ಥಲೆಸ್ಸೀಮಿಯ ಕಾಯಿಲೆಯಿಂದ ಬಳಲುತ್ತಿರುವ ಬಾಲಕನಿಗೆ ಬೇಕಿದೆ ನೆರವಿನ ಹಸ್ತ

Published : Jul 22, 2022, 10:54 AM IST
ಥಲೆಸ್ಸೀಮಿಯ ಕಾಯಿಲೆಯಿಂದ ಬಳಲುತ್ತಿರುವ ಬಾಲಕನಿಗೆ ಬೇಕಿದೆ ನೆರವಿನ ಹಸ್ತ

ಸಾರಾಂಶ

ಆತ ಪುಟ್ಟ ಬಾಲಕ. ಇನ್ನೂ ಆಟ ಆಡೋ ವಯಸ್ಸು. ಆದ್ರೆ ಆ ಅಮಾಯಕ ಬಾಲಕನ ಬಾಳಿಗೆ ಕರೆಯದೇ ಬೇಡದ ಅತಿಥಿಯೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಥಲೆಸ್ಸೀಮಿಯ ಎಂಬ ಅಪರೂಪದ ಕಾಯಿಲೆ ಬಾಲಕನನ್ನು ಕಾಡುತ್ತಿದೆ. ಲಕ್ಷ ಲಕ್ಷ ದುಡ್ಡು ವ್ಯಯಿಸಿ ಮಗನಿಗೆ ಚಿಕಿತ್ಸೆ ಕೊಡಿಸಲಾಗದೆ ಪೋಷಕರು ಕಂಗಾಲಾಗಿದ್ದಾರೆ. ನೆರವಿಗೆ ಕೈ ಚಾಚಿದ್ದಾರೆ. 

ಆ ಪುಟ್ಟ ಬಾಲಕ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾನೆ . ಎಲ್ಲರಂತೆ ಆಡಿಕೊಂಡು ಬೆಳೆಯುತ್ತಿದ್ದ ಬಾಲಕ ಇದ್ದಕ್ಕಿದ್ದಂತೆ  ವೈದ್ಯಕೀಯ ಲೋಕದಲ್ಲಿ ಕಾಣಿಸಿಕೊಳ್ಳುವ ಅತೀ ಅಪರೂಪದ ರೋಗದಿಂದ ತೊಂದರೆ ಅನುಭವಿಸುತ್ತಿದ್ದಾನೆ. ಪುಟ್ಟ ಬಾಲಕನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಕಾಯಿಲೆಗೆ ಚಿಕಿತ್ಸೆ ಕೊಡಿಸಲಾಗಿದೆ ಕಡುಬಡತನದಲ್ಲಿರುವ ಕುಟುಂಬ ಕಂಗಾಲಾಗಿದೆ. 

ಏಳು ವರ್ಷದ ಪುಟ್ಟ ಬಾಲಕನಿಗೆ ಥಲೇಸ್ಸಿಮಿಯ ಕಾಯಿಲೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ  ಕೂವೆ ಗ್ರಾಮದ ದಿವಾಕರ ಹಾಗೂ ಶಾಲಿನಿ ದಂಪತಿಗಳ ಪುತ್ರ ರಿತ್ವಿಕ್, ಇನ್ನೂ ಏಳು ವರ್ಷ ವಯಸ್ಸು . ಒಂದನೇ ತರಗತಿ ವ್ಯಾಸಂಗ ಮಾಡುತ್ತಿರುವ ರಿತ್ವಿಕ್ ಲವಲವಿಕೆಯಿಂದ ಇದ್ದ. ಆದ್ರೆ ಕಳೆದ ಎರಡೂವರೆ ತಿಂಗಳ ಹಿಂದೆ ಇದ್ದಕ್ಕಿದ್ದಂತೆ ದೈಹಿಕವಾಗಿ ಯಾವುದೇ ಚಟುವಟಿಕೆಯಲ್ಲಿ ತೊಡಗದೆ, ನಿರಾಸಕ್ತಿಯೊಂದಿಗೆ ಬಳಲಿ ಆಹಾರ ಸೇವನೆ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದ. ಇದರಿಂದ ಆತಂಕಗೊಂಡ ಪೋಷಕರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಬಾಲಕನಿಗೆ ಥಲೇಸ್ಸಿಮಿಯ (ಬಳಿ ರಕ್ತಕಣ ಉತ್ಪತ್ತಿ ಆಗುವುದಿಲ್ಲ ) ಕಾಯಿಲೆ ಇರುವುದು ಕಂಡುಬಂದಿದೆ. ಮೂಲತಃ ಕೃಷಿಕರಾಗಿರುವ ಪೋಷಕರು ಆರ್ಥಿಕವಾಗಿ ಸಮಸ್ಯೆಯಲಿದ್ದು ಇದರ ನಡುವೆಯೇ ಮಗನಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದಾರೆ.

