ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ, ಮೊದಲ ರಾತ್ರಿಯ ನಂತರ ಶ್ರಾವಣಿ ಮತ್ತು ಸುಬ್ಬು ನಡುವೆ ಪ್ರೀತಿ ಹೆಚ್ಚಾಗಿದೆ. ಬೆಳಗ್ಗೆ ಕಾಫಿ ತಂದ ಶ್ರಾವಣಿ, ರಾತ್ರಿ ಹೇಳಿದ ಮಾತನ್ನೇ ಮರೆತಂತೆ ನಟಿಸಿ ಸುಬ್ಬುವನ್ನು ತಮಾಷೆ ಮಾಡಿದ್ದಾಳೆ.
ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಅದ್ಭುತವಾಗಿ ಮೂಡಿಬರುತ್ತಿದೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ಶ್ರಾವಣಿ ಹಿಂಗ್ಯಾಕೆ? ಫಸ್ಟ್‌ನೈಟ್‌ನಲ್ಲಿ ಹೇಳಿದ ಮಾತನ್ನು ಬೆಳಗ್ಗೆ ಆಗೋವಷ್ಟರಲ್ಲಿ ಮರೆಯೋದು ಅಂದ್ರೆ ಹೇಗೆ? ಪಾಪ ನಮ್ಮ ಸುಬ್ಬು ಎಂದು ವೀಕ್ಷಕರು ಹೇಳುತ್ತಿದ್ದಾರೆ.
25
ಶ್ರಾವಣಿ-ಸುಬ್ಬು
ತನ್ನನ್ನು ಮೇಡಂ ಅಂತ ಕರೆಯಬೇಡ, ನಾನು ನಿನ್ನ ಹೆಂಡ್ತಿ. ಹಾಗಾಗಿ ಹೆಸರಿನಿಂದ ನೇರವಾಗಿ ಕರೆಯುವಂತೆ ಶ್ರಾವಣಿ ಹಠ ಹಿಡಿದಿದ್ದಳು. ಪತ್ನಿಯ ಮಾತಿನಂತೆ ಮೇಡಂ ಅಂತ ಕರೆಯದೇ ಶ್ರಾವಣಿ ಅಂತ ಸುಬ್ಬು ಹೇಳಿದ್ದನು. ಬೆಳಗ್ಗೆ ಬೇಗ ಎದ್ದು ಗಂಡ ಸುಬ್ಬುಗೆ ಕಾಫಿ ಮಾಡಿಕೊಂಡು ಬಂದಿದ್ದಾಳೆ. ಮಲಗಿರೋ ಸುಬ್ಬನನ್ನು ಬಳೆಗಳ ಸದ್ದಿನಿಂದ ಎಚ್ಚರಗೊಳಿಸಿದ್ದಾಳೆ ಶ್ರಾವಣಿ.
35
ಶ್ರಾವಣಿ-ಸುಬ್ಬು ರೊಮ್ಯಾನ್ಸ್
ನಿನ್ನೆ ರಾತ್ರಿಯಲ್ಲಿದ್ದ ಇಬ್ಬರ ನಾಚಿಕೆ ಬೆಳಗ್ಗೆ ಇಲ್ಲ. ಒಬ್ಬರಿಗೊಬ್ಬರನ್ನು ತಬ್ಬಿಕೊಂಡು ಪ್ರೀತಿಯ ಮಾತುಗಳನ್ನು ಆಡುತ್ತಾ ಶ್ರಾವಣಿ ಮತ್ತು ಸುಬ್ರಮಣ್ಯ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿ ಇಬ್ಬರ ರೊಮ್ಯಾನ್ಸ್ ಕಂಡು ವೀಕ್ಷಕರು ಪುಳಕಿತರಾಗಿದ್ದಾರೆ.
ರಾತ್ರಿ ಕೊಟ್ಟ ಮಾತಿನಂತೆ ಮೇಡಂ ಅಂತಾ ಕರೆಯದೇ ಪತ್ನಿಯನ್ನು ಶ್ರಾವಣಿ ಎಂದು ಸುಬ್ಬು ಕರೆದಿದ್ದಾನೆ. ಇಷ್ಟು ದಿನ ಮೇಡಂ ಅಂತಿದ್ದೋರು ಈಗ ಏನು ಶ್ರಾವಣಿ ಅಂತಿರೋದ್ಯಾಕೆ ಎಂದು ಪತಿ ಸುಬ್ರಮಣ್ಯನನ್ನು ತಮಾಷೆ ಮಾಡಿದ್ದಾಳೆ.
ಇತ್ತ ಶ್ರಾವಣಿ ಸಹ ನಾನು ಸುಬ್ಬು ಅಂತ ಕರೆಯದೇ ರೀ ಅಂತಾನೇ ಕರೆಯುತ್ತೇನೆ. ಇತ್ತ ನಿಮ್ಮಂತ ಚೆಂದದ ಹೆಂಡತಿ ಸಿಕ್ಕಿದ್ದರಿಂದ ನಾನು ಮಹಾ ರಸಿಕನಾಗಿದ್ದೇನೆ ಎಂದು ಸುಬ್ಬು ಹೇಳಿದ್ದಾನೆ. ಕಾಫಿ ಕೊಡೋಕೆ ಬಂದ ಶ್ರಾವಣಿಗೆ ಸುಬ್ಬು ಸಿಹಿ ಮುತ್ತು ಕೇಳಿದ್ದಾನೆ. ಆದ್ರೆ ಮುತ್ತು ಅಷ್ಟು ಸುಲಭವಾಗಿ ಸಿಗಲ್ಲ ಎಂದು ಗಂಡನನ್ನು ಶ್ರಾವಣಿ ಸತಾಯಿಸಿದ್ದಾರೆ.