ಬರೀ ಮೂರು ಊಟದ ಸಹಾಯ, ನಾಲ್ಕು ತಿಂಗಳಲ್ಲೇ 27 ಕೆಜಿ ಕಡಿಮೆಯಾದ ವ್ಯಕ್ತಿ!

Published : Jan 09, 2025, 05:11 PM ISTUpdated : Jan 09, 2025, 05:14 PM IST
ಬರೀ ಮೂರು ಊಟದ ಸಹಾಯ, ನಾಲ್ಕು ತಿಂಗಳಲ್ಲೇ 27 ಕೆಜಿ ಕಡಿಮೆಯಾದ ವ್ಯಕ್ತಿ!

ಸಾರಾಂಶ

ಫಿಟ್‌ನೆಸ್‌ ಕೋಚ್‌ ಯತಿನೇಶ್‌ ಅವರು ತಮ್ಮ ಕ್ಲೈಂಟ್‌ ಓಮರ್‌ 100 ದಿನಗಳಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಕಥೆಯನ್ನು ಹಂಚಿಕೊಂಡಿದ್ದಾರೆ. ಓಮರ್‌ ಅವರ ಫ್ಯಾಟ್‌ ಲಾಸ್‌ ಡಯಟ್‌ ಪ್ಲ್ಯಾನ್‌ ಮತ್ತು ಅದರಲ್ಲಿ ಸೇರಿಸಲಾದ ಆಹಾರಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.  

ಫಿಟ್‌ನೆಸ್‌ ಕೋಚ್‌ ಯತಿನೇಶ್ ನಿರ್ಭವನೆ ಆಗ್ಗಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಕ್ಲೈಂಟ್‌ಗಳ ತೂಕ ಇಳಿಸಿದ ವ್ಯಾಯಾಮಗಳು ಹಾಗೂ ಅವರ ಟ್ರಾನ್ಸ್‌ಫಾರ್ಮೇಷನ್‌  ಬಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗಿನ ಪೋಸ್ಟ್‌ನಲ್ಲಿ ಅವರು ಕೇವಲ 100 ದಿನದಲ್ಲಿ 23 ಕೆಜಿ ತೂಕ ಇಳಿಸಿಕೊಂಡ ತಮ್ಮ ಕ್ಲೈಂಟ್‌ನ ಬಗ್ಗೆ ವಿವರಿಸಿದ್ದಾರೆ. 4 ತಿಂಗಳ ಪ್ರಯಾಣದಲ್ಲಿ 27 ಕೆಜಿ ತೂಕ ಇಳಿಸಿಕೊಂಟ ಓಮರ್‌ ಅವರ ಫಿಟ್‌ನೆಸ್‌ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. ತೀವ್ರ ತೂಕ ಇಳಿಕೆಯನ್ನು ಸಾಧನೆ ಮಾಡಲು ಓಮರ್‌ ಸೇವಿಸಿದ ಮೂರು ಫ್ಯಾಟ್‌ಲಾಸ್‌ ಊಟದ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಫ್ಯಾಟ್‌ ಲಾಸ್‌ ಮೀಲ್‌: ಫಿಟ್‌ನೆಸ್‌ ಕೋಚ್‌ ಹೇಳೀರುವ ಪ್ರಕಾರ, ನಾಲ್ಕು ತಿಂಗಳ ಹಿಂದೆ ಓಮರ್‌ 95 ಕೆಜಿ ಇದ್ದ. ಫ್ಯಾಟ್‌ ಲಾಸ್‌ ಡಯಟ್‌ಅನ್ನು ಪ್ಲ್ಯಾನ್‌ ಮಾಡಿದ ಬಳಿಕ 120 ದಿನಗಳ ಅಂತರದಲ್ಲಿ ಬರೋಬ್ಬರಿ 27 ಕೆಜಿ ತೂಕ ಕಳೆದುಕೊಂಡಿದ್ದಾರೆ. ಇದು ಅಂದಾಜು 4 ತಿಂಗಳ ಅವಧಿಯಾಗಿದೆ. ಈಗ ಅವರ ತೂಕ 68 ಕೆಜಿ. ದಿನಕ್ಕೆ ಮೂರು ಮೀಲ್‌ಗಳ ಆಪ್ಶನ್‌ನೊಂದಿಗೆ ಓಮರ್‌ಗೆ ಎರಡು ಸೆಟ್‌ನ ಫ್ಯಾಟ್‌ ಲಾಸ್‌ ಡಯಟ್‌ ಪ್ಲ್ಯಾನ್‌ ತಿಳಿಸಿದ್ದಾಗ ಹೇಳಿದ್ದಾರೆ. ಇದನ್ನ ಓಮರ್‌ ಚಾಚೂ ತಪ್ಪದೆ ಪಾಲಿಸಿದ್ದರಿಂದ ಅವರ ತೂಕದಲ್ಲಿ ಭಾರೀ ಇಳಿಕೆಯಾಗಿದೆ. ಮೊದಲ ಫ್ಯಾಟ್‌ ಲಾಸ್‌ 3 ಮೀಲ್‌ ಆಯ್ಕೆಯಲ್ಲಿ

