480 ಬೆಕ್ಕು ಮತ್ತು 12 ನಾಯಿಗಳೊಂದಿಗೆ ಈ ಮಹಿಳೆ ವಾಸ!

First Published Nov 26, 2020, 5:25 PM IST

ಒಮಾನ್‌ನ ರಾಜಧಾನಿಯಾದ ಮಸ್ಕತ್‌ನಲ್ಲಿ ವಾಸಿಸುವ ಮರಿಯಮ್ ಅಲ್ ಬಲುಶಿ 480 ಬೆಕ್ಕುಗಳು ಮತ್ತು 12 ನಾಯಿಗಳೊಂದಿಗೆ ತನ್ನ ಮನೆಯಲ್ಲಿ ವಾಸಿಸುತ್ತಿದ್ದಾರೆ.ಮಹಿಳೆಯ ನೆರೆಹೊರೆಯವರೂ ಸಹ ಇದರಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಆದರೆ ಈ ಎಲ್ಲದರ ಹೊರತಾಗಿಯೂ, ಮಹಿಳೆ ಪ್ರಾಣಿಗಳ ಆರೈಕೆಗಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾಳೆ. ಇದು ಮಾತ್ರವಲ್ಲ, ನಾಯಿ ಮತ್ತು ಬೆಕ್ಕುಗಳು ಮಹಿಳೆಯ ಹಾಸಿಗೆಯಿಂದ ಹಿಡಿದು ಅಡಿಗೆ ಮನೆಯವರೆಗೆ ಎಲ್ಲೆಡೆ ಕಂಡುಬರುತ್ತವೆ. 

