ಕುವೈತ್‌ನಲ್ಲಿ ಯೋಗ- ಉಡುಪಿಯ ಯೋಗ ಟೀಚರ್ ಸಿಕ್ಕಿರುವುದು ಯೋಗಾಯೋಗ! 

By Ravi NayakFirst Published Aug 5, 2022, 5:04 PM IST
Highlights

ಮುಸ್ಲಿಂ ದೇಶ  ಕುವೈತ್‌ನಲ್ಲೂ ಯೋಗ ಕ್ರೇಜ್  ಹೆಚ್ಚುತ್ತಿದ್ದು ಉಡುಪಿಯ ಯೋಗ ಟೀಚರ್ ಅರಬ್ ಪ್ರಜೆಗಳಿಗೆ ನಮ್ಮ ಯೋಗದ ಎಬಿಸಿಡಿ ಹೇಳಿಕೊಡುತ್ತಿದ್ದಾರೆ ಎಂದರೆ ನಂಬುತ್ತೀರಾ? ಯಾರು ಆಕೆ? ಮುಂದೆ ಓದಿ.

ಉಡುಪಿ (ಆ.5) : ಭಾರತೀಯ ಮೂಲದ ಯೋಗ ವಿದೇಶಗಳಲ್ಲೂ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಅದರಲ್ಲೂ ವಿಶ್ವ ಯೋಗ ದಿನ ಪ್ರಾರಂಭವಾದ ನಂತರ ಅಂತಾರಾಷ್ಟ್ರೀಯ ಮಟ್ಡದಲ್ಲಿ ಜನರು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗ ಬಲ್ಲವ ನಿರೋಗಿ ಆಗುತ್ತಾನೆ ಅನ್ನುವ ಮಾತು ವಿಶ್ವ ಮಾನ್ಯತೆ ಪಡೆಯುತ್ತಿದೆ. ನೀವು ನಂಬಲಿಕ್ಕಿಲ್ಲ ,ಮುಸ್ಲಿಂ ದೇಶ ,ಕುವೈತ್ ನಲ್ಲೂ ಯೋಗ ಕ್ರೇಜ್  ಹೆಚ್ಚುತ್ತಿದ್ದು ಉಡುಪಿ((Udupi)ಯ ಯೋಗ ಟೀಚರ್ ಅರಬ್ ಪ್ರಜೆಗಳಿಗೆ ನಮ್ಮ ಯೋಗದ ಎಬಿಸಿಡಿ ಹೇಳಿಕೊಡುತ್ತಿದ್ದಾರೆ. ದಿನದಿಂದ ದಿನಕ್ಕೆ ಯೋಗ ಜನಪ್ರಿಯವಾಗುತ್ತಿದೆ. ಜನರು ತಮ್ಮ ಜೀವನ ಶೈಲಿ(Life Style)ಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಜಾತಿ, ಧರ್ಮ, ದೇಶದ ಗಡಿಗಳನ್ನು ಮೀರಿ ಯೋಗ ಭಾರತದ ಹೆಮ್ಮೆಯಾಗಿ ವಿಶ್ವ ಮಾನ್ಯತೆ ಪಡೆಯುತ್ತಿದೆ.

ಮೂಡ್ ಆಫ್ ಆಗುತ್ತಿರುತ್ತಾ? ಈ ಯೋಗ ಮಾಡಿ ಸರಿ ಮಾಡ್ಕೋಬಹುದು!

ಉಡುಪಿಯ ಅಲಕಾ ಜಿತೇಂದ್ರ ಯೋಗದಲ್ಲಿ ಹೆಚ್ಚಿನ ತರಬೇತಿ ಪಡೆದು ಕುವೈತ್ ನಲ್ಲಿ ವಾಸವಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಮುಸ್ಲಿಂ ದೇಶ ಕುವೈತ್ ನಲ್ಲಿ ಅಲ್ಲಿಯ ಆಸಕ್ತರಿಗೆ ಯೋಗಾಭ್ಯಾಸ ಹೇಳಿಕೊಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅಲ್ಲಿರುವ ಕನ್ನಡಿಗರಷ್ಟೇ ಅಲ್ಲದೆ ,ಅರಬ್ ಪ್ರಜೆಗಳೂ ಯೋಗದಲ್ಲಿ ಸಾಕಷ್ಟು ಆಸಕ್ತಿ ವಹಿಸುತ್ತಿದ್ದಾರೆ ಅಂತಾರೆ ಅಲಕಾ. ಸದ್ಯ ಮೈಸೂರಿನಲ್ಲಿ ಅಷ್ಠಾಂಗ ವಿನ್ಯಾಸ ಯೋಗ ತರಬೇತಿಗಾಗಿ ಅವರು ಊರಿಗೆ ಬಂದಿದ್ದಾರೆ.  ಹಠಯೋಗಕ್ಕಿಂತ ಭಿನ್ನವಾದ ಈ ಅಷ್ಠಾಂಗ ಯೋಗದಲ್ಲಿ ತಿಂಗಳ ಕಾಲ ತರಬೇತಿ ಪಡೆದು ಕುವೈತ್ ನಲ್ಲಿ ಹೇಳಿಕೊಡುವುದು ಅವರ ಉದ್ದೇಶ. ವಿದೇಶಗಳಲ್ಲಿ ಈ ಪ್ರಕಾರಕ್ಕೆ ಅತಿ ಹೆಚ್ಚಿನ ಬೇಡಿಕೆ ಇದೆ ಅಂತಾರೆ ಅಲಕಾ ಜಿತೇಂದ್ರ. 
ಪ್ರಸವದ ಮೊದಲು, ನಂತರ ಮಹಿಳೆಯರು ಮಾಡಲೇಬೇಕು ಈ ಯೋಗಾಸನ

ಹೇಳಿಕೇಳಿ ಕುವೈತ್ ಮುಸ್ಲಿಂ ರಾಷ್ಟ್ರ. ಅಲ್ಲಿ ಧಾರ್ಮಿಕ ಪಾಲನೆ ಕಟ್ಟುನಿಟ್ಟು. ಸಂಗೀತ, ಯೋಗಾಭ್ಯಾಸ ಇವಕ್ಕೆಲ್ಲ ಮಾನ್ಯತೆ ಸಿಗುವುದು ಕಠಿಣ.  ಮುಸ್ಲಿಂ ರಾಷ್ಟ್ರಗಳಲ್ಲಿ ಯೋಗದ ಬಗ್ಗೆ ಅಷ್ಟೊಂದು ಆಸಕ್ತಿ ಇರಲಾರದು ಎಂದೇ ಜನ ಭಾವಿಸಿದ್ದಾರೆ. ಆದರೆ ಯೋಗದ ಬಗ್ಗೆ ಕುವೈತ್ನಲ್ಲಿ ಜನ ವಿಶೇಷ ಆಸಕ್ತಿ ತೋರುತ್ತಿರುವುದು ಈ ಈ ಜೀವನ ಕಲೆಯ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಭಾರತ ದೇಶದಲ್ಲಿ ಇದ್ದಾಗ ಅಲಕಾ ಜಿತೇಂದ್ರ ಅವರು ಯೋಗ ಕಲಿತಿರುವುದು ಇದೀಗ ಸಾರ್ಥಕ ರೂಪ ಪಡೆದಂತಾಗಿದೆ. ಯೋಗದ ಕೀರ್ತಿ ಜಗದಗಲ ಹಬ್ಬುತ್ತಿದೆ.

click me!