ಹೊಸ ಮೆಷಿನ್ ಪರೀಕ್ಷಿಸುವ ವೇಳೆ ಅಚಾನಕ್ಕಾಗಿ ಮೆಷಿನ್‌ಗೆ ಸಿಲುಕಿ ತುಂಡಾಗಿದ್ದ ಕೈ ಮಣಿಕಟ್ಟನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಂಗಳೂರು: ಕಾರ್ಖಾನೆಯಲ್ಲಿ ಹೊಸ ಮಷಿನ್ ಪರೀಕ್ಷಿಸುವ ವೇಳೆ ಅಚಾನಕ್ಕಾಗಿ ಮಷಿನ್‌ಗೆ ಸಿಲುಕಿ ತುಂಡರಿಸಿದ್ದ ಕೈ ಮಣಿಕಟ್ಟನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ. ಮೈಕ್ರೊ ವಾಸ್ಕುಲರ್ ಸರ್ಜರಿ ಸಮಾಲೋಚಕರಾದ ಡಾ.ಸತ್ಯ ವಂಶಿ ಕೃಷ್ಣ ಅವರ ತಂಡವು ಈ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಿದೆ. 51 ವರ್ಷದ ವ್ಯಕ್ತಿಯೂ ಕಾರ್ಖಾನೆ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಾರ್ಖಾನೆಗೆ ಹೊಸ ಮಷಿನ್ ಬಂದ ಹಿನ್ನೆಲೆಯಲ್ಲಿ ಅದರ ಪರಿಶೀಲನೆಗೆ ಮುಂದಾದರು. ಆದರೆ, ಅಚಾನಕ್ಕಾಗಿ ಅವರ ಕೈ ಮಣಿಕಟ್ಟು ಮಷಿನ್‌ಗೆ ಸಿಲುಕಿ ಎರಡು ಭಾಗವಾಗಿ ತುಂಡಾಗಿತ್ತು. ಕೂಡಲೇ ಅವರನ್ನು ಫೊರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಫೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಕೈ ಮಣಿಕಟ್ಟು ಯಶಸ್ವಿಯಾಗಿ ಮರುಜೋಡಣೆ
ಈ ಕುರಿತು ಮಾತನಾಡಿದ ಡಾ.ಸತ್ಯ ವಂಶಿ ಕೃಷ್ಣ, ಇದೊಂದು ಅಪರೂಪದ ಪ್ರಕರಣ. ಮಷಿನ್‌ಗೆ ಸಿಲುಕಿ ಆ ವ್ಯಕ್ತಿಯ ಕೈನ ಮಣಿಕಟ್ಟು ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಆದರೆ, ಅದೃಷ್ಟವಷಾತ್ ಅವರ ಕೈ ಮಣಿಕಟ್ಟನ್ನು ಜೊತೆಯಲ್ಲಿಯೇ ಜೋಪಾನವಾಗಿ ಆಸ್ಪತ್ರೆಗೆ ತೆಗೆದುಕೊಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಶಸ್ತ್ರಚಿಕಿತ್ಸೆ (Operation) ನಡೆಸಿ ಮೊದಲಿನಂತೆಯೇ ಕೈನನ್ನು ಮರುಜೋಡಣೆ ಮಾಡಲಾಯಿತು.
undefined
ಆಪರೇಷನ್ ಮಾಡುವಾಗ ವೈದ್ಯರು ಹಸಿರು ಬಟ್ಟೆ ಧರಿಸೋದು ಯಾಕೆ ?
ಕೇವಲ 7 ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದರ ಪರಿಣಾಮವಾಗಿ ತುಂಡಾಗಿದ್ದ ಮಣಿಕಟ್ಟಿನ ಸ್ನಾಯುಗಳು ಬದುಕಿದ್ದವು ಎಂದು ವಿವರಿಸಿದರು. ಪ್ರಸ್ತುತ ರೋಗಿಯ ಕೈ ಮರುಜೋಡಣೆ ಮಾಡಿದ್ದು, ರಕ್ತಸಂಚಾರವಾಗುತ್ತಿದೆ. ಒಂದೆರಡು ತಿಂಗಳ ನಂತರ ಮೊದಲಿನಂತೆಯೇ ಕೈ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಯಾವುದೇ ಪ್ರಕರಣವಾಗಲಿ, ತುಂಡಾದ ಅಂಗವು ಕೆಲ ಗಂಟೆಗಳ ವರೆಗೂ ಬದುಕಿರಲಿದೆ. ಆ ಅವಧಿಯೊಳಗೆ ಅಂಗವನ್ನು ತೇವಾಂಶವಿರುವ ಬಟ್ಟೆಯಲ್ಲಿ ಸುತ್ತಿ ಜೋಪಾನವಾಗಿ ಆಸ್ಪತ್ರೆಗೆ (Hospital) ತಂದು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮರುಜೋಡಣೆ (Re attach) ಮಾಡಬಹುದು. ಕೆಲವರು ತುಂಡಾದ ಅಂಗವನ್ನು ಜೋಪಾನವಾಗಿಡಲು ಕೋಲ್ಡ್ ವಾಟರ್ ಅಥವಾ ಐಸ್ ಕ್ಯೂಬ್ ಇರುವ ಡಬ್ಬದಲ್ಲಿ ಇಟ್ಟು ತರುತ್ತಾರೆ. ಇದು ತಪ್ಪು, ಹೀಗೆ ಮಾಡುವುದರಿಂದ ಅಂಗದಲ್ಲಿನ ಸ್ನಾಯುಗಳು ಬೇಗ ಸಾಯುವ ಅಪಾಯವಿರುತ್ತದೆ ಎಂದು ಹೇಳಿದರು.
ಅಬ್ಬಬ್ಬಾ..ಮೂರು ಹೊತ್ತು ಕೂದಲನ್ನೇ ತಿನ್ತಿದ್ಲಾ? ಬಾಲಕಿ ಹೊಟ್ಟೆಯಲ್ಲಿತ್ತು ಬರೋಬ್ಬರಿ 1 ಕೆಜಿ ಕೂದಲು!