ಸೀರಿಯಲ್​ ನಟ-ನಟಿಯರ ರೊಮಾನ್ಸ್​ಗೆ 6 ಗಂಟೆಯಲ್ಲಿ 2 ಮಿಲಿಯನ್​ ವೀಕ್ಷಣೆ! ಅಂಥದ್ದೇನಿತ್ತು ಇದರಲ್ಲಿ?

Published : Feb 15, 2026, 05:25 PM IST

ಪ್ರೇಮಿಗಳ ದಿನದ ಅಂಗವಾಗಿ ಜೀ ಕನ್ನಡ ವಾಹಿನಿಯು ತನ್ನ ಸೀರಿಯಲ್‌ಗಳ ರೊಮ್ಯಾಂಟಿಕ್ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಈ ವಿಶೇಷ ದೃಶ್ಯಗಳಿಗೆ ಕೇವಲ ಆರು ಗಂಟೆಗಳಲ್ಲಿ 20 ಲಕ್ಷ ವೀಕ್ಷಣೆಗಳು ಬಂದಿದ್ದು, ಈ ಪ್ರೀತಿ-ವಿಶ್ವಾಸಕ್ಕಾಗಿ ವಾಹಿನಿಯು ವೀಕ್ಷಕರಿಗೆ ಧನ್ಯವಾದ ಅರ್ಪಿಸಿದೆ.

PREV
16
ಪ್ರೇಮಿಗಳ ದಿನ ವಿಶೇಷ

ನಿನ್ನೆಯಷ್ಟೇ ಪ್ರೇಮಿಗಳ ದಿನ (Valentines day ) ಮುಗಿದಿದೆ. ಇಂಥ ವಿಶೇಷ ದಿನ ಎಂದ ಮೇಲೆ ಸೀರಿಯಲ್​ಗಳಲ್ಲಿ ಅವುಗಳದ್ದೇ ಕಾರುಬಾರು. ಹಬ್ಬದ ಸಂದರ್ಭ ಹಾಗೂ ಇಂಥ ವಿಶೇಷ ದಿನಗಳಲ್ಲಿ, ಅದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಸೀರಿಯಲ್​ಗಳಲ್ಲಿ ಪ್ರಸಾರ ಮಾಡುವುದು ಮಾಮೂಲು.

26
ರೊಮಾನ್ಸ್​ ದೃಶ್ಯ

ಅದರಂತೆಯೇ ಪ್ರೇಮಿಗಳ ದಿನದ ಅಂಗವಾಗಿ ಸೀರಿಯಲ್​ ನಟ-ನಟಿಯರ ಪ್ರೇಮ ನಿವೇದನೆ, ರೊಮಾನ್ಸ್​ಗಳ ದೊಡ್ಡ ಮನೋರಂಜನೆಯನ್ನೇ ಜೀ ಕನ್ನಡ ವಾಹಿನಿ ಉಣಬಡಿಸಿತ್ತು.

36
ಜೀವನದ ಭಾಗ

ಸೀರಿಯಲ್​ ಅಂದರೆ ಅದನ್ನು ಕೇವಲ ಒಂದು ಧಾರಾವಾಹಿ ಆಗಿ ನೋಡುವವರಿಗಿಂತಲೂ ಅದನ್ನು ತಮ್ಮ ಜೀವನದ ಒಂದು ಭಾಗ ಎಂದು ನೋಡುವವರೇ ಹೆಚ್ಚು. ಇದೇ ಕಾರಣಕ್ಕೆ ಸೀರಿಯಲ್​ಗಳಲ್ಲಿ ಬರುವ ಪ್ರತಿಯೊಂದು ಸನ್ನಿವೇಶಗಳನ್ನು ತಮ್ಮ ಜೀವನದ ಹತ್ತಿರ ಎಂದುಕೊಳ್ಳುತ್ತಾರೆ.

46
ಜೋಡಿಗಳ ಕೆಮೆಸ್ಟ್ರಿ

ಸೀರಿಯಲ್​ಗಳಲ್ಲಿನ ಜೋಡಿಗಳು ನಿಜ ಜೀವನದಲ್ಲಿ ಮದುವೆಯಾಗದಿದ್ದರಂತೂ ಮುಗಿದೇ ಹೋಯ್ತು. ಆ ಜೋಡಿಯನ್ನು ಒಂದು ಮಾಡುವವರೆಗೂ ಅಭಿಮಾನಿಗಳು ಬಿಡಲ್ಲ. ಅದರಲ್ಲಿಯೂ ಕೆಲವು ಜೋಡಿಗಳ ಕೆಮೆಸ್ಟ್ರಿಗೆ ಅಭಿಮಾನಿಗಳು ಫಿದಾ ಆಗುವುದು ಉಂಟು.

56
20 ಲಕ್ಷ ವ್ಯೂವ್ಸ್​

ಅದಕ್ಕೆ ಸಾಕ್ಷಿಯಾಗಿ ಇದೇ ಪ್ರೇಮಿಗಳ ದಿನಕ್ಕೆ ಜೀ ಕನ್ನಡ ವಾಹಿನಿಯ ಎಲ್ಲಾ ಸೀರಿಯಲ್​ ತಾರೆಯರ ರೊಮಾನ್ಸ್​ ದೃಶ್ಯಗಳಿಗೆ ಕೇವಲ ಆರು ಗಂಟೆಗಳಲ್ಲಿ 2 ಮಿಲಿಯನ್​ ಅರ್ಥಾತ್​ 20 ಲಕ್ಷ ವ್ಯೂವ್ಸ್​ ಬಂದಿದೆಯಂತೆ.

66
ವೀಕ್ಷಕರಿಗೆ ಧನ್ಯವಾದ

ಈ ಬಗ್ಗೆ ವಾಹಿನಿ ಮಾಹಿತಿ ಶೇರ್​ ಮಾಡಿಕೊಂಡಿದ್ದು, ಅದಕ್ಕೆ ವೀಕ್ಷಕರಿಗೆ ಧನ್ಯವಾದ ಸಲ್ಲಿಸಿದೆ. ಇಷ್ಟೊಂದು ಪ್ರೀತಿ-ವಿಶ್ವಾಸ ತೋರಿಸಿರುವುದಕ್ಕಾಗಿ ಧನ್ಯವಾದ ಎಂದು ವಾಹಿನಿ ಹೇಳಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories