ಗ್ಯಾಸ್ಟ್ರಿಕ್.. ಇದು ಈಗ ಸಾಮಾನ್ಯ ಸಮಸ್ಯೆ ಆಗಿದೆ. ಹತ್ತರಲ್ಲಿ ಎಂಟು ಮಂದಿಗೆ ಈ ಸಮಸ್ಯೆ ಇದೆ. ಪ್ರತಿ ದಿನ ಗ್ಯಾಸ್ಟ್ರಿಕ್ ಗೆ ಮಾತ್ರೆ ಸೇವನೆ ಮಾಡುವ ಬದಲು ಮನೆ ಮದ್ದು ಬಳಸಿ. ಯಾವುದೇ ಅಡ್ಡಪರಿಣಾಮ ಇಲ್ಲದೆ ನೀವು ಫಿಟ್ ಆಗ್ಬಹುದು.
ಗ್ಯಾಸ್… ಎಸಿಡಿಟಿ.. ಸದ್ಯ ಎಲ್ಲರ ಬಾಯಲ್ಲಿ ಕೇಳುವ ಮಾತಿದು. ಗ್ಯಾಸ್ ಸಾಮಾನ್ಯ ಸಮಸ್ಯೆ ಎನ್ನಿಸಿದ್ರೂ ಇದು ನೀಡುವ ಹಿಂಸೆ ಅಷ್ಟಿಷ್ಟಲ್ಲ. ಬರೀ ಹೊಟ್ಟೆಯಲ್ಲಿ ಮಾತ್ರ ತೊಂದರೆ ಕಾಣಿಸಿಕೊಳ್ಳೋದಿಲ್ಲ. ಗ್ಯಾಸ್ ನಿಂದಾಗಿ ಮೈ ಕೈ ನೋವು, ಎದೆ ನೋವು, ಹೊಟ್ಟೆಯಲ್ಲಿ ಉರಿ, ಕಿರಿಕಿರಿ ಆಗುವುದಲ್ಲದೆ ಅನೇಕ ಭಾರಿ ಖಿನ್ನತೆ, ಮಾನಸಿಕ ಸಮಸ್ಯೆಗೂ ಗ್ಯಾಸ್ಟ್ರಿಕ್ ಕಾರಣ ಎಂದು ತಜ್ಞರು ಹೇಳುತ್ತಾರೆ. ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಒತ್ತಡ, ಹೊರಗಡೆಯ ಆಹಾರ, ಎಣ್ಣೆಯುಕ್ತ ಆಹಾರ ಹಾಗೂ ಕಡಿಮೆ ನೀರು ಸೇವನೆ ಸೇರಿದಂತೆ ಒಂದೇ ಕಡೆ ಕುಳಿತು ಗಂಟೆಗಟ್ಟಲೆ ನಾವು ಕೆಲಸ ಮಾಡೋದು ಕೂಡ ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇರುವುದೇ ಇದಕ್ಕೆ ಕಾರಣ.
undefined
ದಿನಾ ಈ ಎಲೆ ತಿಂದ್ರೆ ಕಾಯಿಲೆ ಕಾಡೋ ಭಯವಿಲ್ಲ, ಯಾವಾಗ್ಲೂ ಯಂಗ್ ಆಗಿರ್ಬೋದು!
ಗ್ಯಾಸ್ಟ್ರಿಕ್ ಎಂದ ತಕ್ಷಣ ನಾವು ವೈದ್ಯರ ಬಳಿ ಹೋಗ್ತೇವೆ. ಅವರು ನೀಡುವ ಮಾತ್ರೆಯನ್ನು ಒಂದಾದ್ಮೇಲೆ ಒಂದರಂತೆ ತೆಗೆದುಕೊಳ್ತೇವೆ. ಇದ್ರಿಂದ ಗ್ಯಾಸ್ಟ್ರಿಕ್ ತಾತ್ಕಾಲಿಕವಾಗಿ ಕಡಿಮೆಯಾಗಿದೆ ಎನ್ನಿಸಿದ್ರೂ ಅದ್ರ ಬೇರು ಹೋಗಿರೋದಿಲ್ಲ. ನಿಮಗೂ ಗ್ಯಾಸ್ ಸಮಸ್ಯೆ ಇದ್ರೆ ನೀವು ಮನೆಯಲ್ಲಿರುವ ಆಹಾರವನ್ನೇ ಬಳಸಿ ಇದ್ರಿಂದ ಮುಕ್ತಿಪಡೆಯಬಹುದು.
