ಹಣ್ಣಿಗೆ ಮುತ್ತುವ ನೊಣಗಳನ್ನು ಓಡಿಸಲು ಇಲ್ಲಿವೆ ಸುಲಭ ಟಿಪ್ಸ್

Suvarna News   | Asianet News
Published : Jun 14, 2021, 05:50 PM IST

ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಯಲ್ಲಿ ಸೊಳ್ಳೆಗಳು ಮತ್ತು ನೊಣಗಳು ತಮ್ಮ ಕಾರುಬಾರು ಪ್ರಾರಂಭ ಮಾಡುತ್ತವೆ. ತಿನ್ನಬೇಕು ಎಂದು ಆಸೆಯಿಂದ ಅಂಗಡಿಯಿಂದ ತಂದು ಇಟ್ಟಿರುವ ಹಣ್ಣುಗಳನ್ನು ಸಂಪೂರ್ಣವಾಗಿ ಸಣ್ಣ ಸಣ್ಣ ನೊಣಗಳು ಮುತ್ತಿಕೊಂಡಿರುತ್ತವೆ.

PREV
112
ಹಣ್ಣಿಗೆ ಮುತ್ತುವ ನೊಣಗಳನ್ನು ಓಡಿಸಲು ಇಲ್ಲಿವೆ ಸುಲಭ ಟಿಪ್ಸ್

ಅಷ್ಟೇ ಅಲ್ಲದೆ ಮನೆಯ ಯಾವುದೇ ಜಾಗದಲ್ಲಿ ಬಿದ್ದ ವಸ್ತು ಯಾವುದಾದರೂ ಕಂಡರೆ ಅಲ್ಲಿ ಸಾವಿರಾರು ನೊಣಗಳು ಕುಳಿತಿರುತ್ತವೆ. ಹಳ್ಳಿಗಳ ಕಡೆ ಇವುಗಳನ್ನು 'ಮಾವಿನಕಾಯಿ ಸೊಳ್ಳೆ ' ಎಂದು ಕರೆಯುತ್ತಾರೆ. ನೇರವಾಗಿ ನಮ್ಮ ಆಹಾರ ಪದಾರ್ಥಗಳ ಮೇಲೆ ಇವುಗಳು ದಾಳಿ ಮಾಡುವುದರಿಂದ ಖಂಡಿತವಾಗಿ ಸೋಂಕಿನಿಂದ ಆರೋಗ್ಯ ಹದಗೆಡುವುದು ಗ್ಯಾರಂಟಿ.

212

ಮೊದಲು ಇಂತಹ ನೊಣಗಳಿಗೆ ಮುಕ್ತಿ ನೀಡಬೇಕು. ಒಂದು ಕಡೆ ಕುಳಿತು ಸೊಳ್ಳೆಯನ್ನು ಹೊಡೆದು ಬಿಸಾಕಿದ ಹಾಗೆ ನೊಣಗಳನ್ನು ಸಾಯಿಸಲು ಸಾಧ್ಯವಿಲ್ಲ. ಹಾಗಾಗಿ ಕೆಲವೊಂದು ತಂತ್ರಗಳನ್ನು ಉಪಯೋಗಿಸುವುದರ ಮೂಲಕ ಶಾಶ್ವತವಾಗಿ ನೊಣಗಳಿಂದ ಮನೆಯನ್ನು ಮುಕ್ತಿಗೊಳಿಸಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ಈ ಲೇಖನದಲ್ಲಿ ಅಂತಹ ಉಪಯುಕ್ತ ಟಿಪ್ಸ್ ನಿಮಗಾಗಿ.......

312

ಆಪಲ್ ಸೈಡರ್ ವಿನೆಗರ್ ತಂತ್ರ
ಒಂದು ಪಾರದರ್ಶಕವಾದ ಪ್ಲಾಸ್ಟಿಕ್ ಕವರ್ ತೆಗೆದುಕೊಳ್ಳಿ. ಅದಕ್ಕೆ ನೀರು ತುಂಬಿ ಜೊತೆಗೆ ಸ್ವಲ್ಪ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ. ಇದನ್ನು ನಿಮ್ಮ ಅಡುಗೆ ಮನೆಯ ಕಿಟಕಿಯ ಭಾಗದಲ್ಲಿ ನೇತುಹಾಕಿ. ಮಳೆಗಾಲದ ಸಂದರ್ಭದಲ್ಲಿ ನೊಣಗಳನ್ನು ದೂರ ಮಾಡಲು ಇದೊಂದು ಅತ್ಯದ್ಭುತ ಟಿಪ್ಸ್.

412

ಕರ್ಪೂರದಿಂದ ಪ್ರಯೋಜನವನ್ನು ಪಡೆದುಕೊಳ್ಳುವುದು

ಕರ್ಪೂರದಿಂದ ಪ್ರಯೋಜನವನ್ನು ಪಡೆದುಕೊಳ್ಳುವುದು

512

ಕರ್ಪೂರವನ್ನು ದಿನದಲ್ಲಿ ಮೂರು ಬಾರಿ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚುವುದರಿಂದ ಸೊಳ್ಳೆ ಮತ್ತು ನೊಣ ದೂರ ಮಾಡಬಹುದು.

612

ಒಂದು ಬೌಲ್‌ನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಕರ್ಪೂರ ಹಾಕಿ ಅದನ್ನು ಅಡುಗೆ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡುವುದರಿಂದ ಕೂಡ ನೊಣಗಳಿಂದ ಮುಕ್ತಿ ಪಡೆದುಕೊಳ್ಳಬಹುದು.

712

ವಿನೆಗರ್ ಈ ರೀತಿ ಪ್ರಯೋಗ ಮಾಡುವುದು
ಅಡುಗೆ ಮನೆಯ ಸೆಲ್ಫ್, ಕೌಂಟರ್ ಗಳು, ಡೈನಿಂಗ್ ಟೇಬಲ್, ಕಿಟಕಿಗಳ ಸರಳುಗಳು ಇತ್ಯಾದಿಗಳನ್ನು ವಿನೆಗರ್ ಮಿಶ್ರಣ ಮಾಡಿದ ನೀರನ್ನು ಬಳಸಿ ಸ್ವಚ್ಛ ಮಾಡುವುದರಿಂದಲೂ ಕೂಡ ನೊಣಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಇದಕ್ಕಾಗಿ ಸುಮಾರು ಅರ್ಧ ಬಕೆಟ್ ನೀರಿಗೆ ಎರಡರಿಂದ ಮೂರು ಕ್ಯಾಪ್ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡುವುದು ಒಳ್ಳೆಯದು.

812

ಪುದೀನಾ ಎಲೆಗಳಿಂದ ನೊಣಗಳನ್ನು ಓಡಿಸಬಹುದು
ನೀವು ಅಡುಗೆ ಮನೆಯಲ್ಲಿ ಹಣ್ಣುಗಳನ್ನು ಇಟ್ಟಿರುವ ಬ್ಯಾಸ್ಕೆಟ್ ಜಾಗದಲ್ಲಿ ಅಥವಾ ನಿಮ್ಮ ಅಡುಗೆ ಮನೆಯ ಸಿಂಕ್ ಇರುವ ಜಾಗದಲ್ಲಿ ತಾಜಾ ಪುದೀನಾ ಎಲೆಗಳ ಒಂದು ಕಟ್ಟನ್ನು ನೇತು ಹಾಕಿದರೆ ಸಾಕಷ್ಟು ಪ್ರಯೋಜನಕಾರಿ ಆಗಿರಲಿದೆ.

912

ಪುದೀನಾ ಎಲೆಗಳ ಗಾಢವಾದ ವಾಸನೆ ನೊಣಗಳನ್ನು ಹತ್ತಿರ ಬರದಂತೆ ತಡೆಯುತ್ತದೆ. ರೆಫ್ರಿಜರೇಟರ್‌ನಲ್ಲಿ ಕೂಡ ಪುದೀನಾ ಎಲೆಗಳನ್ನು ಇಡುವುದರಿಂದ ಕೇವಲ ನೊಣಗಳನ್ನು ದೂರ ಮಾಡುವುದು ಮಾತ್ರವಲ್ಲದೆ, ರೆಫ್ರಿಜರೇಟರ್ನಲ್ಲಿ ಕಂಡುಬರುವ ಕೆಟ್ಟ ವಾಸನೆಯನ್ನು ಸಹ ದೂರ ಮಾಡಬಹುದು. ಪ್ರತಿ ಎರಡು ದಿನಗಳಿಗೊಮ್ಮೆ ಹೊಸ ಪುದಿನ ಎಲೆಗಳನ್ನು ಇರಿಸುವುದರಿಂದ ತಾಜಾತನ ಕಂಡುಬರುತ್ತದೆ ಎಂದು ಹೇಳಬಹುದು.

1012

ವಿನೆಗರ್ ಮತ್ತು ಸೇಬು ಹಣ್ಣಿನ ಪ್ರಯೋಗ ಮಾಡುವುದು

1112

ಒಂದು ಗಾಜಿನ ಬಟ್ಟಲು ತೆಗೆದುಕೊಂಡು ಅದರಲ್ಲಿ ವಿನೆಗರ್ ಹಾಕಿ ಜೊತೆಗೆ ಒಂದು ಚೂರು ಸೇಬು ಹಣ್ಣು ಅದರಲ್ಲಿಟ್ಟು ಸುತ್ತಲು ಪಾರದರ್ಶಕವಾದ ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿ ಗಾಳಿ ಹೋಗದಂತೆ ರಬ್ಬರ್ ಬ್ಯಾಂಡ್ ಹಾಕಿ ಒಂದು ಕಡೆ ಇಡಿ.

1212

ಈಗ ಪ್ಲಾಸ್ಟಿಕ್ ಕವರ್ ಮೇಲೆ ಸಣ್ಣ ಸಣ್ಣ ಹೋಲ್ಗಳನ್ನು ಮಾಡುವುದರಿಂದ ನೊಣಗಳು ಬಟ್ಟಲಿನಲ್ಲಿ ಬಂದು ಬೀಳುತ್ತವೆ. ಈ ನೀರನ್ನು ದಿನ ಬಿಟ್ಟು ದಿನ ಬದಲಿಸಿದರೆ ಸಾಕು. ಮನೆಯಿಂದ ನೊಣಗಳನ್ನು ಈ ರೀತಿ ಪರಿಣಾಮಕಾರಿಯಾಗಿ ದೂರ ಮಾಡಬಹುದು.

click me!

Recommended Stories