ನೆರೆಹೊರೆಯವರ ದೂರು ಮತ್ತು ಹೆಚ್ಚಿದ ಖರ್ಚಿನ ಹೊರತಾಗಿಯೂ, ಮರಿಯಮ್ 480 ಬೆಕ್ಕುಗಳು ಮತ್ತು 12 ನಾಯಿಗಳ ಜೊತೆ ತನ್ನ ಮನೆಯಲ್ಲಿ ವಾಸಿಸುತ್ತಿದ್ದು,ಅವಳ ಸಾಕುಪ್ರಾಣಿಗಳು ಮನುಷ್ಯರಿಗಿಂತ ಉತ್ತಮ ಸಹಚರರು ಎಂದು ಹೇಳುತ್ತಾರೆ.
undefined
ಪ್ರಾಣಿಗಳು ವಿಶೇಷವಾಗಿ ಬೆಕ್ಕುಗಳು ಮತ್ತು ನಾಯಿಗಳು ಮನುಷ್ಯರಿಗಿಂತ ಹೆಚ್ಚು ನಿಷ್ಠಾವಂತರಾಗಿರುತ್ತವೆ ಎಂಬುವುದು ಈ ಪ್ರಾಣಿ ಪ್ರಿಯೆ ಅಭಿಪ್ರಾಯವೂ ಹೌದು. ಹಲವು ಪ್ರಾಣಿಗಳನ್ನು ರಸ್ತೆಯಿಂದ ತಂದಿದ್ದಾರೆ ಈಕೆ.
undefined
ಓಮನ್‌ನಲ್ಲಿ ರಸ್ತೆಯಲ್ಲಿ ಸಾಕುಪ್ರಾಣಿಗಳನ್ನು ಬಿಟ್ಟರೆ 25 ಡಾಲರ್‌ದಂಡವನ್ನು ವಿಧಿಸಲಾಗುತ್ತದೆ. ಇದರ ಹೊರತಾಗಿಯೂ, ಪ್ರಾಣಿಗಳನ್ನು ಬಿಡುವ ಪ್ರವೃತ್ತಿ ಕಳೆದ ವರ್ಷಗಳಲ್ಲಿ ಹೆಚ್ಚಾಗಿದೆ.
undefined
ಅಂತಹ ಪರಿಸ್ಥಿತಿಯಲ್ಲಿ, ಅವರು ಈ ಎಲ್ಲಾ ಪ್ರಾಣಿಗಳಿಗೆ ಆಹಾರ, ವೈದ್ಯಕೀಯ ಮತ್ತು ಇತರೆ ವೆಚ್ಚಗಳನ್ನು ಒಳಗೊಂಡಂತೆ ಪ್ರತಿ ತಿಂಗಳು ತುಂಬಾ ಹಣವನ್ನು ಖರ್ಚು ಮಾಡುತ್ತಾರೆ.
undefined
ಮರಿಯಮ್ ಅವರ ಇಡೀ ಮನೆ ಪಂಜರಗಳಿಂದ ತುಂಬಿದ್ದು, ಪ್ರಾಣಿಗಳನ್ನು ಒಂದೊಂದಾಗಿ ಹೊರ ತೆಗೆಯುತ್ತಾರೆ, ಅವುಗಳ ಜೊತೆ ಆಟವಾಡುತ್ತಾರೆ. ಸಿವಿಲ್‌ ಸರ್ವೆಂಟ್‌ ಆಗಿದ್ದ ಮರಿಯಮ್ ಈಗ ನಿವೃತ್ತಿ ಹೊಂದಿದ್ದಾರೆ. ಅವರು 2008 ರಿಂದ ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಪ್ರಾರಂಭಿಸಿದರು.
undefined
ನಂತರ ಅವರ ಮಗ ಬೆಕ್ಕನ್ನು ಮನೆಗೆ ಕರೆತಂದನು. ಅನೇಕ ತಾಯಂದಿರಂತೆ, ನಾನು ಪ್ರಾಣಿಗಳನ್ನು ಇಷ್ಟಪಡದ ಕಾರಣ ಅದನ್ನು ನೋಡಿಕೊಳ್ಳಲು ನಿರಾಕರಿಸಿದೆ. ಅದೇ ಸಮಯದಲ್ಲಿ, ಅವರ ಮಗನೂ ಸಹ ಅದರ ಬಗ್ಗೆ ಹೆಚ್ಚು ಗಮನ ಮತ್ತು ಕಾಳಜಿಯನ್ನು ನೀಡಲಿಲ್ಲ.
undefined
ಆದರೆ ಎರಡು ವರ್ಷಗಳ ನಂತರ, ಬಲೋಶಿ ಸ್ವತಃ ಬೆಕ್ಕನ್ನು ಸಾಕಿದಾಗ ಮನಸ್ಸು ಬದಲಾಯಿತು. 'ನಾನು ಅದನ್ನು ಸಂಪೂರ್ಣವಾಗಿ ನೋಡಿಕೊಂಡೆ, ಆಹಾರ ನೀಡಿದ್ದೇನೆ, ಸ್ನಾನ ಮಾಡಿಸಿದ್ದೇನೆ ಮತ್ತು ಅದರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ' ಎನ್ನುತ್ತಾರೆ.
undefined
ಇದರ ನಂತರ ಅವರು ಅನೇಕ ಪ್ರಾಣಿಗಳನ್ನು ಸಾಕಿದರು. ಇದರಲ್ಲಿ ಹಲವನ್ನು ರಸ್ತೆಯಿಂದ ರಕ್ಷಿಸಲಾಗಿದೆ. ಮರಿಯಮ್ 2014 ರಲ್ಲಿ ತಮ್ಮ ಸ್ವಂತ ಮನೆ ಕೊಂಡರು. ಇದರ ನಂತರ, ತನ್ನೊಂದಿಗೆ ಹೆಚ್ಚಿನ ಪ್ರಾಣಿಗಳನ್ನು ಮನೆಗೆ ತಂದರು. ತನ್ನ ಮನೆಯಲ್ಲಿ ವಾಸಿಸುವ ನಾಯಿಗಳು ಮತ್ತು ಬೆಕ್ಕುಗಳು ಸಹ ತಮ್ಮ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳುತ್ತಾರೆ.
undefined
click me!