
1. ಗೋಲ್ ಇಲ್ಲಾಂದ್ರೇ ಮನಸ್ಸು ಅಸ್ತವ್ಯಸ್ತವಾಗಿರೋದು
ಗುರಿ, ಆ್ಯಂಬಿಷನ್ ಅನ್ನೋದೆಲ್ಲ ಔಟ್‌ಡೇಟೆಡ್ ಅನಿಸಬಹುದು. ಆದರೆ ಗೋಲ್ ಅನ್ನೋದು ಇರದಿದ್ದರೆ ಯಾವ ಕೆಲಸವೂ ಆಗೋದಿಲ್ಲ. ಇದು ಕೇವಲ ಉದ್ಯೋಗದ ಲೆವೆಲ್‌ನಲ್ಲೇ ಆಗ್ಬೇಕಾಗಿಲ್ಲ. ಈ ವರ್ಷ ಇಷ್ಟುದುಡ್ಡುಳಿಸಿ ಒಂದು ಫ್ಲಾಟ್ ತಗೊಳ್ತೀನಿ ಅಂತಲೂ ಇರಬಹುದು. ಈ ವರ್ಷ ಈ ಟೆಕ್ನಿಕ್ ಕಲೀತೀನಿ ಅಂತಿರಬಹುದು. ಆದರೆ ಆ ಬಗ್ಗೆ ನಿಮಗೆ ಸ್ಪಷ್ಟತೆ, ನಿಖರತೆಗಳೆರಡೂ ಇರಬೇಕು. ಇವು ನಿಮ್ಮ ಮಾನಸಿಕ ಅಸ್ತವ್ಯಸ್ತತೆಗೆ ಬ್ರೇಕ್ ಹಾಕುತ್ತವೆ.
2. ನಿಮ್ಮ ಆದ್ಯತೆಗಳೂ ಮುಖ್ಯವಾಗುತ್ತವೆ
ಸದ್ಯಕ್ಕೆ ಪರಿಸ್ಥಿತಿ ನಮ್ಮ ಫೇವರ್ ಆಗಿ ಅಂತೂ ಇಲ್ಲ. ಸವಾಲುಗಳೇ ಹೆಚ್ಚು. ಸವಾಲಿನ ಇನ್ನೊಂದು ಮುಖ ಅವಕಾಶ. ನಮ್ಮೆದುರು ಬರುವ ಹಲವು ಅವಕಾಶಗಳಲ್ಲಿ ನಮ್ಮ ಗುರಿಗೆ ಪೂರಕವಾದದ್ದನ್ನು ಆಯ್ಕೆ ಮಾಡೋದು ತುಂಬ ಮುಖ್ಯವಾದದ್ದು. ಹಾಗಂತ ನಾವು ಬಿಟ್ಟು ಹಾಕಿದ ಅವಕಾಶ ಇನ್ನೊಮ್ಮೆ ಸಿಗಲ್ಲ ಅನ್ನೋದೂ ತಲೆಯಲ್ಲಿರಬೇಕು. ನಮ್ಮ ಪ್ರಯಾರಿಟಿ ಬಗ್ಗೆ ಖಚಿತತೆ ಇದ್ರೆ ನಾವಿದನ್ನು ಕರೆಕ್ಟಾಗಿ ಫೇಸ್ ಮಾಡಬಹುದು.
3. ಮುಂದಿನ ಪ್ಲಾನಿಂಗ್ ಬಗ್ಗೆ ಚೆಕ್ ಲಿಸ್ಟ್ ಹಾಕಿಕೊಳ್ಳಿ
ಈ ಗೋಲ್ ಅನ್ನು ತಲುಪೋದಕ್ಕೆ ಯಾವ ರೀತಿ ಮುಂದಿನ ನಡೆ ಇರ್ಬೇಕು ಅನ್ನೋದನ್ನು ಕರೆಕ್ಟಾಗಿ ಪ್ಲಾನ್ ಮಾಡ್ಕೊಳ್ಳಿ. ಅದಕ್ಕೆ ತೊಡಕುಗಳು ಬಂದೇ ಬರುತ್ತವೆ. ಅವನ್ನು ನಿವಾರಿಸೋದು ಹೇಗೆ ಅನ್ನೋದರ ಬಗ್ಗೆಯೂ ಯೋಚಿಸಿ. ಆ ಬಗ್ಗೆಯೂ ಲೆಕ್ಕಾಚಾರ ಹಾಕ್ಕೊಂಡು ಪರಿಹಾರದ ಬಗ್ಗೆ ಚಿಂತಿಸಿ. ಜೊತೆಗೆ ಪ್ಲಾನ್ ಬಿ ರೆಡಿ ಇಟ್ಕೊಳ್ಳಿ. ಆಗ ಗೊಂದಲಗಳು ಆಗೋದಿಲ್ಲ. ಲೈಫು ಹಗುರಾಗಿರುತ್ತೆ.
