ಈ ನೈಸರ್ಗಿಕ ವಸ್ತು ಬಳಸಿ ಕೂದಲಿಗೆ ಕಲರಿಂಗ್ ಮಾಡಿ...

Suvarna News   | Asianet News
Published : Dec 28, 2020, 03:58 PM IST

ಕೂದಲಿಗೆ ನೈಸರ್ಗಿಕ ಬಣ್ಣ ಹಚ್ಚಿ ಕೊಡಲು ಇಷ್ಟ ಪಡುವವರು ದುಬಾರಿ ಹಣ ವ್ಯಯಿಸದೇ ಮನೆಯಲ್ಲೇ ತಯಾರಿಸಬಹುದು. ಕೂದಲನ್ನು ರಾಸಾಯನಿಕ ವಸ್ತುಗಳಾದ ಅಮೋನಿಯಾ ಮತ್ತು ಪ್ಯಾರಾಬಿನ್‌ಗಳಂತ ರಾಸಾಯನಿಕ ಬಣ್ಣಗಳನ್ನು ಹೊಂದಿರುವ ಹೇರ್ ಡೈಗಳಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ನಮ್ಮ ಮನೆಗಳಲ್ಲಿ ಸಿಗುವ ನೈಸರ್ಗಿಕ ಬಣ್ಣಗಳು ಅಂದರೆ ಅಡುಗೆಮನೆಯಲ್ಲಿ ಸಿಗುವ ವಸ್ತುಗಳಿಂದ ನಾವು ನಮ್ಮ ಕೂದಲಿನ ಆರೈಕೆ ಜೊತೆ ಹೇಗೆ ಕೂದಲಿಗೆ ನೈಸರ್ಗಿಕ ಬಣ್ಣಗಳನ್ನು ಹಚ್ಚುವುದು ಎನ್ನುವ ಬಗ್ಗೆ  ತಿಳಿಯೋಣ...   

PREV
19
ಈ ನೈಸರ್ಗಿಕ ವಸ್ತು ಬಳಸಿ ಕೂದಲಿಗೆ ಕಲರಿಂಗ್ ಮಾಡಿ...

ಕ್ಯಾರೆಟ್ : ಕೇಸರಿ ಬಣ್ಣ ಕೂದಲಿಗೆ ಬರಬೇಕೆಂದರೆ ಕ್ಯಾರೆಟ್ ತೆಗೆದುಕೊಳ್ಳಿ. ಮೊದಲು ನಿಮ್ಮ ಕೂದಲಿನ ಬಣ್ಣ ಯಾವುದು ಇದೆ ಅದರ ಮೇಲೆ ಬರುತ್ತದೆ. ಒಂದು ಕಪ್ ಕ್ಯಾರಟ್ ಜ್ಯೂಸ್ 2 ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಹಾಕಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಪ್ಲಾಸ್ಟಿಕ್ ನಿಂದ ರಾಪ್ ಮಾಡಿ ಒಂದು ಗಂಟೆ ಬಿಟ್ಟು ಆಪಲ್ ಸೈಡರ್ ವಿನಿಗರ್ ಅನ್ನು ನೀರಿಗೆ ಹಾಕಿ ಅದರಿಂದ ತಲೆ ಕೂದಲು ತೊಳೆಯಬೇಕು. ಅವಾಗ ಬಣ್ಣ ನಿಲ್ಲುತ್ತದೆ. ಶ್ಯಾಂಪೂ ಬಳೆಕೆ ಬೇಡ. ಈ ಬಣ್ಣ ಅಷ್ಟಾಗಿ ಬಂದಿರದಿದ್ದರೆ ಪುನಃ ಮಾಡಿ.

29

ಬೀಟ್ರೂಟ್ : ಕಡು ಕೆಂಬಣ್ಣ ಬರಬೇಕೆಂದರೆ ಒಂದು ಕಪ್ ಬೀಟ್ರೂಟ್ ಜ್ಯೂಸ್ ತೆಗೆದುಕೊಂಡು ಅದಕ್ಕೆ 2 ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು, ತಲೆಗೆ ಹಚ್ಚಿ ಪ್ಲಾಸ್ಟಿಕ್ ರಾಪ್ನಿಂದ ಸುತ್ತಿ ಒಂದು ಗಂಟೆ ಕಾಲ ಹಾಗೆ ಬಿಟ್ಟು ಸ್ನಾನ ಮಾಡಿ. ಈ ಬಣ್ಣ ಹೆಚ್ಚೆಂದರೆ ಕೆಲವು ವಾರ ಇರುತ್ತದೆ. 

