ಮಹಿಳೆಯರೇ ಮನೆಯ ಈ ಐದು ಕೆಲಸಗಳನ್ನು ನೀವು ಮಾಡಬೇಡಿ; ಇದು ನಿಮ್ಮ ಸೇಫ್ಟಿ, ಇರಲಿ ಎಚ್ಚರ

Published : Sep 07, 2026, 01:29 PM IST

ಮನೆಯಲ್ಲಿನ ಕೆಲವು ಕೆಲಸಗಳು ಮಹಿಳೆಯರಿಗೆ ಅಪಾಯವನ್ನುಂಟುಮಾಡಬಹುದು. 5 ಕೆಲಸಗಳನ್ನು ಮಾಡುವಾಗ ಎಚ್ಚರಿಕೆ ವಹಿಸಬೇಕು. ಇಂತಹ ಸಂದರ್ಭಗಳಲ್ಲಿ ತಜ್ಞರ ಸಹಾಯ ಪಡೆಯುವುದು ಉತ್ತಮ ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

PREV
16
ಮನೆಯ ಈ ಐದು ಕೆಲಸ

ಮನೆ ಕೆಲಸಗಳು ಅಂದ್ರೆ ಮಹಿಳೆಯರಿಗೆ ಸೀಮಿತ ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿದೆ. ಗಂಡ-ಹೆಂಡ್ತಿ ಇಬ್ಬರು ಹೊರಗಡೆ ಕೆಲಸ ಮಾಡಿದ್ರೂ, ಅಡುಗೆ ತಯಾರಿಕೆ ಬಟ್ಟೆ ತೊಳೆಯುವಿಕೆ, ಕ್ಲೀನಿಂಗ್ ಸೇರಿದಂತೆ ಹಲವು ಕೆಲಸಳು ಮಹಿಳೆಯ ಹೆಗಲಿಗೆ ವರ್ಗಾವಣೆಯಾಗುತ್ತವೆ. ಆದ್ರೆ ಮನೆಯ ಈ ಐದು ಕೆಲಸಗಳನ್ನು ಮಾಡೋದರಿಂದ ಮಹಿಳೆಯರು ಹಿಂದೆ ಸರಿಬೇಕು. ಆ ಐದು ಕೆಲಸಗಳು ಯಾವವು ಎಂದು ನೋಡೋಣ ಬನ್ನಿ.

26
ಎತ್ತರ ಸ್ಥಳದ ಕ್ಲೀನಿಂಗ್

ಎತ್ತರದ ಸ್ಥಳವನ್ನು ಸ್ವಚ್ಛಗೊಳಿಸುವಾಗ ತುಂಬಾನೇ ಎಚ್ಚರಿಕೆಯಿಂದಿರಬೇಕು. ಎತ್ತರದ ಸ್ಥಳ ಕ್ಲೀನ್ ಮಾಡುವಾಗ ಚೇರ್ ಅಥವಾ ಟೇಬಲ್ ಮೇಲಿಂದ ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಮನೆಯಲ್ಲಿರುವ ಗಂಡು ಮಕ್ಕಳ ಸಹಾಯ ಪಡೆದುಕೊಳ್ಳಿ. ಕೆಲಸ ಅಧಿಕವಿದ್ದಾಗ ಸಹಾಯಕರನ್ನು ನೇಮಿಸಿಕೊಳ್ಳೋದು ಉತ್ತಮ.