ಅಜವಾನ/ಓಮು ಕಾಳಿನಿಂದ ಅನೇಕ ಸಮಸ್ಯೆ ದೂರ : ಕಳಪೆ ಆಹಾರ ಹಾಗೂ ಜೀವನಶೈಲಿಯಿಂದ ಹೆಚ್ಚಿನ ಮಂದಿ ಗ್ಯಾಸ್ ಎಸಿಡಿಟಿ, ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ಯಾಸ್ ಸಮಸ್ಯೆಯಿಂದ ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಹೀಗಾದಾಗ ಸುಲಭವಾಗಿ ಕೈಗೆ ಸಿಗುವಂತ ಮಾತ್ರೆಗಳನ್ನು ನುಂಗಿಬಿಡುತ್ತಾರೆ. ಇದರ ಬದಲು ನಮ್ಮ ಅಡುಗೆಮನೆಯಲ್ಲೇ ಇರುವ ಅಜವಾನ ಅಥವಾ ಓಮು ಕಾಳನ್ನು ಸೇವಿಸಿದರೆ ಇಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.
ಮೂರು ಪದಾರ್ಥಗಳಿಂದ ನೈಸರ್ಗಿಕ ಸೌಂದರ್ಯ! ಮಿಲ್ಕಿ ಬ್ಯೂಟಿ ತಮನ್ನಾ ಏನು ಹೇಳಿದ್ದಾರೆ ಕೇಳಿ
ಆಯುರ್ವೇದದಲ್ಲಿ ಅನೇಕ ಔಷಧಗಳಿಗೆ ಬಳಕೆಯಾಗುವ ಅಜವಾನದಲ್ಲಿ ಥೈಮೋಲ್ ಎಂಬ ತೈಲದ ಅಂಶವಿದೆ. ಥೈಮೋಲ್ ಎಂಬ ತೈಲದ ಅಂಶವು ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಹೆಚ್ಚಿನ ಆಹಾರ ಸೇವಿಸಿದಾಗ ಗ್ಯಾಸ್, ಎಸಿಡಿಟಿ ಸಮಸ್ಯೆ ಹಾಗೂ ಹೊಟ್ಟೆ ಭಾರವೆನಿಸುತ್ತದೆ. ಇಂತಹ ಸಮಯದಲ್ಲಿ 1 ಚಮಚ ಅಜವಾನ ಸೇವಿಸಿದರೆ ತಕ್ಷಣವೇ ಆರಾಮ ಸಿಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ಓಮು ಕಾಳು ತಿಂದರೆ ಇಡೀ ದಿನ ಗ್ಯಾಸ, ಎಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಅಜವಾನದ ಜೊತೆ ಕಪ್ಪು ಉಪ್ಪು ಸೇರಿಸಿ ಕೂಡ ತಿನ್ನಬಹುದು. ಇದರ ಹೊರತಾಗಿ ಬೆಳಿಗ್ಗೆ ಎದ್ದೊಡನೆ ಓಮು ಕಾಳು ನೀರನ್ನು ಕೂಡ ಕುಡಿಯಬಹುದು. ಇದರಿಂದ ಎಸಿಡಿಟಿ ಅಥವಾ ಗ್ಯಾಸ್ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ.
ಅಜವಾನ ಎಸಿಡಿಟಿ ಸಮಸ್ಯೆಯನ್ನು ಹೇಗೆ ದೂರಮಾಡುತ್ತೆ? : ಇಂದು ಅನೇಕ ಮಂದಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಎಸಿಡಿಟಿ ಕೂಡ ಒಂದು. ಎಸಿಡಿಟಿ ಸಮಸ್ಯೆಯಿಂದ ದೇಹದಲ್ಲಿ ಅನೇಕ ರೀತಿಯ ಅನಾರೋಗ್ಯ ಉಂಟಾಗುತ್ತದೆ. ಇಂತಹ ಎಸಿಡಿ ಸಮಸ್ಯೆಗೆ ಓಮು ಕಾಳು ದಿವ್ಯೌಷಧವಾಗಿದೆ. ಅಜವಾನದಲ್ಲಿ ಆಮ್ಲ ವಿರೋಧಿ ಗುಣ ಇರುವುದರಿಂದ ಇದು ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಹಾಗೂ ಹೊಟ್ಟೆಯ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. ಅಜವಾನ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಇದರಿಂದ ನಾವು ಸೇವಿಸುವ ಆಹಾರಗಳು ಸುಲಭವಾಗಿ ಜೀರ್ಣವಾಗಿಸಿ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಆ ಹಾರದಲ್ಲಿ ಆಮ್ಲಗಳು ಹೊಟ್ಟೆಯ ಆರೋಗ್ಯವನ್ನು ಕೆಡಿಸದಂತೆ ಅಜವಾನ ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ. ಅಜವಾನ ನೈಸರ್ಗಿಕವಾಗಿ ಆಮ್ಲೀಯತೆಯನ್ನು ಕಡಿಮೆ ಮಾಡಿ ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ. ನಿತ್ಯದ ಆಹಾರದಲ್ಲಿ ನೀವು ಓಮು ಕಾಳನ್ನು ಬಳಸಿದರೆ ಯಾವುದೇ ರೀತಿಯ ಗ್ಯಾಸ್ ಎಸಿಡಿಟಿಯ ಮಾತ್ರೆಗಳನ್ನು ಸೇವಿಸುವ ಅವಶ್ಯಕತೆಯೇ ಇರುವುದಿಲ್ಲ.