ಜೀ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ 'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಆಗ ನಮ್ರತಾ ಗೌಡ ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಹಂಚಿಕೊಂಡಿದ್ದಾರೆ.
27
ನಾನು ಹುಟ್ಟಿದ್ದೇ ಅಪ್ಪ ಅಮ್ಮಗೆ ಒಂದು ಶಾಪ. ನಾವು ತುಂಬು ಕುಟುಂಬದಲ್ಲಿ ಇದ್ದವರು..ಹೆಣ್ಣಾಗಿ ಹುಟ್ಟಿದೆ ಎಂದು ಅಪ್ಪ ಅಮ್ಮನ ಕೆಟ್ಟದಾಗಿ ನೋಡಿಕೊಂಡಿದ್ದಾರೆ ಮರ್ಯಾದೆನೇ ಕೊಟ್ಟಿಲ್ಲ.
37
ಕುಟುಂಬಸ್ಥರಿಂದ ತುಂಬಾ ಸಹಿಸಿಕೊಂಡಿದ್ದಾರೆ. ನಾವು ಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳಬಾರದು ಅಂತ ಬಾಲ್ಯದಿಂದಲೇ ಟ್ಯೂಷನ್, ಸಂಗೀತ ಕ್ಲಾಸ್, ಡ್ಯಾನ್ಸ್ ಕ್ಲಾಸ್, ಕಾರಾಟೆ ಇದರ ಜೊತೆ ಸಿನಿಮಾ ಶೂಟಿಂಗ್...ಇಷ್ಟರಲ್ಲಿ ನನ್ನನ್ನು ಬ್ಯುಸಿ ಮಾಡಿಬಿಟ್ಟರು.
47
ಆದರೆ ಮನೆಯಲ್ಲಿ ನನ್ನ ತಂದೆ ತಾಯಿ ಎಷ್ಟು ನರಳುತ್ತಿದ್ದರು ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ನಾವು ದೂರ ಬಂದು ಬದುಕುತ್ತಿದ್ದೀವಿ. ಹೆಣ್ಣು ಮಗು ಎಂದು ತಂದೆ ಕಡೆ ಕೀಳಾಗಿ ನೋಡಿದರು.
57
ತಾಯಿ ಮನೆ ಕಡೆ ಹೇಗೆ ಅಂದ್ರೆ ನಮ್ರತಾ ತುಂಬಾ ಬೋಲ್ಡ್ ಆಗಿದ್ದಾಳೆ ಆಕೆ ನಾಯಕಿ ಅವಳು ಆ ತರ ಬಟ್ಟೆ ಹಾಕುತ್ತಾಳೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಾಳೆ ನಮ್ಮ ಮಕ್ಕಳಿಗೆ ಆಕೆ ಕೆಟ್ಟ Influence ಮಾಡ್ತಾಳೆ ನಮ್ಮ ಮಕ್ಕಳನ್ನು ಹಾಳು ಮಾಡುತ್ತಾಳೆ ನಮ್ಮ ಮಕ್ಕಳ ಜೊತೆ ಆಕೆಯನ್ನು ಸೇರಿಸಬಾರದು.
67
ಇಂಡಸ್ಟ್ರಿ ಹುಡುಗಿ ಅಂದ್ರೆ ಸರಿ ಇಲ್ಲ ಅಂತ. ಈ ಮಾತುಗಳನ್ನು ಕೇಳಿ ಜೀವನದಲ್ಲಿ ಸಾಧಿಸಬೇಕು ಅಂತ ಹಠ ಬಂತು. ನಾನು ಚೆನ್ನಾಗಿ ಬೆಳೆದು ನನ್ನ ತಂದೆ ತಾಯಿಯನ್ನು ನೋಡಿಕೊಳ್ಳಬೇಕು ಅನ್ನೋ ಹಠ ಬಂತು.
77
ಹೈಸ್ಕೂಲ್‌ಗೆ ಕಾಲಿಡುತ್ತಿದ್ದಂತೆ ಮನೆಯಲ್ಲಿ ನಡೆಯುತ್ತಿದ್ದ ಭೇದಭಾವ ಅರ್ಥ ಆಯ್ತು. ನಾನು ಚೆನ್ನಾಗಿ ಓದಬೇಕು ದುಡಿಯಬೇಕು ನನ್ನ ತಂದೆ ತಾಯಿಯನ್ನು ಇಲ್ಲಿಂದ ಹೊರ ಕರೆದುಕೊಂಡು ಹೋಗಬೇಕು ಅನ್ನೋ ತೀರ್ಮಾನ ಮಾಡಿದೆ. ಅಲ್ಲಿಂದ ಹೊರ ಬಂದು ಇಲ್ಲಿವೆರೆಗೂ ಬೆಳೆದಿರುವೆ.