ಡೇಟಿಂಗ್ ಆ್ಯಪ್ ಬಿಡಿ ಸಿಂಗಾಪುರ ಆಂಟಿ ಮೇಲೆ ನಂಬಿಕೆ ಇಡಿ, ಏನಿದು 4 ರಾತ್ರಿಯ ಟೂರ್ ಆಫರ್?

Published : Feb 20, 2026, 07:30 PM IST

ಡೇಟಿಂಗ್ ಆ್ಯಪ್ ಬಿಡಿ ಸಿಂಗಾಪುರ ಆಂಟಿ ಮೇಲೆ ನಂಬಿಕೆ ಇಡಿ, ಇಷ್ಟೇ ನೋಡಿ, ಆಂಟಿಯರ ಜೊತೆ ನಾಲ್ಕು ರಾತ್ರಿಗಳ ಟೂರ್ ಆಫರ್, ಉನ್ನತ ಹೊಟೆಲ್‌ನಲ್ಲಿ ವಾಸ್ತವ್ಯ ಸೇರಿ ಹಲವು ಆತಿಥ್ಯ. ಏನಿದು ಮ್ಯಾಚ್ ಮೇಕಿಂಗ್ ಟೂರ್ ಆಫರ್? 

PREV
16
ಆಂಟಿ ಮೇಲೆ ನಂಬಿಕೆ ಇಡಿ

ನೀವು ಡೇಟಿಂಗ್ ಆ್ಯಪ್ ಬಳಸಿ ಭಾವನಾತ್ಮಕವಾಗಿ , ಮಾನಸಿಕವಾಗಿ ದಣಿದಿದ್ದೀರಾ? ಇದೀಗ ಡೇಟಿಂಗ್ ಆ್ಯಪ್ ಬಿಟ್ಟು ಬಿಡಿ, ಸಿಂಗಾಪುರ ಆಂಟಿ ಮೇಲೆ ನಂಬಿಕೆ ಇಡಿ. ಯುವ ಸಮೂಹವನ್ನು ಆತ್ಮೀಯದಿಂದ ಬರಮಾಡಿಕೊಂಡು ಪ್ರೀತಿ ಹಂಚಲು ಸಿಂಗಾಪುರ ಆಂಟಿಯರು ಸಜ್ಜಾಗಿದ್ದಾರೆ. ವಿಶೇಷ ಅಂದರೆ ಆಯ್ಕೆಯಾಗುವರಿಗೆ ನಾಲ್ಕು ರಾತ್ರಿ ಟೂರ್ ಉಚಿತ, ವಾಸ್ತವ್ಯ, ಆಹಾರ, ತಿರುಗಾಟ ಎಲ್ಲವೂ ಉಚಿತ. ಇಷ್ಟೆ ಅಲ್ಲ ನಿಮ್ಮ ಜೊತೆ ನಾಲ್ಕು ದಿನವೂ ಆಂಟಿ ಇರುತ್ತಾರೆ.

26
ಆಂಟಿಸ್, ನಾಟ್ ಆಲ್ಗರಿದಂ

ಸಿಂಗಾಪಾರು ಪ್ರವಾಸೋದ್ಯ ಇಲಾಖೆ ಇದೀಗ ಅಂಟಿಸ್,ನಾಟ್ ಆಲ್ಗೊರಿದಂ ಅನ್ನೋ ಅಭಿಯಾನ ಆರಂಭಿಸಿದೆ. ಇದು ಅತ್ಯಂತ ವಿಶೇಷ ಹಾಗೂ ಭಿನ್ನ ಅಭಿಯಾನ. ಇಲ್ಲಿ ಸಿಂಗಲ್ ಆಗಿರುವವರನ್ನೇ ಆಯ್ಕೆ ಮಾಡಲಾಗುತ್ತದೆ. ಆಂಟಿ ಜೊತೆ ಮ್ಯಾಚಿಂಗ್ ಮಾಡಿ ನಾಲ್ಕು ರಾತ್ರಿಗಳ ಉಚಿತ ಪ್ರವಾಸ ನೀಡಲಾಗುತ್ತದೆ. ಇದು ಪ್ರವಾಸೋದ್ಯಮ ಉತ್ತೇಜಿಸಲು ಆರಂಭಿಸಿದ ವಿನೂತನ ಅಭಿಯಾನ. ಸಿಂಗಾಪುರ ಪ್ರವಾಸೋದ್ಯ ಇಲಾಖೆ ಇದೀಗ ಹಳೇ ಕಾಲದ ಮ್ಯಾಚ್ ಮೇಕಿಂಗ್ ತತ್ವದಡಿ ಹೊಸ ಪ್ರಯತ್ನಕ್ಕೆ ಕೈಹಾಕಿದೆ.

36
ಸಿಂಗಲ್ಸ್‌ಗೆ ಮರೆಯಲಾಗದ ಅನುಭ

ಈ ಅಭಿಯಾನದ ಮೂಲಕ ಪ್ರವಾಸ ಮಾಡುವ ಸಿಂಗಲ್ಸ್‌ಗೆ ಮರೆಯಲಾಗದ ಅನುಭವ ಸಿಗಲಿದೆ ಎಂದು ಸಿಂಗಾಪುರ ಪ್ರವೋಸಾದ್ಯ ಇಲಾಖೆ ಹೇಳಿದೆ. ವಿದೇಶದಲ್ಲಿ ಹೊಸತು ಅನ್ವೇಷಿಸುವುದರಲ್ಲಿ ಯಾರಿಗೂ ಸಮಸ್ಯೆ ಇಲ್ಲ. ಸಿಂಗಲ್ ನೀವಾಗಿದ್ದರೆ ಮಾರ್ಚ್ 13ರ ವರೆಗೆ ಸಿಂಗಾಪುರ ಪ್ರವಾಸೋದ್ಯದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವರಿಗೆ ಸಿಂಗಾಪುರದ ಕೆಲ ಆಂಟಿಯರ ಜೊತೆ ಮ್ಯಾಚಿಂಗ್ ಮಾಡಲಾಗುತ್ತದೆ. ಬಳಿಕ ನಾಲ್ಕು ರಾತ್ರಿಗಳ ಪ್ರವಾಸ ಸಂಪೂರ್ಣ ಉಚಿತವಾಗಲಿದೆ.