4. ಐಡಿಯಾಗಳಿಗೆ ಹುಡುಕಾಟ
ಮನಸ್ಸು ರಿಲ್ಯಾಕ್ಸ್ ಆಗಿದ್ದಾಗ ಫ್ರೆಶ್ ಐಡಿಯಾಗಳು, ಕ್ರಿಯೇಟಿವ್ ಪ್ಲಾನ್ ಗಳು ಬರುತ್ತವೆ, ಆ ಐಡಿಯಾಗಳನ್ನು ನೋಟ್ ಮಾಡಿಕೊಳ್ಳಿ. ಇವತ್ತಲ್ಲಾ ನಾಳೆ ಅವು ಪ್ರಯೋಜನಕ್ಕೆ ಬರುತ್ತವೆ. ಮನಸ್ಸು ಟೆನ್ಶನ್ ಫ್ರೀ ಆಗಿರಬೇಕು ಅಂದರೆ ಬೆಳಗ್ಗೆ ಬೇಗ ಏಳ್ಬೇಕು, ಒಂದೊಂದೇ ಕೆಲಸ ಮಾಡ್ತಾ ಬರಬೇಕು. ಕೆಲಸದಲ್ಲಿ ತನ್ಮಯತೆ ಬರಬೇಕು. ಹೀಗೆ ಮೈಂಡ್ ಹಗುರಾಗಿದ್ದಾಗ ಐಡಿಯಾಗಳಿಗೆ ಹುಡುಕಿ.
ಮನಸ್ಸನ್ನು ನಿಗ್ರಹಿಸಿಕೊಳ್ಳುವುದು ಹೇಗೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತುಗಳಲ್ಲಿ ಕೇಳಿ
5. ಸ್ಮಾರ್ಟ್‌ಫೋನ್‌ಗಳು ಕಣ್ಣಿಂದ ದೂರ ಇರಲಿ
ಮೈಂಡ್ ಕ್ಯಾಶೆ ತುಂಬಿಸೋದ್ರಲ್ಲಿ ನಂ.1 ಈ ಸ್ಮಾರ್ಟ್‌ಫೋನ್. ಇದರ ಬಳಕೆ ಹೆಚ್ಚಾದಷ್ಟುಮನಸ್ಸಲ್ಲಿ ಅನಗತ್ಯ ವಿಚಾರಗಳ ಹೇರಿಕೆ ಹೆಚ್ಚಾಗುತ್ತಾ ಹೋಗುತ್ತವೆ. ಮಿದುಳು ಹೇಳದೇ ಕೈ ಯಾಂತ್ರಿಕವಾಗಿ ಸ್ಕೊ್ರೕಲ್ ಮಾಡುತ್ತಲೇ ಇರುತ್ತದೆ. ಸ್ಮಾರ್ಟ್‌ಫೋನ್‌ಗಳನ್ನು ಸಾಧ್ಯವಾದಷ್ಟುಕಣ್ಣಿಂದ ದೂರ ಇಡಿ. ಅವುಗಳ ಮಿನಿಮಮ್ ಬಳಕೆ ಕಡ್ಡಾಯ ಮಾಡಿ. ಕ್ಯಾಶೆ ಕಡಿಮೆಯಾಗಿ ಮನಸ್ಸು ಹೆಚ್ಚೆಚ್ಚು ಕ್ರಿಯೇಟಿವ್ ಆಗುತ್ತಾ ಹೋಗಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.