ಜ್ಯೋತಿಷ್ಯಶಾಸ್ತ್ರದಲ್ಲಿ, ಶನಿವಾರವನ್ನು ಹನುಮಂತ ಮತ್ತು ಶನಿ ದೇವರಿಗೆ ಸಮರ್ಪಿಸಲಾಗಿದೆ. ಮುಖ್ಯವಾಗಿ ಈ ದಿನವನ್ನು ಶನಿ ದೇವನ ಆರಾಧನೆಗೆ ವಿಶೇಷವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನನ್ನು ಮೆಚ್ಚಿಸಲು ಆಂಜನೇಯನ ಆರಾಧನೆಯು ಹೆಚ್ಚು ಪ್ರಯೋಜನಕಾರಿ. ಭಜರಂಗಬಲಿಯ ಭಕ್ತರಿಗೆ ಶನಿಕಾಟ ಇರುವುದಿಲ್ಲ. ಭಜರಂಗಬಲಿಯಿಂದ ಆಶೀರ್ವಾದ ಪಡೆದವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಮನೆಯಲ್ಲಿ ಈತನ ಭಾವಚಿತ್ರವನ್ನು ಇಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಹನುಮಂತನ ಚಿತ್ರವಿರುವ ಮನೆಯಲ್ಲಿ ಮಂಗಳ, ಶನಿ, ಪಿತೃ, ಭೂತಾದಿ ದೋಷವಿಲ್ಲ ಎಂಬ ನಂಬಿಕೆ ಇದೆ.