46
ಮ್ಯಾಚ್‌ಮೇಕಿಂಗ್ ಮಾತ್ರವಲ್ಲ

ಸಿಂಗಾಪುರದ ಆಂಟಿಸ್, ನಾಟ್ ಆಲ್ಗರಿದಂ ಅಭಿಯಾನ ಪ್ರವಾಸೋದ್ಯಮ, ಸಿಂಗಾಪುರದ ಆತಿಥ್ಯ, ಭಿನ್ನ ಸಂಸ್ಕೃತಿ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಲಿದೆ. ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಒಂದಿಷ್ಟು ಸಿಂಗಲ್ಸ್ ಅಂದರೆ ಯುವಕ ಅಥವಾ ಯುವತಿಗೆ ಉಚಿತ ಪ್ರವಾಸ ಆಫರ್ ನೀಡಲಾಗುತ್ತದೆ. ಮ್ಯಾಚ್ ಮೇಕಿಂಗ್ ರೀತಿ ಪ್ರಚಾರ ರಾಯಭಾರಿಗಳು ನಾಲ್ಕು ದಿನಗಳ ಕಾಲ ಅತಿಥಿಗಳಿಗೆ ಸತ್ಕಾರ ನೀಡಲಿದ್ದಾರೆ. ಈ ಮೂಲಕ ಸಿಂಗಾಪುರ ಪ್ರವಾಸೋದ್ಯಮ ಉತ್ತೇಜಿಸಲು ಪ್ಲಾನ್ ಮಾಡಲಾಗಿದೆ. ಮ್ಯಾಚ್ ಮೇಕಿಂಗ್ ಮಾತ್ರವಲ್ಲ, ಆಹಾರ, ಭಿನ್ನ ಸಂಸ್ಕೃತಿಗಳ ವಿನಿಮಯ, ಅರ್ಥಪೂರ್ಣ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳಲಾಗಿದೆ.

56
ಸಿಂಗಾಪುರ ನಟಿ ಸೇರಿದಂತೆ ಹಲವು ಪ್ರಚಾರ ರಾಯಭಾರಿಗಳು

ಇದು ಪ್ರಚಾರದ ಭಾಗವಾಗಿ ಮಾಡಲಾಗುತ್ತಿದೆ. ಅಭಿಯಾನದಲ್ಲಿ ಸಿಂಗಾಪುರದ ನಟಿ ಟಾನ್ ಖೆಂಗ್ ಹುವಾ, ಜ್ಯೋತಿಷಿ-ಮ್ಯಾಚ್‌ಮೇಕರ್ ಅಲಿಜಾ ಕೆಲ್ಲಿ ಸೇರಿದಂತೆ ಕೆಲವನ್ನು ಅಭಿಯಾನದ ಪ್ರಚಾರಕರಾಗಿ ಆಯ್ಕೆ ಮಾಡಲಾಗಿದೆ.ಸಿಂಗಾಪುರವನ್ನು ಪ್ರವಾಸಿಗರಿಗೆ ವೈಯುಕ್ತಿಕವಾಗಿ ಹತ್ತಿರವಾಗುವಂತೆ, ಭಾವನಾತ್ಮಕವಾಗಿ ಬೆಸೆದುಕೊಳ್ಳಲು ಈ ಅಭಿಯಾನ ಆರಂಭಿಸಲಾಗಿದೆ ಎಂದು ಸಿಂಗಾಪುರ ಪ್ರವಾಸೋದ್ಯ ಉಪಾಧ್ಯಕ್ಷೆ ಐಲೀನ್ ಹೇಳಿದ್ದಾರೆ.

66
ಒಂದು ಕಂಡೀಷನ್

ನೀವು ಸಿಂಗಲ್ ಆಗಿದ್ದರೆ, ಆಯ್ಕೆಯಾದರೆ ಉಚಿತ ಪ್ರವಾಸ ಖಚಿತ. ಆದರೆ ಈ ಆಫರ್ ಸದ್ಯ ಅಮೆರಿಕದ ಸಿಂಗಲ್ಸ್‌ಗೆ ಮಾತ್ರ. ಸಿಂಗಾಪುರ ಈ ಅಭಿಯಾನ ಆರಂಭಿಸಿರುವುದು ಅಮೆರಿಕ ಸಿಂಗಲ್ಸ್ ಗುರಿಯಾಗಿಸಿ. ಇಷ್ಟೇ ಅಲ್ಲ ಅಭಿಯಾನ ಅಮೆರಿಕಕ್ಕೆ ಮಾತ್ರ ಸೀಮಿತವಾಗಿದೆ. ಈ ಅಭಿಯಾನ ಸಿಂಗಾಪುರಕ್ಕೆ ಆತಿಥ್ಯದಲ್ಲಿ ಉತ್ತಮ ಹೆಸರು ತಂದುಕೊಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ಕಂಡೀಷನ್

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories