ಮತ್ತೊಂದು ಉನ್ನತ ಹುದ್ದೆ ಅಲಂಕರಿಸಿದ ಭಾರತೀಯ ನಾರಿ, ಕಷ್ಟಪಟ್ಟು MBA ಮಾಡಿದ್ದು ಸಾರ್ಥಕ!

Suvarna News   | Asianet News
Published : Dec 16, 2021, 10:00 PM IST

ಭಾರತಿಯರು ಪ್ರಪಂಚದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಫು ಮೂಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಪರಾಗ್ ಅಗರ್ವಾಲ್ ಟ್ವಿಟರ್‌ನ ಸಿಇಒ ಹುದ್ದೆಯನ್ನು ವಹಿಸಿಕೊಂಡರು. ಈಗ ಮತ್ತೊಬ್ಬ ಭಾರತೀಯ ಮೂಲದ ಲೀನಾ ನಾಯರ್  (Leena Nair) ಅವರನ್ನು ಫ್ರೆಂಚ್ ಐಷಾರಾಮಿ ಗ್ರೂಪ್ ಚಾನೆಲ್‌ನ ಸಿಇಒ ಆಗಿ ನೇಮಿಸಲಾಗಿದೆ. ಲೀನಾ ನಾಯರ್ ಮಹಾರಾಷ್ಟ್ರದ ಕೊಲ್ಲಾಪುರದವರು. ಅವರು ಇಲ್ಲಿಯವರೆಗೆ ಆಂಗ್ಲೋ-ಡಚ್ ಕಂಪನಿ ಯೂನಿಲಿವರ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯ ಜವಾಬ್ದಾರಿಯನ್ನು ಹೊಂದಿದ್ದರು. ಆದರೆ ಈ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅವರು ಫ್ಯಾಷನ್ ಬ್ರ್ಯಾಂಡ್ ಚಾನೆಲ್‌ಗೆ ಸೇರುತ್ತಿದ್ದಾರೆ. ಲೀನಾ ನಾಯರ್ ಅವರ ಐಷಾರಾಮಿ ಜೀವನಶೈಲಿ ಹೇಗಿದೆ ನೋಡಿ.

PREV
110
ಮತ್ತೊಂದು ಉನ್ನತ ಹುದ್ದೆ ಅಲಂಕರಿಸಿದ ಭಾರತೀಯ ನಾರಿ, ಕಷ್ಟಪಟ್ಟು MBA ಮಾಡಿದ್ದು ಸಾರ್ಥಕ!

ಲೀನಾ ನಾಯರ್ ಅವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 1969 ರಲ್ಲಿ ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಕೊಲ್ಲಾಪುರದ ಹೋಲಿ ಕ್ರಾಸ್ ಕಾನ್ವೆಂಟ್ ಶಾಲೆಯಲ್ಲಿ ಮಾಡಿದರು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಲೀನಾ ಬಾಲ್ಯದಿಂದಲೂ ಮಹತ್ವಾಕಾಂಕ್ಷಿ. ಎಂಬಿಎ ಮಾಡಿಸಲು ತಂದೆಯ ಮನವೊಲಿಸಲು ಸಾಕಷ್ಟು ಕಷ್ಟಪಡಬೇಕಾಯಿತು.

210

ಎಂಜಿನಿಯರಿಂಗ್ ಮಾಡಿದ ನಂತರ MBA ಗೆ ಜೆಮ್‌ಶೆಡ್‌ಪುರದ ಕ್ಸೇವಿಯರ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು.  ಜೆಮ್‌ಶೆಡ್‌ಪುರಕ್ಕೆ ಹೋಗಬೇಕಾಗಿತ್ತು, ಕೊಲ್ಲಾಪುರದಿಂದ ರೈಲಿನಲ್ಲಿ ಹೋಗಲು ಸುಮಾರು 48 ಗಂಟೆಗಳು ಬೇಕಾಗುತ್ತದೆ. 

310

ಅವರ ತಂದೆ ಅವರನ್ನು ಅಲ್ಲಿಗೆ ಹೋಗದಂತೆ ನಿಷೇಧಿಸಿದರು. ಆದರೆ ಲೀನಾ ತನ್ನ ತಂದೆಯ ಮನವೊಲಿಸಿ ಜೆಮ್‌ಶೆಡ್‌ಪುರದಲ್ಲಿ ಎಂಬಿಎ ಮುಗಿಸಿದರು. ಇಲ್ಲಿಂದ ಅವರು 1992 ರಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ಗೆ ಸೇರಿಕೊಂಡರು ಮತ್ತು 3 ದಶಕಗಳ ಕಾಲ ಕೆಲಸ ಮಾಡಿದರು.

