ಕೆಮಿಕಲ್ ಭಯ ಇಲ್ಲ, ಸೋಂಕೂ ಇಲ್ಲ: ನೈಸರ್ಗಿಕ ಕ್ಲೀನರ್‌ಗಳು ಮಾಡುತ್ತೆ ಕಮಾಲ್..!

First Published Dec 10, 2020, 4:38 PM IST

ಮಹಿಳೆಯರು ತಮ್ಮ ಮನೆಗಳನ್ನು ಯಾವುದೇ ಸೋಂಕುಗಳಿಂದ ಮುಕ್ತವಾಗಿರಿಸುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ನೀವು ಸಹ ಅಂತಹವರಲ್ಲಿ ಒಬ್ಬರಾಗಿದ್ದೀರಾ? ಹಾಗಿದ್ದರೆ ನಿಮಗಾಗಿಯೇ ಈ ಟಿಪ್ಸ್. ನಿಮ್ಮ ಮನೆಯಲ್ಲಿ ನೀವು ಸುಲಭವಾಗಿ ಕಂಡುಕೊಳ್ಳಬಹುದಾದ ಐದು ನೈಸರ್ಗಿಕ ಸೋಂಕು ನಿವಾರಕ ವಸ್ತುಗಳ ಪಟ್ಟಿ ಇಲ್ಲಿದೆ,  ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲು ನೀವು ಇದನ್ನು ಬಳಸಬಹುದು.

ಬಿಳಿ ವಿನೆಗರ್:ಅಸಿಟಿಕ್ ಆಮ್ಲ ಮತ್ತು ನೀರಿನಿಂದ ತಯಾರಿಸಲ್ಪಟ್ಟ ಬಿಳಿ ವಿನೆಗರ್ ಪವರ್ ಕ್ಲೀನರ್ ಆಗಿದೆ. ಇದು ಜಿಡ್ಡಿನ ಮತ್ತು ಮೊಂಡುತನದ ಕೊಳೆಯನ್ನು ಸುಲಭವಾಗಿ ಇನ್ನಿಲ್ಲದಂತೆ ಮಾಡುತ್ತದೆ. ಇದರಲ್ಲಿ ಆಮ್ಲೀಯತೆ ಅಧಿಕವಾಗಿರುವುದರಿಂದ, ಇದು ಮೇಲ್ಮೈ ಬ್ಯಾಕ್ಟೀರಿಯಾವನ್ನು ಸುಲಭವಾಗಿ ತೆಗೆದುಹಾಕುತ್ತದೆ.
undefined
ಅಂಗಡಿಯಲ್ಲಿ ಸಿಗುವಂತಹ ರಾಸಾಯನಿಕ ಬಳಕೆ ಮಾಡಿರುವ ಕ್ಲೀನರ್ ಗಳಿಗಿಂತ ಇದು ಹೆಚ್ಚು ಪರಿಣಾಮಕಾರಿ ಎಂದು ನಾವು ಹೇಳಲಾಗುವುದಿಲ್ಲ ಆದರೆ ನೈಸರ್ಗಿಕವಾಗಿ ಮನೆಯನ್ನು ಸ್ವಚ್ಛವಾಗಿಡಲು ಬಯಸುವವರಿಗೆ ಅಥವಾ ಮನೆಯಲ್ಲಿ ಕ್ವೀನರ್ ಇರದೇ ಇರುವ ಸಂದರ್ಭದಲ್ಲಿ ನೀವು ಬಿಳಿ ವಿನೆಗರ್ ನ್ನು ಆಯ್ಕೆ ಮಾಡಿಕೊಳ್ಳಬಹುದು.
undefined
ವೋಡ್ಕಾ :ಹೌದು ವೋಡ್ಕಾ 40 ಪ್ರತಿಶತದಷ್ಟು ಆಲ್ಕೋಹಾಲ್ ಆಗಿದೆ ಮತ್ತು ಆದ್ದರಿಂದ ಇದನ್ನು ಶಿಲೀಂಧ್ರವನ್ನು ತೆಗೆದುಹಾಕಲು ಸೋಂಕುನಿವಾರಕವಾಗಿ ಬಳಸಬಹುದು. ವೋಡ್ಕಾ ಸುಲಭವಾಗಿ ಕಲೆಗಳನ್ನು ತೆಗೆದುಹಾಕಬಹುದು.
undefined
ಜೊತೆಗೆ ನೆಲ ಮತ್ತು ವಸ್ತುಗಳನ್ನು ಹೊಳೆಯುವಂತೆ ಮಾಡುತ್ತದೆ. ಇದು ಬಟ್ಟೆಗಳನ್ನು ಸಹ ರಿಫ್ರೆಶ್ ಮಾಡುತ್ತದೆ ಮತ್ತು ದೀರ್ಘಕಾಲದ ವಾಸನೆಯನ್ನು ಹೊಂದಿರುವುದಿಲ್ಲ. ನೆಲ ಕ್ಲೀನ್ ಮಾಡುವಾಗ ಸ್ವಲ್ಪ ವೋಡ್ಕಾ ಬಳಕೆ ಮಾಡಿದರೆ ನೆಲ ಸಂಪೂರ್ಣವಾಗಿ ಕ್ಲೀನ್ ಆಗುತ್ತದೆ.
undefined
ನಿಂಬೆ:ತುಕ್ಕು ಹಿಡಿದಿರುವ ಫಿಕ್ಚರ್ಗಳು ಮತ್ತು ನಲ್ಲಿಗಳ ಬಗ್ಗೆ ಸ್ವಲ್ಪ ಗಮನ ಹರಿಸುವ ಸಮಯ ಇದು. ತುಕ್ಕುಗಳಿಗೆ ಚಿಕಿತ್ಸೆ ನೀಡಲು, ನಿಂಬೆ ಒಂದು ಉತ್ತಮ ಸಾಧನವಾಗಿದೆ. ಇದು ಕಲೆಗಳ ಮೇಲೆ ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತದೆ, ರಂಧ್ರಗಳಿಲ್ಲದ ಮೇಲ್ಮೈಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಲೋಹದ ಮೇಲ್ಮೈಗಳನ್ನು ಹೊಳೆಯುವಂತೆ ಮಾಡುತ್ತದೆ.
undefined
ನಿಂಬೆಯಿಂದ ಲೋಹದ ಪಾತ್ರೆಗಳನ್ನು ತೊಳೆದರೆ ಅದರ ಮೇಲೆ ಉಂಟಾಗಿರುವ ಕಲೆಗಳು ನಿವಾರಣೆಯಾಗಿ ಪಾತ್ರೆಗಳಿಗೆ ಹೆಚ್ಚಿನ ಹೊಳಪನ್ನು ನೀಡುತ್ತದೆ. ಇದು ನೀವು ಟ್ರೈ ಮಾಡಲೇಬೇಕಾದ ಒಂದು ಸರಳ ಉಪಾಯವಾಗಿದೆ.
undefined
ಸ್ಟೀಮ್ :ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಸ್ಟೀಮ್ ಒಂದು ಪ್ರಬಲ ಮಾರ್ಗವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನೀರು ಮತ್ತು ಶಾಖದ ಸರಳ ಸಂಯೋಜನೆಯು ರಾಸಾಯನಿಕ ಮುಕ್ತವಾಗಿ ಸೋಂಕುನಿವಾರಣೆ ಮಾಡುತ್ತದೆ. ನಿಮ್ಮ ಮನೆಯನ್ನು ಸೋಂಕುನಿವಾರಕಗೊಳಿಸಲು ಇದು ಉತ್ತಮ ಮಾರ್ಗವಾಗಿದೆ.
undefined
click me!