Placenta Encapsulation: ಹೊಕ್ಕುಳ ಬಳ್ಳಿ ತಿನ್ನೋದ್ರಿಂದ ತಾಯಿಗೆ ಶಕ್ತಿ ಸಿಗುತ್ತದೆಯೇ?

First Published | May 25, 2023, 2:50 PM IST

ತಾಯಿಯ ಗರ್ಭದಲ್ಲಿರುವ ಮಗುವಿಗೆ ಆಹಾರವನ್ನು ನೀಡುವ ಜರಾಯುವಿ ಅಂದರೆ ಪ್ಲಾಸೆಂಟಾದ ಕ್ಯಾಪ್ಸೂಲ್ಗಳನ್ನು ಹೆಚ್ಚಾಗಿ ತಯಾರಿಸಿ ಈಗಷ್ಟೇ ತಾಯಿಯಾದ ಮಹಿಳೆಯರಿಗೆ ನೀಡಲಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ಉತ್ತಮವೇ? ಅಲ್ಲವೇ? ನೋಡೋಣ. 

ಜರಾಯು ಮಗುವಿನ ಬೆಳವಣಿಗೆಗೆ ಬೇಕಾಗುವ ಒಂದು ಪ್ರಮುಖ ಅಂಗವಾಗಿದೆ, ಇದು ಗರ್ಭಧಾರಣೆಯ 12 ನೇ ವಾರದ ವೇಳೆಗೆ ಪೂರ್ಣಗೊಳ್ಳುತ್ತದೆ. ಇದು ಮಗುವಿನ ಬೆಳವಣಿಗೆಗೆ(growth of baby) ನೆರವು ನೀಡುತ್ತದೆ. ಇದು ಸುಮಾರು ಅರ್ಧ ಕಿಲೋಗ್ರಾಂನಿಂದ ಒಂದು ಕಿಲೋ ತೂಕವಿರುತ್ತದೆ. ಮಗುವಿನ ಜನನದ ನಂತರ, ಜರಾಯುವನ್ನು ಕತ್ತರಿಸಿ ತೆಗೆದುಹಾಕಲಾಗುತ್ತದೆ. 

ಪ್ಲಾಸೆಂಟಾವನ್ನು ವೈದ್ಯಕೀಯ ತ್ಯಾಜ್ಯವೆಂದು (medical waste) ಪರಿಗಣಿಸಲಾಗುತ್ತದೆ. ಆದಾಗ್ಯೂ, ಕೆಲವು ಸಮುದಾಯಗಳಲ್ಲಿ ಈ ಕಾರ್ಡ್ ಟಿಶ್ಯೂ ನ ಒಂದು ತುಂಡನ್ನು ಸಂರಕ್ಷಿಸಲಾಗುತ್ತದೆ, ಒಣಗಿಸಲಾಗುತ್ತದೆ ಮತ್ತು ಮಗು ಬೆಳೆದಾಗ ಅದೃಷ್ಟದ ತಾಯತವಾಗಿ ಮಾಡಿ ಇದನ್ನು ಧರಿಸಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ, ಪ್ಲಾಸೆಂಟಾ ಎನ್ಕ್ಯಾಪ್ಸುಲೇಶನ್ ಕೂಡ ಮಾಡಲಾಗುತ್ತೆ. 

Tap to resize

ಪ್ಲಾಸೆಂಟಾ ಎನ್ ಕ್ಯಾಪ್ಸುಲೇಶನ್ (Placenta encapsulation) ಎಂದರೇನು?: ಈ ಪ್ರಕ್ರಿಯೆಯಲ್ಲಿ, ಹೆರಿಗೆಯ ನಂತರ ಇಡೀ ಜರಾಯುವನ್ನು (placenta) ಮಾತ್ರೆಗಳಾಗಿ ಪರಿವರ್ತಿಸಲಾಗುತ್ತದೆ. ಪ್ಲಾಸೆಂಟಾವನ್ನು ತಿನ್ನುವ ಅನೇಕ ವಿಧಾನಗಳಲ್ಲಿ ಇದು ಒಂದಾಗಿದೆ. ಪ್ಲಾಸೆಂಟಾ ತಿನ್ನಲು ಬಯಸುವ ಸುಮಾರು 70 ರಿಂದ 80 ಪ್ರತಿಶತದಷ್ಟು ತಾಯಂದಿರು ಈ ವಿಧಾನವನ್ನು ಆರಿಸಿಕೊಳ್ಳುತ್ತಾರೆ. 

ಈ ಮಾತ್ರೆ ತಿನ್ನುವುದರಿಂದ ಆಕ್ಸಿಟೋಸಿನ್ ಹಾರ್ಮೋನ್ (oxytocin hormone) ಬಿಡುಗಡೆಯಾಗುತ್ತದೆ, ಇದು ಒತ್ತಡವನ್ನು ನಿವಾರಿಸುತ್ತೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಪ್ಲಾಸೆಂಟಾವನ್ನು ಸೇವಿಸಿದ ನಂತರ, ತಾಯಿಯ ಸ್ತನದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತೆ ಮತ್ತು ಅವರ ನೋವು ಮತ್ತು ಆಯಾಸವನ್ನು ಸಹ ನಿವಾರಣೆಯಾಗುತ್ತೆ ಎಂದು ಸಹ ಹೇಳಲಾಗುತ್ತೆ. ಆದರೆ ಇದು ಸಂಪೂರ್ಣ ಸತ್ಯ ಎಂದು ಹೇಳಲು ಸಾಧ್ಯವಿಲ್ಲ. 

