ಚಹಾ ಮಾರುತ್ತಿದ್ದವರೂ ಕೋಟ್ಯಾಧಿಪತಿಗಳ್ತಾರೆ, ಇದು ಅದೃಷ್ಟವೋ, ಯೋಗವೋ?

First Published Dec 20, 2023, 4:49 PM IST

ನಾವು ಜೀವನದಲ್ಲಿ ಪ್ರೇರಣೆ ನೀಡುವ ಅದೆಷ್ಟೋ ಕಥೆಗಳನ್ನು ಓದುವಾಗ ಅದರಲ್ಲಿ ಹೆಚ್ಚಿನವರು ಕೈಯಲ್ಲಿ ಹಣ ಇಲ್ಲದವರು ಇಂದು ಕೋಟ್ಯಾಧಿಪತಿಯಾಗಿರೋದನ್ನು ನೋಡುತ್ತೇವೆ. ಆದರೆ ಹೀಗೆ ಆಗೋದಿಕ್ಕೆ ಹೇಗೆ ಸಾಧ್ಯ ಎಂದು ನೀವು ಯೋಚಿಸಿರಬಹುದು. ಅದರ ಬಗ್ಗೆ ತಿಳಿಯೋಣ.  
 

ಒಬ್ಬ ವ್ಯಕ್ತಿಯು ಯಶಸ್ವಿಯಾಗಲು (successful) ಬಯಸಿದರೆ, ಅವನು ತನ್ನ ಜೀವನದಲ್ಲಿ ಕೆಲವು ಗುಣಗಳನ್ನು ಸೇರಿಸಬೇಕು. ಈ ಗುಣಲಕ್ಷಣಗಳು ಅನೇಕ ಜನರ ಹಣೆಬರಹವನ್ನು ಬದಲಾಯಿಸಿವೆ.ಈ ಗುಣಗಳಿಂದಾಗಿಯೇ ಕೆಲವರು ಕೈಯಲ್ಲಿ ಕಾಸಿಲ್ಲದವರೂ ಸಹ ಕೆಲವೇ ವರ್ಷಗಳಲ್ಲಿ ಶ್ರೀಮಂತರಾಗಲು ಸಾಧ್ಯವಾಗುತ್ತದೆ. 
 

ನೀವು ಹಲವು ಪ್ರೇರಣಾತ್ಮಕ ಕಥೆಗಳನ್ನು ಪ್ರತಿದಿನ ಕೇಳಿರಬಹುದು, ಓದಿರಬಹುದು ಅಥವಾ ನೋಡಿರಬಹುದು,  ಒಬ್ಬ ವ್ಯಕ್ತಿಯು ಚಹಾ ಗಾಡಿ ನಡೆಸುತ್ತಿದ್ದನು. ಆದರೆ ಕೆಲವೇ ವರ್ಷಗಳಲ್ಲಿ ಅವನು ತನ್ನದೇ ಆದ ಕಂಪನಿಯ ಮಾಲೀಕನಾದನು. ಕೇವಲ ಚಹಾ ಗಾಡಿ ನಡೆಸುತ್ತಿದ್ದವರು ದೊಡ್ಡ ಕಂಪನಿಯ ಮಾಲೀಕ ಆಗೋದಿಕ್ಕೆ ಹೇಗೆ ಸಾಧ್ಯ? ಎಂದು ನೀವು ಪ್ರಶ್ನಿಸಬಹುದು. 
 

Latest Videos


ನೀವು ಕೆಲವು ಯಶಸ್ವಿ ಜನರ ಕಥೆಗಳನ್ನು ನೋಡಿದಾಗ, ಅವರಲ್ಲಿ ಅನೇಕರು ಹೈ-ಫೈ ಶಿಕ್ಷಣವನ್ನು ಪಡೆಯದವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ, ಇನ್ನೂ ಕೆಲವರು ಕಡು ಬಡತನದಲ್ಲಿ ಬೆಳೆದವರೂ ಇರುತ್ತಾರೆ, ಮತ್ತೆ ಕೆಲವರು ಹಲವಾರು ಕಷ್ಟಗಳನ್ನು ಸೋಲುಗಳನ್ನು ಎದುರಿಸಿ, ಕೊನೆಗೆ ಜೀವನದಲ್ಲಿ ಉನ್ನತ ಮಟ್ಟದ ಯಶಸ್ಸು ಪಡೆದುಕೊಂಡವರೂ ಇದ್ದಾರೆ.  ವ್ಯಕ್ತಿತ್ವ ಏನೇ ಇರಲಿ, ಯಶಸ್ಸಿನ ಹಿಂದೆ ಕೆಲವು ಮೂಲಭೂತ ವಿಷಯಗಳಿವೆ, ಅದನ್ನು ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವಕ್ಕೆ ಸೇರಿಸಬೇಕು.  ಇದರಿಂದ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. 
 

ಕೌಶಲ್ಯಗಳ ಮಾಸ್ಟರ್ ಆಗಿರಿ (master in skill)
ನೀವು ಪರೋಟ ತಯಾರಕರಾಗಿರಲಿ ಅಥವಾ ಕಂಟೆಂಟ್ ಕ್ರಿಯೇಟರ್ ಆಗಿರಲಿ, ನೀವು ಏನು ಮಾಡಿದರೂ ಅದನ್ನು ಕರಗತ ಮಾಡಿಕೊಳ್ಳಿ. ಯಾವಾಗಲೂ ನಿಮ್ಮನ್ನು ಅಪ್ ಡೇಟ್ ಮಾಡಿಕೊಳ್ಳೋದು ಮುಖ್ಯ ಮತ್ತು ಕೌಶಲ್ಯಗಳನ್ನು ಸುಧಾರಿಸೋದು ತುಂಬಾನೆ ಮುಖ್ಯ. ಇದು ಯಾವಾಗಲೂ ಇತರರಿಗಿಂತ ಮುಂದಿರಲು ನಿಮಗೆ ಸಹಾಯ ಮಾಡುತ್ತದೆ. ಒಬ್ಬನು ತನ್ನ ಕೆಲಸದಲ್ಲಿ ನಿಪುಣನಾಗಿದ್ದರೆ, ಯಶಸ್ವಿಯಾಗೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. 

ಅವಕಾಶ ಕಳೆದುಕೊಳ್ಳಬೇಡಿ (Grab the opportunities) 
ಜೀವನವು ಎಲ್ಲರಿಗೂ ಒಂದು ಅವಕಾಶ ನೀಡುತ್ತದೆ, ಒಂದೇ ವ್ಯತ್ಯಾಸವೆಂದರೆ ನೀವು ಅದನ್ನು ನೋಡಲು ಹಿಂಜರಿಯುತ್ತೀರೋ ಅಥವಾ ನೀವು ಒಂದು ಹೆಜ್ಜೆ ಮುಂದಿಡಲು ಧೈರ್ಯ ಮಾಡುತ್ತೀರೋ ಎಂಬುದು. ಅವಕಾಶಗಳು ಕಳೆದುಹೋದಾಗ, ಅಯ್ಯೋ ಎಂದು ತಲೆಗೆ ಕೈ ಇಟ್ಟು ಕುಳಿತುಕೊಳ್ಳಬೇಕು ಅಷ್ಟೇ. ನಿಮ್ಮ ಜೀವನದಲ್ಲಿ ಅಂತಹ ಕ್ಷಣ ಬರಲು ಬಿಡಬೇಡಿ ಮತ್ತು ಅವಕಾಶಗಳನ್ನು ಸ್ವೀಕರಿಸೋದನ್ನು ಕಲಿಯಿರಿ.

ಬಿಟ್ಟು ಕೊಡಬೇಡಿ, ಮುಂದೆ ಹೆಜ್ಜೆ ಇಡುತ್ತಲೇ ಇರಿ (Keep trying)
ಯಶಸ್ಸಿನ ಹಾದಿ ಸುಲಭ ಎಂದು ಯಾರು ಹೇಳಿದರು? ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ರೂಪದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ಬಿಟ್ಟು ಕೊಡದಿದ್ದರೆ ಮತ್ತು ಮುಂದೆ ಹೆಜ್ಜೆಗಳನ್ನು ಇಡುತ್ತಲೇ ಇದ್ದರೆ, ಯಶಸ್ಸು ಖಂಡಿತವಾಗಿಯೂ ನಿಮ್ಮನ್ನು ಹಿಂಭಾಲಿಸುತ್ತೆ. 
 

ಸೋಲಿಗೆ ಹೆದರಬೇಡಿ (do not scared of failure)
ನೀವು ಒಂದು ಸಲ ಆ ಕೆಲಸ ಮಾಡಿ ಸೋತರೆ, ಅಯ್ಯೋ ನನ್ನಿಂದ ಸಾಧ್ಯ ಇಲ್ಲ ಎಂದು ಸುಮ್ಮನೆ ಕೂರಬೇಡಿ. ಮತ್ತೆ ಮತ್ತೆ ಅದನ್ನೆ ಮಾಡಿ, ಹೊಸದಾಗಿ ಪ್ರಯತ್ನಿಸಿ, ಆವಾಗ ನೀವು ಬೇಡ ಎಂದರೂ ಸಹ ಯಶಸ್ಸು ನಿಮ್ಮನ್ನು ಹಿಂಭಾಲಿಸುತ್ತೆ. 

click me!