ನಮಗೆ ಸಾಕಷ್ಟು ನಿದ್ರೆ ಸಿಗದೇ (lack of sleep) ಇದ್ದರೆ, ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ನಮಗೆಲ್ಲರಿಗೂ ತಿಳಿದಿದೆ. ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ನಿದ್ರೆ ಸಿಗದಿದ್ದರೆ ಮತ್ತು ಈ ಪ್ರಕ್ರಿಯೆ ಹಲವಾರು ದಿನಗಳವರೆಗೆ ಮುಂದುವರಿದರೆ, ಅವರು ಸುಲಭವಾಗಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೊಸ ಸಂಶೋಧನೆ ಬಹಿರಂಗಪಡಿಸಿದೆ.
ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದ ಈ ಸಂಶೋಧನೆಯು ಮಹಿಳೆಯರು ರಾತ್ರಿಯಲ್ಲಿ 7 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ, ಅವರು ಹೃದಯಾಘಾತ (heart attack), ಹೃದಯ ವೈಫಲ್ಯ, ಮಯೋಕಾರ್ಡಿಯೋ ಸೋಂಕಿನಂತಹ ಸಮಸ್ಯೆಗಳಿಗೆ ಗುರಿಯಾಗಬಹುದು ಎಂದು ಸಹ್ ಅತಿಳಿಸಿದೆ. ನಿದ್ರೆಯ ಕೊರತೆಯು ಮಹಿಳೆಯರಲ್ಲಿ ಈ ಅಪಾಯವನ್ನು ಶೇಕಡಾ 70 ರಷ್ಟು ಹೆಚ್ಚಿಸುತ್ತದೆ.
ಸಂಶೋಧನೆಯಲ್ಲಿ ಏನು ಕಂಡುಬಂದಿದೆ
ವಿಜ್ಞಾನಿಗಳು ಈ ಸಂಶೋಧನೆಯನ್ನು 2,517 ಮಹಿಳೆಯರ ಮೇಲೆ ನಡೆಸಿದರು. ನಿದ್ರೆಯ ಕೊರತೆ ಅಥವಾ ಆಗಾಗ್ಗೆ ನಿದ್ರೆಯಿಂದ ಎಚ್ಚರವಾಗುವಂತಹ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಹೃದ್ರೋಗದ ಅಪಾಯವನ್ನು (heart problem) ಶೇಕಡಾ 70 ರಷ್ಟು ಹೊಂದಿದ್ದಾರೆ ಎಂದು ಈ ಸಂಶೋಧನೆಯು ಕಂಡುಹಿಡಿದಿದೆ.
ಅಷ್ಟೇ ಅಲ್ಲ, 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ 72 ಪ್ರತಿಶತದಷ್ಟು ಮಹಿಳೆಯರು ಹೃದಯಾಘಾತ, ಪಾರ್ಶ್ವವಾಯು, ಹೃದಯ ವೈಫಲ್ಯ, ಅಪಧಮನಿ ಕಾಯಿಲೆಯಂತಹ ಸಮಸ್ಯೆಗಳನ್ನು ಹೊಂದಿರುವುದು ಸಹ ಕಂಡುಬಂದಿದೆ. ಹಾಗಾಗಿ ಮಹಿಳೆಯರು 7 ಗಂಟೆ ನಿದ್ರೆ ಮಾಡೋದು ತುಂಬಾನೆ ಮುಖ್ಯ.
ರಕ್ತದೊತ್ತಡದ ಸಮಸ್ಯೆ
ನಿರಂತರ ನಿದ್ರೆಯ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರು ರಕ್ತದೊತ್ತಡ (blood pressure) ಸಮಸ್ಯೆಯನ್ನು ಹೊಂದಿರುವ ಸಾಧ್ಯತೆ ಕೂಡ ಹೆಚ್ಚಿದೆ ಮತ್ತು ಇದು ದೇಹದ ಲಯದ ಮೇಲೂ ಪರಿಣಾಮ ಬೀರುತ್ತದೆ, ಇದು ಹೃದಯಾಘಾತದ ಅಪಾಯವನ್ನು ಶೇಕಡಾ 75 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ.
ನಿದ್ರಾಹೀನತೆಯನ್ನು ನಿವಾರಿಸುವುದು ಹೇಗೆ?
ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಧ್ಯಾನ, ಮಂತ್ರ ಮತ್ತು ಯೋಗ ಮಾಡೋದು ತುಂಬಾ ಉತ್ತಮ.
ನೀವು ವಾರಕ್ಕೆ 150 ನಿಮಿಷಗಳ ಕಾಲ ವ್ಯಾಯಾಮ (exercise) ಮಾಡಿದರೆ, ಅದು ನಿದ್ರಾಹೀನತೆ ಅಥವಾ ನಿದ್ರಾಹೀನತೆಯ ಸಮಸ್ಯೆಯನ್ನು ಗುಣಪಡಿಸಲು ಪ್ರಾರಂಭಿಸುತ್ತದೆ.
magnesium
ಒತ್ತಡದಿಂದಾಗಿ (stress) ನೀವು ನಿದ್ರೆ ಮಾಡದಿದ್ದರೆ, ಸ್ವಯಂ ಮಸಾಜ್ ಮಾಡಿಕೊಳ್ಳುವ ಮೂಲಕ ನೀವು ಈ ಸಮಸ್ಯೆಯನ್ನು ನಿವಾರಿಸಬಹುದು.
ಮೆಗ್ನೀಷಿಯಮ್ ಸಮೃದ್ಧ ಆಹಾರ ಸೇವಿಸಿ ಮತ್ತು ಮಲಗುವ 2 ಗಂಟೆಗಳ ಮೊದಲು ರಾತ್ರಿ ಊಟ ಮಾಡಿ. ಚಹಾ ಮತ್ತು ಕಾಫಿಯಿಂದ ದೂರವಿರಿ.
ಮಲಗುವ 2 ಗಂಟೆಗಳ ಮೊದಲು ಮೊಬೈಲ್, ಕಂಪ್ಯೂಟರ್ ಆಫ್ ಮಾಡಿ, ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ಕೋಣೆಯ ಬೆಳಕನ್ನು ಆಫ್ ಮಾಡಿ ಮಲಗಿ. ಚೆನ್ನಾಗಿ ನಿದ್ರೆ ಬರುತ್ತೆ.