ಮೆಹಂದಿ ಸೊಪ್ಪಿಲ್ದೆ ಮನೆಯಲ್ಲೇ ಮೆಹಂದಿ ತಯಾರಿಸೋದು ಹೇಗೆ

Published : Mar 10, 2026, 08:47 PM IST

ಮೆಹಂದಿ, ಕೋನ್ ಬರೋಕೂ ಮೊದಲೇ ಜನರು ಕೈಗೆ ಬಣ್ಣ ಹಚ್ಚಿಕೊಳ್ತಿದ್ದರು. ಮೆಹಂದಿ ಸೊಪ್ಪಿಲ್ಲದೆ ಕೈಗೆ ಹೇಗೆ ಬಣ್ಣ ಹಚ್ಚಿಕೊಳ್ತಿದ್ರು ಗೊತ್ತಾ? ನೀವೂ ಸಿಂಪಲ್ ಆಗಿ, ಕೆಮಿಕಲ್ ಇಲ್ಲದೆ ಮನೆಯಲ್ಲೇ ಇದನ್ನು ಮಾಡ್ಬಹುದು. 

PREV
16
ಮೆಹಂದಿ ರಂಗು

ಮದುವೆ, ಹಬ್ಬ ಬಂದ್ರೆ ಹೆಂಗಳೆಯರ ಕೈನಲ್ಲಿ ಮೆಹಂದಿ ರಾರಾಜಿಸುತ್ತೆ. ಕೈ ತುಂಬಾ ಮೆಹಂದಿ ಹಾಕಿಕೊಳ್ಳುವ ಖುಷಿಯೇ ಬೇರೆ. ಹಿಂದೆ ಮೆಹಂದಿ ಎಲೆಯನ್ನು ರುಬ್ಬಿ, ಕೈ ಬೆರಳುಗಳಿಗೆ ಹಚ್ಚಿಕೊಳ್ತಿದ್ರು. ಅದ್ರ ನಂತ್ರ ರುಬ್ಬಿದ ಮೆಹಂದಿ ಕೋನ್ ರೂಪದಲ್ಲಿ ಮಾರ್ಕೆಟ್ ಗೆ ಬಂತು. ಈಗ ನಾನಾ ಕಂಪನಿಗಳು ಮೆಹಂದಿ ಕೋನ್ ಮಾರಾಟ ಮಾಡ್ತಿವೆ. ಅರೆ ಕ್ಷಣಕ್ಕೆ ಕೆಲ ಮೆಹಂದಿ ಕೆಂಪಗಾಗುತ್ತೆ. ಆದ್ರೆ ಅದಕ್ಕೆ ಕೆಮಿಕಲ್ ಹಾಕಿರ್ತಾರೆ ಅನ್ನೋ ದೂರಿದೆ.

26
ಕೆಮಿಕಲ್ ರಹಿತ ಮೆಹಂದಿ

ಈಗ್ಲೂ ಹಳೇ ಟ್ರಿಕ್ಸ್ ನೀವು ಫಾಲೋ ಮಾಡ್ಬಹುದು. ಕೆಮಿಕಲ್ ರಹಿತ ಮೆಹಂದಿ ಇದು. ಮೆಹಂದಿ ಸೊಪ್ಪು ಮನೆಯಲ್ಲಿಲ್ಲ, ಕೋನ್ ಖರೀದಿ ಮಾಡೋಕೆ ಮರೆತೋಯ್ತು ಅಂತಾದ್ರೆ ಅಡುಗೆ ಮನೆಯಲ್ಲಿರುವ ಎರಡೇ ಎರಡು ಪದಾರ್ಥ ಬಳಸಿ ಕೈ ಉಗುರುಗಳನ್ನು ಕೆಂಪಗೆ ಮಾಡ್ಕೊಳ್ಳಿ.

36
ನ್ಯಾಚ್ಯುರಲ್ ಮೆಹಂದಿ

ಮೆಹಂದಿ ಸೊಪ್ಪಿಲ್ಲದ, ಕೆಮಿಕಲ್ ಬಳಸದೆ ಕೈ ಕೆಂಪಾಗ್ಬೇಕು ಅಂದ್ರೆ ಟೀ ಪುಡಿ ಹಾಗೂ ಸಕ್ಕರೆ ಬಳಸಿ. ಸಕ್ಕರೆ ಹಾಗೂ ಟೀ ಪುಡಿಯನ್ನು ಒಂದೇ ಪ್ರಮಾಣದಲ್ಲಿ ತೆಗೆದುಕೊಳ್ಬೇಕು. ಇದಕ್ಕೆ ಐಸ್ ಕ್ಯೂಬ್, ಕಡಾಯಿ, ಪ್ಲೇಟ್ ಹಾಗೂ ಕುಂಕುಮ ಅಗತ್ಯವಿರುತ್ತದೆ.