36
ಗ್ಯಾಸ್ ಸ್ಟೌವ್ ಅಥವಾ ಸಿಲಿಂಡರ್

ಕೆಲವು ಮಹಿಳೆಯರು ಸುಲಭವಾಗಿ ಸಿಲಿಂಡರ್ ಬದಲಾಯಿಸುತ್ತಾರೆ. ಆದರೆ ಬಹುತೇಕರು ಸಿಲಿಂಡರ್ ಅಳವಡಿಸುವಾಗ ಹೆದರುತ್ತಾರೆ. ನಿಮಗೆ 0.001ರಷ್ಟು ಭಯವಿದ್ರೂ ಸಿಲಿಂಡರ್ ಅಳವಡಿಕೆ ಮಾಡಲು ಹೋಗಬೇಡಿ. ಹಾಗೆಯೇ ಗ್ಯಾಸ್ ಸ್ಟೌವ್‌ನಲ್ಲಿ ಸಣ್ಣ ಸಮಸ್ಯೆಗಳಾದ್ರೂ ಕೂಡಲೇ ರಿಪೇರಿ ಮಾಡಿಸಿ. ನೀವೇ ರಿಪೇರಿ ಮಾಡಲು ಎಂದಿಗೂ ಹೋಗಬೇಡಿ.

46
ವಿದ್ಯುತ್ ಸಂಬಂಧಿತ ಕೆಲಸಗಳು

ವಿದ್ಯುತ್ ಸಂಬಂಧಿತ ಕೆಲಸಗಳನ್ನು ನಿರ್ವಹಿಸುವಾಗ ತುಂಬಾನೇ ಎಚ್ಚರಿಕೆಯ ಅಗತ್ಯ. ಸಣ್ಣ ಪ್ರಮಾದವಾದ್ರೂ ಪ್ರಾಣ ಹೋಗುವ ಅಪಾಯವಿರುತ್ತದೆ. ಮೇನ್ ಸ್ವಿಚ್ಛ್ ಬೋರ್ಡ್, ಹೈ-ವೋಲ್ಟೇಜ್ ವೈರಿಂಗ್‌ಗೆ ಸಂಬಂಧಿಸಿದ ಕೆಲಸಗಳಿಗಾಗಿ ತಜ್ಞ ಕಾರ್ಮಿಕರನ್ನೇ ಕರೆಸಿಕೊಳ್ಳಬೇಕು. ಸಣ್ಣ ಎಡವಟ್ಟು ಸಹ ಶಾರ್ಟ್ ಸರ್ಕ್ಯೂಟ್ ಅಂತಹ ವಿದ್ಯುತ್ ಅಪಾಯವನ್ನುಂಟು ಮಾಡುತ್ತದೆ.

56
ಕೊಳಾಯಿ ಕೆಲಸ

ಕೊಳಾಯಿ ರಿಪೇರಿಗಳಿಗೆ ಯಾವಾಗಲೂ ಪರಿಣಿತ ಪ್ಲಂಬರ್ ಕರೆಸಿಕೊಳ್ಳಿ. ಹಣ ಉಳಿತಾಯಕ್ಕಾಗಿ ನೀವೇ ಯಾವುದೇ ಉಪಾಯ ಮಾಡಬೇಡಿ. ಇದು ಆರಂಭದ ಸಮಸ್ಯೆಗೆ ತಕ್ಷಣದ ಪರಿಹಾರ ನೀಡಬಹುದು. ಆದ್ರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ತಕ್ಷಣದ ರಿಪೇರಿಯು ನೀರು ಸೋರಿಕೆಯಾಗೆ ಗೋಡೆಗಳು ತೇವಾಂಶಕ್ಕೊಳಗಾಗಿ ಇಡೀ ಮನೆಗೆ ಹಾನಿಯನ್ನುಂಟು ಮಾಡಬಹುದು.

66
ಗೋಡೆಯಲ್ಲಿ ಬಿರುಕು

ನಿಮ್ಮದು ಹಳೆ ಮನೆ ಆಗಿದ್ರೆ ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಾಗಬ ತಜ್ಞರ ಸಹಾಯ ಪಡೆದುಕೊಳ್ಳಿ. ನೀವೇ ಮಾಡುವ ರಿಪೇರಿ ಭವಿಷ್ಯದಲ್ಲಿ ದೊಡ್ಡ ಅಪಾಯವನ್ನುಂಟು ಮಾಡಬಹುದು. ಸರಿಯಾದ ಕ್ರಮಗಳನ್ನು ಅನುಸರಿಸಿದಿದ್ರೆ ಇಡೀ ಮನೆ ಬೀಳುವ ಅಪಾಯ ಹೆಚ್ಚಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories