Health Problems: ಒಂದು ಪೆಗ್ ತೆಗೆದುಕೊಳ್ತಿದ್ದಂತೆ ಓವರ್ ಡ್ರಂಕ್ ಅನುಭವವಾಗ್ತಿದ್ಯಾ?

By Suvarna News  |  First Published Sep 17, 2022, 11:01 AM IST

ಆಲ್ಕೋಹಾಲ್ ಸೇವನೆ ಇತ್ತೀಚಿನ ದಿನಗಳಲ್ಲಿ ಕಾಮನ್. ಆದ್ರೆ ಕೆಲವರಿಗೆ ಆಲ್ಕೋಹಾಲ್ ಸೇವನೆ ಮಾಡ್ತಿದ್ದಂತೆ ಕೆಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸುಸ್ತು, ಹೆಚ್ಚಾಗುವ ಎದೆಬಡಿತದ ಜೊತೆ ಒಂದು ಪೆಗ್ ಫುಲ್ ಟೈಟ್ ಆದ ಅನುಭವ ನೀಡುತ್ತದೆ. ಇದಕ್ಕೆ ಮುಖ್ಯ ಕಾರಣವಿದೆ.
 


ಲವ್ ಫೇಲ್ಯೂರ್ ಆದ್ರೂ ಪಾರ್ಟಿ, ಲವ್ ನಲ್ಲಿ ಬಿದ್ರೂ ಪಾರ್ಟಿ. ಈಗಿನ ದಿನಗಳಲ್ಲಿ ಎಲ್ಲದಕ್ಕೂ ಪಾರ್ಟಿ ಕಾಮನ್ ಎನ್ನುವಂತಾಗಿದೆ. ಜನರು ಸಣ್ಣ ವಿಷ್ಯದಿಂದ ಹಿಡಿದು ದೊಡ್ಡ ವಿಷ್ಯದವರೆಗೆ ಎಲ್ಲದಕ್ಕೂ ಪಾರ್ಟಿ ಮಾಡ್ತಾರೆ. ಪಾರ್ಟಿ ಅಂದ್ಮೇಲೆ ಆಲ್ಕೋಹಾಲ್ ಇರ್ಲೇಬೇಕು. ಆದ್ರೆ ಎಲ್ಲರಿಗೂ ಆಲ್ಕೋಹಾಲ್ ಆಗಿ ಬರೋದಿಲ್ಲ. ಆಲ್ಕೋಹಾಲ್ ಜೀರ್ಣಿಸಿಕೊಳ್ಳೋದು ಕೆಲವರಿಗೆ ಕಷ್ಟ. ಇದಕ್ಕೆ ಆಲ್ಕೋಹಾಲ್ ಇನ್ ಟಾಲರೆನ್ಸ್ ಎಂದು ಕರೆಯುತ್ತಾರೆ. ಆಲ್ಕೋಹಾಲ್ ಇನ್ ಟಾಲರೆನ್ಸ್ ಸಮಸ್ಯೆ ದಿನದಿಂದ ದಿನಕ್ಕೆ ಆರೋಗ್ಯ ಹಾಳು ಮಾಡುತ್ತದೆ. ಅನೇಕರಿಗೆ ಆಲ್ಕೋಹಾಲ್ ಇನ್ ಟಾಲರೆನ್ಸ್ ಅಂದ್ರೇನು ಎನ್ನೋದೇ ಗೊತ್ತಿರೋದಿಲ್ಲ. ಇನ್ನು ಅದ್ರ ಲಕ್ಷಣ ಪತ್ತೆ ಮಾಡೋದು ಕಷ್ಟ.  ಇಂದು ಆಲ್ಕೋಹಾಲ್ ಇನ್ ಟಾಲರೆನ್ಸ್ ಲಕ್ಷಣ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ. 

ಆಲ್ಕೋಹಾಲ್ ಇನ್ ಟಾಲರೆನ್ಸ್ (Alcohol Intolerance) ಅಂದ್ರೇನು? : ಆಲ್ಕೋಹಾಲ್ ಇನ್ ಟಾಲರೆನ್ಸ್ ಇದ್ದವರು ಮದ್ಯಪಾನ ಮಾಡಿದ್ರೆ ಆರೋಗ್ಯ (Health) ಹದಗೆಡುತ್ತದೆ. ಸ್ವಲ್ಪ ಮದ್ಯಪಾನ ಮಾಡಿದ್ರೂ ಬೇಗನೇ ಮತ್ತು ಏರುತ್ತದೆ. ಯಾಕೆಂದ್ರೆ ಬೇರೆಯವರಿಗೆ ಹೋಲಿಸಿದ್ರೆ ನಿಮ್ಮ ದೇಹ ಆಲ್ಕೋಹಾಲನ್ನು ಬೇಗ ಜೀರ್ಣಿಸಿಕೊಳ್ಳುವುದಿಲ್ಲ. 

