆ ಮಾತ್ರ ಸಾಲದು. ಸೂರ್ಯ ನಮಸ್ಕಾರದ ಸಂಪೂರ್ಣ ಪರಿಣಾಮ ನಮಗೆ ಸಿಗಬೇಕೆಂದ್ರೆ ಸೂರ್ಯ ನಮಸ್ಕಾರದ ನಂತರ ಎರಡು ಆಸನಗಳನ್ನು ಅವಶ್ಯವಾಗಿ ಮಾಡಬೇಕು. ಸೂರ್ಯ ನಮಸ್ಕಾರದ ನಂತ್ರ ಮಾಡಲೇಬೇಕಾದ ಎರಡು ಆಸನಗಳು ಯಾವುವು ಎಂಬುದನ್ನು ನಾವು ಹೇಳ್ತೇವೆ.

ಸೂರ್ಯ ನಮಸ್ಕಾರದ ನಂತ್ರ ಮಾಡಲೇಬೇಕಾದ ಆಸನಗಳು

ಗೋಮುಖಾಸನ (Gomukhasana): ಇಂಗ್ಲಿಷ್‌ನಲ್ಲಿ ಗೋಮುಖಾಸನವನ್ನು ಕೌ ಫೇಸ್ ಪೋಸ್ ಎಂದು ಕರೆಯಲಾಗುತ್ತದೆ. ಈ ಆಸನ ದೇಹವನ್ನು ಫೆಕ್ಸಿಬಲ್ ಮಾಡುವ ಜೊತೆಗೆ ಸ್ನಾಯುಗಳನ್ನು ಬಲಪಡಿಸುತ್ತದೆ.

ಗೋಮುಖಾಸನ  ಮಾಡುವ ವಿಧಾನ: ಮೊಣಕಾಲುಗಳನ್ನು ಒಂದರ ಮೇಲೊಂದರಂತೆ ಇರಿಸಿ ಕುಳಿತುಕೊಳ್ಳಬೇಕು. ಮೊಣಕಾಲಿನ ಸಮಸ್ಯೆಯಿದ್ದರೆ ಸುಖಾಸನದಲ್ಲಿ ಕುಳಿತುಕೊಂಡೂ ನೀವು ಗೋಮುಖಾಸನವನ್ನು ಮಾಡಬಹುದು. ಮೊಣಕಾಲುಗಳು ಪರಸ್ಪರ ಸ್ಪರ್ಶಿಸದಿದ್ದರೆ, ನೀವು ಮೊಣಕಾಲುಗಳ ಕೆಳಗೆ ಟವೆಲ್ ಹಾಕಬಹುದು. ಯಾವ ಕಾಲು ಮೇಲ್ಭಾಗದಲ್ಲಿದೆಯೋ ಆ ಭಾಗದ ಕೈ ಮೇಲಕ್ಕೆ ಎತ್ತಿ. ನಿಮ್ಮ ಬಲ ಮೊಣಕಾಲು ಮೇಲಿದ್ದರೆ  ಬಲ ಕೈಯನ್ನು ಮೇಲೆ ಎತ್ತಿ ಹಿಂದೆ ತೆಗೆದುಕೊಳ್ಳಿ. ಎಡಗೈಯನ್ನು ಹಿಂಬದಿಯಿಂದ ಮೇಲಕ್ಕೆತ್ತಿ ಬಲಗೈ ಸ್ಪರ್ಶಿಸಿ. 5 ರಿಂದ 19 ಎಣಿಕೆಗಳವರೆಗೆ ಕೈಗಳನ್ನು ಹಾಗೆ ಇಟ್ಟುಕೊಳ್ಳಿ. ಈ ಸಮಯದಲ್ಲಿ ನಿಧಾನವಾಗಿ ಉಸಿರಾಡುತ್ತಿರಿ. ನಂತ್ರ ಸಮಸ್ಥಿತಿಗೆ ಬಂದು ವಿಶ್ರಾಂತಿ ಪಡೆಯಿರಿ. ಎಡಗೈನಿಂದಲೂ ಇದನ್ನು ಮಾಡಿ. ಗೋಮುಖಾಸನವು ನಮ್ಮ ಭುಜಗಳು, ಮೇಲಿನ ಬೆನ್ನು ಮತ್ತು ಸೊಂಟಕ್ಕೆ ವಿಶ್ರಾಂತಿ ನೀಡಲು ನೆರವಾಗುತ್ತದೆ. 

