Jagaddhatri Kannada serial: ಕನ್ನಡ ಕಿರುತೆರೆಯ ಬಹುನಿರೀಕ್ಷಿತ ‘ಜಗದ್ಧಾತ್ರಿ’ ಧಾರಾವಾಹಿಯ ಪ್ರಸಾರಕ್ಕೆ ದಿನಗಣನೆ ಶುರುವಾಗಿದೆ. ಸದ್ಯ ಈ ಸೀರಿಯಲ್‌ನ ಪ್ರೊಮೊ ಸಿನಿಮಾ ಟ್ರೈಲರ್‌ನಂತೆ ಧೂಳೆಬ್ಬಿಸುತ್ತಿದ್ದು, ಕಿರುತೆರೆ ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಕನ್ನಡ ಕಿರುತೆರೆಯ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ‘ಜಗದ್ಧಾತ್ರಿ’ ಧಾರಾವಾಹಿ ಪ್ರಸಾರದ ದಿನಾಂಕ ಫೈನಲ್ ಆಗಿದೆ. ಇದೇ ಸೆಪ್ಟೆಂಬರ್ 28 ರಿಂದ ಈ ಬಹುನಿರೀಕ್ಷಿತ ಧಾರಾವಾಹಿ ಪ್ರಸಾರವಾಗಲಿದೆ ಎಂದು ವಾಹಿನಿ ಅಧಿಕೃತವಾಗಿ ಘೋಷಿಸಿದೆ. ಪ್ರಸಾರದ ದಿನಾಂಕ ಪ್ರಕಟವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ‘ಜಗದ್ಧಾತ್ರಿ’ಯ ಹೊಸ ಪ್ರೊಮೊ ಸಖತ್ ಸದ್ದು ಮಾಡುತ್ತಿದ್ದು, ಸದ್ಯ ‘ಟಾಕ್ ಆಫ್ ದಿ ಟೌನ್’ ಆಗಿದೆ.
24
ಬಿಗ್ ಬಜೆಟ್ ಸಿನಿಮಾ ಟ್ರೈಲರ್‌ನಾ?
ಸಾಮಾನ್ಯವಾಗಿ ಸೀರಿಯಲ್ ಪ್ರೊಮೊಗಳು ಅತ್ತೆ-ಸೊಸೆಯ ಕೌಟುಂಬಿಕ ಕಲಹದ ಸುತ್ತಲೇ ಇರುತ್ತವೆ. ಆದರೆ 'ಜಗದ್ಧಾತ್ರಿ' ಪ್ರೊಮೊ ನೋಡಿದ ನೆಟ್ಟಿಗರು, "ಇದೇನು ಧಾರಾವಾಹಿ ಪ್ರೊಮೊನಾ ಅಥವಾ ಯಾವುದಾದರೂ ಬಿಗ್ ಬಜೆಟ್ ಸಿನಿಮಾ ಟ್ರೈಲರ್‌ನಾ?" ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಪ್ರೊಮೊದಲ್ಲಿನ ಶ್ರೀಮಂತ ಮೇಕಿಂಗ್, ಅದ್ಭುತ ಹಿನ್ನೆಲೆ ಸಂಗೀತ, ಸಾಹಿತ್ಯ ಹಾಗೂ ಖಳನಾಯಕನ ಖಡಕ್ ಡೈಲಾಗ್ ಡೆಲಿವರಿ ವೀಕ್ಷಕರ ಮನಗೆದ್ದಿದೆ. ವಿಶೇಷವಾಗಿ ಕಿರುತೆರೆಯ ಖ್ಯಾತ ತಾರೆಯರಾದ ವಿಜಯ್ ಸೂರ್ಯ ಮತ್ತು ಮೋಕ್ಷಿತಾ ಪೈ ಅವರನ್ನು ತೆರೆಯ ಮೇಲೆ ಹೊಸ ಅವತಾರದಲ್ಲಿ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
34
ಜಾಣ ಪ್ರೇಕ್ಷಕರು ಹೇಳಿದ್ದೇನು?
ಪ್ರೊಮೊ ಬಿಡುಗಡೆಯಾದ ಬೆನ್ನಲ್ಲೇ ಕಮೆಂಟ್ ಬಾಕ್ಸ್‌ನಲ್ಲಿ ಪ್ರೇಕ್ಷಕರಿಂದ ಮಿಶ್ರ ಹಾಗೂ ಕುತೂಹಲಕಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. "ಕೊನೆಗೂ ನಮ್ಮ ಕಾಯುವಿಕೆಗೆ ತೆರೆಬಿದ್ದಿದೆ" ಎಂದು ಅಭಿಮಾನಿಗಳು ಸಂಭ್ರಮಿಸಿದರೆ, ಇನ್ನು ಕೆಲವರು ನಾಯಕಿ ಮೋಕ್ಷಿತಾ ಪೈ ಅವರ ಅಂದ ಮತ್ತು ನಟನೆಯನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ, "ಪ್ರೊಮೊ ಸೃಷ್ಟಿಸಿರುವ ಭರವಸೆಯನ್ನು ಕಥೆಯು ಕೊನೆಯವರೆಗೂ ಉಳಿಸಿಕೊಳ್ಳಲಿ, ಬೇರೆ ವಾಡಿಕೆಯ ಸೀರಿಯಲ್‌ಗಳಂತೆ ಇದು ‘ಕ್ರಿಂಜ್’ ಆಗದೆ ಪ್ರೊಮೊದಷ್ಟೇ ರೋಚಕವಾಗಿರಲಿ" ಎಂಬ ಆಶಯವನ್ನು ಜಾಣ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.
ಮೊದಲ ಪ್ರೊಮೊ ಬಿಡುಗಡೆಯಾಗಿ ಸುಮಾರು 9 ತಿಂಗಳ ದೀರ್ಘ ಕಾಯುವಿಕೆಯ ನಂತರ ಈ ಧಾರಾವಾಹಿ ಪ್ರಸಾರವಾಗುತ್ತಿರುವುದರಿಂದ ನಿರೀಕ್ಷೆಗಳು ಗಗನಕ್ಕೇರಿವೆ. ಈಗಾಗಲೇ ಅನ್ಯ ಭಾಷೆಗಳಲ್ಲಿ ಯಶಸ್ಸು ಕಂಡಿರುವ ಈ ಕಥೆಯು ಕನ್ನಡದಲ್ಲೂ ಮೋಡಿ ಮಾಡುವುದು ಖಚಿತ ಎನ್ನಲಾಗುತ್ತಿದೆ. ರಾತ್ರಿ 9 ಗಂಟೆಯ ಪ್ರೈಮ್ ಟೈಮ್ ಸ್ಲಾಟ್ ಸಿಕ್ಕಿರುವುದು ಹಾಗೂ ವಿಜಯ್ ಸೂರ್ಯ, ಮೋಕ್ಷಿತಾ ಪೈ ಜೊತೆಗೆ ಕವಿತಾ ಗೌಡ ಅವರಂತಹ ದೊಡ್ಡ ತಾರಾಗಣವಿರುವುದರಿಂದ ‘ಜಗದ್ಧಾತ್ರಿ’ ಟಿಆರ್‌ಪಿ ರೇಸ್‌ನಲ್ಲಿ ಧೂಳೆಬ್ಬಿಸಿ ಭರ್ಜರಿ ಹಿಟ್ ಆಗಲಿದೆ ಎಂಬ ಮಾತುಗಳು ಪ್ರೇಕ್ಷಕ ವಲಯದಲ್ಲಿ ಕೇಳಿಬರುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.