ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿದ್ರೆ ಸಂಪತ್ತು , ಸಂತೋಷ ತುಂಬುತ್ತದೆ

First Published | Oct 15, 2021, 1:33 PM IST

ಸುಖ ಸಮೃದ್ಧಿಗಾಗಿ (Prosperity) ಮನೆಯಲ್ಲಿ ಧನಾತ್ಮಕ ಶಕ್ತಿ (Positive Energy) ಹೊಂದುವುದು ಬಹಳ ಮುಖ್ಯ, ಆದರೆ ಇದು ವಾಸ್ತು ದೋಷ (Vastu Dosh) ಎಂಬ ಅಂಶವೂ ಸೇರಿದಂತೆ ಅನೇಕ ಕಾರಣಗಳಿಗಾಗಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಮನೆಯಲ್ಲಿನ ಸಕರಾತ್ಮಕತೆ  (Negativity) ನಮ್ಮ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. 
 

ಮನೆಯಲ್ಲಿನ ನಕಾರಾತ್ಮಕ ಶಕ್ತಿ (Negative Vibes), ಆರ್ಥಿಕ ನಿರ್ಬಂಧಗಳು, ರೋಗಗಳು ಮತ್ತು ನೋವನ್ನು ಉಂಟುಮಾಡುತ್ತದೆ. ವಾಸ್ತು ಶಾಸ್ತ್ರವು (Vastu Shastra) ಮನೆಯ (Home)ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ತುಂಬಲು ಕೆಲವು ಖಚಿತ ಮಾರ್ಗಗಳನ್ನು ಒದಗಿಸುತ್ತದೆ. 

ಮನೆಯಲ್ಲಿ ನಿರಂತರ ಧನಾತ್ಮಕತೆಯನ್ನು (Positive Vibes) ಕಾಪಾಡಿಕೊಳ್ಳಲು ಈ ಕ್ರಮಗಳು (Remedies) ಪ್ರತಿದಿನ ಅಗತ್ಯ. ಆದಾಗ್ಯೂ, ಈ ಕ್ರಮಗಳು ತುಂಬಾ ಸುಲಭ ಮತ್ತು ಹಾಗೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. 

Tap to resize

ಪ್ರತಿದಿನ ಬೆಳಿಗ್ಗೆ ಮನೆಯ ಮುಖ್ಯ ಬಾಗಿಲು (main Gate) ಮತ್ತು ಕಿಟಕಿಗಳನ್ನು ತೆರೆಯಬೇಕು. ನಂತರ ಮುಖ್ಯ ದ್ವಾರದ ಹೊಸ್ತಿಲನ್ನು ಒಂದು ಕೊಡ ತಿಳಿ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ ಮತ್ತು ಸಂಪತ್ತನ್ನು (Wealth) ಸುರಿಸುತ್ತಾಳೆ. 

ಧನಾತ್ಮಕ ಶಕ್ತಿಯು (positive energy) ಯಾವಾಗಲೂ ಮುಖ್ಯ ಬಾಗಿಲಿನ ಮೂಲಕ ಹರಿಯುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿದಿನ ಬೆಳಿಗ್ಗೆ ಬಾಗಿಲಲ್ಲಿ ಸ್ವಸ್ತಿಕ್ ಚಿಹ್ನೆ ಬರೆಯಿರಿ. ಜೊತೆಗೆ ಉತ್ತಮ ಪ್ರಯೋಜನಗಳನ್ನು ಪಡೆಯಿರಿ. ಇದು ಎಂದಿಗೂ ಮನೆಯಲ್ಲಿ ಹಣದ ಕೊರತೆ ಉಂಟು ಮಾಡುವುದಿಲ್ಲ. 

ಬೆಳಗ್ಗೆ ಎದ್ದು ಸ್ನಾನ (Bath) ಮಾಡಿ ಬಳಿಕ ಮನೆಯ ಮುಂದೆ ರಂಗೋಲಿ (Rangoli) ಬಿಡಬೇಕು. ಇದರಿಂದ ಲಕ್ಷ್ಮೀ ದೇವಿ ಪ್ರತ್ಯಕ್ಷಳಾಗುತ್ತಾಳೆ ಎಂದು ಹೇಳಲಾಗುತ್ತದೆ. ಲಕ್ಷ್ಮೀ ದೇವಿ ಮನೆಯಲ್ಲಿದ್ದರೆ ಅಲ್ಲಿ ಹಣದ ಕೊರತೆಯೇ (money problem) ಇರೋದಿಲ್ಲ ಎಂಬುದು ನೆನಪಿರಲಿ. 

ಪ್ರತಿದಿನ ಬೆಳಗ್ಗೆ ತುಳಸಿ(Tulasi)ಗೆ ನೀರು ಹಾಕಿ ಪೂಜೆ ಮಾಡಬೇಕು. ಹೆಣ್ಣು ಮಕ್ಕಳು ಇದನ್ನ ಮಾಡುವುದು ಶುಭ ಎನ್ನಲಾಗುತ್ತದೆ.  ಇದರಿಂದ ಲಕ್ಷ್ಮೀ ದೇವಿಗೆ ಸ್ವಾಗತ ಕೋರಿದಂತೆ ಆಗುತ್ತದೆ. ಹೀಗೆ ಮಾಡುವುದರಿಂದ ದೇವಿ ಸಂತಸಗೊಂಡು ಇಷ್ಟಾರ್ಥ ಸಿದ್ಧಿಸುತ್ತಾಳೆ ಎನ್ನಲಾಗುತ್ತದೆ. 

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕರ್ಪೂರವನ್ನು ಬೆಳಗಿಸಿ ಮತ್ತು ಅದನ್ನು ಮನೆಯಾದ್ಯಂತ ಎಲ್ಲಾ ಕೋಣೆಗಳಿಗೆ ತೆಗೆದುಕೊಂಡು ಹೋಗಿ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ (negative energy)ನಿವಾರಣೆಯಾಗಿ ಸಕಾರಾತ್ಮಕತೆಯನ್ನು ತರಲು ಇದು ಖಚಿತ ಮಾರ್ಗವಾಗಿದೆ. 

Latest Videos

click me!