1. ಬೇಯಿಸಿದ ಮೊಟ್ಟೆಯ ಬಿಳಿಯ ಭಾಗ, ಕತ್ತರಿಸಿದ ಸೇಬು ಪೀಸ್‌ ಹಾಗೂ ನೆನೆಸಿದ ಬಾದಾಮಿ
2. ರೋಟಿ, ಮೊಸರು, ಸಾಂಬಾರ್‌ ಹಾಗೂ ದಾಲ್‌
3. ಪನ್ನೀರ್‌, ರೋಟಿ, ಸಾಂಬಾರ್‌ ಮತ್ತು ಸೌತೇಕಾಯಿ

ಇನ್ನು 2ನೇ ಮೀಲ್‌ ಪ್ಲ್ಯಾನ್‌ನಲ್ಲಿ ಓಮ್‌ಗೆ 4 ತಿಂಗಳ ಕಾಲ ಸಕ್ಕರೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ತಿಳಿಸಲಾಗಿತ್ತು. ಡಯಟ್‌ ಪ್ಲ್ಯಾನ್‌ ಪ್ರಕಾರ, ಅವರು ದಿನವನ್ನು ಮಧ್ಯಮ ಗಾತ್ರದ ಗಾಜಿನ ಲೋಟದಲ್ಲಿ ಬೆಚ್ಚಗಿನ ನೀರಿಗೆ ಜೀರಿಗೆಯನ್ನು ಬೆರೆಸಿ ಸೇವಿಸಬೇಕಿತ್ತು. ಮೊದಲ ಊಟಕ್ಕೆ, ಅವರು 50 ಗ್ರಾಂ ಮಸಾಲಾ ಓಟ್ಸ್, ಹುರಿದ ಕಡಲೆಕಾಯಿ (30 ಗ್ರಾಂ) ಮತ್ತು ಕತ್ತರಿಸಿದ ಸೌತೆಕಾಯಿಗಳನ್ನು ಸೇವಿಸಿದರು. ಎರಡನೇ ಊಟದಲ್ಲಿ 2 ಮಧ್ಯಮ ಗಾತ್ರದ ರೋಟಿ, ಸೋಯಾ ಚಂಕ್ಸ್ ಮತ್ತು ಕಪ್ಪು ಚನಾ ಸಬ್ಜಿ (ಸೋಯಾ ಚಂಕ್ಸ್: 50 ಗ್ರಾಂ ಮತ್ತು ಕಪ್ಪು ಚನಾ: 30 ಗ್ರಾಂ), ಮತ್ತು 1 ಸೌತೆಕಾಯಿ ಇತ್ತು. ಕೊನೆಯದಾಗಿ, ಮೂರನೇ ಊಟಕ್ಕೆ, ಅವರು 1 ಮಧ್ಯಮ ಗಾತ್ರದ ಬಟ್ಟಲು ಹಸಿರು ಹೆಸರುಕಾಳು ಸಬ್ಜಿ, 150 ಗ್ರಾಂ ಬೇಯಿಸಿದ ಅನ್ನ, ಮೊಸರು ಮತ್ತು ಸಲಾಡ್ (ಸೌತೆಕಾಯಿ ಮತ್ತು ಕ್ಯಾರೆಟ್) ಸೇವಿಸಿದರು.

