ಸೀತಾಳ ಮೇಲೆ ರಾಮನಿಗೆ ಲವ್ ಶುರುವಾಯ್ತು, ಇನ್ಮೇಲೆ ಪುಟಾಣಿ 'ಸಿಹಿ' ಸೈಡ್‌ ಲೈನ್‌ ಆಗ್ತಾಳಾ?

Published : Nov 18, 2023, 08:27 PM ISTUpdated : Nov 19, 2023, 01:00 PM IST

ಬೆಂಗಳೂರು (ನ.18): ಕನ್ನಡದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅತಿಹೆಚ್ಚು ಟಿಆರ್‌ಪಿ ತಂದುಕೊಡುವ ಧಾರಾವಾಹಿಗಳಲ್ಲಿ ಸೀತಾರಾಮ ಧಾರವಾಹಿ ಕೂಡ ಒಂದಾಗಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳು ಸೀತಾ (ವೈಷ್ಣವಿ), ರಾಮ (ಗಗನ್‌ ಚಿನ್ನಪ್ಪ) ಹಾಗೂ ಸಿಹಿ (ರಿತುಸಿಂಗ್) ಆಗಿದ್ದಾರೆ. ಅದರಲ್ಲಿ ಸಿಹಿಯ ಪಾತ್ರ ಕನ್ನಡ ನಾಡಿನ ಜನತೆಯಿಂದ ಹೆಚ್ಚು ಮೆಚ್ಚುಗೆ ಪಡೆದಿತ್ತು. ಆದರೆ ಈಗ ಸೀತಾಳ ಮೇಲೆ ರಾಮನಿಗೆ ಲವ್‌ ಆಗಿದ್ದು, ಸೀತಾಳ ಮಗಳು ಸಿಹಿ ಸೈಡ್‌ಲೈನ್‌ ಆಗುತ್ತಾಳಾ ಎಂಬ ಚಿಂತನೆ ಫ್ಯಾನ್ಸ್‌ಗೆ ಎದುರಾಗಿದೆ.

PREV
110
ಸೀತಾಳ ಮೇಲೆ ರಾಮನಿಗೆ ಲವ್ ಶುರುವಾಯ್ತು, ಇನ್ಮೇಲೆ ಪುಟಾಣಿ 'ಸಿಹಿ' ಸೈಡ್‌ ಲೈನ್‌ ಆಗ್ತಾಳಾ?

ಜೀ ಕನ್ನಡ ವಾಹಿನಿಯ ಅತಿಹೆಚ್ಚು ಟಿಆರ್‌ಪಿ ತಂದುಕೊಡುವ ಧಾರಾವಾಹಿಗಳಲ್ಲಿ ಸೀತಾರಾಮ ಧಾರಾವಾಹಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

210

ಸೀತಾ, ರಾಮ ಹಾಗೂ ಸಿಹಿಯ ಪಾತ್ರಗಳು ಪ್ರಮುಖ ಪಾತ್ರಗಳಾಗಿದ್ದು, ಧಾರಾವಾಹಿ ನೋಡುಗರನ್ನು ಸೆರೆ ಹಿಡಿದಿಡುವಲ್ಲಿಯೂ ಇವರು ಯಶಸ್ವಿಯಾಗಿದ್ದಾರೆ.

310

ಮಿಡ್ಲ್‌ಕ್ಲಾಸ್‌ ಸೀತಾ ಹಾಗೂ ಆಕೆಯ ಮಗಳು ಸಿಹಿ ಮೇಲೆ ಆಗರ್ಭ ಶ್ರೀಮಂತ ರಾಮ ಒಂದು ಕಂಪನಿಯ ಬಾಸ್‌ ಆಗಿದ್ದರೂ ಫ್ರೆಂಡ್‌ಶಿಪ್‌ ಮಾಡುತ್ತಾನೆ.