ಇದು ಸಂಪೂರ್ಣವಾಗಿ ನಿಜವಲ್ಲ: ಪ್ಲಾಸೆಂಟಾದಿಂದ ತಯಾರಿಸಿದ ಕ್ಯಾಪ್ಸೂಲ್ ಸೇವನೆಯಿಂದ, ತಾಯಿಗೆ ಎಲ್ಲಾ ಪೋಷಕಾಂಶಗಳು ಸಿಗುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಪ್ಲಾಸೆಂಟಲ್ ಎನ್ಕ್ಯಾಪ್ಸುಲೇಶನ್ ಖಚಿತಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ. ಸೀಸ ಮತ್ತು ಪಾದರಸದಂತಹ ಜೀವಾಣುಗಳಿಗೆ ಸಂಬಂಧಿಸಿದ ಕಾರಣ ಇದನ್ನು ಕಲುಷಿತ ಅಂಗವೆಂದು ಪರಿಗಣಿಸಲಾಗುತ್ತೆ. ಇದು ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳಿಗೆ (virus and bacteria) ಕಾರಣವಾಗಬಹುದು, ಆದ್ದರಿಂದ ಈ ಪ್ಲಾಸೆಂಟಾ ಎನ್ಕ್ಯಾಪ್ಸುಲೇಶನ್ ಸೇವಿಸೋದು ನಿಜವಾಗಿಯೂ ಸುರಕ್ಷಿತವೇ ಎಂದು ಇನ್ನೂ ಖಚಿತವಾಗಿಲ್ಲ.

ಪ್ರಕರಣ ವರದಿಯಾಗಿದೆ: 2016 ರಲ್ಲಿ ಶಿಶುವಿಗೆ ಗ್ರೂಪ್ ಬಿ ಸ್ಟ್ರೆಪ್ಟೊಕಾಕಸ್ ಸೋಂಕು ಇರುವುದು ಪತ್ತೆಯಾದ ಪ್ರಕರಣ ವರದಿಯಾದ ನಂತರ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಪ್ಲಾಸೆಂಟಾ ಎನ್ ಕ್ಯಾಪ್ಸುಲೇಶನ್ ವಿರುದ್ಧ ಧನಿ ಎತ್ತಿತು. ಈ ಸೋಂಕು ತಾಯಿಯಲ್ಲಿ ಜರಾಯು ಎನ್ ಕ್ಯಾಪ್ಸುಲೇಶನ್ ನಿಂದ ಉಂಟಾಗುತ್ತದೆ. ಈ ಸೋಂಕು ತಾಯಿಯಿಂದ ಮಗುವಿಗೆ ಹರಡಿತು. ಈ ಬ್ಯಾಕ್ಟೀರಿಯಾ ಅಪಾಯಕಾರಿ ಮತ್ತು ತಾಯಿಯ ಎದೆ ಹಾಲಿನಿಂದ ಮಗುವನ್ನು ತಲುಪುತ್ತದೆ.

ತಾಯಿ ಮತ್ತು ಮಗು ಅಪಾಯದಲ್ಲಿದ್ದಾರೆ: ಮಯೋಕ್ಲಿನಿಕ್ ಪ್ರಕಾರ, ಪ್ಲಾಸೆಂಟಾ ತಿನ್ನುವುದರಿಂದ ತಾಯಿ ಮತ್ತು ಮಗು ಇಬ್ಬರೂ ಅಪಾಯಕ್ಕೆ ಒಳಗಾಗಬಹುದು. ಜರಾಯುವನ್ನು ಹಬೆಯಲ್ಲಿ ಬೇಯಿಸಿ ನಂತರ ಒಣಗಿಸುವ ಮೂಲಕ ಕ್ಯಾಪ್ಸುಲ್ಗಳನ್ನು ತಯಾರಿಸಲಾಗುತ್ತದೆ. ಕೆಲವರು ಜರಾಯುವನ್ನು ಹಸಿಯಾಗಿ, ಬೇಯಿಸಿ ಅಥವಾ ಸ್ಮೂಥಿಯಲ್ಲಿ ಹಾಕಿ ತಿನ್ನುತ್ತಾರೆ. ಆದಾಗ್ಯೂ, ಈ ವಿಧಾನಗಳು ಜರಾಯುದಲ್ಲಿರುವ ಎಲ್ಲಾ ಸಾಂಕ್ರಾಮಿಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದಿಲ್ಲ.

ಪ್ಲಾಸೆಂಟಾ ಎನ್ಕ್ಯಾಪ್ಸುಲೇಶನ್ ಪ್ರಸವಾನಂತರದ ಖಿನ್ನತೆಯನ್ನು ತಡೆಯುತ್ತದೆ, ಪ್ರಸವಾನಂತರದ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಹಾಲಿನ ಪೂರೈಕೆಯನ್ನು ಹೆಚ್ಚಿಸುತ್ತದೆ ಎಂದು ಕೆಲವರು ಹೇಳುತ್ತಾರೆ, ಆದರೆ ಇದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ.
 

Latest Videos

click me!