ಕನ್ನಡ ಚಿತ್ರರಂಗದ ಅದ್ಧುತ ನಟ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕಿರುತೆಗೆ ಕಾಲಿಟ್ಟು ಜನಪ್ರಿಯತೆ ಪಡೆದರು. ಮದುವೆ ಆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
28
'ಮದುವೆ ಪ್ರಪೋಸಲ್ ಬಂದಿದ್ದು ಆನಂದ್ ಅವರಿಂದ. ಆಗ ನಾನು ಡಿಗ್ರಿ ಕೊನೆ ವರ್ಷ ಮಾಡುತ್ತಿದ್ದೆ. ಅಣ್ಣ ಆನಂದ್ ಫ್ಯಾನ್ ಆಗಿದ್ದ ಕಾರಣ ಮದುವೆ ಪ್ರಪೋಸಲ್ ಬಂದ ತಕ್ಷಣ ಖುಷಿ ಪಟ್ಟ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.
38
ನನಗೆ ಒಳ್ಳೆ ಸಾಫ್ಟ್‌ವೇರ್ ಇಂಜಿನಿಯರ್‌ನ ಮದುವೆ ಮಾಡಿಕೊಳ್ಳಬೇಕು ಅನ್ನೋ ಆಸೆ ಇತ್ತು ಏಕೆಂದರೆ ನನ್ನ ಅಣ್ಣ ಇಂಜಿನಿಯರ್ ಆಗಿದ್ದು ಚೆನ್ನಾಗಿ ಸುತ್ತಾಡಿಕೊಂಡು ಇರುತ್ತಾರೆ ಅಂತ'
48
'ಆಮೇಲೆ ಅಣ್ಣ ನನ್ನನ್ನು ಮದುವೆಗೆ ಒಪ್ಪಿಸಿದ್ದರು. ಫೆಬ್ರವರಿಯಲ್ಲಿ ಒಂದು ನೋಡಿಕೊಂಡು ಹೋದರು ಮಾರ್ಚ್‌ನಲ್ಲಿ ಮದುವೆ ಆಯ್ತು. ಕೇವಲ ಒಂದು ತಿಂಗಳನಲ್ಲಿ ಎಲ್ಲವೂ ನಡೆಯಿತ್ತು.'
58
'ಮದುವೆ ನಂತದ ಜೀವನ ಕಷ್ಟ ಆಯ್ತು ಇವರ ಕುಟುಂಬಕ್ಕೆ ಹೊಂದಿಕೊಳ್ಳಲು ತುಂಬಾ ಕಷ್ಟ ಆಯ್ತು. ಕಾಂಪ್ಲಿಕೇಷನ್ ಅಂತ ಹೇಳಲ್ಲ ಒಂದು ರೀತಿ ಕಷ್ಟ ಆಯ್ತು. ನಾನು ಹುಟ್ಟಿ ಬೆಳೆದಿದ್ದು orthodox ಫ್ಯಾಮಿಲಿ'
68
'ನಾವು ಟೈಮ್‌ಗೆ ಸರಿಯಾಗಿ ಊಟ ಮಾಡಬೇಕು ಬೆಳ್ಳುಳ್ಳಿ ಈರುಳ್ಳಿ ತಿನ್ನುತ್ತಿರಲಿಲ್ಲ ಬೆಳಗ್ಗೆ ಬೇಗ ಸ್ನಾನ ಮಾಡಬೇಕು ಆದರೆ ಆನಂದ್ ಮನೆಯಲ್ಲಿ ಹಾಗೆ ಇರಲಿಲ್ಲ.'
78
ಆನಂದ್ ಮನೆಯಲ್ಲಿ ಫುಲ್ ಡಿಫರೆಂಟ್ ಸಖತ್ ಖಾರ ಊಟ ಮಾಡುತ್ತಿದ್ದರು. ಜೀವನದಲ್ಲಿ ಮೊದಲು ನಾನು ಖಾರ ತಿಂದಿದ್ದು ಆನಂದ್ ಮನೆಯಲ್ಲಿ'
88
ಅಡುಗೆ ಮಾಡಲು ಬರುತ್ತಿರಲಿಲ್ಲ ಅದನ್ನು ಕಲಿತು ಆಮೇಲೆ ಆನಂದ್ ಅವರನ್ನು ಮೀಡಿಯಮ್ ಖಾರಕ್ಕೆ ತಂದೆ. ಈಗ ಆರಂಭದ ದಿನಗಳನ್ನು ನೆನಪು ಮಾಡಿಕೊಂಡರೆ ಏನೂ ಅನಿಸುವುದಿಲ್ಲ ಆದರೆ ಆಗ ಅದು ಸಖತ್ ಕಷ್ಟ ಆಯ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.