ಗೊಬ್ಬರವಾಗಿ
ನಾಟಿ ಮಾಡುವ ಮೊದಲು ಮಣ್ಣಿನಲ್ಲಿ ಕೋಕೋ ಪಿಟ್ ಅನ್ನು ಬಳಸಲಾಗುತ್ತದೆ. ಇದನ್ನು ತೆಂಗಿನ ಸಿಪ್ಪೆಯಿಂದ ತಯಾರಿಸಲಾಗುತ್ತದೆ. ಇದರಿಂದ ಸಸ್ಯಗಳು ಪೋಷಣೆ ಪಡೆಯುತ್ತವೆ ಮತ್ತು ಮಡಕೆಯಲ್ಲಿ ಕೋಕೋಪೀಟ್ ಅನ್ನು ಮಣ್ಣಿನೊಂದಿಗೆ ಬೆರೆಸುವ ಮೂಲಕ ಅವುಗಳ ಬೆಳವಣಿಗೆ ಸರಿಯಾಗಿ ಆಗುತ್ತದೆ. ಗಿಡಗಳು ಚೆನ್ನಾಗಿ ಬೆಳೆಯಲು ಇದು ಸಹಕಾರಿ.
ಕೊಕೊ ಪೀಟ್ ಮಾಡಲು, ತೆಂಗಿನ ಸಿಪ್ಪೆಯನ್ನು ನೀರಿನಲ್ಲಿ ದೊಡ್ಡ ಪಾತ್ರೆಯಲ್ಲಿ ಅದ್ದಿ ಮತ್ತು 15 ದಿನಗಳವರೆಗೆ ಬಿಡಿ. 15 ದಿನಗಳ ನಂತರ ಅದನ್ನು ನೀರಿನಿಂದ ತೆಗೆಯಿರಿ ಮತ್ತು ಕತ್ತರಿ ಸಹಾಯದಿಂದ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದರಿಂದ ಪುಡಿಯಾಗಿರುವ ಅಂಶವನ್ನು ಪಡೆಯಬಹುದು. ಇದನ್ನು ಕೋಕೋಪಿಟ್ ಎಂದು ಕರೆಯಲಾಗುತ್ತದೆ. ಇವು ಗಿಡಗಳಿಗೆ ಉತ್ತಮ ಫಲವತ್ತತೆ ನೀಡುತ್ತದೆ.
ನೈಸರ್ಗಿಕ ಡೈ (Natural Die) ರೂಪದಲ್ಲಿ ಬಳಕೆ
ತೆಂಗಿನ ಜುಟ್ಟನ್ನು ನೈಸರ್ಗಿಕ ಡೈ ತಯಾರಿಸಲು ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಲೋಹದ ಬಾಣಲೆಯನ್ನು ತೆಗೆದುಕೊಳ್ಳಿ ಹಾಗೂ ಅದನ್ನು ಬಿಸಿ ಮಾಡಿ. ಈಗ ಅದರಲ್ಲಿ ತೆಂಗಿನ ಜುಟ್ಟನ್ನು ಇಡಿ ಹಾಗೂ ಅವುಗಳಲ್ಲಿನ ಒಂದು ಅಥವಾ ಎರಡು ಜುಟ್ಟನ್ನು ಬೆಂಕಿಯಿಂದ ಸುಟ್ಟುಹಾಕಿ. ಇದರಿಂದ ನಿಧಾನಕ್ಕೆ ಎಲ್ಲಾ ಜುಟ್ಟುಗಳು ಹೊತ್ತಿಕೊಳ್ಳಲಿವೆ.
ಬಾಣಲೆಯಲ್ಲಿರುವ ಎಲ್ಲಾ ತೆಂಗಿನ ಜುಟ್ಟನ್ನು ಸರಿಯಾಗಿ ಸುಟ್ಟುಕೊಳ್ಳಿ. ಇದರ ಪೌಡರ್ ತಯಾರಿಸಿಕೊಳ್ಳಿ. ಪೌಡರ್ ತಯಾರಿಸಿದ ಬಳಿಕ ಇದು ಚಾರ್ಕೋಲ್ ರೀತಿ ಕಪ್ಪಾಗಲಿದೆ. ಇದೀಗ 3 ಚಮಚೆ ತೆಂಗಿನ ಪೌಡರ್‌ನಲ್ಲಿ 2 ಚಮಚೆ ಸಾಸಿವೆ ಎಣ್ಣೆ ಬೆರೆಸಿ ಹಾಗೂ ಅದನ್ನು ಡೈ ರೀತಿಯಲ್ಲಿ ಬಳಸಬಹುದು. ಇದರಿಂದ ಕೂದಲಿಗೆ ಕಪ್ಪು ಬಣ್ಣ ಬರುತ್ತದೆ. ಆದರೆ ಇದು ಈ ಬಣ್ಣ ಹೆಚ್ಚು ದಿನವಿರೋಲ್ಲ.
ಪಾತ್ರೆ ತೊಳೆಯಲು
ತೆಂಗಿನ ಜುಟ್ಟು ಅಥವಾ ನಾರಿನ ಬಳಕೆಯನ್ನು ಅಡುಗೆ ಮನೆ ಪಾತ್ರೆ ತೊಳೆಯಲು ಸ್ಕ್ರಬರ್ ರೀತಿ ಮಾಡಬಹುದು. ಇದರಿಂದ ಸುಟ್ಟ ಹಾಗೂ ಜಿಡ್ಡಿನಿಂದ ಕೂಡಿದ ಪಾತ್ರೆಗಳು ಸ್ವಚ್ಛವಾಗಲಿವೆ. ಹಿಂದಿನ ಕಾಲದಲ್ಲಿ ಇದನ್ನು ಸ್ಕ್ರಬರ್ ಆಗಿ ಬಳಸುತ್ತಿದ್ದರು. ಕೇವಲ ಪಾತ್ರೆಗಳನ್ನು ಉಜ್ಜುವ ಸ್ಕ್ರಬರ್ ಮಾತ್ರವಲ್ಲ, ಮೈಯನ್ನು ಉಜ್ಜುವ ಸ್ಕ್ರಬರ್ ಆಗಿ ಸಹ ಇದನ್ನು ಬಳಕೆ ಮಾಡಬಹುದು.
ಹಲ್ಲುಗಳ ಶುಚಿತ್ವಕ್ಕೆ ಬಳಸಬಹುದು
ಹಲ್ಲುಗಳ ಸ್ವಚ್ಚತೆಗಾಗಿಯೂ ಕೂಡ ಇದನ್ನು ಬಳಕೆ ಮಾಡಬಹುದು. ಇದು ಹಲ್ಲುಗಳ ಮೇಲೆ ಉಂಟಾಗಿರುವ ಹಳದಿ ಕಲೆಗಳನ್ನು ತೊಡೆದು ಹಾಕುತ್ತದೆ. ತೆಂಗಿನ ಜುಟ್ಟನ್ನು ಸುಟ್ಟ ಬಳಿಕ ಅದರ ಪೌಡರ್ ಅನ್ನು ಒಂದು ಬಾಟಲಿಯಲ್ಲಿ ಸಂಗ್ರಹಿಸಿ ಹಾಗೂ ನಿತ್ಯ ಅದನ್ನು ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸಿ. ಬಳಿಕ ಬೆರಳಿನ ಸಹಾಯದಿಂದ ಹಲ್ಲುಗಳ ಮೇಲೆ ಮೆಲ್ಲಗೆ ಮಸಾಜ್ ಮಾಡಿ. ಇಲ್ಲದಿದ್ದರೆ ವಸಡುಗಳಿಗೆ ಹಾನಿ ಉಂಟಾಗಲಿದೆ.
ಕೆಸುವಿನ ಗೆಡ್ಡೆ ಸುಲಿಯಲು
ಹಲವು ಬಾರಿ ಕೆಸುವಿನ ಗೆಡ್ಡೆ ಸುಲಿದಾಗ ಕೈಗಳಲ್ಲಿ ತುರಿಕೆ ಉಂಟಾಗುತ್ತದೆ. ಇದರಿಂದ ಪಾರಾಗಲು ತೆಂಗಿನ ಜುಟ್ಟಿನ ಬಳಕೆ ಮಾಡಬಹುದು. ತೆಂಗಿನ ಜುಟ್ಟಿನ ಸಹಾಯದಿಂದ ಕೆಸುವಿನ ಗೆಡ್ಡೆಯನ್ನು ಸುಲಭವಾಗಿ ಸುಲಿಯಬಹುದು. ಇದರಿಂದ ಕೈ ಮೇಲೆ ಕಲೆಗಳಾಗುವುದಿಲ್ಲ, ಜೊತೆಗೆ ಕೈಯಲ್ಲಿ ತುರಿಕೆ ಉಂಟಾಗಿ ಕಿರಿಕಿರಿ ಎನಿಸುವ ಅನುಭವವೂ ತಪ್ಪುತ್ತದೆ. ಆದುದರಿಂದ ಮುಂದಿನ ಬಾರಿ ಇದನ್ನೆ ಟ್ರೈ ಮಾಡಿ.