ಮಖದ ಮೇಲಿನ ಮಚ್ಚೆ ನಿವಾರಣೆಗೆ ಆ ಎಣ್ಣೆ ಬೆಸ್ಟ್!

First Published | Sep 16, 2021, 8:47 PM IST

ಕೆಲವರ ದೇಹದ ಮೇಲೆ ಸಾಕಷ್ಟು ಮಚ್ಚೆಗಳು ಕಂಡುಬರುತ್ತವೆ. ಅದೇ ಸಮಯದಲ್ಲಿ, ಈ ಮಚ್ಚೆಗಳು ಮುಖದ ಮೇಲೂ ಇರಬಹುದು. ಇದರಿಂದಾಗಿ ಮುಖದ ಆಕರ್ಷಣೆ ಸ್ವಲ್ಪ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಒಂದೊಂದು ಮಚ್ಚೆ ಇರೋದು ಚಂದಾನೆ, ಆದರೆ ಮುಖ ಪೂರ್ತಿಯಾಗಿ ಮಚ್ಚೆ ಇದ್ದರೆ ಚೆನ್ನಾಗಿ ಕಾಣಿಸೋದಿಲ್ಲ. ಹಾಗಾದರೆ ಈ ಮಚ್ಚೆ ತೆಗೆಯೋದು ಹೇಗೆ? 
 

ಮಚ್ಚೆಗಳನ್ನು ಹೊಂದುವುದು ಸಾಮಾನ್ಯ. ಆದರೆ ಅದನ್ನು ಅಳಿಸಲು ಬಯಸಿದರೆ, ಅದನ್ನು ಮನೆಯಲ್ಲಿ ಮಾಡಬಹುದು. ಮುಖದಿಂದ ಮಚ್ಚೆಗಳನ್ನು ತೆಗೆದು ಹಾಕಲು ಶಸ್ತ್ರ ಚಿಕಿತ್ಸೆ ಅಥವಾ ಲೇಸರ್ ಅಗತ್ಯವಿಲ್ಲ, ಆದರೆ ಇದು ಹರಳೆಣ್ಣೆಯೊಂದಿಗೆ ಸಹ ಕೆಲಸ ಮಾಡಬಹುದು. ಹೇಗೆ ತೆಗೆಯೋದು? ಅದಕ್ಕಾಗಿ ಏನು ಮಾಡಬೇಕು? ನೋಡೋಣ... 

ಹರಳೆಣ್ಣೆಯಲ್ಲಿ ವಿವಿಧ ರೀತಿಯ ಲಾಭಗಳು ಇರುವ ಪರಿಣಾಮವಾಗಿ ಇದನ್ನು ಹಲವು ವಿಧದಿಂದ ಬಳಸಲಾಗುತ್ತದೆ. ಕೂದಲು ಚೆನ್ನಾಗಿ ಬೆಳೆಯುವುದರಿಂದ ಹಿಡಿದು, ಹೊಟ್ಟೆ ಹಗುರಾಗುವವರೆಗೆ ಹರಳೆಣ್ಣೆಯನ್ನು ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಮಚ್ಚೆಗಳನ್ನು ತೆಗೆದುಹಾಕಲು ಹರಳೆಣ್ಣೆಯನ್ನು ಹೇಗೆ ಬಳಸುವುದು ಎಂದು ನೋಡೋಣ.

Tap to resize

ಬೇಕಿಂಗ್ ಸೋಡಾ ಮತ್ತು ಹರಳೆಣ್ಣೆ
ರಾತ್ರಿ 1/2 ಟೀ ಚಮಚ ಅಡುಗೆ ಸೋಡಾಕ್ಕೆ 2-3 ಹನಿ ಹರಳೆಣ್ಣೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮಚ್ಚೆಗಳ ಮೇಲೆ ಹಚ್ಚಿ ಮತ್ತು ಬ್ಯಾಂಡೇಜ್ ಗಳಿಂದ ಮುಚ್ಚಿ. ಮರುದಿನ ಬೆಳಿಗ್ಗೆ ಬ್ಯಾಂಡೇಜ್ ತೆಗೆದು ಮುಖ ತೊಳೆಯಿರಿ. ಒಂದು ದಿನ ಬಿಟ್ಟು ಈ ವಿಧಾನವನ್ನು ಅನುಸರಿಸಿ.

ಜೇನುತುಪ್ಪ ಮತ್ತು ಹರಳೆಣ್ಣೆ
1 ಟೀ ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಅದಕ್ಕೆ 2-3 ಹನಿ ಹರಳೆಣ್ಣೆಯನ್ನು ಸೇರಿಸಿ ಮತ್ತು ನಂತರ ಅದನ್ನು ಹಚ್ಚಿ. ನಂತರ ಅದನ್ನು ಬ್ಯಾಂಡೇಜ್ ನಿಂದ ಮುಚ್ಚಿ ಕೆಲವು ಗಂಟೆಗಳ ನಂತರ ತೆಗೆಯಿರಿ. ಈಗ ಮುಖವನ್ನು ತೊಳೆಯಬೇಕು. ಈ ವಿಧಾನವನ್ನು ದಿನಕ್ಕೆಎರಡು ಬಾರಿ ಬಳಸಿ. 7-10 ದಿನಗಳಲ್ಲಿ  ಫಲಿತಾಂಶಗಳನ್ನು ನೋಡುತ್ತೀರಿ.

ಶುಂಠಿ ಮತ್ತು ಹರಳೆಣ್ಣೆ
ಅರ್ಧ ಟೀ ಚಮಚ ಶುಂಠಿ ಪುಡಿಗೆ 2-3 ಹನಿ ಹರಳೆಣ್ಣೆಯನ್ನು ಸೇರಿಸಿ. ಈಗ ಈ ಪೇಸ್ಟ್ ಅನ್ನು ಮಚ್ಚೆ ಮೇಲೆ ಹಚ್ಚಿ ಮತ್ತು ಕೆಲವು ಗಂಟೆಗಳ ಕಾಲ ಬಿಡಿ. ನಂತರ ಮುಖವನ್ನು ತೊಳೆಯಿರಿ. ದಿನಕ್ಕೆ ಎರಡು ಬಾರಿ ಬಳಸುವುದರಿಂದ ಉತ್ತಮ ಫಲಿತಾಂಶ ಬರುತ್ತದೆ.

ಟೀ ಟ್ರೀ ಆಯಿಲ್ ಮತ್ತು ಹರಳೆಣ್ಣೆ
1 ಟೀ ಚಮಚ ಹರಳೆಣ್ಣೆಯನ್ನು ತೆಗೆದುಕೊಂಡು ಅದಕ್ಕೆ 3-4 ಹನಿ ಟೀ ಟ್ರೀ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಹತ್ತಿಯಿಂದ ಮಚ್ಚೆಗಳಿಗೆ ಹಚ್ಚಿ ಮತ್ತು ಮುಚ್ಚಿ. 3-4 ಗಂಟೆಗಳ ನಂತರ ಮುಖ ತೊಳೆಯಿರಿ. ದಿನಕ್ಕೆ ಎರಡು ಬಾರಿ ಬಳಸುವುದರಿಂದ ಉತ್ತಮ ಫಲಿತಾಂಶ  ನೀಡುತ್ತವೆ.

Latest Videos

click me!