ತಲೆಹೊಟ್ಟು ತುರಿಕೆಯೇ? ನಿಯಂತ್ರಿಸಲು ಶುಂಠಿ ಹೇರ್ ಮಾಸ್ಕ್ ಟ್ರೈ ಮಾಡಿ ನೋಡಿ

First Published | Feb 9, 2021, 2:53 PM IST

ಶುಂಠಿ ಎಂಬುದು ಭಾರತೀಯರು ಮಾತ್ರವಲ್ಲ ಇಡೀ ಏಷಿಯನ್ನರಿಗೆ ಗೊತ್ತಿರುವ ಒಂದು ಮಸಾಲೆ ಪದಾರ್ಥ. ರುಚಿ ಹೆಚ್ಚಿಸುವ ಮೂಲ ಮಸಾಲೆಯನ್ನು ಹಲವಾರು ಪಲ್ಯಗಳು, ಪಾನೀಯಗಳು ಮತ್ತು ಸಿಹಿತಿಂಡಿಗಳ ಜೊತೆಗೆ ಸೇರಿಸಲಾಗುತ್ತದೆ. ಶುಂಠಿ ಜೀರ್ಣಾಂಗಗಳ ತೊಂದರೆಗಳಿಗೆ, ಶೀತ ಮತ್ತು ಕೆಮ್ಮಿಗೆ ಹಲವಾರು ಮನೆಮದ್ದುಗಳ ಒಂದು ಭಾಗವಾಗಿದೆ.  

ಸಕ್ರಿಯ ಸಂಯುಕ್ತವಾದ ಶುಂಠಿಯಲ್ಲಿ ಅನಾಲ್ಜೆಸಿಕ್ (ನೋವು-ಶಮನಗೊಳಿಸುವಿಕೆ), ಸೆಡಿಯೇಟಿವ್ (ನಿದ್ರೆ-ಪ್ರಚೋದಿಸುವ), ಆಂಟಿಪೈರೆಟಿಕ್ (ಜ್ವರ ವಿರೋಧಿ) ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಆದುದರಿಂದ ಶುಂಠಿಯು ಹಲವಾರು ರೀತಿಯ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.
undefined
ಶುಂಠಿಯು ದೇಹದಲ್ಲಿ ಉರಿಯೂತದ ವಿರುದ್ಧ ಹೋರಾಡಲು ಸಹ ಉತ್ತಮವಾಗಿದ್ದು, ಇದರಲ್ಲಿ ಆಂಟಿ ಆಕ್ಸಿಡೆಂಟ್ ಜಿಂಜರಾನ್ ಇದೆ. ಈ ಕಾರಣದಿಂದಾಗಿ ಶುಂಠಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚರ್ಮದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಶುಂಠಿಯನ್ನು ಬಳಸಿಕೊಂಡು ತಲೆಬುರುಡೆಯ ಸೋಂಕಿನ ವಿರುದ್ಧ ಹೋರಾಡಬಹುದು ಎಂದು ತಿಳಿದಿದೆಯೇ?
undefined
Tap to resize

ಶುಂಠಿರಸವನ್ನು ಮುಖ ಮತ್ತು ಕೂದಲಿನ ಮಾಸ್ಕ್ ಗಳಿಗೆ ಸೇರಿಸಬಹುದು, ಇದು ಬ್ಯಾಕ್ಟೀರಿಯಾ ವಿರೋಧಿ ಅಥವಾ ಸೂಕ್ಷ್ಮಜೀವಿ ವಿರೋಧಿ ಸಾಮರ್ಥ್ಯಗಳಿಂದಾಗಿ ಚರ್ಮ ಮತ್ತು ತಲೆಬುರುಡೆಯ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಶುಂಠಿ ರಸವು ತಲೆಬುರುಡೆಗೆ ಆರೋಗ್ಯವನ್ನು ಮರಳಿ ತರಬಹುದು ಮತ್ತು ತುರಿಕೆ ಮತ್ತು ತಲೆಹೊಟ್ಟು ನಿವಾರಣೆಗೂ ಸಹಾಯ ಮಾಡುತ್ತದೆ.
undefined
ಇದು ಕೂದಲಿನ ಸಮಸ್ಯೆಗೆ ಪರಿಹಾರವಾಗಿದೆ, ದುಬಾರಿ ಕೂದಲಿನ ಉತ್ಪನ್ನಗಳನ್ನು ಬಳಸಿದಲ್ಲಿ, ಈ ನೈಸರ್ಗಿಕ ಪರಿಹಾರವೊಂದನ್ನು ಪ್ರಯತ್ನಿಸಿ ನೋಡಿ. ಕೆಲವರು ಶುಂಠಿಯ ರಸವನ್ನು ಕೂದಲಿನ ಉದುರುವಿಕೆಯನ್ನು ನಿಯಂತ್ರಿಸಲು ಬಳಸುತ್ತಾರೆ, ಏಕೆಂದರೆ ತಲೆಹೊಟ್ಟು ಉದುರುವಿಕೆಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ತಲೆಬುರುಡೆಯಲ್ಲಿ ಆರೋಗ್ಯಕರ ಚರ್ಮವನ್ನು ಮರಳಿ ಪಡೆಯಲು ಇದನ್ನು ಬಳಸುವುದು ಹೇಗೆ ಎಂದು ಇಲ್ಲಿ ನೋಡಿ.
undefined
ಶುಂಠಿ ಹೇರ್ ಮಾಸ್ಕ್ತಲೆಹೊಟ್ಟು ಮತ್ತು ತುರಿಕೆಯ ತಲೆಬುರುಡೆಗೆ ಶುಂಠಿ ಹೇರ್ ಮಾಸ್ಕ್ ತಯಾರಿಸುವುದು ಹೇಗೆ?1.ತಾಜಾ ಶುಂಠಿ ತೆಗೆದುಕೊಂಡು ಅದನ್ನು ಚೂಪಾದ ಚಾಕುವಿನಿಂದ ಕತ್ತರಿಸಿ ಅಥವಾ ತುರಿದುಕೊಳ್ಳಿ.2. ಸ್ವಲ್ಪ ನೀರಿಗೆ ತುರಿದ ಶುಂಠಿಯನ್ನು ಹಾಕಿ, ಕಡಿಮೆ ಉರಿಯಲ್ಲಿ ಕುದಿಸಬೇಕು. ನಿಧಾನವಾಗಿ ನೀರಿನ ಬಣ್ಣ ಬದಲಾಗಲು ಪ್ರಾರಂಭವಾಗುತ್ತದೆ ಮತ್ತು ಕೆಲವು ನಿಮಿಷಗಳ ನಂತರ ಅದು ಸ್ವಲ್ಪ ಪಾರದರ್ಶಕ ಹಳದಿ ಬಣ್ಣಕ್ಕೆ ತಿರುಗುತ್ತದೆ.3. ಆ ನೀರನ್ನು ಉರಿಯಿಂದ ತೆಗೆದು ಸೋಸಿ.
undefined
4. ಉಳಿದ ಶುಂಠಿಯನ್ನು ಒತ್ತಿ, ನಂತರ ಅದನ್ನು ಪಾತ್ರೆಗೆ ಹಾಕಿ ರಸವನ್ನು ಹೊರತೆಗೆಯಿರಿ.5. ನೀರು ತಣ್ಣಗಾಗಲು ಬಿಡಿ. ಈ ರಸವನ್ನು ಒಂದು ಪುಟ್ಟ ಸ್ಪ್ರೇ ಬಾಟಲಿಗೆ ಸುರಿದು ನೇರವಾಗಿ ನಿಮ್ಮ ನೆತ್ತಿಗೆ ಸ್ಪ್ರೇ ಮಾಡಿ ಅಥವಾ ಎಣ್ಣೆಯ ಮಿಶ್ರಣ ಮಾಡಿ ನಂತರ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಬಹುದು.
undefined
ಮಾಸ್ಕ್ ಅನ್ನು ತಲೆ ಮೇಲೆ ಅರ್ಧ ಗಂಟೆ ಕಾಲ ಹಾಗೆ ಬಿಡಿ ಮತ್ತು ನಂತರ ಮೃದುವಾದ ಆಂಟಿ-ಡ್ಯಾಂಡ್ರಫ್ ಶಾಂಪೂವಿನಿಂದ ತೊಳೆದುಕೊಳ್ಳಿ. ತಲೆಹೊಟ್ಟು ಮತ್ತು ತುರಿಕೆಯ ಸಮಸ್ಯೆ ನಿವಾರಣೆ ಮಾಡಲು ಶುಂಠಿ ರಸದ ಮಿಶ್ರಣವನ್ನು ವಾರಕ್ಕೊಮ್ಮೆ ಯಾದರೂ ಬಳಸಬಹುದು.
undefined
ತಲೆಹೊಟ್ಟು ಮತ್ತು ತುರಿಕೆಯ ಸಮಸ್ಯೆ ನಿವಾರಣೆಯಾಗದಿದ್ದರೆ ಬ್ಯಾಕ್ಟೀರಿಯಾದ ಬೆಳವಣಿಗೆಯ ಸೂಚನೆಯಾಗಿದೆ,ಆಗ ಸ್ವತಃ ಚಿಕಿತ್ಸೆಯನ್ನು ಪ್ರಯತ್ನಿಸುವ ಬದಲು ಚರ್ಮಶಾಸ್ತ್ರಜ್ಞರಿಂದ ಪರೀಕ್ಷಿಸಬೇಕು. ಈ ಹೇರ್ ಮಾಸ್ಕ್ ಮಾತ್ರವಲ್ಲದೆ, ನಿಯಮಿತವಾಗಿ ಎಣ್ಣೆ ಮಸಾಜ್ ಕೂಡ ತಲೆಹೊಟ್ಟು ನಿವಾರಣೆ ಮಾಡುವುದು.
undefined

Latest Videos

click me!