ರಿಯಲ್ ಗಂಡ, ರೀಲ್ ಲೈಫ್ ಫ್ಯಾಮಿಲಿ ಜೊತೆ ಸತ್ಯ ಗೌತಮಿ ಜಾಧವ್ ಮೋಜು ಮಸ್ತಿ

Published : Nov 18, 2023, 04:24 PM IST

ಸತ್ಯಾ ಸೀರಿಯಲ್ ನಟಿಯರಾದ ಗೌತಮಿ ಜಾಧವ್, ಅನು ಜನಾರ್ಧನ್, ಶಾಲಿನಿ ರಾವ್, ರಕ್ಷಿತಾ ಭಾಸ್ಕರ್ ಇತಿಹಾಸ ಪ್ರಸಿದ್ಧ ಬೇಲೂರು, ಹಳೆಬೀಡಿಗೆ ಪ್ರವಾಸ ತೆರಳಿ ಎಂಜಾಯ್ ಮಾಡಿದ್ದಾರೆ.   

PREV
18
ರಿಯಲ್  ಗಂಡ, ರೀಲ್ ಲೈಫ್ ಫ್ಯಾಮಿಲಿ ಜೊತೆ ಸತ್ಯ ಗೌತಮಿ ಜಾಧವ್ ಮೋಜು ಮಸ್ತಿ

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸತ್ಯ ಸೀರಿಯಲ್ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿದೆ. ಸತ್ಯ ಮತ್ತು ಅಮೂಲ್ ಬೇಬಿ ಕಾಂಬಿನೇಶನ್ ಜೊತೆಗೆ ಪ್ರತಿಯೊಂದೂ ಪಾತ್ರಗಳನ್ನು ಸಹ ಜನರು ಇಷ್ಟ ಪಟ್ಟಿದ್ದಾರೆ. 
 

28

ಈ ಸೀರಿಯಲ್‌ನ (serial) ಪಾತ್ರಧಾರಿಗಳು ತೆರೆಯ ಮೇಲೆ ಎಷ್ಟೊಂದು ಕ್ಲೋಸ್ ಆಗಿದ್ದಾರೋ ಹಾಗೆಯೇ ತೆರೆಯ ಹಿಂದೆ ಸಹ ಸಖತ್ ಕ್ಲೋಸ್. ಅಷ್ಟೇ ಯಾಕೆ ಸತ್ಯಾಳನ್ನು ನೋಡಿದ್ರೆ ಉರಿದು ಬೀಳೋ ಕೀರ್ತನಾ ಸಹ ನಟರೊಂದಿಗೆ ಉತ್ತಮ ಬಾಂಡಿಂಗ್ ಹೊಂದಿದ್ದಾರೆ. 
 

38

ಸೋಶಿಯಲ್ ಮೀಡಿಯಾ (Social Media) ನೋಡಿದ್ರೆ ಗೊತ್ತಾಗುತ್ತೆ, ಸತ್ಯಾ ಸೀರಿಯಲ್ ನ (Satya Serial)ನಟಿಮಣಿಯರು ಎಷ್ಟೊಂದು ಎಂಜಾಯ್ ಮಾಡ್ತಾರೆ ಎಂದು, ಹಿರಿಯ ನಟಿಯರು, ಕಿರಿಯ ನಟಿಯರು ಎನ್ನದೇ ಎಲ್ಲಾ ನಟಿಯರು ಹೆಚ್ಚಾಗಿ ಜೊತೆ ಸೇರಿ ಪ್ರವಾಸ ಮಾಡುತ್ತಿರುತ್ತಾರೆ. 
 

48

ಇತ್ತೀಚೆಗೆ ಸತ್ಯ ಖ್ಯಾತಿಯ ಗೌತಮಿ ಜಾದವ್, ಪತಿ ಅಭಿಷೇಕ್ ಕಾಸರಗೋಡ್, ಹಾಗೂ ತಮ್ಮ ಸೀರಿಯಲ್ ನ ಸಹನಟಿಯರಾದ ಕೀರ್ತನಾ ಪಾತ್ರಧಾರಿ ಅನು ಜನಾರ್ಧನ್, ಶಾಲಿನಿ ರಾವ್, ರಕ್ಷಿತಾ ಭಾಸ್ಕರ್ ಅವರ ಜೊತೆಯಾಗಿ ಹಾಸನ ಟೂರ್ ಮಾಡಿದ್ದಾರೆ.
 

58

ಗೌತಮಿ ಜಾಧವ್ ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆ ಇತಿಹಾಸ ಪ್ರಸಿದ್ಧ ದೇಗುಲಗಳಾದ ಬೇಲೂರು, ಹಳೇಬೀಡು ಮೊದಲಾದ ತಾಣಗಳಿಗೆ ಭೇಟಿ ನೀಡಿ, ಫೋಟೋ, ವಿಡೀಯೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

68

ಬೇಲೂರು ದೇವಾಲಯದ ಹಿನ್ನೆಲೆಯಲ್ಲಿ ನಟಿಯರು ಒಂದು ಮೊಟ್ಟೆಯ ಕಥೆ ಸಿನಿಮಾದ ಚಂದ ಅವಳ ಕಿರು ಲಜ್ಜೆ ಹಾಡಿಗೆ ಮುದ್ದಾಗಿ ಪೋಸ್ ನೀಡಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಮುದ್ದಾದ ಅಭಿನಯ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. 
 

78

ಈ ಹಿಂದೆಯೂ ಸೀರಿಯಲ್ ನ ಎಲ್ಲಾ ನಟಿಯರು ಜೊತೆಯಾಗಿ ಪಾರ್ಟಿ ಮಾಡಿ ಫೋಟೋಗಳನ್ನು ಹಂಚಿ ಕೊಂಡಿದ್ದರು, ಅಲ್ಲದೇ ಗೌತಮಿ ಜಾಧವ್ ಜೊತೆಗೆ ಮಾಲತಿ ಸರದೇಶಪಾಂಡೆ, ರಕ್ಷಿತಾ, ಶಾಲಿನಿ ಮಂಗಳೂರಿಗೂ ತೆರಳಿದ್ದರು. 
 

88

ಒಟ್ಟಿನಲ್ಲಿ ತೆರೆ ಮೇಲೆ ಹಾವು ಮುಂಗುಸಿಗಳಂತೆ ಕಿತ್ತಾಡುವ ನಟಿಯರು ರಿಯಲ್ ಲೈಫಲ್ಲಿ ಇಷ್ಟೊಂದು ಫ್ರೆಂಡ್ಲಿಯಾಗಿ, ಜೊತೆಯಾಗಿ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡುತ್ತಿರೋದನ್ನು ನೋಡಿ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories