ಗರ್ಭಾವಸ್ಥೆಯಲ್ಲಿ ಮೂಡ್ ಸ್ವಿಂಗ್! ಹೀಗೆ ಕಂಟ್ರೋಲ್ ಮಾಡಿ

First Published | Oct 6, 2022, 4:20 PM IST

ಮಹಿಳೆಯರಿಗೆ ಮೂಡ್ ಸ್ವಿಂಗ್ ಆಗೋದು ಹೊಸ ವಿಚಾರವಾಗಿ ಉಳಿದಿಲ್ಲ. ಈ ಪಿರಿಯಡ್ಸ್ (Periods) ಸಮಯದಲ್ಲಿ ಸಾಮಾನ್ಯವಾಗಿ ಮಹಿಳೆಯರಿಗೆ ಮೂಡ್ ಸ್ವಿಂಗ್ ಆಗುತ್ತೆ. ಹಾರ್ಮೋನುಗಳ ಏರಿಳಿತಗಳಿಂದಾಗಿ, ಮಹಿಳೆಯರು ಹೆಚ್ಚಾಗಿ ಮೂಡ್ ಸ್ವಿಂಗ್ ಸಮಸ್ಯೆಯನ್ನು ಹೊಂದಿರುತ್ತಾರೆ. ಅದರಲ್ಲೂ ಗರ್ಭಾಧಾರಣೆಯ ಸಮಯದಲ್ಲೂ ಮಹಿಳೆಯರು ಮೂಡ್ ಸ್ವಿಂಗ್ ಸಮಸ್ಯೆ ಹೊಂದುತ್ತಾರೆ. ಅದನ್ನು ನಿವಾರಿಸಲು ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ, ನೀವು ಗರ್ಭಾವಸ್ಥೆಯಲ್ಲಿ (Pregnancy) ಮೂಡ್ ಸ್ವಿಂಗ್ ನಿಯಂತ್ರಿಸಬಹುದು ಅನ್ನೋದು ನಿಮಗೆ ತಿಳಿದಿದೆಯೇ? ಇಲ್ಲಾ ಅಂದ್ರೆ, ಈ ಬಗ್ಗೆ ತಿಳಿಯಿರಿ… 

ಗರ್ಭಿಣಿ ಮಹಿಳೆಯ ಮನಸ್ಥಿತಿಯಲ್ಲಿ ಆಗಾಗ್ಗೆ ಬದಲಾವಣೆಯಾಗುತ್ತದೆ ಎಂದು ನೀವು ಕೇಳಿರಬಹುದು. ದೈಹಿಕ ಒತ್ತಡ, ಆಯಾಸ, ಚಯಾಪಚಯ ಕ್ರಿಯೆಯಲ್ಲಿನ ಬದಲಾವಣೆಗಳು ಅಥವಾ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಬದಲಾವಣೆ ಮೂಡ್ ಸ್ವಿಂಗ್ (mood swing) ಸಮಸ್ಯೆಗೆ ಕಾರಣವಾಗಿರಬಹುದು. 
 

ಹಾರ್ಮೋನ್ ಮಟ್ಟಗಳಲ್ಲಿನ (harmone level) ಪ್ರಮುಖ ಬದಲಾವಣೆಗಳು ನ್ಯೂರೋಟ್ರಾನ್ಸ್ಮಿಟರ್ಗಳ ಮಟ್ಟದ ಮೇಲೆ ಪರಿಣಾಮ ಬೀರಬಹುದು, ಅವು ಮನಸ್ಥಿತಿಯನ್ನು ನಿಯಂತ್ರಿಸುವ ಮೆದುಳಿನ ರಾಸಾಯನಿಕಗಳಾಗಿವೆ. ಮೂಡ್ ಸ್ವಿಂಗ್ ಸಾಮಾನ್ಯವಾಗಿ ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ (Trimister) ಸಂಭವಿಸುತ್ತವೆ ಮತ್ತು ನಂತರ ಮೂರನೇ ತ್ರೈಮಾಸಿಕದಲ್ಲಿ ಮೂಡ್ ಸ್ವಿಂಗ್ ಗಳ ಸಮಸ್ಯೆ ಇರುತ್ತದೆ.

