ಸ್ಟೀಲ್ ಪಾತ್ರೆಗಳನ್ನು ಪಳ ಪಳ ಹೊಳೆಯುವಂತೆ ಮಾಡಲು ಇಲ್ಲಿವೆ ಸೂಪರ್ ಟ್ರಿಕ್ಸ್

First Published Dec 26, 2020, 4:21 PM IST

ಅಡುಗೆ ಮನೆಯಲ್ಲಿ  ವಿವಿಧ ರೀತಿಯ ಪಾತ್ರೆಗಳನ್ನು ಬಳಸುತ್ತೇವೆ. ಇದರಲ್ಲಿ ಸ್ಟೀಲ್, ಗಾಜು, ಪಿಂಗಾಣಿ, ಹಿತ್ತಾಳೆ, ಅಲ್ಯೂಮಿನಿಯಂ ಪಾತ್ರೆಗಳು ಇರುತ್ತವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಸ್ಟೀಲ್ ಪಾತ್ರೆಗಳನ್ನು ಬಳಸಲಾಗುತ್ತದೆ. ಆಹಾರ ತಟ್ಟೆಯಿಂದ ಹಿಡಿದು ಒಂದು ಚಿಕ್ಕ ಚಮಚವೂ ಸ್ಟೀಲ್‌ನದ್ದೇ ಆಗಿರುತ್ತದೆ. ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳು ಆರೋಗ್ಯಕ್ಕೆ ಹಾನಿಕಾರಕವಲ್ಲದ, ವಿಷಕಾರಿಯಲ್ಲದ ವಸ್ತುಗಳಿಂದ ತಯಾರಿಸಲ್ಪಡುತ್ತವೆ. ಆದರೆ ಎಷ್ಟೋ ಸಲ ಸ್ಟೀಲ್ ಪಾತ್ರೆಗಳು ಹಳೆಯದಾಗಿ, ಸವೆದು ಹೋಗಿ ಬಿಡುತ್ತವೆ. ಹಾಗಿದ್ದರೆ  ಹಳೆಯ ಪಾತ್ರೆಗಳು ಹೊಸ ಪಾತ್ರೆಗಳಂತೆ ಹೊಳೆಯುವಂತೆ ಮಾಡುವ ಟ್ರಿಕ್ಸ್  ಇಲ್ಲಿವೆ.

ಅಡುಗೆಯಿಂದ ಹಿಡಿದು ಆಹಾರಗಳವರೆಗೆ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಸ್ಟೀಲ್ ಪಾತ್ರೆಗಳನ್ನು ಬಳಸಲಾಗುತ್ತದೆ. ಸ್ಟೇನ್ ಲೆಸ್ ಸ್ಟೀಲ್ ನ ಬಲದಿಂದಾಗಿ, ಇದನ್ನು ಬಳಸಲು ತುಂಬಾ ಸುಲಭವಾಗುತ್ತದೆ. ಸ್ಟೀಲ್ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಬಹಳ ದಿನಗಳವರೆಗೆ ಹೊಸದರಂತೆ ರಕ್ಷಿಸುವುದು ತುಂಬಾ ಕಠಿಣ ಕೆಲಸ.
undefined
ಮೊದಲು, ಸ್ಟೀಲ್ ಪಾತ್ರೆಗಳನ್ನು ಊಟಮಾಡಿದ ನಂತರ ಆದಷ್ಟು ಬೇಗ ಸ್ವಚ್ಛಗೊಳಿಸಬೇಕು, ಇದರಿಂದ ಪಾತ್ರೆಗೆ ಆಮ್ಲಜನಕ ದೊರೆಯಬಹುದು ಮತ್ತು ಅದರ ಹೊಳಪು ಹಾಗೇ ಉಳಿಯುತ್ತದೆ.
undefined
ಯಾವಾಗಲೂ ಸ್ಟೀಲ್ ಪ್ಲೇಟ್ ಅನ್ನು ಸ್ಪಾಂಜ್ ಅಥವಾ ನೈಲಾನ್ ಸ್ಕ್ರಬ್ನಿಂದ ಸೋಪ್ ದ್ರಾವಣ ಬಳಸಿ ಸ್ವಚ್ಛಗೊಳಿಸಿ. ಇದಕ್ಕೆ ಹಾರ್ಡ್ ಆಗಿರೋ ಸ್ಕ್ರಬರ್ ಬಳಸಬೇಡಿ, ಇಲ್ಲದಿದ್ದರೆ ಅದು ಗುರುತಾಗಿ ಬಿಡುತ್ತದೆ.
undefined
ಸಾಮಾನ್ಯವಾಗಿ ನಾವು ನೋಡುವಂತೆ, ಒಂದು ಬಿಳಿ ಮಡಿಕೆ ಒಳಗೆಲವಣಗಳು ಅಥವಾ ಕ್ಯಾಲ್ಸಿಯಂ ಅಂಶದಿಂದ ತಳ ಭಾಗದಲ್ಲಿ ದಪ್ಪನೆಯ ಪೊರೆ ಶೇಖರವಾಗುವುದನ್ನು ನಾವು ಕಾಣುತ್ತೇವೆ. ಅವುಗಳನ್ನು ಸ್ವಚ್ಛಗೊಳಿಸಲು ವಿನೆಗರ್ ನ ಒಂದು ಭಾಗ ಮತ್ತು ಮೂರು ಭಾಗನೀರನ್ನು ಬೆರೆಸಿ ಹತ್ತು ನಿಮಿಷ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ಸೋಪ್ ನೀರಿನಿಂದ ತೊಳೆಯಿರಿ.
undefined
ಒಂದು ವೇಳೆ ಪಾತ್ರೆಯಲ್ಲಿ ಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳಿದ್ದರೆ ಅಡುಗೆ ಸೋಡಾ ಬಳಸಿ ಸ್ವಚ್ಛಗೊಳಿಸಬಹುದು. ಸೋಡಾ ಮತ್ತು ನೀರಿನ ಪೇಸ್ಟ್ ತಯಾರಿಸಿ, ಅರ್ಧ ಗಂಟೆ ಬಿಟ್ಟು ನಂತರ ನೀರಿನಿಂದ ಸ್ವಚ್ಛಗೊಳಿಸಿ.
undefined
ಇದರ ಜೊತೆಗೆ, ನೀವು ಆಕ್ಸಲಿಕ್ ಆಮ್ಲ ಕ್ಲೆನ್ಸರ್ ಅನ್ನು ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ನೆನಪಿಡಿ: ಈ ಕ್ಲೆನ್ಸರ್‌ಗಳನ್ನು ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳ ಮೇಲೆ ದೀರ್ಘಕಾಲ ಇರಿಸಬಾರದು ಏಕೆಂದರೆ ಅವುಗಳು ಶಾಶ್ವತವಾಗಿ ಪಾತ್ರೆಗಳನ್ನು ಕೆಡಿಸಬಲ್ಲ ರಾಸಾಯನಿಕಗಳನ್ನು ಹೊಂದಿರುತ್ತವೆ.
undefined
ಹಲವು ಬಾರಿ ತೊಳೆದ ನಂತರವೂ, ಅವು ಪ್ರಕಾಶಮಾನವಾಗಿರುವಂತೆ ಸ್ಟೀಲ್ ಪ್ಲೇಟಿನಲ್ಲಿ ವಾಟರ್ ಮಾರ್ಕ್‌ಗಳು ಕಾಣಿಸಿಕೊಳ್ಳುತ್ತವೆ. ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ತೊಳೆದುಕೊಂಡ ತಕ್ಷಣ ಒಣ ಮತ್ತು ಮೃದುವಾದ ಬಟ್ಟೆಯಿಂದ ಒರೆಸಬೇಕು.
undefined
ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಪಾತ್ರೆ ತೊಳೆಯಲೂ ಸ್ಟೀಲ್ ಸಿಂಕ್ ಗಳನ್ನು ಬಳಸಲಾಗುತ್ತಿದೆ. ಸ್ವಚ್ಛಗೊಳಿಸದೇ ಇದ್ದಾಗ, ಸಿಂಕ್ ಕೂಡ ಮಾರ್ಕ್‌ಗಳು ಕಾಣಿಸಿಕೊಳ್ಳುತ್ತವೆ. ಆದುದರಿಂದ ಅವುಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಮುಖ್ಯ.
undefined
click me!