ಪ್ರಭಾವಿ ಡ್ರಗ್ ಲಾರ್ಡ್ ಕತೆ ಮುಗಿಸಿದ ಮೆಕ್ಸಿಕನ್ ಸೇನೆ: ಆಕ್ರೋಶಗೊಂಡು ಹಿಂಸಾಚಾರಕ್ಕೆ ಇಳಿದ ಡ್ರಗ್ ಮಾಫಿಯಾ

Published : Feb 23, 2026, 09:48 AM ISTUpdated : Feb 23, 2026, 09:56 AM IST

ಮೆಕ್ಸಿಕೋದ ಸೇನೆಯು ದೇಶದ ಮಾದಕವಸ್ತು ಜಾಲದ ದೊರೆ ನೆಮೆಸಿಯೊ ಒಸೆಗುರಾ ಅಲಿಯಾಸ್ ಎಲ್ ಮೆಂಚೊನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ. ಈ ಹತ್ಯೆಯ ಪ್ರತೀಕಾರವಾಗಿ, ಅವನ ಕಾರ್ಟೆಲ್ ದೇಶಾದ್ಯಂತ ಹಿಂಸಾಚಾರವನ್ನು ಪ್ರಾರಂಭಿಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿಗಳನ್ನು ಬಂದ್ ಮಾಡಿವೆ.

PREV
17
ಮೆಕ್ಸಿಕೋದ ಡ್ರಗ್ ದೊರೆ ಕತೆ ಮುಗಿಸಿದ ಸೇನೆ

ಮೆಕ್ಸಿಕೋದ ಪ್ರಬಲ ಮಾದಕವಸ್ತುಗಳ ಜಾಲದ ದೊರೆ ನೆಮೆಸಿಯೊ ಒಸೆಗುರಾ ಅಲಿಯಾಸ್ ಎಲ್ ಮೆಂಚೊ ಒಸೆಗುರಾನನ್ನು ಮೆಕ್ಸಿಕೋ ಸೇನೆ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದೆ. ಇದಾದ ನಂತರ ಮೆಕ್ಸಿಕೋ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಹಲವು ವಾಹನಗಳು ಸುಟ್ಟು ಭಸ್ಮವಾಗಿವೆ. ಡ್ರಗ್ ಮಾಫಿಯಾ ಸಂಘಟನೆಗಳು ದೇಶದ ಹಲವು ಕಡೆಗಳಲ್ಲಿ ಹಿಂಸಾಚಾರಕ್ಕೆ ಇಳಿದಿದ್ದು, ಡ್ರಗ್ ದೊರೆಯ ಸಾವಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಎಲ್ ಮೆಂಚೊ ಎಂದು ಕರೆಯಲ್ಪಡುವ ಕಾರ್ಟೆಲ್ ಮುಖ್ಯಸ್ಥ ನೆಮೆಸಿಯೊ ಒಸೆಗುರಾ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ, ಮೆಕ್ಸಿಕೊ ದೇಶವೂ ಸಂಘಟಿತ ಪ್ರತೀಕಾರದ ಅಲೆಗೆ ತತ್ತರಿಸಿದೆ. ಪ್ರತಿಭಟನಾಕಾರರು ಹೆದ್ದಾರಿಗಳನ್ನು ಮುಚ್ಚಿದ್ದಲ್ಲದೇ ವಿಮಾನಗಳ ಸಂಚಾರಕ್ಕೂ ಅಡ್ಡಿಯಾಗಿದ್ದು, ಅಲ್ಲಿನ ನಿವಾಸಿಗಳು ರಕ್ಷಣೆಗಾಗಿ ಪರದಾಡಿದ್ದಾರೆ.

ಇದನ್ನೂ ಓದಿ: ಕೊನೆಗೂ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

27
ಟಪಲ್ಪಾದಲ್ಲಿ ಆಗಿದ್ದೇನು?

ಮೆಕ್ಸಿಕೋದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಪ್ರಕಾರ, ಹಲವಾರು ಫೆಡರಲ್ ಶಾಖೆಗಳ ಭದ್ರತಾ ಪಡೆಗಳು ಪಶ್ಚಿಮ ಜಲಿಸ್ಕೊದ ಟಪಲ್ಪಾ ಪಟ್ಟಣದಲ್ಲಿ ಕಾರ್ಯಾಚರಣೆಯನ್ನು ನಡೆಸಿದವು. ಈ ವೇಳೆ ಒಸೆಗುರಾ ಗುಂಡಿನ ಚಕಮಕಿಯಲ್ಲಿ ಗಾಯಗೊಂಡರು ಮತ್ತು ನಂತರ ಮೆಕ್ಸಿಕೋ ನಗರಕ್ಕೆ ವಾಯುಮಾರ್ಗದ ಮೂಲಕ ಸಾಗಿಸುವ ಸಮಯದಲ್ಲಿ ಸಾವನ್ನಪ್ಪಿದರು ಎಂದು ಸೇನೆ ತಿಳಿಸಿದೆ. ಕಾರ್ಯಾಚರಣೆಯ ಸಮಯದಲ್ಲಿ ಆರು ಶಂಕಿತ ಕಾರ್ಟೆಲ್ ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಮೂವರು ಸೈನಿಕರು ಗಾಯಗೊಂಡು ರಾಜಧಾನಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಿಸ್ಕೊದಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಈ ಹತ್ಯೆ ನಡೆದಿದೆ ಎಂದು ಫೆಡರಲ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ ಎಂದು ಎಪಿ ವರದಿಯೊಂದು ಉಲ್ಲೇಖಿಸಿದೆ. ಒಸೆಗುರಾ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ ಅಮೆರಿಕ 15 ಮಿಲಿಯನ್ ಡಾಲರ್‌ಗಳವರೆಗೆ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಫೆಬ್ರವರಿಯಲ್ಲಿ, ಟ್ರಂಪ್ ಆಡಳಿತವು ಈ ಕಾರ್ಟೆಲ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಗೊತ್ತುಪಡಿಸಿತು. ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ವಿಮಾನಗಳನ್ನು ಹೊಡೆದುರುಳಿಸುವ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಾಶಮಾಡುವ ಸಾಮರ್ಥ್ಯವಿರುವ ರಾಕೆಟ್ ಲಾಂಚರ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: 

ನಟ ನಂದಮೂರಿ ಬಾಲಕೃಷ್ಣ ನಿವಾಸದ ಮುಂದೆ ಭೀಕರ ಅಪಘಾತ: ನಜ್ಜುಗುಜ್ಜಾಯ್ತು 4 ಕೋಟಿ ಮೌಲ್ಯದ ಫೆರಾರಿ ಕಾರು

37
ಹಿಂಸೆಗೆ ಇಳಿದ ಡ್ರಗ್ ಜಾಲ

ಆದರೆ ಜಲಿಸ್ಕೊ ​​ನ್ಯೂ ಜನರೇಷನ್ ಕಾರ್ಟೆಲ್ ನ (CJNG)ಈಗ ಮೃತಪಟ್ಟಿರುವ ನಾಯಕ ಎಲ್ ಮೆಂಚೋಗೆ ನಿಷ್ಠರಾಗಿರುವ ಬಂದೂಕುಧಾರಿಗಳು ಹಲವಾರು ರಾಜ್ಯಗಳಲ್ಲಿ ಪ್ರಮುಖ ರಸ್ತೆಗಳನ್ನು ತಡೆದು ವಾಹನಗಳನ್ನು ಸುಟ್ಟುಹಾಕಿದ್ದಾರೆ. ವ್ಯವಹಾರ ನಡೆಸುತ್ತಿದ್ದ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಮೆಕ್ಸಿಕೋದ ಭದ್ರತಾ ಮೂಲಗಳು ಇದನ್ನು ವ್ಯವಸ್ಥಿತ ಬಲಪ್ರದರ್ಶನ ಎಂದು ಬಣ್ಣಿಸಿವೆ. ಕೆಲವು ಪಟ್ಟಣಗಳಲ್ಲಿ ಆಡಳಿತಾಧಿಕಾರಿಗಳು ಸ್ಥಳೀಯರು ಹಾಗೂ ಪ್ರವಾಸಿಗರು ಮನೆಯಿಂದ ಹೊರಗೆ ಬರದೇ ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ಆದೇಶಿಸಿದ್ದಾರೆ. ಟ್ರಕ್ಕಿಂಗ್ ಗುಂಪುಗಳು ಚಾಲಕರು ಪ್ರಮುಖ ಮಾರ್ಗಗಳನ್ನು ತಪ್ಪಿಸುವಂತೆ ಅಥವಾ ಪರಿಸ್ಥಿತಿ ಸ್ಥಿರವಾಗುವವರೆಗೆ ತಮ್ಮ ಡಿಪೋಗಳಿಗೆ ಹಿಂತಿರುಗುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್

