ಜೈದೇವ್ ಮತ್ತು ಶಕುಂತಲಾ ಸೇರಿ ಭೂಮಿಕಾಳನ್ನು ಕೊಂದು ಆ ಜಾಗಕ್ಕೆ ತದ್ರೂಪಿ ದೀಪಿಕಾಳನ್ನು ತರಲು ಸಂಚು ರೂಪಿಸಿದ್ದಾರೆ. ಅವರ ಪ್ಲಾನ್‌ನಂತೆ ಭೂಮಿಕಾಳ ಕಾರು ಪ್ರಪಾತಕ್ಕೆ ಬಿದ್ದಿದ್ದು, ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಈಗ ಮುಗಿಯುತ್ತೆ, ಅಗ ಮುಗಿಯುತ್ತೆ ಅನ್ನೋ ಅಮೃತಧಾರೆ ಸೀರಿಯಲ್ ಹೊಸ ತಿರುವುಗಳ ಮೂಲಕ ಮತ್ತೆ ತನ್ನ ಪಯಣವನ್ನು ಮುಂದುವರಿಸುತ್ತಿದ್ದಾರೆ. ಭೂಮಿಕಾ ವಿರುದ್ಧ ದ್ವೇಷ ಸಾಧನೆಗೆ ಮುಂದಾಗಿರುವ ಜೈದೇವ್, ತದ್ರೂಪಿಯಾಗಿರುವ ದೀಪಿಕಾಳನ್ನು ಪತ್ತೆ ಮಾಡಿದ್ದಾನೆ. ದೀಪಿಕಾ ಬರುತ್ತಿದ್ದಂತೆ ಕಥೆಯೆಲ್ಲಾ ಸಂಪೂರ್ಣವಾಗಿ ಬದಲಾಗಿದೆ.
25
ಜೆಡಿ, ಶಕುಂತಲಾ ಪ್ಲಾನ್
ಭೂಮಿಕಾಳನ್ನು ಕೊಂದು ಆ ಜಾಗಕ್ಕೆ ದೀಪಿಕಾಳನ್ನು ಕರೆದುಕೊಂಡು ಬರೋದು ಜೈದೇವ್ ಮತ್ತು ಶಕುಂತಲಾ ಪ್ಲಾನ್ ಆಗಿದೆ. ಇದಕ್ಕಾಗಿ ಭೂಮಿಕಾ ಒಂಟಿಯಾಗಿ ಮನೆಯಿಂದ ಹೊರಬರುವಂತೆ ಮಾಡಿದ್ದಾನೆ. ಚಿಕ್ಕಮಗಳೂರಿನಲ್ಲಿರುವ ಅಜ್ಜಿಗೆ ಆರೋಗ್ಯ ಸರಿ ಇಲ್ಲ ಎಂಬ ವಿಷಯ ತಿಳಿದ ಕೂಡಲೇ ರಾತ್ರಿ ಒಬ್ಬಳೇ ಭೂಮಿಕಾ ಹೊರಟಿದ್ದಾಳೆ.
35
ದಾರಿ ತಪ್ಪಿದ ಭೂಮಿಕಾ
ರಾತ್ರಿ ಒಂಟಿಯಾಗಿಯೇ ಹೊರಟಿರುವ ಭೂಮಿಕಾ ದಾರಿಯನ್ನು ಜೈದೇವ್ ತಪ್ಪಿಸಿದ್ದಾನೆ. ರಸ್ತೆ ದುರಸ್ತಿ ಎಂಬ ಫಲಕ ನೋಡಿದ ಭೂಮಿಕಾ, ಬೋರ್ಡ್‌ನಲ್ಲಿರುವ ಸೂಚನೆ ಪ್ರಕಾರವೇ ಭೂಮಿಕಾ ಹೋಗಿದ್ದಾಳೆ. ಫಲಕದ ಮಾರ್ಗದಂತೆ ಕಾರ್ ತಿರುಗಿಸುತ್ತಿದ್ದಂತೆ ಪ್ರಪಾತದಲ್ಲಿ ಬಿದ್ದಿದೆ. ಇಲ್ಲಿಗೆ ಭೂಮಿಕಾಳ ಕಥೆ ಮುಗಿಯುತ್ತೆ, ಆ ಜಾಗಕ್ಕೆ ದೀಪಿಕಾಳನ್ನು ಕರೆದುಕೊಂಡು ಜೈದೇವ್ ಬರಲಿದ್ದಾನೆ.
ಕಳೆದ ನಾಲ್ಕೈದು ಸಂಚಿಕೆಗಳನ್ನು ವೀಕ್ಷಿಸಿರುವ ವೀಕ್ಷಕರು, ಜೈದೇವ್ ಮಾಡೋದೆಲ್ಲಾ ಒಳ್ಳೇದಕ್ಕೆ. ಡೋಂಟ್ ವರಿ ಭೂಮಿಕಾ? ನಿನಗೇನು ಆಗಲ್ಲ. ಎಷ್ಟೋ ವರ್ಷಗಳ ಹಿಂದೆ ಕಳೆದು ಹೋಗಿದ್ದ ನಿನ್ನ ತಂಗಿ ನಿನಗೆ ಸಿಗಲಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರಂತೂ ವಿನಾಕಾರಣ ಧಾರಾವಾಹಿಯನ್ನು ರಬ್ಬರ್‌ನಂತೆ ಎಳೆದುಕೊಂಡು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
55
ಗೌತಮ್ ಎಲ್ಲಿ?
ಕಳೆದ ಒಂದು ತಿಂಗಳಿನಿಂದ ಗೌತಮ್ ಪಾತ್ರವನ್ನು ತೆರೆಯಿಂದ ಹಿಂದಕ್ಕೆ ಸರಿಸಲಾಗಿದೆ. ಭೂಮಿಕಾ ಪಾತ್ರದ ಬದಲಾಗಿ ದೀಪಿಕಾ ಕಾಣಿಸಿಕೊಳ್ಳಲಿದ್ದಾಳೆ. ಇದೀಗ ಗೌತಮ್ ಮುಂದೆ ತನ್ನ ಪತ್ನಿಯನ್ನು ಕಂಡು ಹಿಡಿಯುವ ಸವಾಲು ಎದುರಾಗಲಿದೆ. ಮುಂದೆ ಧಾರಾವಾಹಿ ಹೇಗೆ ಸಾಗುತ್ತೆ ಎಂಬುದರ ಬಗ್ಗೆಯೂ ಕುತೂಹಲ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.