ಹಿಂದೂ ಧರ್ಮದಲ್ಲಿ ದೇವರಂತೆ, ಪ್ರಾಣಿ, ಪಕ್ಷಿ, ಮರ, ಗಿಡಗಳಿಗೂ ವಿಶೇಷ ಸ್ಥಾನ ನೀಡಲಾಗಿದೆ. ಜೀವವಿರುವ ಪ್ರತಿಯೊಂದನ್ನೂ ಸನಾತನ ಧರ್ಮ ದಲ್ಲಿ ಪೂಜ್ಯ ಭಾವದಿಂದ ಕಾಣಲಾಗುತ್ತೆ. ಅದರಲ್ಲೂ ಮರಗಳಲ್ಲಿ ದೇವರಿದ್ದಾನೆ ಎಂದು ನಂಬಲಾಗಿದೆ. ಹಾಗಿದ್ರೆ ಯಾವ ಮರದಲ್ಲಿ ಯಾವ ದೇವರಿದ್ದಾರೆ(God) ಅನ್ನೋದನ್ನು ತಿಳಿಯೋಣ.
ಧಾರ್ಮಿಕ ಗ್ರಂಥಗಳ ಪ್ರಕಾರ, ನೆಲ್ಲಿಕಾಯಿ, ತುಳಸಿ ಮತ್ತು ಬಾಳೆ (Banana)ಮರಗಳು ಮತ್ತು ಸಸ್ಯಗಳು ಲಕ್ಷ್ಮಿ ದೇವಿ ಮತ್ತು ವಿಷ್ಣುವಿನ ವಾಸಸ್ಥಾನವೆಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಅವರಿಗೆ ನಿಯಮಿತವಾಗಿ ನೀರನ್ನು ಅರ್ಪಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ನಿಮ್ಮದಾಗುತ್ತೆ.
ಅಲ್ಲದೆ, ಭಗವಾನ್ ವಿಷ್ಣುವನ್ನು(Lord Vishnu) ಮೆಚ್ಚಿಸಲು ಏಕಾದಶಿಯ ದಿನದಂದು ನೆಲ್ಲಿಕಾಯಿ ಮರದಲ್ಲಿ ನೀರನ್ನು ಅರ್ಪಿಸಲಾಗುತ್ತದೆ. ಪ್ರತಿ ಗುರುವಾರ ಬಾಳೆ ಗಿಡದಲ್ಲಿ ಅರಿಶಿನ ಮಿಶ್ರಿತ ನೀರನ್ನು ಅರ್ಪಿಸುವುದರಿಂದ ಭೌತಿಕ ಆನಂದವನ್ನು ತರುತ್ತದೆ ಎಂದು ನಂಬಲಾಗಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯು ಕದಂಬ ವೃಕ್ಷದಲ್ಲಿ ವಾಸಿಸುತ್ತಾಳೆಂದು ಹೇಳುತ್ತಾರೆ. ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹವನ್ನು ಪಡೆಯಲು, ಕದಂಬ ವೃಕ್ಷದ ಕೆಳಗೆ ಕುಳಿತು ಯಜ್ಞ ಮಾಡಬೇಕು. ಮಾತೆ ಲಕ್ಷ್ಮಿಯ (Goddess Lakshmi) ಆಶೀರ್ವಾದದಿಂದ, ನಿಮ್ಮ ಮನೆಯಲ್ಲಿ ಸಂತೋಷ ಸದಾ ತುಂಬಿರುತ್ತೆ.
ಬಿಲ್ವಪತ್ರೆ ಮತ್ತು ಆಲದ ಮರವು ದೇವತೆಗಳ ದೇವತೆಯಾದ ಮಹಾದೇವನ ವಾಸಸ್ಥಾನವೆಂದು ನಂಬಲಾಗಿದೆ. ಭಗವಾನ್ ಶಿವನಿಗೆ(Lord Shiva) ನಿಯಮಿತವಾಗಿ ಬಿಲ್ವಪತ್ರೆಯನ್ನು ಅರ್ಪಿಸೋದರಿಂದ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಜೊತೆಗೆ, ತ್ರಯೋದಶಿಯ ದಿನದಂದು ಆಲದ ಮರವನ್ನು ಪೂಜಿಸೋದರಿಂದ ಶಿವನು ತುಂಬಾ ಸಂತೋಷಗೊಳ್ಳುತ್ತಾನೆ.
ಭಗವಾನ್ ಶಿವನಿಗೆ ಶಮಿ ಎಲೆಯನ್ನು ಅರ್ಪಿಸಿದರೆ, ಶಿವ ತುಂಬಾ ಸಂತೋಷಪಡುತ್ತಾನೆ. ಇದಲ್ಲದೆ, ಪ್ರತಿ ಶನಿವಾರ ಶಮಿ ಮರದ ಬಳಿ ಸಾಸಿವೆ ಎಣ್ಣೆಯ(Mustard oil) ದೀಪ ಬೆಳಗಿಸುವುದರಿಂದ ಮನೆಗೆ ಬರುವ ಎಲ್ಲಾ ರೀತಿಯ ತೊಂದರೆಗಳನ್ನು ದೂರ ಮಾಡಬಹುದು. ನಕಾರಾತ್ಮಕ ಶಕ್ತಿಗಳ ಪರಿಣಾಮ ನಿಮ್ಮ ಮನೆಯಿಂದ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರತಿ ಬುಧವಾರ ಗಣೇಶನಿಗೆ(Lord Ganesh) ನಿಯಮಿತವಾಗಿ ಅರಿಶಿನ ಲೇಪಿತ ಗರಿಕೆ ಅರ್ಪಿಸುವುದರಿಂದ ಎಲ್ಲಾ ರೀತಿಯ ತೊಂದರೆಗಳನ್ನು ತಪ್ಪಿಸಬಹುದು ಎನ್ನಲಾಗುತ್ತೆ. ಅಲ್ಲದೇ ಗಣೇಶ ಗರಿಕೆ ಪ್ರಿಯನಾಗಿದ್ದು, ಈ ಹುಲ್ಲನ್ನು ಗಣೇಶನಿಗೆ ಅರ್ಪಿಸಿದರೆ ಮಾನೋಕಾಮನೆಗಳೆಲ್ಲಾ ಈಡೇರುತ್ತದೆ ಎಂದು ನಂಬಲಾಗಿದೆ.