
ಕೊರೋನಾ ವೈರಸ್ ರೂಪಾಂತರ ಇದೀಗ ಯುರೋಪ್ ರಾಷ್ಟ್ರಗಳಲ್ಲಿ ಸಮಾನ್ಯ ಎಂಬಂತಾಗಿದೆ. ಇತ್ತೀಚೆಗಷ್ಟೇ ಮಲೇಷ್ಯಾದಲ್ಲಿಯೂ ಕೊರೋನಾ ರೂಪಾಂತರದ ಬಗ್ಗೆ ಸುಳಿವು ಸಿಕ್ಕಿದ್ದು, ಇದು ಅತಿ ವೇಗದಲ್ಲಿ ಅಲ್ಪಾವಧಿಯಲ್ಲಿ ಹೆಚ್ಚಿನ ಜನರಿಗೆ ಕೊರೋನಾ ಹರಡುತ್ತದೆ ಎಂದು ಸೋಂಕಿತ ರೋಗಗಳ ವೈದ್ಯ ಪೌಲ್ ಟಂಬ್ಯಾ ಹೇಳಿದ್ದಾರೆ.
D614G ರೂಪಾಂತರ ಸಿಂಗಾಪುರ್‌ನಲ್ಲಿಯೂ ಕಂಡು ಬಂದಿದೆ. ಆದರೆ ಇದರಲ್ಲಿ ಸಾವಿನ ಪ್ರಮಾಣ ಇಳಿಕೆಯಾಗಿದ್ದು, ಇದು ಮೊದಲಿನ ಕೊರೋನಾ ವೈರಸ್‌ನಷ್ಟು ಡೆಡ್ಲಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಭಯಬೇಡ, ಕೊರೋನಾ ಗಾಳಿಯಲ್ಲಿ ಹರಡೋದು ಅಷ್ಟು ಸುಲಭವಲ್ಲ..!
ಬೇಗ ಹರಡಬಲ್ಲದಾಗಿದ್ದರೂ, ಅಷ್ಟಾಗಿ ಸಾವಿಗೆ ಕಾರಣವಾಗದಿರುವುದು ಉತ್ತಮ ಬೆಳವಣಿಗೆ. ವೈರಸ್ ರೂಪಾಂತರವಾಗುವಾಗ ಅವುಗಳ ಶಕ್ತಿ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ವೈರಸ್ ಹೆಚ್ಚು ಜನರಿಗೆ ಸೋಂಕು ತಗುಲಿಸುತ್ತದೆ. ವೈರಸ್ ಆಹಾರಕ್ಕಾಗಿ ಮತ್ತು ಆಶ್ರಯಕ್ಕಾಗಿ ಮನುಷ್ಯನ ದೇಹ ಸೇರುತ್ತದೆ. ಆದರೆ ಈ ವೈರಸ್ ಮನುಷ್ಯನನ್ನು ಕೊಲ್ಲುವಷ್ಟು ಅಪಾಯಕಾರಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
10 ಪಟ್ಟು ಶಕ್ತಿಯುತವಾಗಿ ಬಂದಿದೆ ಹೊಸ ಕೊರೋನಾ D614G: ಮಲೇಷ್ಯಾದಲ್ಲಿ ಸಿಕ್ತು ಡೆಡ್ಲಿ ವೈರಸ್ ಸೂಚನೆ
ಫೆಬ್ರವರಿಯಲ್ಲಿಯೇ ಕೊರೋನಾ ರೂಪಾಂತರ ಆರಂಭವಾಗಿದ್ದು, ಅಮೆರಿಕ, ಯುರೋಪಿಯನ್ ದೇಶಗಳಲ್ಲಿ ಹರಡಿದೆ. ಕೊರೋನಾ ರೂಪಾಂತರವಾಗಿ ಹೆಚ್ಚು ಅಪಾಯಕಾರಿಯಾಗಿರುವ ಬಗ್ಗೆ ಯಾವುದೇ ಸೂಚನೆಗಳಿಲ್ಲ ಎಂದು ವಿಶ್ವ ಆರೋಗ್ಯಸ ಸಂಸ್ಥೆ ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.