ಈಗಿನ ಜನರೇಷನ್ ಮಂದಿ ಮದುವೆ ಮಾಡಿಕೊಂಡು ನಾಲ್ಕೈದು ವರ್ಷ ಫ್ಯಾಮಿಲಿ ಪ್ಲ್ಯಾನಿಂಗ್ ಎಂದು ಮಕ್ಕಳು ಮಾಡಿಕೊಳ್ಳುವುದಿಲ್ಲ. ಹೀಗೆ ಮಾಡಬೇಡಿ ಫ್ಯಾಮಿಲಿ ಕಟ್ಟಿಕೊಳ್ಳಿ ಎಂದು ಯಶಸ್ವಿನಿ ಸಲಹೆ ಕೊಟ್ಟಿದ್ದಾರೆ.
ನಾನು ಮದುವೆ ಮಾಡಿಕೊಂಡಾಗ 19 ವರ್ಷ ಆಗಿತ್ತು. 20 ವರ್ಷಕ್ಕೆ ಮೊದಲ ಮಗು ಮಾಡಿಕೊಂಡೆ, 26 ವರ್ಷ ಇದ್ದಾಗ ಮಗಳು ಹುಟ್ಟಿದ್ದಳು ಎಂದು ಖಾಸಗಿ ಸಂದರ್ಶನದಲ್ಲಿ ಯಶಸ್ವಿನಿ ಹೇಳಿದ್ದಾರೆ.
ಈಗ ನನ್ನ ಮಕ್ಕಳುಉ ದೊಡ್ಡವರಾಗಿದ್ದಾರೆ ನನಗೆ 32 ವರ್ಷ ಆಗಿದೆ ನಾನು ಈಗ ಫುಲ್ ಫ್ರೀ ಆಗಿರುವೆ. ಇಷ್ಟು ವರ್ಷ ಮಕ್ಕಳು ಫ್ಯಾಮಿಲಿ ಅಂತ ಸ್ಯಾಕರಿಫ್ರೈಸ್ ಮಾಡಿದ್ದೀನಿ ಈಗ ನನ್ನ ಲೈಫ್ ಶುರುವಾಗಿದೆ.
ಎಷ್ಟೋ ಜನ ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದರು..ಇಷ್ಟು ದಿನ ಗೃಹಿಣಿಯಾಗಿದ್ರೆ ಇದ್ದಕ್ಕಿದ್ದಂತೆ ಏನು ನಿಮ್ಮಲ್ಲಿ ಬದಲಾವಣೆಳು ಅಂತ. ಬದಲಾವಣೆ ಜಗದ ನಿಯಮ ಅಂತ ಭಗವತ್ ಗೀತದಲ್ಲಿ ಬರೆದಿದೆ.
ಇಷ್ಟು ವರ್ಷ ನನ್ನ ಸಮಯವನ್ನು ಕುಟುಂಬಕ್ಕೆ ಮೀಸಲಿಟ್ಟೆ. ಈಗ ನನಗೆ ನಾನು ಟೈಮ್ ಕೊಡಬೇಕು ನನ್ನ ಕನಸುಗಳನ್ನು ಫಾಲೋ ಮಾಡಬೇಕು. ಯಾವಗಲೂ ಮನೆಯಲ್ಲ ಇದ್ದು ಕೂರಲು ಆಗಲ್ಲ.
ನನ್ನ ಲೈಫ್ ಸ್ಟೈಲ್ ಗೊತ್ತಾದ ಮೇಲೆ ನನಗೆ ಏನು ಬೇಕು ನಾನು ಮಾಡಿಕೊಂಡಿಲ್ಲ ಅಂದ್ರೆ ನನಗೆ ಬೇಸರ ಆಗುತ್ತೆ ಅದಿಕ್ಕೆ ಮನೆಯವರ ಮೇಲೆ ಕೋಪ ತೋರಿಸುತ್ತೀನಿ ಆಗ ಮನೆಯಲ್ಲಿ ದೊಡ್ಡ ಜಗಳ ಆಗುತ್ತೆ ಹೀಗಾಗಿ ನಮಗೆ ಏನು ಬೇಕು ಅದನ್ನು ಮಾಡಿಕೊಳ್ಳಬೇಕು.
ನನ್ನ ಉದಾಹರಣೆ ಕೊಟ್ಟು ಹೇಳುತ್ತೀನಿ ಮೊದಲು ಮಕ್ಕಳು ಮಾಡಿಕೊಳ್ಳಿ ಆಮೇಲೆ ಫ್ರೀ ಆಗುತ್ತೀರಾ ಅಂತ ಆದರೂ ಯಾರು ಕೇರ್ ಮಾಡುವುದಿಲ್ಲ 5 ವರ್ಷ ಫ್ಯಾಮಿಲಿ ಪ್ಲ್ಯಾನಿಂಗ್ ಲೀವಿಂಗ್ ರಿಲೇಷನ್‌ಶಿಪ್ ಅಂತ ಹೇಳುತ್ತಾರೆ.