410

ಈಗಾಗಲೇ ಒಂದು ಲವ್‌ ಬ್ರೇಕ್‌ಅಪ್‌ನಿಂದ ತೀರಾ ಕಂಗೆಟ್ಟು ಹೋಗಿರುವ ರಾಮ್‌ಗೆ ಈಗ ತನ್ನ ಕಚೇರಿಯಲ್ಲಿಯೇ ಕೆಲಸ ಮಾಡುವ ಸೀತಾಳ ಮೇಲೆ ಲವ್‌ ಆಗಿದೆ.

510

ಸೀತಾಳ ಎಲ್ಲ ಕೆಲಸದಲ್ಲಿಯೂ ಸಪೋರ್ಟ್‌ ಮಾಡುತ್ತಾ ನೆರವಾಗಿದ್ದ ರಾಮ್‌ಗೆ, ಸೀತಾಳನ್ನು ಬೆಳಗಾವಿ ಕಚೇರಿಗೆ ವರ್ಗಾವಣೆ ಮಾಡಿರುವುದು ಶಾಕ್‌ ಆಗಿರುತ್ತದೆ.

610

ಸೀತಾ ಮತ್ತು ಸಿಹಿ ಬೆಂಗಳೂರಿನಿಂದ ಬೆಳಗಾವಿಗೆ ಬಸ್‌ ಬುಕಿಂಗ್‌ ಮಾಡಿ ಹೊರಟಿರುವಾಗ ಅವರ ಬಸ್ಸನ್ನು ರಾಮ ತಡೆಯಲು ಕಾರನ್ನು ತೆಗೆದುಕೊಂಡು ಬಮದು ಚೇಸ್‌ ಮಾಡಿ ಅಡ್ಡಹಾಕಿದ್ದಾನೆ.

710

ರಾಮ ಬಸ್‌ ಅಡ್ಡಹಾಕಿ ಸೀತಾಳಿಗೆ ನಿಮ್ಮ ಟ್ರ್ಯಾನ್ಸ್‌ಫರ್‌ ಕ್ಯಾನ್ಸಲ್‌ ಆಗಿದೆ ಎಂದು ಸೀತಾಳ ಮನವೊಲಿಕೆ ಮಾಡಿ, ಅವರನ್ನು ವಾಪಸ್‌ ಕರೆತರುವ ಸಾಧ್ಯತೆ ಹೆಚ್ಚಾಗಿದೆ.

810

ರಾಮ ಸೀತಾಳ ವಿಚಾರದಲ್ಲಿ ಶಾಕ್‌ನಿಂದ ಹೊರಬರಲಾಗದೇ ಒದ್ದಾಡುತ್ತಿರುವಾಗ, ಸೀತಾಳ ಮೇಲೆ ರಾಮನಿಗೆ ಇರುವುದು ಪ್ರೀತಿಯ ಭಾವನೆ ಎಂಬುದನ್ನು ಆತನ ತಾತ ಮನವರಿಕೆ ಮಾಡುತ್ತಾರೆ.

910

ಈಗ ಸೀತಾಳ ಮೇಲೆ ರಾಮನಿರುವ ಭಾವನೆಗಳು ಪ್ರೀತಿ ಎನ್ನುವುದು ಖಚಿತವಾಗಿದೆ. ಆದರೆ, ರಾಮನ ಜೊತೆಗೆ ಫ್ರೆಂಡ್‌ಶಿಪ್‌ ಮಾಡಿದ್ದ ಸಿಹಿಗೆ ರಾಮನೇ ಅಪ್ಪನಾದರೆ ಅದನ್ನು ಹೇಗೆ ಸ್ವೀಕರಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

1010

ಒಟ್ಟಿನಲ್ಲಿ ಸೀತಾರಾಮ ಧಾರವಾಹಿಯಲ್ಲಿ ಸೀತಾಳ ಮೇಲೆ ರಾಮನಿಗೆ ಪ್ರೀತಿ ಶುರುವಾಗಿದ್ದು, ಇನ್ನು ಸಿಹಿಯ ಪಾತ್ರಗಳು ಸೈಡ್‌ಲೈನ್‌ ಆಗುವುದು ಖಚಿತ ಎಂಬುದು ಗೋಚರವಾಗುತ್ತಿದೆ.

Read more Photos on
click me!

Recommended Stories