Vastu Shastra 2022: ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಈ ವಸ್ತುಗಳು ಕಾಣಿಸಿದರೆ ಶುಭ ಶಕುನ!

First Published | Jun 20, 2022, 1:12 PM IST

ಮನೆಯಿಂದ ಹೊರಡುವಾಗ ಕೆಲ ವಸ್ತುಗಳು ಕಣ್ಣಿಗೆ ಬಿದ್ದರೆ, ಕೆಲ ಪ್ರಾಣಿಪಕ್ಷಿಗಳು ಕಾಣಿಸಿಕೊಂಡರೆ ಅದು ಶುಭ ಶಕುನವಾಗಿದೆ. ಅಂಥ ವಸ್ತುಗಳು ಮತ್ತು ಜೀವಿಗಳು ಯಾವೆಲ್ಲ ನೋಡೋಣ.

ಜೇನು(Honey)
ಯಾವುದೋ ಶುಭ ಕಾರ್ಯದ ನಿಮಿತ್ತ ಮನೆಯಿಂದ ಹೊರಗೆ ಹೋಗುತ್ತಿದ್ದರೆ ದಾರಿಯಲ್ಲಿ ಜೇನು ಅಥವಾ ಹಸು ಕಂಡರೆ ಕೆಲಸ ಸಫಲವಾಗುತ್ತದೆ ಎಂದರ್ಥ. 

ಹಾಲು(milk)
ಮನೆಯಿಂದ ಹೊರಗೆ ಹೋಗುವಾಗ ಹಾಲು ಕಂಡರೆ ಒಳ್ಳೆಯದು. ಯಾರೋ ಹಾಲು ತರುತ್ತಿರುವುದು, ಹಾಲಿನ ವ್ಯಾನ್ ಕಾಣಿಸುವುದು ಎಲ್ಲವೂ ಶುಭಶಕುನ. ಮದುವೆಗೆ ಹೋಗುವಾಗ ದಾರಿಯಲ್ಲಿ ಕರು ಹಸುವಿನ ಹಾಲು ಕುಡಿಯುವುದನ್ನು ನೋಡಿದರೆ ಅದು ತುಂಬಾ ಮಂಗಳಕರವಾಗಿರುತ್ತದೆ.

Tap to resize

ನೀರು ತುಂಬಿದ ಪಾತ್ರೆ(vessel full of water)
ಹೊರ ಕಾಲಿಟ್ಟಾಗ ನೀರು ತುಂಬಿದ ಪಾತ್ರೆಯನ್ನು ನೋಡುವುದು ತುಂಬಾ ಮಂಗಳಕರ. 

ಸಾಧುಗಳು(monks)
ಮುಂಜಾನೆ ನಿಮ್ಮ ಮನೆಗೆ ಸಾಧು ಬಂದರೆ ತುಂಬಾ ಶುಭ. ಅವರನ್ನು ಬರಿಗೈಯಲ್ಲಿ ಹಿಂತಿರುಗಲು ಬಿಡಬೇಡಿ. ಅವರಿಗೆ ಕೊಂಚ ಹಣವನ್ನು ದಾನ ಮಾಡುವುದರಿಂದ ಎಲ್ಲೋ ಬಾಕಿ ಉಳಿದಿರುವ ನಿಮ್ಮದೇ ಹಣವನ್ನು ಮರಳಿ ಪಡೆಯುತ್ತೀರಿ ಎಂದು ಹೇಳಲಾಗುತ್ತದೆ. ಅಥವಾ ಅಂದು ನಿಮ್ಮ ವ್ಯವಹಾರದಲ್ಲಿ ಲಾಭವಿರುತ್ತದೆ. 

dead body new

ಪಾರ್ಥಿವ ಶರೀರ(dead body)
ಸಾಮಾನ್ಯವಾಗಿ ಒಳ್ಳೆಯ ಕೆಲಸಕ್ಕೆ ಹೊರಟಾಗ ಯಾರದೋ ಅಂತಿಮ ಯಾತ್ರೆ ನೋಡಿದರೆ ಅಥವಾ ಶವವನ್ನು ನೋಡಿದಾಗ ಕೆಲಸ ಕೆಡುತ್ತದೆಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ನಿಜವಾಗಿ ಮನೆಯಿಂದ ಬರುವ ದಾರಿಯಲ್ಲಿ ಶವ ಕಂಡರೆ ಶುಭ ಎಂದು ಹೇಳಲಾಗುತ್ತದೆ. ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ.

ಗಂಟೆಯ ಸದ್ದು(bell sound)
ನಾವು ಮನೆಯಿಂದ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ದೇವಸ್ಥಾನದ ಗಂಟೆಯ ಸದ್ದು ಕೇಳಿಸಿದರೆ ಕೆಲಸದಲ್ಲಿ ಯಶಸ್ಸು ಖಚಿತ.

ಬೆಲ್ಲ(jaggery)
ಬೆಲ್ಲಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಬೆಳಿಗ್ಗೆ ಇದನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಯಾರಾದರೂ ಬೆಲ್ಲವನ್ನು ತುಂಬಿಕೊಂಡು ಹೋಗುತ್ತಿದ್ದರೆ ಮತ್ತು ನೀವು ಅದನ್ನು ನೋಡಿದರೆ, ಅದು ಲಾಭದ ಸಂಕೇತವಾಗಿದೆ.

ಪಕ್ಷಿಗಳು ಆಹಾರ ಹಂಚಿಕೊಳ್ಳುವುದು(Birds sharing food)
ನೀವು ಯಾವುದಾದರೂ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದರೆ, ದಾರಿಯಲ್ಲಿ ಪಕ್ಷಿಗಳು ತಮ್ಮ ನಡುವೆ ಆಹಾರವನ್ನು ಹಂಚಿಕೊಳ್ಳುವುದು ನೋಡಿದರೆ ನಿಮ್ಮ ಕೆಲಸವು ಪೂರ್ಣಗೊಳ್ಳುವ ಹಾದಿಯಲ್ಲಿದೆ ಎಂದರ್ಥ. ತಾಯಿ ಹಕ್ಕಿ ಮರಿ ಹಕ್ಕಿಯ ಬಾಯಿಗೆ ಆಹಾರ ನೀಡುವುದು, ಕಾಗೆಗಳು ಗುಂಪನ್ನೆಲ್ಲ ಕರೆದು ಆಹಾರ ಹಂಚಿಕೊಳ್ಳುವುದು ಇಂಥವು ಶುಭಶಕುನವಾಗಿವೆ. 

Latest Videos

click me!