39

ಹೆನ್ನಾ ಅಥವಾ ಮದರಂಗಿ ಎಲೆ ಇದರ ಮಿಶ್ರಣ ಹೆಚ್ಚಿನವರು ಬಳಸುತ್ತಾರೆ. ಎಲೆ ಸಿಕ್ಕರೆ ಎಲೆಯನ್ನು ತೊಳೆದು ಅರೆದು ಹಾಗೆ ತಲೆಯ ಕೂದಲಿಗೆ ಹಚ್ಚಬಹುದು. ಅಂಗಡಿಯಲ್ಲಿ ಸಿಗುವ ರೆಡಿ ಹೆನ್ನಾ  1/2 ಕಪ್  ತೆಗೆದು ಕೊಂಡರೆ 1/4  ಕಪ್ ನೀರು ತೆಗೆದು ಕೊಂಡು ಮಿಕ್ಸ್ ಮಾಡಿ ಆ ಮಿಶ್ರಣವನ್ನು ರಾತ್ರಿ ಪೂರ್ತಿ ಇಟ್ಟು ಬೆಳಗ್ಗೆ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಿ . ಇಲ್ಲಿ ತಲೆಗೆ ಹೆನ್ನಾ ಹಚ್ಚುವ ಮೊದಲು ಹಣೆಗೆ ಎಣ್ಣೆ ಅಥವಾ ಬ್ಯಾಂಡ್ ಕಟ್ಟಿ ಹಚ್ಚಿ ಇಲ್ಲವಾದಲ್ಲಿ ಹಣೆಗೆ ಬಣ್ಣ ಹತ್ತುತ್ತದೆ. ಕಂಡಿಷನರ್ ಹಾಕುವುದು ಬೇಡ. 

49

ನಿಂಬೆಹಣ್ಣು:  ನಿಂಬೆಹಣ್ಣಿನ ರಸವನ್ನು ತಲೆಗೆ ಹಚ್ಚುವುದರಿಂದ ತಲೆಯಲ್ಲಿ ಹೊಟ್ಟು ಆಗುವುದನ್ನು ತಡೆಯುತ್ತದೆ. ಈ ರಸವನ್ನು ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ ಕೂದಲಿನ ನೈಸರ್ಗಿಕ ಬಣ್ಣ ಕೊಂಚ ಮಬ್ಬಾಗುತ್ತದೆ. 

59

ಕಾಫಿ:  ಇನ್ಸ್ಟಂಟ್ ಕಾಫಿ ಅಥವಾ ದಪ್ಪ ಕಾಫಿ ಡಿಕಾಕ್ಷನ್ ಹೇರ್ ಡೈ ಯಾಗಿ ಉಪಯೋಗಿಸಬಹುದು. ಇನ್ಸ್ಟಂಟ್ ಕಾಫಿ ಆದರೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಹಚ್ಚಿ. ತಲೆಗೆ ಹಚ್ಚುವ ಮೊದಲು ಕೂದಲು ಸ್ವಲ್ಪ ಒದ್ದೆಯಾಗಿರಬೇಕು. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಆದರೆ ಈ ಬಣ್ಣ ಹೆಚ್ಚು ಕಾಲ ಉಳಿಯುವುದಿಲ್ಲ.

69

ಈ ಬಣ್ಣಗಳು ಹೆಚ್ಚು ಕಾಲ ಉಳಿಯಬೇಕು ಅಂದರೆ 1. ನಾವು ಹೇರ್ ಡ್ರಾಯರ್ , ಕರ್ಲಿಂಗ್ , ಸ್ಟ್ರೈಟನೆರ್ ಆದಷ್ಟು ಬಳಕೆ ಕಡಿಮೆಮಾಡಬೇಕು. ಉಪಯೋಗಿಸುವಾಗ ಥರ್ಮಲ್ ಪ್ರೊಟೆಕ್ಟ್ ಬಳಸಿ. 

79

ಪದೇ ಪದೇ ತಲೆಗೆ ಸ್ನಾನ ಮಾಡುವುದನ್ನು ಕಡಿಮೆ ಮಾಡಿ. ಇದರಿಂದ ಕೂದಲಿನ ಬಣ್ಣ ಮಸುಕಾಗುತ್ತ ಬರುತ್ತದೆ. 

89

ಕ್ಲೋರಿನ್ ನೀರನ್ನು ಬಳಸುವಾಗ ಅದಕ್ಕೆ ಫಿಲ್ಟರ್ ಬಳಸಿ ಆ ನೀರನ್ನು ತಲೆ ಕೂದಲು ತೊಳೆಯಲು ಬಳಸಿ ಇಲ್ಲವಾದಲ್ಲಿ ತಲೆಗೆ ಹಚ್ಚಿರುವ ಬಣ್ಣ ಹೆಚ್ಚು ಕಾಲ ಉಳಿಯುವುದಿಲ್ಲ. 

99

ಈ ರೀತಿ ನೈಸರ್ಗಿಕ ಹೇರ್ ಡೈ ಮಾಡಲು ಆಗದವರು ಆರ್ಗಾನಿಕ್ ಹೇರ್ ಡೈ ಅಂಗಡಿಗಳಲ್ಲಿ ಸಿಗುತ್ತದೆ ಅವುಗಳನ್ನು ಬಳಸಿ ದೀರ್ಘ ಕಾಲದವರೆಗೆ ಕೂದಲಿನ ಬಣ್ಣ ಉಳಿಯುವಂತೆ ಮಾಡಬಹುದು. 

click me!

Recommended Stories