ನಿಮ್ಮ ಪರ್ಸ್ ನಲ್ಲಿ ಇದನ್ನಿಡಿ ಸಾಕು, ಹಣ ಪದೇ ಪದೇ ಖರ್ಚಾಗೋದೆ ಇಲ್ಲ

First Published | Oct 26, 2022, 4:00 PM IST

ತಾಯಿ ಲಕ್ಷ್ಮೀ ದೇವಿಯ ಕೃಪೆಯನ್ನು ಪಡೆಯಲು ಯಾರು ತಾನೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ತಾವು ಜೀವನದಲ್ಲಿ ಆರ್ಥಿಕವಾಗಿ ಉತ್ತಮವಾಗಿರಬೇಕೆಂಬ ಬಯಕೆ ಇದ್ದೇ ಇದೆ. ನಿಮಗೂ ಕೂಡ ಅದೇ ರೀತಿಯ ಬಯಕೆ ಇದ್ದರೆ ನೀವೂ ಸಹ ಲಕ್ಷ್ಮೀ ಮಾತೆಯನ್ನು ಪೂಜಿಸಬೇಕು. ಆದರೆ ಯಾವ ರೀತಿ ಪೂಜಿಸಬೇಕು ಎನ್ನುವ ಬಗ್ಗೆ ನಿಮಗೆ ಸರಿಯಾಗಿ ಮಾಹಿತಿ ಇಲ್ಲ ಅನ್ನೋದಾದ್ರೆ, ಇಲ್ಲಿದೆ ನೋಡಿ ಆ ಕುರಿತಾಗಿ ಮತ್ತಷ್ಟು ಮಾಹಿತಿ.

ಶ್ರೀ ಯಂತ್ರ
ಶ್ರೀ ಯಂತ್ರವು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿದೆ ಎಂದು ಹೇಳಲಾಗುತ್ತದೆ. ಇದಕ್ಕೆ ತುಂಬಾನೆ ಮಹತ್ವ ನೀಡಲಾಗುತ್ತೆ. ನೀವು ಶ್ರೀ ಯಂತ್ರವನ್ನು ಇಟ್ಟುಕೊಂಡು ಪ್ರತಿ ಶುಕ್ರವಾರ ಪೂಜಿಸಿದರೆ, ನಿಮ್ಮ ಆರ್ಥಿಕ ಸ್ಥಿತಿಯು (economic condition) ದೊಡ್ಡ ಪ್ರಮಾಣದಲ್ಲಿ ಸುಧಾರಿಸಬಹುದು.

ಕರ್ಪೂರ
ಕೆಲವೊಮ್ಮೆ ಇದ್ದಕ್ಕಿದ್ದಂತೆ ಹಣದ ಕೊರತೆ ಉಂಟಾಗುತ್ತದೆ. ಹಣದುಬ್ಬರದ ಯುಗದಲ್ಲಿ, ಇತ್ತೀಚಿನ ದಿನಗಳಲ್ಲಿ ಜನ ಒಂದಲ್ಲ ಒಂದು ಕಾರಣದಿಂದ ಸಾಕಷ್ಟು ಹಣ ಸಹ ಖರ್ಚಾಗುತ್ತೆ. ಅಂತಹ ಪರಿಸ್ಥಿತಿ ನಿಮಗೂ ಉಂಟಾದರೆ ಕರ್ಪೂರದ ತುಂಡು ಮತ್ತು ಗುಲಾಬಿ ಹೂವನ್ನು ತಿಜೋರಿಯಲ್ಲಿ ಸುರಕ್ಷಿತವಾಗಿ ಇರಿಸಿ. ಹಾಗೆ ಮಾಡುವುದರಿಂದ, ಖಜಾನೆ ಸಂಪತ್ತನ್ನು ಸ್ವಲ್ಪ ಮಟ್ಟಿಗೆ ಸ್ಥಿರಗೊಳಿಸಲು ಸಾಧ್ಯವಾಗುತ್ತೆ.

Tap to resize

ಬೆಳ್ಳಿ
ಪರ್ಸ್ ಅನ್ನು ಖಾಲಿ ಇಡಬಾರದು ಎಂದು ಹೇಳಲಾಗುತ್ತದೆ. ಆದರೆ, ಅದೇ ರೀತಿ, ಪರ್ಸ್ ನಲ್ಲಿ ಏನನ್ನಾದರೂ ಇಟ್ಟುಕೊಂಡರೆ ಸಾಲದು. ಅದು ಉಳಿಯಬೇಕು ಅನ್ನೋದಾದ್ರೆ, ನಿಮ್ಮ ಪರ್ಸ್ ನಲ್ಲಿ ಬೆಳ್ಳಿಯ ನಾಣ್ಯ (silver coin) ಇರಿಸಿಕೊಳ್ಳಿ. ಇದನ್ನು ಮಾಡುವುದರಿಂದ, ಪರ್ಸ್ ಬೇಗನೆ ಖಾಲಿ ಆಗೋದಿಲ್ಲ ಮತ್ತು ಹಣವನ್ನು ಸಂಪಾದಿಸಲು ಹೊಸ ಅವಕಾಶ ಸಹ ಸಿಗುತ್ತೆ.
 

