‌ಅತ್ತೆಗೆ ಮಾಡರ್ನ್‌ ಡ್ರೆಸ್‌, ಮಾವನ ಜೊತೆ ಡ್ಯಾನ್ದ್; ಗಂಡನ ಮನೇಲಿ ಲಕ್ಷ್ಮೀ ನಿವಾಸ ನಟಿ ಮಾನಸಾ ಮನೋಹರ್‌

Published : Apr 13, 2025, 04:32 PM ISTUpdated : Apr 14, 2025, 11:07 AM IST

ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ರತ್ನಾ ಪಾತ್ರ ಮಾಡ್ತಿರುವ ನಟಿ ಮಾನಸಾ ಮನೋಹರ್‌ ಅವರು ಕುಟುಂಬದ ಜೊತೆಗೆ ಗೋವಾ ಪ್ರವಾಸ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
17
‌ಅತ್ತೆಗೆ ಮಾಡರ್ನ್‌ ಡ್ರೆಸ್‌, ಮಾವನ ಜೊತೆ ಡ್ಯಾನ್ದ್; ಗಂಡನ ಮನೇಲಿ ಲಕ್ಷ್ಮೀ ನಿವಾಸ ನಟಿ ಮಾನಸಾ ಮನೋಹರ್‌

ಮಾನಸಾ ಮನೋಹರ್‌ ಅವರು ಸದ್ಯ ʼಲಕ್ಷ್ಮೀ ನಿವಾಸʼ ಹಾಗೂ ʼಶಾಂಭವಿ” ಧಾರಾವಾಹಿಯಿಂದ ಬ್ರೇಕ್‌ ಪಡೆದು ಗೋವಾ, ಊಟಿ ಎಂದು ಪ್ರವಾಸ ಮಾಡಿದ್ದಾರೆ. ಈ ಟ್ರಿಪ್‌ನಲ್ಲಿ ಅವರ ಅತ್ತೆ ಮಾವ ಕೂಡ ಇದ್ದರು.

 

27

ಮದುವೆ ವೇಳೆ ಕೆಲವರು ಅತ್ತೆ-ಮಾವ ಇರಬಾರದು ಅಂತ ಹೇಳುತ್ತಾರೆ. ಆದರೆ ಮಾನಸಾ ಮನೋಹರ್‌ ಅವರು ಅತ್ತೆ, ಮಾವನನ್ನು ಕೂಡ ಟ್ರಿಪ್‌ಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಮಾನಸಾ ಅವರು ಅತ್ತೆ ಜೊತೆಗೆ ರೀಲ್ಸ್‌ ಮಾಡಿದ್ರೆ, ಮಾವನ ಜೊತೆ ಡ್ಯಾನ್ಸ್‌ ಮಾಡಿದ್ದಾರೆ. "ನನ್ನ ಅತ್ತೆ ತುಂಬ ಸಪೋರ್ಟಿವ್" ಎಂದು ಮಾನಸಾ ಅವರು ಈಗಾಗಲೇ ಹೇಳಿದ್ದಾರೆ. 

37

ʼಜೊತೆ ಜೊತೆಯಲಿʼ ಧಾರಾವಾಹಿ ನಟಿ ಮಾನಸಾ ಮನೋಹರ್‌ ಅವರು ಈ ಹಿಂದೆ ಮದುವೆಯಾಗಿದ್ರೂ ಕೂಡ, ಭಿನ್ನಾಭಿಪ್ರಾಯ ಬಂದು ಡಿವೋರ್ಸ್‌ ಪಡೆದಿದ್ದರು. ಈಗ ಅವರು ಎರಡನೇ ಮದುವೆ ಆಗಿದ್ದಾರೆ.
 

47

ಮಾನಸಾ ಮನೋಹರ್‌ ಅವರು ನಟ ಅನಿರುದ್ಧ ಜತ್ಕರ್‌, ಮೇಘಾ ಶೆಟ್ಟಿ ನಟನೆಯ ʼಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ  ನಟಿಸಿದ್ದರು. ಮೀರಾ ಪಾತ್ರ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. 
 

57

ಮಾನಸಾ ಮನೋಹರ್‌ ಅವರು ಫಿಟ್‌ನೆಸ್‌ ಕಡೆಗೆ ಗಮನ ಕೊಡುತ್ತಾರೆ. ಇನ್ನು ಇಡೀ ಜಗತ್ತೇ ಲಾಕ್‌ಡೌನ್‌ ಆದ ಟೈಮ್‌ನಲ್ಲಿ ಮನೆಯಲ್ಲಿಯೇ ವರ್ಕೌಟ್‌ ಮಾಡಿ ಅವರು 12kg ತೂಕ ಇಳಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದರು.
 

67

ಎರಡನೇ ಮದುವೆ ಬಗ್ಗೆ ಮಾತನಾಡಿದ್ದ ಮಾನಸಾ ಮನೋಹರ್‌ ಅವರು “ನಮ್ಮ ಲೈಫ್‌ನಲ್ಲೇ ಎಲ್ಲವೂ ಮ್ಯಾನಿಫೆಸ್ಟೇಶನ್‌ ಮೂಲಕ ಆಗಿದೆ. ಇದರಿಂದಲೇ ನನಗೆ ನನ್ನನ್ನು ತುಂಬ ಇಷ್ಟಪಡುವ ಹುಡುಗ ಸಿಕ್ಕಿದ್ದಾನೆ” ಹೇಳಿದ್ದಾರೆ. 
 

77

ಈ ಹಿಂದಿನ ಧಾರಾವಾಹಿಗಳಿಗೆ ಹೋಲಿಕೆ ಮಾಡಿ ನೋಡಿದರೆ ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿನ ಮಾನಸಾ ಮನೋಹರ್‌ ಅವರ ಪಾತ್ರ ತುಂಬ ವಿಭಿನ್ನವಾಗಿದೆ. 
 

Read more Photos on
click me!

Recommended Stories