46
ಮೆಹಂದಿ ಮಾಡುವ ವಿಧಾನ

ಮೊದಲು ಒಂದು ಕಡಾಯಿಗೆ ಸಕ್ಕರೆ ಹಾಗೂ ಟೀ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಗ್ಯಾಸ್ ಆನ್ ಮಾಡಿ, ಇದನ್ನು ಬಿಸಿ ಮಾಡ್ಬೇಕು. ಬಿಸಿ ಮಾಡುವ ಮೊದಲು ಕಡಾಯಿ ಮಧ್ಯ ಭಾಗದಲ್ಲಿ ಜಾಗ ಮಾಡಿ ಅಲ್ಲಿ ಒಂದು ಸಣ್ಣ ಬೌಲ್ ಇಡಿ. ನಂತ್ರ ಕಡಾಯಿಯನ್ನು ಮುಚ್ಚಬೇಕು. ಕಡಾಯಿಯನ್ನು ನೀವು ಪ್ಲೇಟ್ ನಿಂದ ಮುಚ್ಚಿದ್ರೆ ಒಳ್ಳೆಯದು. ಮುಚ್ಚಿದ ಪ್ಲೇಟ್ ಮೇಲೆ ಕೆಲ ಐಸ್ ಕ್ಯೂಬ್ ಹಾಕಿ. ಪ್ಲೇಟ್ ಅಲ್ಲಾಡದಂತೆ ಅದ್ರ ಮೇಲೆ ಭಾರದ ವಸ್ತುವನ್ನು ಇಡಿ. ಗ್ಯಾಸ್ ಉರಿ ಕಡಿಮೆ ಮಾಡಿ, ಅರ್ಧಗಂಟೆ ಬಿಡಿ. ನಂತ್ರ ಗ್ಯಾಸ್ ಬಂದ್ ಮಾಡಿ, ಕಡಾಯಿ ಮೇಲಿರುವ ಪ್ಲೇಟನ್ನು ನಿಧಾನವಾಗಿ ತೆಗೆಯಬೇಕು.

56
ಕುಂಕುಮ ಮಿಕ್ಸ್ ಮಾಡಿ

ಅದ್ರಲ್ಲಿರುವ ನೀರು ಕಡಾಯಿ ಒಳಗೆ ಬೀಳದಂತೆ ನೋಡ್ಕೊಳ್ಳಿ. ನೀವು ಕಡಾಯಿ ಮಧ್ಯೆ ಇಟ್ಟಿದ್ದ ಬೌಲ್ ಗೆ ಸಕ್ಕರೆ ಹಾಗೂ ಟೀ ಪುಡಿಯ ನೀರು ಸೇರಿರುತ್ತದೆ. ನಿಧಾನವಾಗಿ ಅದನ್ನು ಹೊರಗೆ ತೆಗೆಯಿರಿ. ಮಿಶ್ರಣ ದ್ರವ ರೂಪದಲ್ಲಿರುವ ಕಾರಣ ಅದಕ್ಕೆ ನೀವು ಸ್ವಲ್ಪ ಕುಂಕುಮದ ಪುಡಿಯನ್ನು ಸೇರಿಸಬೇಕು. ಕುಂಕುಮವನ್ನು ಸರಿಯಾಗಿ ಮಿಕ್ಸ್ ಮಾಡಿ.

66
ಹತ್ತೇ ನಿಮಿಷದಲ್ಲಿ ಬದಲಾಗುತ್ತೆ ಕೈ ಬಣ್ಣ

ಮಿಶ್ರಣ ಸ್ವಲ್ಪ ದಪ್ಪವಾಗ್ತಿದ್ದಂತೆ ಅದನ್ನು ಬೆರಳಿನ ತುದಿ, ಹಸ್ತದ ಮಧ್ಯ ಭಾಗಕ್ಕೆ ಮೆಹಂದಿ ರೀತಿಯಲ್ಲಿ ಹಚ್ಚಿ. ಹತ್ತು ನಿಮಿಷಗಳ ಕಾಲ ನೀವು ಅದನ್ನು ಹಾಗೆ ಬಿಡಿ. ನಂತ್ರ ಶುದ್ಧ ನೀರಿನಿಂದ ಕೈ ಸ್ವಚ್ಛಗೊಳಿಸಿ. ನಿಮ್ಮ ಕೈ ಮೆಹಂದಿ ರೀತಿಯಲ್ಲಿಯೇ ಕೆಂಪು ಬಣ್ಣಕ್ಕೆ ಬಂದಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories