ಅಕ್ಕಿಯ ಈ ಸರಳ ಪರಿಹಾರಗಳು ನಿಮ್ಮ ಅದೃಷ್ಟವನ್ನೇ ಬದಲಾಯಿಸತ್ತೆ!

First Published | Nov 4, 2022, 1:40 PM IST

ಅಕ್ಕಿಯನ್ನು ಕೇವಲ ಅನ್ನ ಮಾಡಲು ಮಾತ್ರವಲ್ಲ ಹಿಂದೂ ಧರ್ಮದಲ್ಲಿ ಹಲವಾರು ಕಾರಣಕ್ಕೆ ಅಕ್ಕಿಯನ್ನು ಬಳಕೆ ಮಾಡಲಾಗುತ್ತೆ. ಅಕ್ಕಿ ಎಂದರೆ ಅಕ್ಷತೆ, ಇದನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಧಾನ್ಯವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದ ಆರಾಧನೆಯಲ್ಲಿ ಯಾವುದೇ ವಸ್ತುವಿನ ಕೊರತೆಯಿದ್ದರೆ, ಆ ವಸ್ತುವಿನ ಬದಲು ಅಕ್ಕಿಯನ್ನು ಅರ್ಪಿಸಬಹುದು. ಪ್ರತಿಯೊಬ್ಬ ದೇವರಿಗೆ ಅರ್ಪಿಸಬಹುದಾದ ಏಕೈಕ ಧಾನ್ಯವೆಂದರೆ ಅಕ್ಕಿ ಎಂದು ಹೇಳಲಾಗುತ್ತೆ.

ಜೀವನದಲ್ಲಿ ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ, ಸಂಪೂರ್ಣ ಫಲಿತಾಂಶ ಸಿಗೋದಿಲ್ಲ ಮತ್ತು ಯಾವಾಗಲೂ ಜೀವನದಲ್ಲಿ ಒಂದಲ್ಲ ಒಂದು ಕೊರತೆಯಿರುತ್ತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೀವನದ ಎಲ್ಲಾ ಸಂತೋಷಗಳನ್ನು ಪಡೆಯಲು ಅದೃಷ್ಟವು(Luck) ಬಲವಾಗಿರುವುದು ಬಹಳ ಮುಖ್ಯ. 
 

ಅನೇಕ ಬಾರಿ ಅದೃಷ್ಟ ಕೆಲವು ಕಾರಣಗಳಿಗಾಗಿ ನಮ್ಮನ್ನು ಬೆಂಬಲಿಸೋದಿಲ್ಲ. ಆಗ, ಅಕ್ಕಿಯ(Rice) ಕೆಲವು ಸಣ್ಣ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಅದೃಷ್ಟವನ್ನು ಬಲಪಡಿಸಬಹುದು. ಹಾಗಾಗಿ ಅಂತಹ ಕೆಲವು ಕ್ರಮಗಳನ್ನು ಇಲ್ಲಿ ತಿಳಿದುಕೊಳ್ಳೋಣ, ಅದು ನಿಮ್ಮ ಹಣೆಬರಹವನ್ನು ಬದಲಾಯಿಸಬಹುದು.

Tap to resize

ಹಣದ (Money) ಕೊರತೆಯನ್ನು ನೀಗಿಸುತ್ತೆ
ಹಿಂದೂ ಧರ್ಮದಲ್ಲಿ, ಅಕ್ಷತೆ ಎಂದರೆ ಪೂಜೆಯಲ್ಲಿ ಬಳಸುವ ಅಕ್ಕಿ, ಅದನ್ನು ಕುಂಕುಮದೊಂದಿಗೆ ತಿಲಕವಾಗಿ ಹಣೆಯ ಮೇಲೆ ಹಚ್ಚೋದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.ಇದಕ್ಕಾಗಿ ನೀವು ಏನು ಮಾಡಬೇಕು ಅನ್ನೋದನ್ನು ತಿಳಿಸುತ್ತೇವೆ.

ತಾಮ್ರದ ಲೋಟದಲ್ಲಿ ಕುಂಕುಮದೊಂದಿಗೆ ಸ್ವಲ್ಪ ಅಕ್ಕಿಯನ್ನು ಹಾಕಿ ಮತ್ತು ಇದನ್ನು ಸೂರ್ಯ (Sun) ದೇವರಿಗೆ ಅರ್ಘ್ಯ ಅರ್ಪಿಸೋದರಿಂದ  ಅದೃಷ್ಟ ಒಲಿಯುತ್ತೆ ಮತ್ತು ವ್ಯಕ್ತಿಯು ಎಂದಿಗೂ ಹಣದ ಕೊರತೆ ಎದುರಿಸೋದಿಲ್ಲ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ. ನೀವೂ ಇದನ್ನು ಟ್ರೈ ಮಾಡಿ ನೋಡಬಹುದು.

