ಮಾಡೆಲ್, ಡ್ಯಾನ್ಸರ್, ಡಾಕ್ಟರ್ ತೇಜಸ್ವಿನಿ ಮನೋಗ್ನಾ IAS ಆಫೀಸರ್ ಜೊತೆ ಎಂಗೇಜ್ಡ್!

Published : Sep 14, 2023, 12:47 PM IST

ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಪ್ರವೃತ್ತಿಯಲ್ಲಿ ಮಾಡೆಲ್ ಆಗಿರುವ 2019 ರ ಮಿಸ್ ಅರ್ಥ್ ಇಂಡಿಯಾ ಟೈಟಲ್ ವಿನ್ನರ್ ಆಗಿರುವ ದೇಶದ ಬಹುಮುಖ ಪ್ರತಿಭೆ, ಸಾವಿರಾರು ಜನರಿಗೆ ಪ್ರೇರಣೆಯಾಗುವ ಸರಳ ಸುಂದರಿ ಹೈದಬಾರದ್ ಹುಡುಗಿ ತೇಜಸ್ವಿನಿ ಮನೋಗ್ನಾ   

PREV
110
ಮಾಡೆಲ್, ಡ್ಯಾನ್ಸರ್, ಡಾಕ್ಟರ್ ತೇಜಸ್ವಿನಿ ಮನೋಗ್ನಾ IAS ಆಫೀಸರ್ ಜೊತೆ ಎಂಗೇಜ್ಡ್!

ತೇಜಸ್ವಿನಿ ಮನೋಗ್ನಾ (Tejaswini Manogna) ಭಾರತೀಯ ಮಾಡೆಲ್ ಮತ್ತು ಸೌಂದರ್ಯ ಸ್ಪರ್ಧೆಯ ಸ್ಪರ್ಧೆಯ ವಿಜೇತರೂ ಹೌದು. ವೃತ್ತಿಯಲ್ಲಿ ವೈದ್ಯರಾಗಿರುವ ಅವರು ಡಿವೈನ್ ಮಿಸ್ ಅರ್ಥ್ ಇಂಡಿಯಾ 2019 ಕಿರೀಟವನ್ನು ಗೆದ್ದರು ಮತ್ತು ಫಿಲಿಪೈನ್ಸ್‌ನ ಪರನಾಕ್ ನಗರದಲ್ಲಿ ನಡೆದ ಮಿಸ್ ಅರ್ಥ್ ಸ್ಪರ್ಧೆಯ 19 ನೇ ಎಡಿಶನ್ ನಲ್ಲಿ ಭಾರತವನ್ನು ಪ್ರತಿನಿಧಿದ ನಮ್ಮ ದೇಶದ ಹೆಮ್ಮೆ ಇವರು. 
 

210

ವೃತ್ತಿಯಲ್ಲಿ ವೈದ್ಯೆಯಾಗಿರುವ ತೇಜಸ್ವಿನಿ, ತಮ್ಮ ಸಾಮಾಜಿಕ ಕಾರ್ಯಗಳು, ಮಾಡೆಲಿಂಗ್ (Modeling), ನೃತ್ಯಗಾರಿಕೆ, ಯೋಗ, ಹಾಡುಗಾರಿಕೆಯಿಂದಲೇ ಗುರುತಿಸಿಕೊಂಡ ಸರಳ ಸುಂದರಿ. ಇವರ ಕೆಲಸಗಳು ನೂರಾರು ಯುವಜನತೆಗೆ ಪ್ರೇರಣೆ ನೀಡುವಂತದ್ದು. ಈ ಸುಂದರಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 
 

310

ಡಾ ತೇಜಸ್ವಿನಿ ಮನೋಗ್ನಾ 1994ರ ಮೇ 19ರಂದು ತೆಲಂಗಾಣದ ಹೈದರಾಬಾದ್‌ನಲ್ಲಿ ಜನಿಸಿದರು. ಅವರು ರೋಸರಿ ಕಾನ್ವೆಂಟ್ ಹೈಸ್ಕೂಲ್ನಲ್ಲಿ ಶಾಲಾ ಶಿಕ್ಷಣ ಪಡೆದರು., ಭಾರತೀಯ ಸಶಸ್ತ್ರ ಪಡೆಗಳ ಯುವ ವಿಭಾಗವಾದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ ಸದಸ್ಯರಾಗಿದ್ದರು. 16 ನೇ ವಯಸ್ಸಿನಲ್ಲಿ, ಅವರು ಭಾರತೀಯ ವಾಯುಪಡೆ, ಭೂಸೇನೆ ಮತ್ತು ನೌಕಾಪಡೆಯ 1.3 ಮಿಲಿಯನ್ ಕೆಡೆಟ್‌ಗಳಲ್ಲಿ  'ಭಾರತದ ಅತ್ಯುತ್ತಮ ಎನ್ಸಿಸಿ ಕೆಡೆಟ್' ಮತ್ತು 'ಅತ್ಯುತ್ತಮ ಶೂಟರ್'  (best shooter) ಎಂದು ಆಯ್ಕೆಯಾಗಿದ್ದರು. 
 