47
ಅಮೆರಿಕದ ಗುಪ್ತಚರ ಪಡೆಯ ಬೆಂಬಲದೊಂದಿಗೆ ನಡೆದ ಕಾರ್ಯಾಚರಣೆ

ಅಮೆರಿಕದ ಗುಪ್ತಚರ ಪಡೆಯ ಬೆಂಬಲದೊಂದಿಗೆ ಈ ಕಾರ್ಯಾಚರಣೆ ನಡೆದಿದೆ. ಜಲಿಸ್ಕೊ ​​ರಾಜ್ಯದ ಟಪಲ್ಪಾದಲ್ಲಿ ಮೆಕ್ಸಿಕನ್ ವಿಶೇಷ ಪಡೆಗಳು ನಡೆಸಿದ ಉನ್ನತ ಮಟ್ಟದ ಕಾರ್ಯಾಚರಣೆಯಲ್ಲಿ ಡ್ರಗ್ ದೊರೆ ನೆಮೆಸಿಯೋ ಒಸೆಗುರಾನನ್ನು ಹತ್ಯೆ ಮಾಡಿದ ನಂತರ ಈ ಹಿಂಸಾಚಾರ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಸಮಯದಲ್ಲಿ ಗಾಯಗೊಂಡಿದ್ದ 60 ವರ್ಷದ ಒಸೆಗುರಾ ಸೇನೆಯ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಭಾರೀ ಭದ್ರತೆಯ ಬೆಂಗಾವಲು ಪಡೆಯಲ್ಲಿ ಮೆಕ್ಸಿಕೋ ನಗರಕ್ಕೆ ಸಾಗಿಸಲಾಗಿದೆ.

ಇದನ್ನೂ ಓದಿ: ಇರಾನ್ ತೊರೆಯುವಂತೆ ತಮ್ಮ ನಾಗರಿಕರಿಗೆ ಸೂಚಿಸಿದ ಸ್ವೀಡನ್, ಸೆರ್ಬಿಯಾ

57
ಹಲವು ವಿಮಾನಗಳ ಹಾರಾಟ ಸ್ಥಗಿತ

ಘಟನೆಯ ಬಳಿಕ ಏರ್ ಕೆನಡಾ, ಯುನೈಟೆಡ್ ಏರ್‌ಲೈನ್ಸ್ ಮತ್ತು ಏರೋ ಮೆಕ್ಸಿಕೊ, ಪೆಸಿಫಿಕ್ ಬೀಚ್ ರೆಸಾರ್ಟ್ ಆಗಿರುವ ಪೋರ್ಟೊ ವಲ್ಲರ್ಟಾಗೆ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ವಿಮಾನ ಸಂಚಾರದಲ್ಲೂ ವ್ಯತ್ಯಯವಾಗಿದೆ. ಹಿಂಸಾಚಾರದ ನಂತರ ಇಲ್ಲಿ ದಟ್ಟವಾದ ಹೊಗೆಯ ಮೇಲೇರುವುದನ್ನು ಸಂದರ್ಶಕರು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದಾರೆ. ಮತ್ತೊಂದೆಡೆ ರಾಯಿಟರ್ಸ್‌ ಹಂಚಿಕೊಂಡ ವೀಡಿಯೋದಲ್ಲಿ ಪಿಯರ್ ಬಳಿ ಆಕಾಶದ ದಟ್ಟ ಮೋಡವನ್ನು ಮೀರಿಸುವಂತೆ ಹೊಗೆ ಎಳುತ್ತಿರುವುದನ್ನು ಕಡಲತೀರಕ್ಕೆ ಹೋಗುವವರು ಕ್ಯಾಮರಾಗಳಲ್ಲಿ ಸೆರೆಹಿಡಿಯುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ: ಪ್ರೀತಿಯ ಮಾಯಾಜಾಲಕ್ಕೆ ಬಿದ್ದು ಸ್ವರ್ಗದಿಂದ ನರಕಕ್ಕೆ ಜಾರಿದ ಅಮೆರಿಕನ್ ಬಾಲೆ: ಪಾಕಿಸ್ತಾನಿ ಯುವಕನ ಮದ್ವೆಯಾದ ಯುವತಿ ಹೇಳಿದ್ದೇನು?