Tap to resize

Latest Videos

ಆಲ್ಕೋಹಾಲ್ ಇನ್ ಟಾಲರೆನ್ಸ್ ಲಕ್ಷಣ : ಆಲ್ಕೋಹಾಲ್ ಇನ್ ಟಾಲರೆನ್ಸ್ ಇದ್ದವರಿಗೆ ಒಂದು ಪೆಗ್ ಹಾಕ್ತಿದ್ದಂತೆ ನಾಲ್ಕು ಪೆಗ್ ಹಾಕಿದ ಅನುಭವ ಆಗುತ್ತದೆ. ಇದು ಸಾಮಾನ್ಯ ಲಕ್ಷಣ. ಇದನ್ನು ಹೊರತುಪಡಿಸಿ, ಮೂಗು ಸೋರುವ ಸಮಸ್ಯೆ ಕಾಡಬಹುದು. ಮುಖ, ಗಂಟಲು ಮತ್ತು ಎದೆಯ ಮೇಲೆ ಕೆಂಪು ಕಲೆಗಳು ಕಾಣಿಸಿಕೊಳ್ಳುವುದಿದೆ. ಕೆಲವರಿಗೆ ಅತಿಸಾರ ಸಮಸ್ಯೆಯಾಗುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ. ಆಯಾಸ ಮತ್ತು ಆಲಸ್ಯ ಕಾಣಿಸಿಕೊಳ್ಳುತ್ತದೆ. ತಲೆನೋವು ವಿಪರೀತವಾಗಿ ಕಾಡುತ್ತದೆ. ರಕ್ತದೊತ್ತಡ ಕಡಿಮೆಯಾಗುವ ಜೊತೆಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಎಲ್ಲರಿಗೂ ಮೇಲಿನ ಎಲ್ಲ ಲಕ್ಷಣ ಕಾಣಿಸಿಕೊಳ್ಳಬೇಕೆಂದೇನಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಲಕ್ಷಣ ಕಾಣಿಸಿಕೊಳ್ಳಬಹುದು. ಆದ್ರೆ ಮುಖದ ಮೇಲೆ ಕೆಂಪು ಕಲೆ ಹಾಗೂ ಆಲ್ಕೋಹಾಲ್ ಸೇವನೆ ನಂತ್ರ ಅನಾರೋಗ್ಯ ಬಹುತೇಕರಿಗೆ ಕಾಡುತ್ತದೆ.  

ಆಲ್ಕೋಹಾಲ್ ಇನ್ ಟಾಲರೆನ್ಸ್ ಗೆ ಕಾರಣ : ಆನುವಂಶಿಕವಾಗಿ ಈ ಸಮಸ್ಯೆ ಕಾಡಬಹುದು. ಎಥೆನಾಲ್ ಹೊಂದಿರುವ ಆಲ್ಕೋಹಾಲ್ ಸೇವಿಸಿದಾಗ ಯಕೃತ್ತು ಎಥೆನಾಲ್ ಅನ್ನು ಅಸಿಟಾಲ್ಡಿಹೈಡ್ ಆಗಿ ಪರಿವರ್ತಿಸುತ್ತದೆ. ಇದು ಜೀವಕೋಶವನ್ನು ಹಾನಿಗೊಳಿಸುತ್ತದೆ. ಆಲ್ಕೋಹಾಲ್ ಇನ್ ಟಾಲರೆನ್ಸ್ ಹೊಂದಿರುವ ವ್ಯಕ್ತಿಯ ಆನುವಂಶಿಕ ರೂಪಾಂತರವು ALDH2 ಅನ್ನು ನಿಷ್ಕ್ರಿಯಗೊಳಿಸುತ್ತದೆ.  ದೇಹವು ಅಸಿಟಾಲ್ಡಿಹೈಡ್ ಅನ್ನು ಅಸಿಟಿಕ್ ಆಮ್ಲವಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಅಸಿಟಾಲ್ಡಿಹೈಡ್ ನಿಮ್ಮ ರಕ್ತ ಮತ್ತು ಅಂಗಾಂಶಗಳಲ್ಲಿ ಸೇರಲು ಶುರುವಾಗುತ್ತದೆ. ಇದು ಆಲ್ಕೋಹಾಲ್ ಇನ್ ಟಾಲರೆನ್ಸ್ ಸಮಸ್ಯೆಗೆ ಕಾರಣವಾಗುತ್ತದೆ. 

