ಹಾಲು ಆರೋಗ್ಯಕ್ಕೆ ಮಾತ್ರವಲ್ಲ, ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಹಸಿ ಹಾಲಿನಲ್ಲಿ ವಿಟಮಿನ್-ಬಿ, ಆಲ್ಫಾ ಹೈಡ್ರಾಕ್ಸಿ ಆಸಿಡ್, ಕ್ಯಾಲ್ಸಿಯಂ ಮತ್ತು ಇತರ ಪ್ರಬಲ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದ್ದು, ಇದು ಚರ್ಮಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ಹಸಿ ಹಾಲು ಚರ್ಮದ ಕೋಶಗಳನ್ನು ಆಳವಾಗಿ ಪೋಷಣೆ ಮಾಡುತ್ತದೆ ಮತ್ತು ದಿನವಿಡೀ ಚರ್ಮವನ್ನು ತೇವಾಂಶದಿಂದ ಇರುವಂತೆ ಮಾಡುತ್ತದೆ.
ಚರ್ಮವು ಎಣ್ಣೆಯ ಅಂಶದಿಂದ ಕೂಡಿದ್ದರೆ ಮತ್ತು ಮುಖದಲ್ಲಿ ಒಂದು ಪಿಂಪಲ್ ಆಗಿದ್ದರೆ, ಹಸಿ ಹಾಲನ್ನು ಬಳಸಿ ಸಮಸ್ಯೆ ನಿವಾರಿಸಬಹುದು.ಪಿಂಪಲ್ ಅನ್ನು ಹಸಿ ಹಾಲು ಬಳಸುವ ಮೂಲಕ ತೆಗೆದು ಹಾಕಬಹುದು. ಎಣ್ಣೆಯುಕ್ತ ಚರ್ಮದಿಂದ ಎಣ್ಣೆಯನ್ನು ಹೊರತೆಗೆಯಲು ಹಸಿ ಹಾಲು ಉಪಯುಕ್ತಮತ್ತು ದೊಡ್ಡ ಚರ್ಮದ ಪೊರೆಗಳನ್ನು ಬಿಗಿಯಾಗಿಸುತ್ತದೆ.
ಮೃದುವಾದ ಮತ್ತು ಕಲೆರಹಿತ ತ್ವಚೆ ಪಡೆಯಲು ಬಯಸುವುದಾದರೆ ಹಸಿ ಹಾಲನ್ನು ಬಳಸಿ. ಹಸಿ ಹಾಲಿನಿಂದ ಚರ್ಮಕ್ಕೆ ಏನೆಲ್ಲಾ ಲಾಭಗಳಿವೆ ಎಂದು ತಿಳಿಯೋಣ.
ಚರ್ಮವನ್ನು ಹೈಡ್ರೇಟ್ ಮಾಡುತ್ತದೆ:ಹಸಿ ಹಾಲು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಚರ್ಮ ಒಣಗುವುದನ್ನು ನಿವಾರಿಸುತ್ತದೆ. ಹಸಿ ಹಾಲನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿಯೂ ಉಳಿಯುತ್ತದೆ. ಹಸಿ ಹಾಲು ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಚರ್ಮದ ಒಣ ಭಾಗವನ್ನು ತೆಗೆದುಹಾಕುವುದು. ಇದನ್ನು ಫೇಸ್ ಮಾಯಿಶ್ಚರ್ ಆಗಿಯೂ ಬಳಸಬಹುದು.
ಮುಖಕ್ಕೆ ಮಾಯಿಶ್ಚರೈಸ್ ಮಾಡುತ್ತದೆ: .ಹಸಿ ಹಾಲಿನಲ್ಲಿ ಲ್ಯಾಕ್ಟೋಸ್, ಪ್ರೋಟೀನ್, ಕೊಬ್ಬು, ಕೌಲ್ಸಿಯಮ್, ವಿಟಮಿನ್ ಎ, ಬಿ-12, ಡಿ ಮತ್ತು ಸತು ಮೊದಲಾದ ಪೋಷಕಾಂಶಗಳು ನಮ್ಮ ಚರ್ಮಕ್ಕೆ ತುಂಬಾ ಉಪಯುಕ್ತವಾಗಿವೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶವನ್ನು ನೀಡುವ ಮೂಲಕ ಚರ್ಮಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ನೀಡಲಾಗುತ್ತದೆ.
ಮೊಡವೆನಿವಾರಣೆ :ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದಲ್ಲಿ ಎಣ್ಣೆಅಂಶ ಇರುವುದಿಲ್ಲ, ಇದರಿಂದ ತೊಂದರೆಯಾಗುವುದಿಲ್ಲ. ಮುಖಕ್ಕೆ ಸ್ವಲ್ಪ ಉಪ್ಪು ಹಾಕಿದರೆ ಮೊಡವೆ ಕೂಡ ಕಡಿಮೆಯಾಗಬಹುದು.
ಮುಖವನ್ನು ಎಕ್ಸ್ ಫೋಲಿಯೇಟ್ ಮಾಡುತ್ತದೆ:ಹಸಿ ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ಸತ್ತ ಚರ್ಮವನ್ನು ಹೊರ ಹಾಕಿಸುತ್ತದೆ. ಹಸಿ ಹಾಲು ಮುಖದ ನೈಸರ್ಗಿಕ ಕಾಂತಿಯನ್ನು ಕಾಪಾಡುತ್ತದೆ. ಹಸಿ ಹಾಲಿನಲ್ಲಿರುವ ಸಾಮಾಗ್ರಿಗಳು ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ.
ಹಸಿ ಹಾಲು ಚರ್ಮವು ಕಾಂತಿಯುತವಾಗಿ, ಸುಕ್ಕುರಹಿತ ಮತ್ತು ಯೌವನಯುತ ಚರ್ಮಪಡೆಯಲು ತುಂಬಾ ಪ್ರಯೋಜನಕಾರಿ.