67
ಅರ್ಧ ಡಜನ್‌ಗಿಂತಲೂ ಹೆಚ್ಚು ರಾಜ್ಯಗಳಲ್ಲಿ ಹಿಂಸಾಚಾರ

ಅರ್ಧ ಡಜನ್‌ಗಿಂತಲೂ ಹೆಚ್ಚು ರಾಜ್ಯಗಳಲ್ಲಿ ಹಿಂಸಾಚಾರ ವ್ಯಾಪಿಸಿದ್ದು, ಎರಡು ದಶಕಗಳ ಕಾಲ ಮೆಕ್ಸಿಕೋದ ಮಾದಕವಸ್ತು ದಂಧೆಕೋರರ ವಿರುದ್ಧದ ಯುದ್ಧದಲ್ಲಿ ಇದು ಅತ್ಯಂತ ಸಾಮಾನ್ಯ ಎನಿಸುವ ದೃಶ್ಯಗಳನ್ನು ಸೃಷ್ಟಿಸಿತು ಜಲಿಸ್ಕೊದ ಟಪಲ್ಪಾದಲ್ಲಿ ಭಾನುವಾರ ನಡೆದ ಮಿಲಿಟರಿ ದಾಳಿಯ ಸಂದರ್ಭದಲ್ಲಿ ಒಸೆಗುರಾ ಹತ್ಯೆಗೆ ಪ್ರತೀಕಾರವಾಗಿ ಈಗುಂಡಿನ ದಾಳಿ ನಡೆದಿದೆ ಎಂದು ಸಿಜೆಎನ್‌ಜಿ ಸದಸ್ಯರೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ ಮತ್ತು ಕೆಲವು ಬಣಗಳು ಪರಸ್ಪರ ಕಾರ್ಟೆಲ್‌ನ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ತಂತ್ರ ಹೂಡುತ್ತಿದ್ದಂತೆ ಗಲಭೆ ಹೆಚ್ಚಾಗಬಹುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕುಟುಂಬದವರೊಂದಿಗೆ ಕುಳಿತು ಉಪಾಹಾರ ಸೇವಿಸ್ತಿದ್ದಾಗಲೇ ಹಾರಿಹೋಯ್ತು ಪ್ರಾಣಪಕ್ಷಿ: 21ರ ತರುಣ ಸಾವು

77
ನಾಯಕನ ಸಾವಿಗೆ ಪ್ರತೀಕಾರವಾಗಿ ಈ ದಾಳಿ

ಮೊದಲಿಗೆ ಸರ್ಕಾರದ ವಿರುದ್ಧ ಮತ್ತು ಅಸಮಾಧಾನದಿಂದ ನಾಯಕನ ಸಾವಿಗೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ವ್ಯಕ್ತಿ ಹೇಳಿದ್ದಾರೆ. ಆದರೆ ನಂತರ ಆಂತರಿಕ ಹತ್ಯೆಗಳು ನಡೆಯುತ್ತಿವೆ, ಗುಂಪುಗಳು ಅಧಿಕಾರ ವಹಿಸಿಕೊಳ್ಳಲು ಮುಂದಾಗುತ್ತಿವೆ. ಜಲಿಸ್ಕೊ ​​ರಾಜ್ಯದಲ್ಲಿ, ಬಂದೂಕುಧಾರಿಗಳು ರಾಷ್ಟ್ರೀಯ ಗಾರ್ಡ್ ನೆಲೆಯ ಮೇಲೆ ದಾಳಿ ಮಾಡಿದ್ದಾರೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿರುವುದರಿಂದ ಅತಿಥಿಗಳು ಹೋಟೆಲ್ ಒಳಗೆ ಇರಬೇಕೆಂದು ಶಿಫಾರಸು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇರೆಡೆ, ಭದ್ರತಾ ಮೂಲಗಳು ಹಂಚಿಕೊಂಡ ವೀಡಿಯೊಗಳಲ್ಲಿ, ಅಗುವಾಸ್ಕಲಿಯೆಂಟೆಸ್‌ನಲ್ಲಿರುವ ವಸತಿ ಪ್ರದೇಶದ ಮೂಲಕ ಮಿಲಿಟರಿ ಟ್ಯಾಂಕ್ ಉರುಳುತ್ತಿರುವುದು, ಜನನಿಬಿಡ ಮೆಕ್ಸಿಕೊ-ಪ್ಯೂಬ್ಲಾ ಹೆದ್ದಾರಿಯನ್ನು ಬಂದ್ ಮಾಡಿರುವುದು. ಕೊಲಿಮಾದಲ್ಲಿ ಪಿಕಪ್ ಟ್ರಕ್‌ಗಳಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚಾರವನ್ನು ಸ್ಥಗಿತಗೊಳಿಸುತ್ತಿರುವುದನ್ನು ತೋರಿಸಿದ್ದಾರೆ.

ಇದನ್ನೂ ಓದಿ: ಆತಂಕಕಾರಿ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದು ಲಿಫ್ಟ್‌ನಲ್ಲಿ ಸಿಲುಕಿದ ಇಬ್ಬರು ಪುಟ್ಟ ಮಕ್ಕಳ ರಕ್ಷಿಸಿದ ಬಾಲಕಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories