ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಪಾತ್ರದ ಅಂತ್ಯವಾಗಿದ್ದು, ಆತನ ಸಾವಿನ ರಹಸ್ಯವನ್ನು ಭೂಮಿಕಾ ಮುಚ್ಚಿಹಾಕಿದ್ದಾಳೆ. ಧಾರಾವಾಹಿ ಮುಗಿಯುವ ಊಹಾಪೋಹಗಳ ನಡುವೆ, ಬಿಡುಗಡೆಯಾದ ಹೊಸ ಪ್ರೋಮೋ ಕಥೆಯು ಹೊಸ ತಿರುವು ಪಡೆಯುವ ಸೂಚನೆ ನೀಡಿದೆ.
ಅಮೃತಧಾರೆ ಸೀರಿಯಲ್ ಮುಂದುವರಯಲು ಕಾರಣ ಜೈದೇವ್. ಇದೀಗ ಜೈದೇವ್ ಪ್ರಾಣಪಕ್ಷಿಯೇ ಹಾರಿ ಹೋಗಿದ್ದು, ಯಾರಿಗೂ ತಿಳಿಯದಂತೆ ಆತನ ಹೆಣವನ್ನು ಭೂಮಿಕಾ ಮುಚ್ಚಿ ಹಾಕಿದ್ದಾಳೆ. ಜೈದೇವ್ ಸಾವಿನ ಬೆನ್ನಲ್ಲೇ ಧಾರಾವಾಹಿ ಮುಗಿಯಬಹುದು ಎಂದು ವೀಕ್ಷಕರು ಅಂದಾಜಿಸಿದ್ದರು. ಆದ್ರೆ ಈ ಊಹಾಪೋಹಕ್ಕೆ ಭೂಮಿಕಾ ಅವರಿಂದ ಸ್ಪಷ್ಟನೆ ಬಂದಿದೆ.
25
ವಿಶೇಷ ಪ್ರೋಮೋ ಬಿಡುಗಡೆ
ಇಂದು ಅಮೃತಧಾರೆ ಧಾರಾವಾಹಿ ತಂಡದಿಂದ ವಿಶೇಷ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ಗೌತಮ್ ಜೊತೆಗಿನ ಬದುಕು ಹೇಗಿತು ಎಂಬುದನ್ನು ಭೂಮಿಕಾ ವಿವರಿಸಿದ್ದು, ಮುಂದಿನ ಕಥೆ ಎಷ್ಟು ವಿಶೇಷ ಮತ್ತು ವಿಭಿನ್ನವಾಗಿರಲಿದೆ ಎಂಬುದರ ಸುಳಿವು ನೀಡಲಾಗಿದೆ.
35
ಅಮೃತಧಾರೆ ಕಥೆ
ಹೌದು, ಜೈದೇವ್ ಸಾವಿನ ಹೊಣೆ ಹೊತ್ತು ಭೂಮಿಕಾ ಜೈಲು ಸೇರಬಹುದು. ನಂತರ ಸೀರಿಯಲ್ ಹಲವು ವರ್ಷಗಳ ನಂತರದ ಕತೆಗೆ ಮರಳಬಹುದು ಎಂದು ಊಹಿಸಲಾಗುತ್ತದೆ. ಈ ಹಿಂದೆಯೂ ಅಮೃತಧಾರೆ ಕಥೆಯಲ್ಲಿ ಈ ರೀತಿಯ ದಿಢೀರ್ ಬದಲಾವಣೆಗಳನ್ನು ತೆಗೆದುಕೊಂಡು ಬರಲಾಗಿತ್ತು. ಮಗುವನ್ನು ಹೊತ್ತುಕೊಂಡು ಮನೆ ತೊರೆದಿದ್ದ ಭೂಮಿಕಾ, ಸಾಮಾನ್ಯಾ ಮಹಿಳೆಯಂತೆ ದೂರದ ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿದ್ದಳು.
ಭೂಮಿಕಾಳನ್ನು ಹುಡುಕುತ್ತಾ ಗೌತಮ್ ಸಹ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಆನಂತರ ಇವರಿಬ್ಬರ ಭೇಟಿ, ಮತ್ತೆ ಒಂದಾಗುವಿಕೆ ಕಥೆಯು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲಾಗಿತ್ತು. ಆನಂತರ ಭೂಮಿಕಾಗೆ ಕ್ಯಾನ್ಸರ್ ತುತ್ತಾದ ಬಳಿಕ ವರ್ಷಗಳ ನಂತ್ರ ಅಂತ ತೋರಿಸಲಾಗಿತ್ತು. ಆನಂತರ ಭೂಮಿಕಾ ಕ್ಯಾನ್ಸರ್‌ನಿಂದ ಗುಣಮುಖಳಾಗಿ ಜೈದೇವ್ ರಹಸ್ಯ ಹುಡುಕಲು ಮುಂದಾಗಿದ್ದಳು.
55
ಮತ್ತೊಂದು ಹೊಸ ತಿರುವು ಪ
ಇದೀಗ ಧಾರಾವಾಹಿಯೇ ಪ್ರಮುಳ ಪಾತ್ರವೇ ಮುಕ್ತಾಯವಾಗಿದೆ. ಹಾಗಾಗಿ ಸೀರಿಯಲ್ ಮತ್ತೊಂದು ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ಹೊಸ ಅಧ್ಯಾಯದಲ್ಲಿ ಭೂಮಿಕಾ-ಗೌತಮ್ ಮಕ್ಕಳು ದೊಡ್ಡವರಾಗ್ತಾರಾ ಅಂತ ಕಾದು ನೋಡಬೇಕಿದೆ. ಜೈಲುಪಾಲಾದ ತಾಯಿಯನ್ನು ಮಕ್ಕಳು ಹುಡುಕ್ತಾರಾ ಅನ್ನೋದು ಶೀಘ್ರದಲ್ಲಿಯೇ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.