ಮಳೆಗಾಲದಲ್ಲಿ ಕಾಡೋ ಡೇಂಜರಸ್ ಕಾಯಿಲೆಗಳಿವು, ಎಚ್ಚರಿಕೆಯಿರಲಿ

ಥಲೆಸ್ಸೀಮಿಯ ಎಂದರೇನು ?
ರಿತ್ವಿಕ್ ನೋಡಲು ಲವಲವಿಕೆಯಿಂದ ಇದ್ದರೂ ತಿಂಗಳಾಂತ್ಯಕ್ಕೆ ಈತನಿಗೆ ರಕ್ತ ಕೊಡಿಸಲೇಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮುಖ ಬಿಳುಚಿಕೊಳ್ಳುತ್ತದೆ. ಜ್ವರ (Fever) ಬಂದರೆ ಕಡಿಮೆಯಾಗುವುದೇ ಇಲ್ಲ, ಹೌದು ಬಿಳಿ ರಕ್ತ ಕಣ ಉತ್ಪತ್ತಿಯಾಗದೇ ಇರುವ ಖಾಯಿಲೆಯೆ ಥಲೆಸ್ಸೀಮಿಯಾ .ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು (Immunity power) ಹೆಚ್ಚಿಸುವ ಶಕ್ತಿ ಇರುವುದು ಬಿಳಿ ರಕ್ತಕಣಗಳಿಗೆ ಮಾತ್ರ, ಈ ಬಿಳಿ ರಕ್ತಕಣಗಳು ಉತ್ಪತ್ತಿಯಾಗದೇ ಇದ್ದರೆ ದೇಹ (Body)ದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಮತ್ತು ಯಾವುದಾದರೂ ಕಾಯಿಲೆ ಬಂದರೆ ಅದು ಕಡಿಮೆಯಾಗುವುದಿಲ್ಲ. ರಿತ್ವಿಕ್ ದೇಹದಲ್ಲಿ ಇಂತಹ ಬಿಳಿ ರಕ್ತಕಣಗಳ ಉತ್ಪತಿ ನಿಂತು ಹೋಗಿದೆ. ಸಾಮಾನ್ಯ ಜ್ವರ ಬಂದರೂ ಕೂಡ ಮೆದುಳಿಗೆ ಹತ್ತಿಕೊಳ್ಳುತ್ತದೆ. ಇದೀಗ ತಿಂಗಳಿಗೆ ಎರಡು ಬಾರಿ ರಕ್ತ ಕೊಡಿಸಲು ಮಂಗಳೂರಿಗೆ ಹೋಗಿಬರುತ್ತಿದ್ದು, ಇತನಿಗೆ ಅಂಟಿದ ಕಾಯಿಲೆ (Disease) ದೂರವಾಗಬೇಕಾದರೆ ಮೂಳೆ ಮಜ್ಜೆಯ ಕಸಿ ಶಸ್ತ್ರ ಚಿಕಿತ್ಸೆ ( ಬೋನ್ ಮ್ಯಾರೋ ಟ್ರಾನ್ಸ್ ಪ್ಲೇಟೇಶನ್) ಯಿಂದ ಸಾಧ್ಯ ಎನ್ನುವ ಬೆಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯರು ಬಾಲಕ ಪೋಷಕರಿಗೆ ತಿಳಿಸಿದ್ದಾರೆ.  

ಚಿಕಿತ್ಸೆ ಕೊಡಿಸಲಾಗದೆ ಪೋಷಕರ ಸಂಕಷ್ಟ
ಈ ಶಸ್ತ್ರ ಚಿಕಿತ್ಯೆಗೆ ಸರಿಸುಮಾರು 40 ಲಕ್ಷಗಳಷ್ಟು ಖರ್ಚು ಆಗಲಿದ್ದು ಮೊದಲೇ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಇದನ್ನು ತಿಳಿದು ದೊಡ್ಡ ಆಘಾತವೇ ಆಗಿದೆ. ಆದ್ದರಿಂದ ಸಹೃದಯಿ ಬಂಧುಗಳು ತಮ್ಮ ಕೈಯಲ್ಲಾದ ಸಹಾಯ ಮಾಡಿ ತಮ್ಮ ಮಗನಿಗೆ ಅಂಟಿದ ಕಾಯಿಲೆಯನ್ನು ಗುಣ ಮಾಡಲು ನೆರವಾಗಿ ಎಂದು ಪೋಷಕರು ಸಾಮಾಜಿಕ ಜಾಲ ತಾಣದ ಮೂಲಕ ಕೇಳಿಕೊಳ್ಳುತ್ತಿದ್ದಾರೆ. 

ಉರಿಯೂತದ ಬಗ್ಗೆ ನಿರ್ಲಕ್ಷ್ಯ ಬೇಡ, ಗಂಭೀರ ಕಾಯಿಲೆನೂ ಆಗಿರ್ಬೋದು !

ಬಡಕುಟುಂಬಕ್ಕೆ ಬೇಕಿದೆ ಸಹಾಯಹಸ್ತ
ಸಹಾಯ ಮಾಡುವವರು ರಿತ್ವಿಕ್ ರವರ ತಂದೆ ದಿವಾಕರ್ ಅವರ ಹೆಸರಿಲ್ಲಿರುವ ಕೆನರಾ ಬ್ಯಾಂಕ್ ಬನ್ನೂರು ಶಾಖೆಯ ಖಾತೆ ಸಂಖ್ಯೆ 5391101001255ಕ್ಕೆ ಅಥವಾ 6363924671 ಮೊಬೈಲ್ ಸಂಖ್ಯೆಗೆ ಪೋನ್ ಪೇ / ಗೂಗಲ್ ಪೇ ಮೂಲಕ ಸಹಾಯ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ. 6363924671ಗೆ ಕರೆ ಮಾಡಬಹುದಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ..

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..
ಹಾಲು ಮತ್ತು ಬೆಲ್ಲದ ಜೊತೆ ಸಿಹಿಗೆಣಸು ತಿನ್ನೋದ್ರಿಂದ ಸಿಗುತ್ತೆ ಸಾಕಷ್ಟು ಲಾಭ