ಹೊಟೇಲ್’ನಲ್ಲಿ ವೈಟರ್ ಆಗಿದ್ದಾಕೆ ಈಗ 100 ಕೋಟಿಯ ಒಡತಿ… ಜಗತ್ಪ್ರಸಿದ್ಧ ಆಟಗಾರನ ಗರ್ಲ್ ಫ್ರೆಂಡ್!

Published : Dec 13, 2024, 01:54 PM ISTUpdated : Dec 13, 2024, 03:17 PM IST

ಒಂದು ಕಾಲದಲ್ಲಿ ಹೊಟೇಲ್ ನಲ್ಲಿ ವೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಕೆ, ಈಗ 100 ಕೋಟಿಯ ಒಡತಿ. ಅಷ್ಟೇ ಅಲ್ಲ ಈಕೆ ಜಗತ್ಪ್ರಸಿದ್ಧ ಆಟಗಾರದ ಗರ್ಲ್ ಫ್ರೆಂಡ್ ಕೂಡ ಹೌದು. ನಾವು ಯಾರ ಬಗ್ಗೆ ಹೇಳ್ತಿದ್ದೇವೆ ಗೊತ್ತಾಯ್ತ?   

PREV
19
ಹೊಟೇಲ್’ನಲ್ಲಿ ವೈಟರ್ ಆಗಿದ್ದಾಕೆ ಈಗ 100 ಕೋಟಿಯ ಒಡತಿ… ಜಗತ್ಪ್ರಸಿದ್ಧ ಆಟಗಾರನ ಗರ್ಲ್ ಫ್ರೆಂಡ್!

ರೆಸ್ಟೋರೆಂಟ್ನಲ್ಲಿ ಪರಿಚಾರಕಿಯಾಗಿದ್ದ ಆಕೆ ಈಗ 100 ಕೋಟಿ ರೂ.ಗಳ ಒಡತಿ
ನಾವಿವತ್ತು ಹೇಳುತ್ತಿರುವ ವ್ಯಕ್ತಿ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಗೆಳತಿ ಜಾರ್ಜಿನಾ ರೊಡ್ರಿಗಸ್ ಬಗ್ಗೆ. ಹೌದು ಒಂದು ಕಾಲದಲ್ಲಿ ರೆಸ್ಟೋರೆಂಟ್ ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಆಕೆ, ಇದೀಗ ಸುಮಾರು 100 ಕೋಟಿ ರೂ. ಒಡತಿಯಾಗಿದ್ದಾರೆ. 

29

ಬಾಲ್ಯದಲ್ಲಿ ಬಡತನವನ್ನು ಕಂಡಿದ್ದ ಜಾರ್ಜಿನಾ
ಜಾರ್ಜಿನಾ  (Georgina Rodríguez) ಬ್ಯೂನಸ್ ಐರಿಸ್ನಲ್ಲಿ ಜನವರಿ 27, 1994 ರಂದು ಜನಿಸಿದರು. ಈಕೆ ಹುಟ್ಟು ಶ್ರೀಮಂತೆಯಾಗಿರಲಿಲ್ಲ. ಬಾಲ್ಯದಲ್ಲಿ ಬಡತನವನ್ನು ಕಂಡು ಬೆಳೆದವರು ಜಾ.ರ್ಜಿನಾ

39

ರೆಸ್ಟೋರೆಂಟ್ ನಲ್ಲಿ ಪರಿಚಾರಕಿಯಾಗಿದ್ದರು
ಜಾರ್ಜಿನಾ ಬ್ರಿಸ್ಟಲ್ನಲ್ಲಿ ಪರಿಚಾರಕಿ (waitress) ಹಾಗೂ ಮಕ್ಕಳನ್ನು (Nanny)ನೋಡಿಕೊಳ್ಳುವ  ದಾದಿಯಾಗಿ ಕೆಲಸ ಮಾಡುತ್ತಿದ್ದಳು. ಇದರಿಂದಾಗಿಯೇ ಈಕೆ ತನ್ನ ಹಾಗೂ ಕುಟುಂಬದವರ ಪಾಲನೆ ಮಾಡುತ್ತಿದ್ದಳು. 

49
Georgina Rodriguez

ಈಗ ಶ್ರೀಮಂತ, ಐಷಾರಾಮಿ ಜೀವನ ನಡೆಸುವ ಜಾರ್ಜಿನಾ 
ಜಾರ್ಜಿನಾ ಪ್ರಸ್ತುತ ಸುಮಾರು 100 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದಾರೆ. ಅವರ ಪಾದಗಳು ನೆಲಕ್ಕೆ ಮುಟ್ಟೋದೆ ಇಲ್ಲ ಅಂತಾನೆ ಹೇಳಬಹುದು. ಅಂತಹ ವೈಭವಯುತವಾದ ಜೀವನವನ್ನು ನಡೆಸುತ್ತಾಳೆ ಜಾರ್ಜಿನಾ. 

59

ವಜ್ರ ಅಂದ್ರೆ ಈಕೆಗೆ ತುಂಬಾನೆ ಇಷ್ಟ 
ಒಂದು ಕಾಲದಲ್ಲಿ ಪರಿಚಾರಕಿಯಾಗಿದ್ದ ಜಾರ್ಜಿನಾಗೆ ವಜ್ರಗಳೆಂದರೆ ತುಂಬಾ ಇಷ್ಟ. ಕೋಟಿಗಟ್ಟಲೆ ಮೌಲ್ಯದ ವಜ್ರಖಚಿತ ಉಡುಪುಗಳು ಮತ್ತು ಉಂಗುರಗಳು ಅವರ ವಾರ್ಡ್ರೋಬ್ನಲ್ಲಿವೆ. 

69

ಅದೃಷ್ಟ ಬದಲಾದದ್ದು ಹೀಗೆ
ಮ್ಯಾಡ್ರಿಡ್ನ ಗುಸ್ಸಿ ಸ್ಟೋರ್ನಲ್ಲಿ ಫುಟ್ಬಾಲ್ ಆಟಗಾರ (foot ball player) ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಭೇಟಿಯಾದಾಗ ಜಾರ್ಜಿಯಾ ಅದೃಷ್ಟವು ಬದಲಾಯಿತು. ಆ ಸಮಯದಲ್ಲಿ ರೊನಾಲ್ಡೊ ಐರಿನಾ ಶೇಖ್ ಜೊತೆಗಿನ ಬ್ರೇಕ್ ಅಪ್ ನಿಂದ ದುಃಖದಲ್ಲಿದ್ದರು. ಜಾರ್ಜಿಯಾ ಮುಖ ಐರಿನಾ ರೀತಿಯೇ ಇದ್ದುದರಿಂದ ರೊನಾಲ್ಡೋಗೆ ಜಾರ್ಜಿಯಾ ಮೇಲೆ ಲವ್ ಆಯ್ತು ಎನ್ನಲಾಗುತ್ತದೆ . 

79

ಜಾರ್ಜಿನಾ ಅತ್ಯಂತ ಸುಂದರ ಯುವತಿ
ಜಾರ್ಜಿನಾ ರೊಡ್ರಿಗಸ್ ತುಂಬಾನೆ ಸುಂದರ ಯುವತಿ. ಕ್ರೀಡಾ ಜಗತ್ತಿನಲ್ಲಿ, ಈ ಕಪಲ್ಸ್ ಹಾಟೆಸ್ಟ್ ದಂಪತಿಗಳ ಲಿಸ್ಟ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜಾರ್ಜಿನಾ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಸುಮಾರು 65 ಮಿಲಿಯನ್ ಫಾಲೋವರ್ಸ್ ಕೂಡ ಇದ್ದಾರೆ. 

89

ರೊನಾಲ್ಡೊ ಮಕ್ಕಳ ತಾಯಿ
ರೊನಾಲ್ಡೊ ಅವರನ್ನು ಭೇಟಿಯಾದ ನಂತರ, ಜಾರ್ಜಿನಾ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು. ಜೊತೆಗೆ ಈಕೆ ಸೋಶಿಯಲ್ ಮೀಡಿಯಾ ಇನ್’ಫ್ಲ್ಯುಯೆನ್ಸರ್ ಕೂಡ ಹೌದು. ಜೊತೆಗೆ ರೊನಾಲ್ಡೋರ ಇಬ್ಬರು ಮಕ್ಕಳ ತಾಯಿ ಕೂಡ ಹೌದು. 

99

ಇನ್ನೂ ಮದುವೆ ಆಗಿಲ್ಲ ಈ ಜೋಡಿ
ರೊನಾಲ್ಡೊ ಮತ್ತು ಜಾರ್ಜಿನಾ ದೀರ್ಘಕಾಲದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ, ಆದರೆ ಈ ಜೋಡಿ ಇದುವರೆಗೂ ಮದುವೆಯಾಗಿಲ್ಲ. ರೊನಾಲ್ಡೊಗೆ, ಜಾರ್ಜಿನಾ ಎಲ್ಲವೂ ಆಗಿದ್ದು, ಜೊತೆಯಾಗಿ ತಮ್ಮ ಮಕ್ಕಳ ಜೊತೆಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ರೊನಾಲ್ಡೋಗೆ ಒಟ್ಟು ಐವರು ಮಕ್ಕಳಿದ್ದು, ಇಬ್ಬರು ಮಕ್ಕಳ ತಾಯಿ ಜಾರ್ಜಿನಾ. 

Read more Photos on
click me!

Recommended Stories