ಅಲುಮ್
ಪರ್ಸ್ ನಲ್ಲಿ ಹಣವನ್ನು ಇಟ್ಟ ತಕ್ಷಣ ಹಣವನ್ನು ಖರ್ಚಾಗುತ್ತೆ ಎಂದು ಜನರು ಆಗಾಗ್ಗೆ ದೂರುತ್ತಾರೆ. ಹೀಗೆ ಆಗುತ್ತಿದ್ದರೆ ನಿಮ್ಮ ಪರ್ಸ್ ನಲ್ಲಿ ಕೆಂಪು ಬಟ್ಟೆಯಲ್ಲಿ ಆಲಮ್ ಅನ್ನು ಕಟ್ಟಿಡಿ. ಪ್ರತಿ 15 ದಿನಗಳಿಗೊಮ್ಮೆ ಆಲಮ್ ಅನ್ನು ಬದಲಿಸಿ. ಇದನ್ನು ಮಾಡುವುದರಿಂದ, ಯಾವಾಗಲೂ ಹಣ ಪರ್ಸ್ ನಲ್ಲಿ ಉಳಿಯುವ ಸಾಧ್ಯತೆ ಇದೆ.

ಅರಿಶಿನ
ಅರಿಶಿನಕ್ಕೂ ಹಣಕ್ಕೂ ಒಂದು ರೀತಿಯಲ್ಲಿ ಸಂಬಂಧ ಇದೆ. ಇದರಿಂದ ನಿಮಗೆ ಆರ್ಥಿಕ ಲಾಭವಾಗಲಿದೆ. ನಿಮ್ಮ ತಿಜೋರಿಯಲ್ಲಿ ಅರಿಶಿನವನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಅಲ್ಲದೇ ಇದಕ್ಕೆ ಪ್ರತಿದಿನ ಪೂಜೆ ಮಾಡಬೇಕು. ಹೀಹೆ ಮಾಡೋದರಿಂದ ಹಣದ ಸಮಸ್ಯೆ (money problem) ಉಂಟಾಗೋದಿಲ್ಲ.

ಉಪ್ಪು
ಹಣ ಪಡೆಯಲು ಏನೇನೋ ಮಾಡಿದ ನಂತರವೂ, ನಿಮಗೆ ಹಣ ಸಿಗದಿದ್ದರೆ, ಉಪ್ಪಿನ ಬಳಕೆಯು ಬಹಳ ಉಪಯುಕ್ತವಾಗಿದೆ. ಒಂದು ಗಾಜಿನ ಸೀಸೆಯಲ್ಲಿ ಉಪ್ಪು ಮತ್ತು ಲವಂಗವನ್ನು ಒಟ್ಟಿಗೆ ಇರಿಸಿ. ಇದನ್ನು ಮಾಡುವುದರಿಂದ, ಹಣವು ಬರಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ.

ದಾಸವಾಳ
ದಾಸವಾಳ ಹೂವು (hibiscus flower) ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುತ್ತದೆ. ಪ್ರತಿ ಶುಕ್ರವಾರ, ನೀವು ಮಾ ಲಕ್ಷ್ಮಿಗೆ ಈ ಹೂವನ್ನು ಅರ್ಪಿಸಬೇಕು. ಇದನ್ನು ಮಾಡುವುದರಿಂದ, ನಿಮ್ಮ ಸ್ಥಿತಿಯು ಸುಧಾರಿಸಲು ಪ್ರಾರಂಭಿಸುತ್ತದೆ. ಕೆಂಪು ದಾಸವಾಳ ಹೂವನ್ನು ದೇವಿ ತುಂಬಾನೆ ಇಷ್ಟಪಡುತ್ತಾಳೆ ಎಂದು ನಂಬಲಾಗಿದೆ.

ಪವಿತ್ರ ತುಳಸಿ
ಈ ಪರಿಹಾರವು ಮಹಿಳೆಯರಿಗಾಗಿದೆ, ಸಂಗಾತಿಯು ಪ್ರಗತಿ ಹೊಂದದಿದ್ದರೆ, ಸಂಬಳವು ಹೆಚ್ಚಾಗುತ್ತಿಲ್ಲ ಎಂದು ಅನಿಸಿದರೆ, ಆಗ ಹೆಂಡತಿ ತುಳಸಿಗೆ ನಿಯಮಿತವಾಗಿ ನೀರನ್ನು ಅರ್ಪಿಸಿ ಮತ್ತು ತುಳಸಿಗೆ 3 ಬಾರಿ ಪ್ರದಕ್ಷಿಣೆ ಹಾಕುವ ಮೂಲಕ ಪೂಜಿಸಿದರೆ, ಆಗ ಅನುಗ್ರಹ ಸಿಗುತ್ತದೆ ಎಂದು ನಂಬಲಾಗಿದೆ.

ಕಬ್ಬಿಣ
ಕೆಲವು ಜನರು ಕಬ್ಬಿಣವನ್ನು ಗೌರವಿಸುವುದಿಲ್ಲ ಆದರೆ ಇತರ ಲೋಹಗಳಂತೆ, ಕಬ್ಬಿಣವು ಸಹ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ನೀವು ನಿಮ್ಮ ಮಧ್ಯದ ಬೆರಳಿಗೆ ಕಬ್ಬಿಣದ ಉಂಗುರವನ್ನು ಧರಿಸಿದರೆ, ವೃತ್ತಿಜೀವನವು ಉತ್ತಮವಾಗಿರುತ್ತದೆ. ಇದರೊಂದಿಗೆ, ಪ್ರತಿ ಶನಿವಾರ ಬಡವರಿಗೆ ನಾಣ್ಯಗಳನ್ನು ದಾನ ಮಾಡಿ.

Latest Videos

click me!