ಆಲ್ಕೋಹಾಲ್ ಇನ್ ಟಾಲರೆನ್ಸ್ ಹೊಂದಿದ್ದವರಿಗೆ ಇದು ತಿಳಿದಿರಲಿ : ಚಯಾಪಚಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಇದ್ರಲ್ಲಿ ಕಂಡುಬರುವ ಎಲ್ಲಾ ರೋಗಲಕ್ಷಣಗಳು ತುಂಬಾ ಹಾನಿಕಾರಕ. ಸಂಪೂರ್ಣ ಗುಣವಾಗದೆ ಹೋದ್ರೂ ಇದನ್ನು ಎದುರಿಸಬಹುದು. 

ಇದನ್ನೂ ಓದಿ: Healthy Food: ಕೆಮ್ಮು ಕಮ್ಮಿ ಆಗ್ತಿಲ್ವಾ? ಹುರಿದ ಈರುಳ್ಳಿ ಆಗುತ್ತೆ ಮದ್ದು

ಆಲ್ಕೋಹಾಲ್ ಇನ್ ಟಾಲರೆನ್ಸ್ ಕಾಡಬಾರದು ಅಂದ್ರೆ ನೀವು ಆಲ್ಕೋಹಾಲ್ ನಿಂದ ಸಂಪೂರ್ಣ ದೂರವಿರಬೇಕು. ಇದು ಅತ್ಯುತ್ತಮ ಮಾರ್ಗವಾಗಿದೆ. ಆಲ್ಕೋಹಾಲ್ ನಿಂದ ದೂರವಿರಲು ಸಾಧ್ಯವಿಲ್ಲ ಎನ್ನುವವರು ವರ್ಷಕ್ಕೆ 2-4 ಬಾರಿ ಮಾತ್ರ ಮದ್ಯಪಾನ ಮಾಡಿ. 

ಮಾತ್ರೆ, ಔಷಧಿ ಸೇವಿಸುತ್ತಿದ್ದರೆ ಆಲ್ಕೋಹಾಲ್ ಸಹವಾಸಕ್ಕೆ ಹೋಗ್ಬೇಡಿ. ಮಾತ್ರೆ ಮತ್ತು ಮದ್ಯಪಾನ, ಆಲ್ಕೋಹಾಲ್ ಇನ್ ಟಾಲರೆನ್ಸ್ ಸಮಸ್ಯೆ ಹೆಚ್ಚಿಸುತ್ತದೆ.

ಇದನ್ನೂ ಓದಿ: Health Tips : ಖಾಲಿ ಹೊಟ್ಟೇಲಿ ಏಲಕ್ಕಿ ನೀರು ಕುಡಿದ್ನೋಡಿ!

ಆಲ್ಕೋಹಾಲ್ ಇನ್ ಟಾಲರೆನ್ಸ್ ಸಮಸ್ಯೆ ಕಾಡಬಾರದು ಎನ್ನುವವರು ಧೂಮಪಾನದಿಂದ ದೂರವಿರಬೇಕು. ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿದ್ದರೆ ನೀವು ಸುಲಭವಾಗಿ ಆಲ್ಕೋಹಾಲ್ ಇನ್ ಟಾಲರೆನ್ಸ್ ನಿಂದ ಮುಕ್ತಿ ಪಡೆಯಬಹುದು. ಒಂದ್ವೇಳೆ ಈ ಎರಡೂ ಚಟ ನಿಮಗಿದ್ದರೆ ಆಲ್ಕೋಹಾಲ್ ಇನ್ ಟಾಲರೆನ್ಸ್ ಸಮಸ್ಯೆ ವಿಪರೀತವಾಗುತ್ತದೆ. ಇದರಿಂದ ಮೇದೋಜ್ಜೀರಕ ಗ್ರಂಥಿ,ಯಕೃತ್ತಿನ ಸಮಸ್ಯೆ,ಕ್ಯಾನ್ಸರ್ ಮತ್ತು ತೀವ್ರ ರಕ್ತದೊತ್ತಡ ನಿಮ್ಮನ್ನು ಜೀವನ ಪರ್ಯಂತ ಕಾಡುವ ಸಾಧ್ಯತೆಯಿರುತ್ತದೆ. 

click me!