Tap to resize

ಮಹಿಳೆಯ ಮೂಡ್ ಸ್ವಿಂಗ್ ನಿಂದಾಗಿ, ಅವಳು ಮಾತ್ರವಲ್ಲ, ಅವಳೊಂದಿಗೆ ವಾಸಿಸುವ ಜನರಿಗೂ ತೊಂದರೆಯಾಗುತ್ತೆ. ಆದಾಗ್ಯೂ, ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯಕರ ಡಯಟ್ (Health Diet) ನಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ಮೂಡ್ ಸ್ವಿಂಗ್ ನಿಯಂತ್ರಿಸಬಹುದು. ಗರ್ಭಾವಸ್ಥೆಯಲ್ಲಿ ಮೂಡ್ ಸ್ವಿಂಗ್ (mood swing in pregnany) ನಿಯಂತ್ರಿಸಲು ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ನಾವು ಇಲ್ಲಿ ನಿಮಗೆ ಹೇಳುತ್ತಿದ್ದೇವೆ.

ಉತ್ತಮ ಕಾರ್ಬೋಹೈಡ್ರೇಟ್ಸ್

ಅವು ಸಾಮಾನ್ಯವಾಗಿ ಹೆಚ್ಚಿನ ನಾರಿನಂಶ ಹೊಂದಿರುತ್ತವೆ ಮತ್ತು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ನಿಮಗೆ ದೀರ್ಘಕಾಲದವರೆಗೆ ಶಕ್ತಿ ಒದಗಿಸುತ್ತವೆ. ಈ ಆಹಾರಗಳು ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಿಂದ ವಿಷ ತೆಗೆದುಹಾಕುತ್ತದೆ. ಉತ್ತಮ ಕಾರ್ಬೋಹೈಡ್ರೇಟ್ (good carbohydrates) ಗಳಲ್ಲಿ ಬೀಜಗಳು, ಓಟ್ಸ್, ಕಾರ್ನ್, ಸಿರಿಧಾನ್ಯಗಳು, ಆಲೂಗಡ್ಡೆ, ಸಂಪೂರ್ಣ ಧಾನ್ಯಗಳು, ಬ್ರೌನ್ ರೈಸ್ (Brown Rice) ಮತ್ತು ಬ್ರೌನ್ ಬ್ರೆಡ್ ಸೇರಿವೆ.

ಸಂಪೂರ್ಣ ಆಹಾರಗಳು (whole food)

 ಇವು ಅನ್ ರಿಫೈಂಡ್, ಅನ್ ಪ್ರೋಸೆಸ್ಡ್ ಅಥವಾ ತಿನ್ನುವ ಮೊದಲು ಸಾಧ್ಯವಾದಷ್ಟು ಕಡಿಮೆ ಸಂಸ್ಕರಿಸಲಾದ ಆಹಾರಗಳಾಗಿವೆ. ತಾಜಾ ಮತ್ತು ಸಂಸ್ಕರಿಸದ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಬೀನ್ಸ್, ಬಟಾಣಿ, ಬೇಳೆ ಕಾಳುಗಳು, ಹಾಲು ಇವೆಲ್ಲವೂ ಇಡೀ ಆಹಾರಕ್ಕೆ ಉತ್ತಮ ಉದಾಹರಣೆಗಳಾಗಿವೆ. ಇವುಗಳನ್ನು ಸೇವಿಸುವುದು ಉತ್ತಮ. 

ಪ್ರೋಟೀನ್

ದೇಹದ ಬೆಳವಣಿಗೆ ಮತ್ತು ದುರಸ್ತಿಗೆ ಇದು ಅತ್ಯಗತ್ಯ. ದಿನವಿಡೀ ಸಣ್ಣ ಪ್ರಮಾಣದ ಪ್ರೋಟೀನ್ (protein food) ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬ್ಯಾಲೆನ್ಸ್ ಆಗಿರಿಸುತ್ತೆ ಮತ್ತು ಮೂಡ್ ಅನ್ನು ಸ್ಥಿರವಾಗಿರಿಸುತ್ತದೆ. ನೀವು ಮಾಂಸ, ಮೀನು (Fish), ಮೊಟ್ಟೆಗಳು (Eggs), ಹಾಲು, ಚೀಸ್, ಬೇಳೆಕಾಳುಗಳು, ಬೀಜಗಳು, ಸಂಪೂರ್ಣ ಧಾನ್ಯಗಳು ಮತ್ತು ಬೀನ್ಸ್ ನಿಂದ ಪ್ರೋಟೀನ್ ಪಡೆಯಬಹುದು.

ಒಮೆಗಾ 3 ಕೊಬ್ಬಿನಾಮ್ಲಗಳು

ಒಮೆಗಾ 3 ಕೊಬ್ಬಿನಾಮ್ಲಗಳು ಮೂಡ್ ನ್ನು ಚೆನ್ನಾಗಿಟ್ಟಿರಲು ಸಹಾಯ ಮಾಡುವಂತಹ ಪೋಷಕಾಂಶವಾಗಿದೆ ಮತ್ತು ನಮ್ಮ ದೇಹವು ಸ್ವತಃ ಅದನ್ನು ತಯಾರಿಸಲು ಸಾಧ್ಯವಿಲ್ಲ. ಟ್ಯೂನ್, ಮ್ಯಾಕೆರೆಲ್, ಹೆರಿಂಗ್, ಸಾರ್ಡಿನ್ ಮತ್ತು ಮಸ್ಸೆಲ್ ಗಳಂತಹ ಎಣ್ಣೆಯುಕ್ತ ಮೀನುಗಳು ನಿಮಗೆ ಒಮೆಗಾ 3 ಕೊಬ್ಬಿನಾಮ್ಲಗಳನ್ನು ನೀಡುತ್ತವೆ.

ಕೇಸರಿ

ಇದು ಜನಪ್ರಿಯ ಮಸಾಲೆಯಾಗಿದೆ ಮತ್ತು ಮೂಡ್ ಸ್ವಿಂಗ್ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಇತರ ಯಾವುದೇ ಮಸಾಲೆಯಂತೆ ಇದನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಮುಖ್ಯ. ನಿಮ್ಮ ಆಹಾರಕ್ಕೆ ಅಥವಾ ಒಂದು ಲೋಟ ಹಾಲಿಗೆ ಒಂದು ಚಿಟಿಕೆ ಕೇಸರಿಯನ್ನು (saffron) ಸೇರಿಸಿದರೆ ಸಾಕು ಎಂದು ಕೆಲವು ತಜ್ಞರು ಸೂಚಿಸುತ್ತಾರೆ. ಎನ್ಸಿಬಿಐನಲ್ಲಿ ಪ್ರಕಟವಾದ ಒಂದು ಸಂಶೋಧನೆಯಲ್ಲಿ ಕೇಸರಿ ಖಿನ್ನತೆಯಂತಹ ದುಃಖದ ಭಾವನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ.

ಈ ವಸ್ತುಗಳನ್ನು ತಿನ್ನುವುದನ್ನು ಸಾಧ್ಯವಾದಷ್ಟು ತಪ್ಪಿಸಿ

ಮೂಡ್ ಸ್ವಿಂಗ್ ನಿಯಂತ್ರಿಸಲು ಸಿಹಿತಿಂಡಿಗಳು, ಕರಿದ ಆಹಾರಗಳು, ಸಂಸ್ಕರಿಸಿದ ಮಾಂಸಗಳು, ಸಂಸ್ಕರಿಸಿದ ಧಾನ್ಯಗಳು ಮತ್ತು ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳನ್ನು ತಿನ್ನುವುದನ್ನು ತಪ್ಪಿಸಿ. ಇವು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. 
 

Latest Videos

click me!