ಮನೆ ಗಾರ್ಡನ್ ನಲ್ಲಿರೋ ಪೀಸ್ ಲಿಲ್ಲಿ ಗಿಡದಲ್ಲಿ ಹೂವು ಅರಳುತ್ತಿಲ್ವಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್

Published : Mar 12, 2025, 03:58 PM ISTUpdated : Mar 12, 2025, 04:10 PM IST

ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಪೀಸ್ ಲಿಲ್ಲಿ ಹೂವುಗಳ ಗಿಡ ಇರುತ್ತೆ. ಆದರೆ ಕೆಲವು ಕಡೆ ಹೂವುಗಳು ಬಿಡೋದೆ ಇಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ನೋಡೋಣ.   

PREV
17
ಮನೆ ಗಾರ್ಡನ್ ನಲ್ಲಿರೋ ಪೀಸ್ ಲಿಲ್ಲಿ ಗಿಡದಲ್ಲಿ ಹೂವು ಅರಳುತ್ತಿಲ್ವಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್

ನಿಮ್ಮ ಮನೆಯಲ್ಲೂ ಪೀಸ್ ಲಿಲ್ಲಿ (peace lily flowers) ಹೂವುಗಳ ಗಿಡ ಇದೆಯೇ?  ಅದರೆ ಅವುಗಳಲ್ಲಿ ಹೂವುಗಳು ಅರಳೋದೆ ಇಲ್ಲ ಎಂದು ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ ಈ ಟಿಪ್ಸ್ ನಿಮಗಾಗಿ. ಈ ಟಿಪ್ಸ್ ಫಾಲೋ ಮಾಡಿದ್ರೆ, ಸುಲಭವಾಗಿ ಹೂವು ಅರಳುವಂತೆ ಮಾಡಬಹುದು. 
 

27

ವಾತಾವರಣವು ಬಿಸಿಯಾಗಿರೋವಾಗ ಪೀಸ್ ಲಿಲ್ಲಿ ಹೂವುಗಳನ್ನು ಬಿಡೋದು ಸಾಮಾನ್ಯ. ಆದರೆ ಅವು ಚೆನ್ನಾಗಿ ಹೂವು ಬಿಡದೇ ಇದ್ದರೆ ಏನೋ ಸಮಸ್ಯೆ ಆಗಿದೆ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಯಾವ ವಿಧಾನದ ಮೂಲಕ ಹೂವು ಅರಳುವಂತೆ ನೋಡಿಕೊಳ್ಳಬೇಕು ನೋಡೋಣ. 

37

ಸರಿಯಾದ ಟೆಂಪ್ರೇಚರ್ 
ಪೀಸ್ ಲಿಲ್ಲಿ ಗಿಡ ಆರೋಗ್ಯಯುತವಾಗಿ ಬೆಳೆಯಲು ಹಾಗೂ ಅವುಗಳಲ್ಲಿ ಸುಂದರವಾದ ಹೂವುಗಳು ಬಿಡಬೇಕು ಅಂದ್ರೆ ನೀವು ಅವುಗಳಿಗೆ 18 ಡಿಗ್ರಿಯಿಂದ 25 ಡಿಗ್ರಿವರೆಗೆ ಉಷ್ಣತೆ ಸಿಗುವಂತೆ ನೋಡಿಕೊಳ್ಳಬೇಕು. 

47

ಬೆಳಕು ಅಗತ್ಯ
ಪೀಸ್ ಲಿಲ್ಲಿ ಗಿಡ ಬೆಳೆಯೋದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಳಕಿನ ಅಗತ್ಯ ಇದೆ. ಇದಕ್ಕೆ ಇನ್ ಡೈರೆಕ್ಟ್ ಸೂರ್ಯನ ಬೆಳಕು ಸಿಕ್ಕಿದ್ರೂ ಚೆನ್ನಾಗಿ ಬೆಳೆಯುತ್ತೆ. ಸೂರ್ಯನ ಬೆಳಕು ನೇರವಾಗಿ ಬೀಳುವ ಸ್ಥಳದಲ್ಲಿ ಇವುಗಳನ್ನು ನೆಡಬೇಡಿ. ಇದರಿಂದ ಹೂವುಗಳು ಚೆನ್ನಾಗಿ ಬೆಳೆಯುತ್ತವೆ. 

57

ಬಾಳೆಹಣ್ಣಿನ ಸಿಪ್ಪೆಯ ಗೊಬ್ಬರ ಬಳಸಿ
ಪೀಸ್ ಲಿಲ್ಲಿ ಗಿಡದಲ್ಲಿ ಸುಂದರವಾದ ಹೂವುಗಳು ಬೆಳೆಯಬೇಕು ಎಂದು ನೀವು ಅಂದುಕೊಂಡ್ರೆ, ಅದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯ ಗೊಬ್ಬರ ಬಳಸಿ. ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪೊಟ್ಯಾಶಿಯಂ ಮತ್ತು ಫ್ರೋಸ್ಪರಸ್ ಗಿಡ ಆರೋಗ್ಯಯುತವಾಗಿ ಬೆಳೆಯೋದಕ್ಕೆ ಸಹಾಯ ಮಾಡುತ್ತದೆ. 

67

ಬಾಳೆಹಣ್ಣಿನ ಸಿಪ್ಪೆಯ ಗೊಬ್ಬರ ಮಾಡೋದು ಹೇಗೆ?
ಇದು ತುಂಬಾನೆ ಸಿಂಪಲ್ ವಿಧಾನ, ಬಾಳೆಹಣ್ಣಿನ ಸಿಪ್ಪೆಯನ್ನು (banana peel) 24 ರಿಂದ 48 ಗಂಟೆಗಳ ಕಾಲ ನೀರಿನಲ್ಲಿ ಹಾಕಿಡಿ. ಅದರಿಂದ ಉತ್ಪತ್ತಿಯಾಗುವ ಲಿಕ್ವಿಡ್ ರಸಗೊಬ್ಬರವಾಗಿ ಬಳಕೆ ಮಾಡಬಹುದು. 

77

ಈ ರಸಗೊಬ್ಬರವನ್ನು ತಿಂಗಳಿಗೆ ಒಂದು ಬಾರಿ ಬಳಕೆ ಮಾಡಿದ್ರೆ ಅದು ಚೆನ್ನಾಗಿ ಬೆಳೆಯುತ್ತೆ. ಇದಲ್ಲದೇ ಗಿಡಗಳ ಎಲೆಗಳು ಬಾಗೋದಕ್ಕೆ, ಹಾಗೂ ತಿಳಿ ಹಳದಿ ಬಣ್ಣಕ್ಕೆ ತಿರುಗಿದಾಗ ಅವು ಹಾಳಾಗುತ್ತಿವೆ ಅದಕ್ಕೆ ಆರೈಕೆಯ ಅಗತ್ಯ ಇದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. 
 

click me!

Recommended Stories