410

ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ ಸಭೆಯಲ್ಲಿ ತೇಜಸ್ವಿನಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು . 2017ರಲ್ಲಿ, ಅವರು ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯದಲ್ಲಿ ಪದವಿ (MBBS) ಪಡೆದರು. ಸದ್ಯ ವೈದ್ಯೆಯಾಗಿ ಜನರ ಸೇವೆ ಮಾಡುತ್ತಿದ್ದಾರೆ ತೇಜಸ್ವಿನಿ. 
 

510

ಮನೋಗ್ನಾ ಅದ್ಭುತ ಭರತನಾಟ್ಯ (Bharathanatya Dancer) ಕಲಾವಿದೆಯಾಗಿದ್ದು. ಅವರು ದೂರದರ್ಶನ ಮತ್ತು ಭಾರತದ ಸಂಸ್ಕೃತಿ ಸಚಿವಾಲಯದಿಂದ ಶ್ರೇಣೀಕೃತ ವೃತ್ತಿಪರ ನೃತ್ಯಗಾರ್ತಿಯಾಗಿ ರಾಷ್ಟ್ರೀಯ ಮಟ್ಟದ ಮಾನ್ಯತೆ ಪಡೆದಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರೆದುರು ಸಹ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.
 

610

ಅದ್ಭುತ ನೃತ್ಯಗಾರ್ತಿ ಜೊತೆಗೆ ಇವರು ಗಾಯಕಿಯೂ ಹೌದು. ಇವರು ದೇಶ ವಿದೇಶಗಳಲ್ಲಿ ಹಲವು ಸರಣಿ ಸಂಗೀತ ಕಚೇರಿಗಳು ಮತ್ತು ಕಾರ್ಯಾಗಾರಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಇವರು ಹಾಡಿರುವ ಮತ್ತು ನಟಿಸಿರುವ ಆಲ್ಬಂ ಹಾಡುಗಳು (Album Song) ಸಹ ತೆರೆ ಕಂಡಿವೆ. 
 

710

ತೇಜಸ್ವಿನಿ ಬಹುಮುಖ ಪ್ರತಿಭೆ ಅನ್ನೋದರಲ್ಲಿ ಎರಡು ಮಾತಿಲ್ಲ, ಯಾಕಂದ್ರೆ ಇವರು ಯೋಗ ಟೀಚರ್ (Yoga teacher) ಕೂಡ ಹೌದು. ಯೋಗ ತರಬೇತಿಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ ಮತ್ತು ಹೈದರಾಬಾದ್ನಲ್ಲಿ ಯೋಗ ತರಬೇತುದಾರರಾಗಿ ಕೆಲಸ ಮಾಡಿರುವ ಅನುಭವ ಸಹ ಹೊಂದಿದ್ದಾರೆ. 
 

810

2017 ರಲ್ಲಿ, ಮನೋಗ್ನಾ ಮಿಸ್ ದಿವಾ - 2017 ಸ್ಪರ್ಧೆಗಾಗಿ ಆಡಿಷನ್ ನೀಡಿದ್ದರು. ಮಿಸ್ ಇಂಡಿಯಾ ಸ್ಪರ್ಧೆಯನ್ನು ಭಾಗವಹಿಸಿದ್ದರು. ಮನೋಗ್ನಾ 2019ರಲ್ಲಿ ಮಿಸ್ ಅರ್ಥ್ ಇಂಡಿಯಾ ಕಿರೀಟವನ್ನು ಗೆದ್ದರು, ಮಿಸ್ ಅರ್ಥ್ 2019 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಫಿಲಿಪೈನ್ಸ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
 

910

ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ತೇಜಸ್ವಿನಿ, ತಮ್ಮ ಡ್ಯಾನ್ಸ್ ವಿಡೀಯೋ, ಯೋಗ, ಹಾಡುಗಾರಿಕೆ, ವೈದ್ಯಕೀಯ ಜೀವನ (doctor), ಆಲ್ಬಂ ಹಾಡು, ಸೋಶಿಯಲ್ ವರ್ಕ್ ಗಳ ಬಗ್ಗೆ ಮಾಹಿತಿ ನೀಡುತ್ತಾ, ವೀಡಿಯೋ ಶೇರ್ ಮಾಡುತ್ತಿರುತ್ತಾರೆ. ಇವರ ಫಿಟ್ನೆಸ್ ಗೆ ಕಾರಣವೇ ಯೋಗ, ಡ್ಯಾನ್ಸ್ ಎಂದರೆ ತಪ್ಪಾಗಲ್ಲ. 
 

1010

ಈ ಸರಳ ಸುಂದರಿಗೆ ಮನಸೋತವರು ತುಂಬಾ ಜನ ಇದ್ದಾರೆ. ಆದರೆ 29 ವರ್ಷದ ತೇಜಸ್ವಿನಿ ಸಿಂಗಲ್ ಆಗಿ ಉಳಿದಿಲ್ಲ. ಇವರು ಐಎಎಸ್ ಆಫೀಸರ್ ಆಗಿರುವ ಪವನ್ ದತ್ತಾ ಜೊತೆ ಎಂಗೇಜ್ ಆಗಿದ್ದಾರೆ. ಪವನ್ ತೇಜಸ್ವಿನಿಗೆ ಪ್ರಪೋಸ್ ಮಾಡಿದ ಕ್ಷಣಗಳನ್ನು ತೇಜಸ್ವಿನಿ ಸೋಶಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಿ ಸಂಭ್ರಮಿಸಿದ್ದರು. 
 

Read more Photos on
click me!

Recommended Stories