ತಾಯಿ ಲಕ್ಷ್ಮಿಯ (Goddess Lakshmi) ಆಶೀರ್ವಾದ ಪಡೆಯಲು ನೀವೇನು ಮಾಡಬೇಕು ನೋಡಿ?
ನಂಬಿಕೆಯ ಪ್ರಕಾರ, ಹುಣ್ಣಿಮೆಯ ದಿನದಂದು, ಬೆಳಿಗ್ಗೆ ಎದ್ದು ಸ್ನಾನ ಮಾಡಿ, 21 ಅಕ್ಕಿಯ ಕಾಳುಗಳನ್ನು ಶುದ್ಧವಾದ ಕೆಂಪು ರೇಷ್ಮೆ ಬಟ್ಟೆಯಲ್ಲಿ ಇರಿಸಿ ಮತ್ತು ಮಾತೆ ಲಕ್ಷ್ಮಿಯ ಮುಂದೆ ಇಟ್ಟು ಪೂಜೆ ಮಾಡಿ. 

ಪೂಜೆಯ ನಂತರ, ಈ ಗಂಟನ್ನು ನಿಮ್ಮ ಮನೆಯಲ್ಲಿ ಸಂಪತ್ತಿನ (Wealth) ಸ್ಥಾನದಲ್ಲಿ ಇರಿಸಿ. ಅಂದರೆ ಯಾವ ಜಾಗದಲ್ಲಿ ನೀವು ಹಣ, ಚಿನ್ನವನ್ನು ಇಡುತ್ತೀರೋ ಆ ಜಾಗದಲ್ಲಿ ಇರಿಸಿ. ಹೀಗೆ ಮಾಡೋದರಿಂದ, ವ್ಯಕ್ತಿಯು ಎಂದಿಗೂ ಹಣದ ಕೊರತೆ ಎದುರಿಸೋದಿಲ್ಲ ಮತ್ತು ಮನೆಯಲ್ಲಿನ ಹಣ ಯಾವಾಗಲೂ ತುಂಬಿರುತ್ತೆ ಎಂದು ನಂಬಲಾಗಿದೆ.

ಭಗವಾನ್ ಶಿವನಿಗೆ (Lord shiv) ಅಕ್ಷತೆ ಅರ್ಪಿಸಿ
ನಂಬಿಕೆಗಳ ಪ್ರಕಾರ, ಒಬ್ಬ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಮತ್ತು ದಣಿವರಿಯದೆ ಕೆಲಸ ಮಾಡಿದ ನಂತರವೂ, ಅವನು ತನ್ನ ಕಠಿಣ ಪರಿಶ್ರಮಕ್ಕೆ ಸಾಕಷ್ಟು ಫಲಿತಾಂಶ ಪಡೆಯದಿದ್ದರೆ,  ಆ ವ್ಯಕ್ತಿ ಸೋಮವಾರ ಅರ್ಧ ಕೆಜಿ ಅಕ್ಕ್ಕಿಯೊಂದಿಗೆ ಶಿವ ದೇವಾಲಯಕ್ಕೆ ಹೋಗಿ ಶಿವ ನಾಮವನ್ನು ಜಪಿಸುತ್ತಾ ಮುಷ್ಟಿ ಅಕ್ಷತೆಯನ್ನು ಅರ್ಪಿಸಬೇಕು.

ಅಕ್ಷತೆ ಅರ್ಪಿಸಿದ ನಂತರ, ಉಳಿದ ಅಕ್ಕಿಯನ್ನು ಬಡ ಅಥವಾ ನಿರ್ಗತಿಕ ವ್ಯಕ್ತಿಗೆ ದಾನ (Donate) ಮಾಡಬೇಕು. ಸತತ ಐದು ಸೋಮವಾರಗಳ ಕಾಲ ಈ ಪರಿಹಾರವನ್ನು ಮಾಡೋದರಿಂದ, ಹಣಕ್ಕೆ ಸಂಬಂಧಿಸಿದ ಸಮಸ್ಯೆ ಕ್ರಮೇಣ ಕೊನೆಗೊಳ್ಳುತ್ತೆ ಎನ್ನುವ ನಂಬಿಕೆ ಇದೆ. ಹಾಗಾಗಿ ನೀವು ಸಹ ಹಣದ ಕೊರತೆ ಅನುಭವಿಸುತ್ತಿದ್ದರೆ ಈ ಪರಿಹಾರಗಳನ್ನು ಒಂದು ಸಲ ಟ್ರೈ ಮಾಡಿ ನೋಡಿ.   

Latest Videos

click me!