410

ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಲೀನಾ ಬಹುಬೇಗ ಯಶಸ್ಸಿನ ರುಚಿ ಕಂಡರು. 2013 ರಲ್ಲಿ, ಅವರು ಭಾರತದಿಂದ ಲಂಡನ್‌ಗೆ ತೆರಳಿದರು ಮತ್ತು ಆಂಗ್ಲೋ-ಡಚ್ ಕಂಪನಿಯ ಲಂಡನ್ ಪ್ರಧಾನ ಕಛೇರಿಯಲ್ಲಿ ನಾಯಕತ್ವ ಮತ್ತು ಸಂಸ್ಥೆ ಅಭಿವೃದ್ಧಿಯ ಜಾಗತಿಕ ಉಪಾಧ್ಯಕ್ಷರಾದರು. ಇದರ ನಂತರ, 2016 ರಲ್ಲಿ, ಅವರು ಯುನಿಲಿವರ್‌ನ ಮೊದಲ ಮಹಿಳೆ ಮತ್ತು ಕಿರಿಯ CHRO ಕೂಡ ಆದರು.

510

ಇಲ್ಲಿಯವರೆಗೆ ಅವರು ಯೂನಿಲಿವರ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದರು, ಆದರೆ ಈಗ ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಶನೆಲ್‌ಗೆ ಸೇರಿದ್ದಾರೆ. ಅವರು ಜನವರಿಯಿಂದ ಈ ಗುಂಪಿಗೆ ಸೇರಲಿದ್ದಾರೆ.
 

610

ಚಾನೆಲ್ ಒಂದು ದೊಡ್ಡ ಫ್ಯಾಶನ್ ಬ್ರ್ಯಾಂಡ್ ಆಗಿದ್ದು ಇದು ಬಟ್ಟೆಯಿಂದ ಬಿಡಿಭಾಗಗಳು, ಪರ್ಸ್ ಮತ್ತು ಇನ್ನೂ ಹಲವು ವಸ್ತುಗಳನ್ನು ತಯಾರಿಸುತ್ತದೆ. ಈ ಬ್ರ್ಯಾಂಡ್ ಫ್ರೆಂಚ್ ಬಿಲಿಯನೇರ್ ಅಲೈನ್ ವರ್ಥೈಮರ್  (Alain Wertheimer) ಮತ್ತು ಗೆರಾರ್ಡ್ ವರ್ತೈಮರ್  (Gerard Wertheimer) ನಡುವಿನ ಸಹಯೋಗವಾಗಿದೆ. ಲೀನಾ ನಾಯರ್ ಈಗ ಅದರ ಗ್ಲೋಬಲ್ ಎಕ್ಸಿಕ್ಯೂಟಿವ್ ಚೇರ್ಮನ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

710

ಚಾನೆಲ್ ಸಿಇಒ ಲೀನಾ ನಾಯರ್ ಅವರು ಅವರು 52 ನೇ ವಯಸ್ಸಿನಲ್ಲಿಯೂ ತುಂಬಾ ಸುಂದರವಾಗಿರುವ ಲೀನಾ ಫಿಟ್‌ ಹಾಗೂ ಪರ್ಪೇಕ್ಟ್‌ ಫಿಗರ್‌ ಕಾಪಾಡಿಕೊಂಡಿದ್ದಾರೆ.

810

ಲೀನಾ ಆಗಾಗ್ಗೆ ತನ್ನ ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡುತ್ತಾರೆ. ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ ಈ ಫೋಟೋದಲ್ಲಿ  ಗ್ರೀನ್ ಕಲರ್ ಶಾರ್ಟ್ ಡ್ರೆಸ್ ನಲ್ಲಿ  ಲೀನಾ ಯಂಗ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣ್ತಿದ್ದಾರೆ.

910

'ಚಾನಲ್ ಸಿಇಒ ಆಗಿ ಕೆಲಸ ಮಾಡುವುದು ನನಗೆ ಸಿಕ್ತ ದೊಡ್ಡ ಗೌರವ. ಇದು ಪ್ರತಿಷ್ಠಿತ ಕಂಪನಿಯಾಗಿದೆ. ನಾನು ಯೂನಿಲಿವರ್‌ನಲ್ಲಿ ಕೆಲಸ ಮಾಡಿದ್ದೇನೆ ಎಂದು ನಾನು ಯಾವಾಗಲೂ ಹೆಮ್ಮೆಪಡುತ್ತೇನೆ. ನಾನು ಯೂನಿಲಿವರ್‌ನಿಂದ ಸಾಕಷ್ಟು ಪ್ರೀತಿ ಮತ್ತು ಗೌರವವನ್ನು ಪಡೆದಿದ್ದೇನೆ' ಎಂದು ಚಾನೆಲ್‌ಗೆ ಸೇರಿದ ನಂತರ, ಲೀನಾ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ  ಬರೆದಿದ್ದಾರೆ. 

1010

ಒಟ್ಟಿನಲ್ಲಿ ವಿಶ್ವದ ಪ್ರತಿಷ್ಠಿತ ಹುದ್ದಗಳನ್ನು ಅಲಂಕರಿಸಿರುವ ಅನೇಕ ಭಾರತೀಯರ ಪೈಕಿ ಇದೀ ಮತ್ತೊಂದು ಸೇರ್ಪಡೆಯಾಗಿದೆ. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂಥ ವಿಷಯ.

Read more Photos on
click me!

Recommended Stories