ಒಮರ್ ಅವರ ತೂಕ ಇಳಿಸುವ ಡಯಟ್‌ ಪ್ಲ್ಯಾನ್‌ನಲ್ಲಿ ಪ್ರತಿ ಊಟದಲ್ಲಿ ಸ್ವಲ್ಪ ಪ್ರಮಾಣದ ಪ್ರೋಟೀನ್ ಸೇರಿದ್ದವು. ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ಪ್ರೋಟೀನ್ ಅತ್ಯಗತ್ಯ ಪೂರಕವಾಗಿದೆ ಮತ್ತು ಆರೋಗ್ಯಕರ ಆಹಾರಕ್ಕೂ ಇದು ಮುಖ್ಯವಾಗಿದೆ. ದೆಹಲಿ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಹೋಮ್ ಎಕನಾಮಿಕ್ಸ್‌ನ ಪೌಷ್ಟಿಕಾಂಶ ವಿಭಾಗದ ಹಿರಿಯ ಪೌಷ್ಟಿಕತಜ್ಞ ಮತ್ತು ಮಾಜಿ ಪ್ರಾಧ್ಯಾಪಕಿ ಡಾ. ಸೀಮಾ ಪುರಿ ಪ್ರಕಾರ, "ಪ್ರೋಟೀನ್ ಕಿಣ್ವಗಳು, ಹಾರ್ಮೋನುಗಳು ಮತ್ತು ಹಿಮೋಗ್ಲೋಬಿನ್‌ನಂತಹ ರಕ್ತದ ಘಟಕಗಳ ಪ್ರಮುಖ ಅಂಶವಾಗಿದೆ ಮತ್ತು ಆದ್ದರಿಂದ ದೇಹದಲ್ಲಿ ಹಲವಾರು ಶಾರೀರಿಕ ಕಾರ್ಯಗಳನ್ನು ನಿರ್ವಹಿಸಲು ಇದು ಅವಶ್ಯಕವಾಗಿದೆ" ಎಂದು ಹೇಳಿದರು.

ಚಳಿಗಾಲದಲ್ಲಿ ಅರ್ಧ ಬೇಯಿಸಿದ ಮೊಟ್ಟೆ ತಿಂದ್ರೆ ಏನಾಗುತ್ತೆ? ಆರೋಗ್ಯಕ್ಕೆ ಒಳ್ಳೆಯದಾ, ಕೆಟ್ಟದ್ದಾ?

ಸರಾಸರಿ ಭಾರತೀಯ ವಯಸ್ಕರ ಅಗತ್ಯಗಳನ್ನು ಪೂರೈಸಲು ಐಸಿಎಂಆರ್ 0.66 ಗ್ರಾಂ/ಕೆಜಿ ದೇಹದ ತೂಕ/ದಿನಕ್ಕೆ ಪ್ರೋಟೀನ್ ಸೇವನೆಯನ್ನು ಶಿಫಾರಸು ಮಾಡುತ್ತದೆ. ಈ ಪ್ರೋಟೀನ್ ಸಮತೋಲಿತ ವೈವಿಧ್ಯಮಯ ಆಹಾರದಿಂದ ಬರಬೇಕು, ಇದು ವ್ಯಕ್ತಿಯ ಶಕ್ತಿಯ ಅವಶ್ಯಕತೆಗಳನ್ನು ಸಹ ಪೂರೈಸುತ್ತದೆ, ಏಕೆಂದರೆ ಪ್ರೋಟೀನ್ ಸಾಕಷ್ಟು ಶಕ್ತಿಯ ಉಪಸ್ಥಿತಿಯಲ್ಲಿ ಮಾತ್ರ ಬಳಸಲ್ಪಡುತ್ತದೆ ಎಂದಿದ್ದಾರೆ.

ಮೊಟ್ಟೆ ಹಿಂಗೆಲ್ಲ ತಿಂದ್ರೆ ಬರ್ಡ್ ಫ್ಲೂ ಬರುತ್ತೆ ಕಣ್ರಪ್ಪ! ಬಚಾವ್ ಆಗಲು ತಜ್ಞರ ಪ್ರಕಾರ ಎಷ್ಟು ಡಿಗ್ರಿ ಕುದಿಸಿ ತಿನ್ನಬೇಕು?

Disclaimer: ಹಕ್ಕು ನಿರಾಕರಣೆ: ಈ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!