WORST FOODS: ಆಯಸ್ಸು ಕಡಿಮೆ ಮಾಡೋ ಆಹಾರಗಳಿವು ! ನೀವಿದನ್ನು ತಿನ್ತಿದ್ದೀರಾ ಚೆಕ್ ಮಾಡ್ಕೊಳ್ಳಿ

ಪಶ್ಚಿಮೋತ್ತಾಸನ: ಸೂರ್ಯನಮಸ್ಕಾರದ ನಂತ್ರ ಮಾಡಲೇಬೇಕಾದ ಇನ್ನೊಂದು ಆಸನ ಪಶ್ಚಿಮೋತ್ತಾಸನ. ಈ ಆಸನವು ನಿಮ್ಮ ಸ್ನಾಯುರಜ್ಜುಗಳನ್ನು ಬಲಪಡಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಅಷ್ಟೇ ಅಲ್ಲ, ಇದು ಕಾಲು, ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

Health tips : ಹಲ್ಲುಗಳಲ್ಲಿ ಬ್ರೇಸೆಸ್ ಧರಿಸುವರು ಈ ವಿಷಯಗಳನ್ನು ನೆನಪಿನಲ್ಲಿಡಿ

ಪಶ್ಚಿಮೋತ್ತಾಸನ ಮಾಡುವ ವಿಧಾನ: ಈ ಆಸನವನ್ನು ಮಾಡಲು ಮೊದಲು ಕುಳಿತುಕೊಳ್ಳಿ. ನಂತ್ರ ಕಾಲುಗಳನ್ನು ಮುಂದಕ್ಕೆ ಚಾಚಿ. ಉಸಿರು ಎಳೆದುಕೊಳ್ಳುತ್ತ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನಂತ್ರ ನಿಧಾನವಾಗಿ ಉಸಿರು ಬಿಡುತ್ತ ನಿಮ್ಮ ಮೊಣಕಾಲಿನ ಕಡೆ ಬಾಗಿ. ನಿಮ್ಮ ಕೈನಿಂದ ಕಾಲಿನ ಹೆಬ್ಬೆರಳುಗಳನ್ನು ಹಿಡಿಯಲು ಪ್ರಯತ್ನಿಸಿ. ಜೊತೆಗೆ ಮೊಣಕೈಗಳನ್ನು ನೆಲಕ್ಕೆ ಊರುವ ಪ್ರಯತ್ನ ಮಾಡಿ. ಈ ಸಮಯದಲ್ಲಿ ನಿಮ್ಮ ಬೆನ್ನುಮೂಳೆ ನೇರವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಸ್ವಲ್ಪ ಸಮಯ ಸ್ಥಿತಿಯಲ್ಲಿಯೇ ಇದ್ದು ನಂತ್ರ ನಿಧಾನವಾಗಿ ಮೇಲಕ್ಕೆ ಬನ್ನಿ. 

ಈ ಆಸನವು ಕೆಳ, ಮಧ್ಯ ಮತ್ತು ಮೇಲಿನ ಬೆನ್ನಿನ ಮೇಲೆ ಒತ್ತಡ ಹಾಕುತ್ತದೆ.  ಕೆಳಗಿನ ಬೆನ್ನು ಹೆಚ್ಚು ಮಡಚಿಕೊಳ್ಳುತ್ತದೆ. ನಿಮಗೆ ಬೆನ್ನಿನ ಕೆಳಭಾಗದಲ್ಲಿ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆದು ನಂತ್ರ ಆಸನವನ್ನು ಮಾಡಿ.

click me!